ನಮ್ಮ ಭಾರತದ ಅತ್ಯಂತ ದೊಡ್ಡ ಲಾಜಿಸ್ಟಿಕ್ ಕಂಪನಿ ಯಾವುದು ಎಂಬುದಾಗಿ ಕೇಳಿದರೆ ಖಂಡಿತವಾಗಿ ನಮಗೆ ಕೇಳಿ ಬರುವ ಮೊದಲ ಹೆಸರು ನಮ್ಮ ಕನ್ನಡದ ಹಾಗೂ ಕರ್ನಾಟಕದ ಹೆಮ್ಮೆ ಸಂಸ್ಥೆ ಆಗಿರುವ ವಿ ಆರ್ ಎಲ್ ಸಂಸ್ಥೆ. ಇದನ್ನು ಕಟ್ಟಿ ಬೆಳೆಸಿದವರು ನಮ್ಮ ಹೆಮ್ಮೆಯ ಡಾ ವಿಜಯ್ ಸಂಕೇಶ್ವರ್ ಎನ್ನುವುದು ಎಲ್ಲರಿಗೂ ಕೂಡ ಗೊತ್ತಿರುವ ವಿಚಾರವಾಗಿದೆ. ಕೇವಲ ಲಾಜಿಸ್ಟಿಕ್ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸುದ್ದಿವಾಹಿನಿಯ ಕ್ಷೇತ್ರದಲ್ಲಿ ಕೂಡ ಸಾಧನೆಯನ್ನು ಬರೆದವರು.

ವಿಜಯ್ ಸಂಕೇಶ್ವರ್ ಅವರ ಸಾರಥ್ಯದಲ್ಲಿ ವಿ ಆರ್ ಎಲ್ ಸಮೂಹ ಸಂಸ್ಥೆಗಳು ಕರ್ನಾಟಕದ ಮಣ್ಣಿನಲ್ಲಿ ದೊಡ್ಡಮಟ್ಟದ ಸಾಧನೆಯನ್ನು ಮಾಡಿ ದಾಖಲೆಯನ್ನು ನಿರ್ಮಿಸಿದೆ ಎಂದರು ತಪ್ಪಾಗಲಾರದು. ಸಾವಿರಾರು ಕೋಟಿ ಸಾಮ್ರಾಜ್ಯವನ್ನು ಕಟ್ಟಿರುವ ವಿಜಯ್ ಸಂಕೇಶ್ವರ ಅವರ ಸಾಧನೆ ನಿಜಕ್ಕೂ ಕೂಡ ಇಂದಿನ ಯುವಜನತೆಗೆ ಸ್ಪೂರ್ತಿ ಎಂದರು ಕೂಡ ತಪ್ಪಾಗಲಾರದು.

ಇನ್ನು ವಿಜಯ್ ಸಂಕೇಶ್ವರ ಅವರ ಜೀವನ ಕಥೆಯನ್ನು ಆಧರಿಸಿರುವ ವಿಜಯಾನಂದ ಎನ್ನುವ ಸಿನಿಮಾ ಅಭಿ ಶೀಘ್ರದಲ್ಲೇ ಬಿಡುಗಡೆ ಆಗಲಿದ್ದು ಈ ಸಿನಿಮಾದ ಕಾರ್ಯಕ್ರಮದ ಸಂದರ್ಭದಲ್ಲಿ ವಿಜಯ್ ಸಂಕೇಶ್ವರ ಆಡಿರುವ ಒಂದು ಮಾತು ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಅವರು ಆಡಿರುವ ಮಾತು ಏನು ಹಾಗು ಅದರ ಹಿಂದಿನ ಅರ್ಥವೇನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಈ ಕಾರ್ಯಕ್ರಮದಲ್ಲಿ ಎಲ್ಲರೂ ನನ್ನನ್ನು ಹೀರೋ ಎಂಬುದಾಗಿ ಅಂದುಕೊಳ್ಳುತ್ತಾರೆ ಆದರೆ ವಿ ಆರ್ ಎಲ್ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವ ಹಿಂದಿನ ನಿಜವಾದ ಹೀರೋ ನಾನಲ್ಲ ಎಂಬುದಾಗಿ ಹೇಳುವ ಮೂಲಕ ಆಶ್ಚರ್ಯವನ್ನು ನೀಡಿದ್ದಾರೆ. ಹೌದು ವಿಜಯ್ ಸಂಕೇಶ್ವರ ಅವರು ಹೇಳುವಂತೆ ವೀ ಆರ್ ಎಲ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದು 25,000ಕ್ಕೂ ಅಧಿಕ ಸಂಸ್ಥೆಯ ಕೆಲಸಗಾರರು.

ಅವರು ವಿ ಆರ್ ಎಲ್ ಸಂಸ್ಥೆಯನ್ನು ತಮ್ಮದೇ ಸಂಸ್ಥೆ ಎನ್ನುವ ರೀತಿಯಲ್ಲಿ ಕೆಲಸ ಮಾಡಿ ಕಟ್ಟಿ ಬೆಳೆಸಿದ್ದಾರೆ ಅದಕ್ಕಾಗಿಯೇ ಇಂದು ವಿ ಆರ್ ಎಲ್ ಸಂಸ್ಥೆ ಇಷ್ಟೊಂದು ದೊಡ್ಡ ಮಟ್ಟದ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂಬುದಾಗಿ ಹೇಳುವ ಮೂಲಕ ತನ್ನ ಕೆಲಸಗಾರರ ಕುರಿತಂತೆ ವಿಜಯ್ ಸಂಕೇಶ್ವರ ಅವರು ಈ ಸಂದರ್ಭದಲ್ಲಿ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಹತ್ತನೇ ತರಗತಿ ಫೇಲ್ ಆಗಿದ್ದರೂ ಕೂಡ ಇಷ್ಟೊಂದು ದೊಡ್ಡ ಮಟ್ಟದ ಸಾಧನೆ ಮಾಡಿರುವುದು ಎಲ್ಲರಿಗೂ ತಿಳಿದು ಬಂದಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!