ಪ್ರತೀ ದಿನ ಏನಾದ್ರೂ ಬೇರೆ ಬೇರೆ ರುಚಿಯಾದ ಊಟ ಬೇಕಾಗಟ್ಟೆ. ಎಷ್ಟೋ ಜನರಿಗೆ ಮನೆಯಲ್ಲಿ ಅಡುಗೆ ಮಾಡೋಕೆ ಅಷ್ಟು ಟೈಮ್ ಇರಲ್ಲ ಇನ್ನೂ ಕೆಲವರಿಗೆ ಅಡುಗೆ ಮಾಡೋಕೆ ಬರಲ್ಲ. ಹೀಗಿದ್ದಾಗ ಸಾಮಾನ್ಯವಾಗಿ ಎಲ್ಲರೂ ರೆಡಿಮೇಡ್ ಪದಾರ್ಥಗಳ ಮೊರೆ ಹೋಗುವುದು ಸಹಜ. ಆದರೆ ಅದು ಎಷ್ಟರ ಮಟ್ಟಿಗೆ ರು ರುಚಿಯಾಗಿ, ಶುಚಿಯಾಗಿ ಇರತ್ತೆ ಅನ್ನೋದು ಗೊತ್ತಿರಲ್ಲ. ಅದಕ್ಕಾಗಿ ಹೊರಗಡೆಯಿಂದ ತಂದು ಪದಾರ್ಥಗಳನ್ನು ಮಾಡುವ ಬದಲು ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಹಾಗಾಗಿ ಇಲ್ಲಿದೆ ಸುಲಭವಾದ ವಾಂಗಿಬಾತ್ ಪೌಡರ್ ರೆಸಿಪಿ.
ವಾಂಗಿ ಬಾತ್ ಪೌಡರ್ ಇದನ್ನ ಮಾಡಿ ಹಲವಾರು ದಿನಗಳ ಕಾಲ ಇಟ್ಟುಕೊಳ್ಳಬಹುದು. ಇದನ್ನ ಮಾಡೋಕೆ ಏನೆಲ್ಲಾ ಬೇಕು ಅನ್ನೋದನ್ನ ನೋಡೋಣ.
ಗುಂಟೂರು ಮೆಣಸಿನಕಾಯಿ ೧೦, ಬ್ಯಾಡಗಿ ಮೆಣಸಿನಕಾಯಿ ೨೦, ಒಣಕೊಬ್ಬರಿ ತುರಿ ೨/೩ ಟೀ ಸ್ಪೂನ್, ಕಡಲೆ ಬೇಳೆ ೨ ಟೀ ಸ್ಪೂನ್, ಉದ್ದಿನ ಬೇಳೆ ೨ ಟೀ ಸ್ಪೂನ್, ಧನಿಯಾ ಬೀಜ ೪ ಸ್ಪೂನ್ / ಅರ್ಧ ಕಪ್, ಏಲಕ್ಕಿ ೩ ಜಾಯಿಕಾಯಿ ೧, ಲವಂಗ ೧೫, ಚಕ್ಕೆ ೨ ಇಂಚಿನದ್ದು ೩ ಪೀಸ್ ,ಎಣ್ಣೆ ೧ ಸ್ಪೂನ್.
ವಾಂಗೀ ಬಾತ್ ಪೌಡರ್ ಮಾಡೋದು ಹೇಗೆ ಅಂತ ನೋಡೋಣ. ಸ್ಟೋವ್ ಮೇಲೆ ಒಂದು ಪ್ಯಾನ್ ಇಟ್ಟುಕೊಂಡು ೧ ಟೀ ಸ್ಪೂನ್ ಎಣ್ಣೆ ಹಾಕಿ ಕಾದ ನಂತರ ಮಧ್ಯಮ ಉರಿಯಲ್ಲಿ, ಚಕ್ಕೆ , ಏಲಕ್ಕಿ, ಜಾಯಿಕಾಯಿ, ಲವಂಗ ಹಾಕಿ ಸ್ವಲ್ಪ ಹುರಿದುಕೊಂಡು , ನಂತರ ಉದ್ದಿನಬೇಳೆ, ಕಡಲೆ ಬೇಳೆಯನ್ನು ಸೇರಿಸಿ ಸ್ವಲ್ಪ ಹುರಿದುಕೊಂಡು ನಂತರ ಧನಿಯಾ ಬೀಜ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಂಡು ಕಟ್ ಮಾಡಿಕೊಂಡ ಎರಡೂ ಬಗೆಯ ಮೆಣಸಿನಕಾಯಿ ಸೇರಿಸಿ ಅದನ್ನು ಕೂಡಾ ಫ್ರೈ ಮಾಡಿಕೊಳ್ಳಬೇಕು. ಕೊನೆಯಲ್ಲಿ ಒಣಕೊಬ್ಬರಿ ಹಾಕಿಕೊಂಡು ೩೯ ಸೆಕೆಂಡ್ ಹುರಿದುಕೊಂಡು ಸ್ಟೋವ್ ಆಫ್ ಮಾಡಬೇಕು.
ಚೆನ್ನಾಗಿ ತಣಿಯಲು ಬಿಡಬೇಕು. ಒಂದುವೇಳೆ ಬಿಸಿಲು ಇದ್ದರೆ ಬಿಸಿಲಿನಲ್ಲಿ ಒಣಗಿಸಿಕೊಳ್ಳುವುದು ಉತ್ತಮ. ತುಂಬಾ ದಿನ ಇಟ್ಟುಕೊಳ್ಳಬಹುದು. ನಂತರ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ನಂತರ ಯಾವಾಗ ಬೇಕಾದರೂ ವಾಂಗೀ ಬಾತ್ ಮಾಡಿಕೊಳ್ಳಬಹುದು. ಇದನ್ನ ವಾಂಗೀ ಬಾತ್ ಗೆ ಮಾತ್ರ ಅಲ್ಲದೆ ಯಾವುದಾದ್ರೂ ಪಲ್ಯಕ್ಕೂ ಕೂಡಾ ಬಳಸಿಕೊಳ್ಳಬಹುದು.