ಈಗ ಮಳೆಗಾಲ ಶುರು ಆಯ್ತು ಅಷ್ಟೊಂದು ಯಾರೂ ಕೂಡಾ ಮನೆಯಿಂದ ಆಚೆ ಹೋಗೋಕೆ ಇಷ್ಟ ಪಡಲ್ಲ. ಹೊರಗಡೆ ಜೋರಾಗಿ ಮಳೆ ಬರ್ತಾ ಇದ್ರೆ ಒಂದು ಕಪ್ ಬಿಸಿ ಬಿಸಿ ಟಿ ಅಥವಾ ಕಾಫಿ ಬೇಕು ಅನಸತ್ತೆ ಅದರ ಜೊತೆಗೆ ಏನಾದ್ರೂ ರುಚಿಯಾಗಿ ಸ್ನಾಕ್ಸ್ ಕೂಡಾ ಇದ್ರೆ ಚೆನ್ನಾಗಿರತ್ತೆ ಅಂತ ಅನಸತ್ತೆ. ರುಚಿಯಾಗಿ ಸಂಜೆ ಟೈಮ್ ಗೆ ಈ ರೀತಿ ಚಾಟ್ಸ್ ಮಾಡಿ ನೋಡಿ.
ಈ ಚಾಟ್ಸ್ ನ ಸಂಜೆ ಟೈಮ್ ಗೆ ಟೀ ಅಥವಾ ಕಾಫೀ ಜೊತೆಗೂ ಮಾಡಿಕೊಂಡು ತಿನ್ನಬಹುದು ಅಥವಾ, ಮಕ್ಕಳಿಗೂ ಕೂಡಾ ತಿನ್ನೋಕೆ ಸುಲಭವಾಗಿ ಈ ಶೇಂಗಾ ಬೀಜದ ಚಾಟ್ಸ್ ಮಾಡಿಕೊಡಬಹುದು. ಹೇಗೆ ಮಾಡೋದು ಅನ್ನೋದನ್ನ ನೋಡೋಣ.
ಬೇಕಾಗುವ ಸಾಮಗ್ರಿಗಳು :- ಶೇಂಗಾ ಬೀಜ ೧ ಕಪ್, ಖಾರದ ಪುಡಿ, ಚಾಟ್ ಮಸಾಲ, ಉಪ್ಪು, ಟೊಮೆಟೊ ೧, ಈರುಳ್ಳಿ ೧, ಕೊತ್ತಂಬರಿ ಸೊಪ್ಪು ಸ್ವಲ್ಪ
ಮಾಡುವ ವಿಧಾನ :-ಒಂದು ಬೌಲ್ ಗೆ ಒಂದು ಕಪ್ ಶೇಂಗಾ ಬೀಜ ಹಾಕಿ ಚೆನ್ನಾಗಿ 3 / 4 ಸಲ ತೊಳೆದು ಮತ್ತೆ ನೀರು ಹಾಕಿ ಎರಡರಿಂದ ಮೂರು ಗಂಟೆಗಳವರೆಗೆ ನೇನೆಸಲು ಬಿಡಬೇಕು. ನೆನೆದ ನಂತರ ಶೇಂಗಾ ಬೀಜವನ್ನು ಒಂದು ಕುಕ್ಕರ್ ಗೆ ಹಾಕಿ ಒಂದು ಲೋಟ ನೀರು ಮತ್ತೆ ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ, ಕುಕ್ಕರ್ ಲಿಡ್ ಕ್ಲೋಸ್ ಮಾಡಿ, ಮಧ್ಯಮ ಉರಿಯಲ್ಲಿ ಮೂರು ಅಥವಾ ನಾಲ್ಕು ವಿಸಿಲ್ ಕೂಗಿಸಿಕೊಳ್ಳಬೇಕು. ನಂತರ ಒಂದು ಬೌಲ್ ಗೆ ನೀರು ಬಸಿದ ಶೇಂಗಾ ಬೀಜವನ್ನು ಹಾಕಿಕೊಂಡು ಒಂದರಿಂದ ಒಂದೂವರೆ ಸ್ಪೂನ್ ಅಷ್ಟು ಖಾರಕ್ಕೆ ಬೇಕಾದಷ್ಟು ಖಾರದ ಪುಡಿ, ಒಂದು ಟೀ ಸ್ಪೂನ್ ಚಾಟ್ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಸಣ್ಣದಾಗಿ ಹೆಚ್ಚಿದ ಒಂದು ಟೊಮೆಟೊ ಹಾಗೂ ಒಂದು ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಗೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ರುಚಿಯಾದ ಶೇಂಗಾ ಬೀಜದ ಚಾಟ್ಸ್ ರೆಡಿ.