ಕೆಲವೊಂದು ಟೈಂ ಏನು ಅಡುಗೆ ಮಾಡೋದು ಅಂತಾನೆ ತಿಳಿಯಲ್ಲ. ಅದರಲ್ಲೂ ಕೆಲವು ಮನೆಗಳಲ್ಲಿ ಅಂತೂ ಊಟಕ್ಕೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪದಾರ್ಥ ಬೇಕೇ ಬೇಕು. ಇನ್ನೂ ಕೆಲವು ಮನೆಗಳಲ್ಲಿ ಮುರಿ ನಾಲ್ಕು ಒಅದಾರ್ಥ ಬೇಕು ಹೀಗಿರೋವಾಗ ಏನು ಮಾಡೋದು ಅನ್ನೋದೇ ದೊಡ್ಡ ಚಿಂತೆ ಆಗತ್ತೆ. ಹಾಗಾಗಿ ನಾವೂ ಕೂಡ ಒಂದು ಸುಲಭವಾದ ಒಂದು ಪದಾರ್ಥವನ್ನ ತಿಳಿಸಿಕೊಡ್ತಾ ಇದ್ದೀವಿ. ಈ ಲೇಖನದಲ್ಲಿ ಇದೆ ಸುಲಭವಾಗಿ ಮಾಡುವ ಮಜ್ಜಿಗೆ ಹುಳಿ / ಸಾರು ರೆಸಿಪಿ. ಮಾಡಿ ನೋಡಿ ನಿಮ್ಮ ಅನಿಸಿಕೆಗಳನ್ನ ತಿಳಿಸಿ.
ಮಜ್ಜಿಗೆ ಹುಳಿ ಅಥವಾ ಮಜ್ಜಿಗೆ ಸಾರು ಮಾಡೋಕೆ ಏನೇನು ಬೇಕು ಅನ್ನೋದನ್ನ ನೋಡೋಣ.
ಮೊಸರು 1 ಕಪ್, ಚಿಕ್ಕದಾಗಿ ಕಟ್ ಮಾಡಿದ ಈರುಳ್ಳಿ1, ಹಸಿ ಮೆಮಾಸಿನಕಾಯಿ 2, ಬೆಳ್ಳುಳ್ಳಿ ಎಸಳು ೪, ಕೊತ್ತಂಬರಿ ಸೊಪ್ಪು ಸ್ವಲ್ಪ. ಎಣ್ಣೆ, ಸಾಸಿವೆ ಜೀರಿಗೆ, ಕಡಲೆಬೇಳೆ ಉದ್ದಿನಬೇಳೆ, ಒಣಮೆಣಸು, ಶುಂಠಿ ಚಿಕ್ಕ ಪೀಸ್, ಕರಿಬೇವು, ಅರಿಶಿನ, ಇಂಗು, ಉಪ್ಪು
ಮಾಡುವ ವಿಧಾನ : ಮೊದಲು ಒಂದು ಕಪ್ ಮೊಸರನ್ನ ಒಂದು ಬೌಲ್ ಗೆ ಹಾಕಿಕೊಂಡು ಉಪ್ಪು ಸೇರಿಸಿ ನಂತರ ಒಂದು ಕಪ್ ನೀರು ಹಾಕಿ ಮೊಸರಿನ ಗಂಟು ಹೋಗುವಂತೆ ಚೆನ್ನಾಗಿ ಮಿಕ್ಸ್ ಮಜ್ಜಿಗೆಯ ಹಾಗೆ ಮಾಡಿ ಇಟ್ಟುಕೊಳ್ಳಬೇಕು. ನಂತರ ಒಂದು ಪ್ಯಾನ್ ಗೆ ಒಂದು ಚಮಚ ಎಣ್ಣೆ ಹಾಕಿ ಕಾದ ನಂತರ ಒಂದು ಟೀ ಚಮಚ ಸಾಸಿವೆ ಹಾಕಿ, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಉದ್ದಿನಬೇಳೆ ಹಾಗೂ ಕಡಲೆಬೇಳೆ ಒಂದರಿಂದ ಎರಡು ಚುರು ಮಾಡಿದ ಒಣಮೆಣಸು ಹಾಕಿ ನಂತರ ಜಜ್ಜಿಕೊಂಡ ಬೆಳ್ಳುಳ್ಳಿ ಎಸಳು, ಕರಿಬೇವು, ಹಸಿಮೆಣಸು, ಕಟ್ ಮಾಡಿಟ್ಟ ಈರುಳ್ಳಿ ಹಾಗೆ ಸಣ್ಣ ಪೀಸ್ ಶುಂಠಿ ಹಾಕಿ ಚೆನ್ನಾಗಿ ಈರುಳ್ಳಿ ಬಾಡುವವರೆಗೂ ಹೊರೆದುಕೊಂಡು ನಂತರ ಕಾಲು ಟೀ ಚಮಚ ಅರಿಶಿನ ಹಾಗೂ ಕಾಲು ಟೀ ಚಮಚ ಇಂಗು ಹಾಕಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಬಾಡಿಸಿ ಸ್ಟೋವ್ ಆಫ್ ಮಾಡಿ ಸ್ವಲ್ಪ ಹೊತ್ತು ಬಿಸಿ ಆರಲು ಬಿಡಬೇಕು. ಬಿಸಿ ಇರೋವಾಗಲೇ ಮಜ್ಜಿಗೆ ಸೇರಿಸಿದರೆ ನೀರು ನೀರು ಆಗತ್ತೆ ಹಾಗಾಗಿ ಪೂರ್ತಿಯಾಗಿ ತಣ್ಣಗಾದ ಮೇಲೆ ರೆಡಿ ಮಾಡಿ ಇಟ್ಟುಕೊಂಡ ಮಜ್ಜಿಗೆಯನ್ನ ಸೇರಿಸಿ ಮಿಕ್ಸ್ ಮಾಡಿದ್ರೆ ರುಚಿಯಾದ ಖಾರವಾದ ಮಜ್ಜಿಗೆ ಸಾರು ರೆಡಿ ಆಗತ್ತೆ.