ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವ್ಯಾಪಾರ ವ್ಯವಹಾರ ಸಾಗಾಣಿಕೆ ಅನುಕೂಲ ಆಗಲು ಸರಕಾರ ಈ ಹೊಸ ಯೋಜನೆಯನ್ನು ಜಾರಿಗೊಳಿಸಿದೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ವ್ಯಾಪಾರ ಮಾಡಲು ವಾಹನದ ಅವಶ್ಯಕತೆ ಇದ್ದೇ ಇರುತ್ತದೆ ಸ್ವಯಂ ಉದ್ಯೋಗದಲ್ಲಿ ಸಾಗಾಣಿಕೆ ಅನುಕೂಲ ಆಗಲು ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಸರಕು ಸಾಗಾಣಿಕೆ ವಾಹನ ಖರೀದಿಗೆ ಐವತ್ತು ಸಾವಿರದಷ್ಟು ಸಬ್ಸಿಡಿಯನ್ನು ಉಳಿದ ಮೊತ್ತವನ್ನು ಕಡಿಮೆ ದರದಲ್ಲಿ ಬ್ಯಾಂಕ್ ಸಾಲ ನೀಡಲಾಗುವುದು ಇದರಿಂದ ಅನೇಕ ಜನರಿಗೆ ಅನುಕೂಲ ಆಗುತ್ತದೆ
ಈ ಯೋಜನೆಯ ಅನುಕೂಲವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು .ದ್ವಿ ಚಕ್ರ ವಾಹನ ಮತ್ತು ಮೂರು ಚಕ್ರದ ವಾಹನ ಖರೀದಿಗೆ ಅವಕಾಶ ಇರುತ್ತದೆ ಈ ಯೋಜನೆಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಡ ವ್ಯಾಪಾರಗಾರರಿಗೆ ಸರಕುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಾಣಿಕೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ ನಾವು ಈ ಲೇಖನದ ಮೂಲಕ ಡಾ ಬಿ ಅರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೀಡಲಾಗುತ್ತಿರುವ ವಾಹನಗಳ ಸಬ್ಸಿಡಿ ಹಾಗೂ ಈ ಯೋಜನೆಯ ಫಲಾನುಭವಿ ಆಗಲು ಇರುವ ಅರ್ಹತೆಗಳ ಬಗ್ಗೆ ತಿಳಿದುಕೊಳ್ಳೋಣ.
ವ್ಯಾಪಾರ ವ್ಯವಹಾರ ಮಾಡಲು ಹಾಗೂ ಸರಕು ಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾಯಿಸಲು ವಾಹನದ ಅವಶ್ಯಕತೆ ಇರುತ್ತದೆ ಒಂದು ಸ್ಥಳದಿಂದ ಬೇರೆ ಸ್ಥಳಕ್ಕೇ ಒಯ್ಯಲು ವಾಹನದ ಅವಶ್ಯಕತೆ ಇರುತ್ತದೆ ಸರಕಾರ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ ವಾಹನ ಸೌಲಭ್ಯ ನೀಡಲು ಸರಕಾರ ಮುಂದಾಗಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ದ್ವಿಚಕ್ರ ವಾಹನ ಖರೀದಿ ಮಾಡಬಹುದು ಹಾಗೆಯೇ ಮೂರು ಚಕ್ರದ ವಾಹನ ಸಹ ಖರೀದಿ ಮಾಡಬಹುದು
ವ್ಯಾಪಾರಕ್ಕೆ ಅನುಕೂಲ ಆಗುವ ಉದ್ದೇಶಕ್ಕಾಗಿ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ . ವ್ಯಾಪಾರ ಮಾಡುವರಿಗೆ ಸಾಗಾಣಿಕೆಗಾಗಿ ವಾಹನದ ಅವಶ್ಯಕತೆ ಇರುತ್ತದೆ ದ್ವಿ ಚಕ್ರ ವಾಹನ ಮತ್ತು ಗೂಡ್ಸ್ ವಾಹನವಾದ ಮೂರು ಚಕ್ರದ ವಾಹನ ಖರೀದಿ ಮಾಡಲು ಸರಕಾರ ಐವತ್ತು ಸಾವಿರದವರೆಗೆ ಸಬ್ಸಿಡಿಯನ್ನು ನೀಡುತ್ತದೆ. ಮೂರು ಚಕ್ರದ ವಾಹನ ಖರೀದಿ ಮಾಡಲು ಮೂರುವರೆ ಲಕ್ಷ ದಷ್ಟು ಖರ್ಚು ಬರುತ್ತದೆ ಸರಕಾರ ಐವತ್ತು ಸಾವಿರದ ವರೆಗೆ ಸಬ್ಸಿಡಿಯನ್ನು ನೀಡುತ್ತದೆ.
ಹತ್ತಿರದ ಬ್ಯಾಂಕ ಗಳಲ್ಲಿ ಸಾಲದ ರೂಪದಲ್ಲಿ ಸರಕಾರ ನೀಡುತ್ತದೆ ಉಳಿದ ಹಣವನ್ನು ಬ್ಯಾಂಕಿಗೆ ಪಾವತಿಸಬೇಕು ಈ ಯೋಜನೆಯ ಫಲಾನುಭವಿ ಆಗಲು ಅರ್ಜಿ ಸಲ್ಲಿಸುವ ವ್ಯಕ್ತಿ ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು ಹಾಗೆಯೇ ಅರ್ಜಿ ಸಲ್ಲಿಸುವ ವ್ಯಕ್ತಿಯ ವಯಸ್ಸು ಇಪ್ಪತೊಂದರಿಂದ ಐವತ್ತು ವರ್ಷದ ಒಳಗೆ ಇರಬೇಕು ಅರ್ಜಿ ಸಲ್ಲಿಸುವ ವ್ಯಕ್ತಿ ಯಾವುದೇ ಸರಕಾರಿ ಹಾಗೂ ಅರೆ ಸರಕಾರಿ ನೌಕರಿ ಮಾಡುತ್ತ ಇರಬಾರದು ಅರ್ಜಿ ಸಲ್ಲಿಸುವ ವ್ಯಕ್ತಿಯ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಭಾಗದಲ್ಲಿ ಒಂದು ಲಕ್ಷ ಐವತ್ತು ಸಾವಿರಕಿಂತ ಕಡಿಮೆ ಇರಬೇಕು ನಗರ ಪ್ರದೇಶದಲ್ಲಿ ಎರಡು ಲಕ್ಷಕ್ಕಿಂತಲು ಕಡಿಮೆ ಇರಬೇಕು
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಪ್ಪತ್ತು ನವೆಂಬರ್ ಎರಡು ಸಾವಿರದ ಇಪ್ಪತ್ತೆರಡು. ಈ ಯೋಜನೆಯನ್ನು ಡಾ ಬಿ ಅರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಆಹ್ವಾನ ಮಾಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಈ ಅರ್ಜಿಯನ್ನು ಹತ್ತಿರದ ಗ್ರಾಂ ಒನ್ ಸೆಂಟರ್ ಗಳಲ್ಲಿ ಸಲ್ಲಿಸಬಹುದು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುತ್ತಾರೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಡಾ ಬಿ ಅರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪಡೆದುಕೊಳ್ಳಬಹುದು .