ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗ ಕಂಡಂತಹ ಮೇರು ನಟ ಹಾಗೂ ವ್ಯಕ್ತಿತ್ವಗಳಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿ ವಿಶೇಷವಾಗಿ ಮಹಿಳೆಯರಿಗೆ ಅವರು ನೀಡುತ್ತಿದ್ದ ಗೌರವ ನಿಜಕ್ಕೂ ಕೂಡ ಪ್ರಶಂಸಾರ್ಹವಾದದ್ದು. ಕನ್ನಡ ಚಿತ್ರರಂಗ ಸೇರಿದಂತೆ ಬಾಲಿವುಡ್ ಸೇರಿದಂತೆ ಹಲವಾರು ಪ್ರಮುಖ ಭಾಷೆಯ ಶನಿವಾರಂಗಗಳಲ್ಲಿ ಕೂಡ ಈಗಾಗಲೇ ವಿಷ್ಣುವರ್ಧನ್ ಅವರು ತಮ್ಮ ಕಾಲದಲ್ಲಿಯ ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಅವರನ್ನು ಸಾಹಸಸಿಂಹ ಹಾಗೂ ಅಭಿನಯ ಭಾರ್ಗವ ಎಂಬುದಾಗಿ ಕರೆಯಲಾಗುತ್ತಿತ್ತು.
ಇನ್ನು ಇಂದು ಜೊತೆಯಲ್ಲಿ ಧಾರವಾಹಿಯ ಮೂಲಕ ಅವರ ಅಳಿಯ ಆಗಿರುವ ಅನಿರುದ್ಧ್ ಅವರ ಲೆಗಸ್ಸಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು. ಆದರೆ ಈಗ ಅನಿರುದ್ಧ್ ಜೊತೆ ಜೊತೆಯಲಿ ಧಾರವಾಹಿಯಿಂದ ಹೊರ ಬಂದಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಸದ್ಯಕ್ಕೆ ವಿಷ್ಣುವರ್ಧನ್ ಅವರ ಕುಟುಂಬ ಸದ್ದು ಮಾಡುತ್ತಿರುವುದು 1976ರಲ್ಲಿ ವಿಷ್ಣುವರ್ಧನ್ ಅವರು ಖರೀದಿಸಿರುವ ಜಾಗದಲ್ಲಿ ಈಗ ವೈಭವೋಪೇತ ಎನಿಸಿಕೊಂಡಿರುವ ಒಂದು ಮನೆಯನ್ನು ಕಟ್ಟಿಸಿರುವುದಕ್ಕಾಗಿ.
ಇತ್ತೀಚಿಗಷ್ಟೇ ಗೃಹಪ್ರವೇಶ ಕೂಡ ನಡೆದಿದ್ದು ಈ ಮನೆಗೆ ವಲ್ಮಿಕ ಎನ್ನುವ ಹೆಸರನ್ನು ಕೂಡ ವಿಷ್ಣುವರ್ಧನ್ ಕುಟುಂಬ ಇರಿಸಿದೆ. ವಿಷ್ಣುವರ್ಧನ್ ಅವರಿಗೆ ಕೃಷ್ಣ ದೇವರು ಇಷ್ಟ ಎನ್ನುವ ಕಾರಣಕ್ಕಾಗಿ ಮನೆಯ ಮುಂದೆ ಕೃಷ್ಣನ ಮೂರ್ತಿಯನ್ನು ಕೂಡ ಇರಿಸಲಾಗಿರುವುದು ಮತ್ತೊಂದು ವಿಶೇಷವಾಗಿದೆ. ಈ ಐಷಾರಾಮಿ ಮನೆಯನ್ನು ನೀವು ಕೂಡ ಈ ಫೋಟೋಗಳಲ್ಲಿ ಗಮನಿಸಬಹುದಾಗಿದೆ.
ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ವಿಷ್ಣುವರ್ಧನ್ ಹಾಗೂ ಅವರ ಕುಟುಂಬಕ್ಕೆ ಆಪ್ತರಾಗಿರುವ ಸುಮಲತಾ ಅಂಬರೀಶ್ ನವರಸ ನಾಯಕ ಜಗ್ಗೇಶ್ ಸೇರಿದಂತೆ ಹಲವಾರು ಗಣ್ಯಾತಿ ಗಣ್ಯರು ಕೂಡ ಆಗಮಿಸಿ ಶುಭ ಹಾರೈಸಿದ್ದಾರೆ. ವಿಷ್ಣುವರ್ಧನ್ ಕುಟುಂಬದ ಈ ಹೊಸ ಮನೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.