ಚಾಣಕ್ಯ ಭಾರತದ ಇತಿಹಾಸ ಕಂಡಂತಹ ಅತ್ಯಂತ ಮೇಧಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಚಾಣಕ್ಯ ಗ್ರಂಥದಲ್ಲಿ ಕೇವಲ ನಾಯಕತ್ವ ಹಾಗೂ ಆಡಳಿತದ ಕುರಿತಂತೆ ಮಾತ್ರವಲ್ಲದೇ ದೈನಂದಿನ ಜೀವನದಲ್ಲಿ ಹೇಗೆ ಜೀವನವನ್ನು ನಡೆಸಬೇಕು ಎನ್ನುವ ಕುರಿತಂತೆ ಕೂಡ ಸಂಪೂರ್ಣ ವಿವರವಾಗಿ ಇಂದಿನ ಜನತೆ ಅದನ್ನು ಅರಿತುಕೊಂಡರೆ ಸುಖ ಸಂತೋಷದಿಂದ ಜೀವನ ನಡೆಸಬಹುದು ಹಾಗೂ ಜೀವನದಲ್ಲಿ ಯಶಸ್ಸು ಕೂಡ ಪಡೆಯಬಹುದು ಎಂಬ ರೀತಿಯಲ್ಲಿ ಆಚಾರ್ಯ ಚಾಣಕ್ಯರು ಬರೆದಿಟ್ಟಿದ್ದಾರೆ.
ಆಚಾರ್ಯ ಚಾಣಕ್ಯರ ಗ್ರಂಥಗಳನ್ನು ಓದಿ ಜೀವನದಲ್ಲಿ ದೊಡ್ಡಮಟ್ಟದ ಯಶಸ್ಸನ್ನು ಪಡೆದವರು ಸಾಕಷ್ಟು ಮಂದಿ ಇದ್ದಾರೆ. ಇಂದಿನ ಲೇಖನಿಯಲ್ಲಿ ನಾವು ಆಚಾರ್ಯ ಚಾಣಕ್ಯರು ತಮ್ಮ ಗ್ರಂಥದಲ್ಲಿ ಬರೆದಿಟ್ಟಿರುವಂತೆ ಯಾವ ರೀತಿಯ ಮಹಿಳೆಯರು ಪುರುಷರಿಗೆ ಇಷ್ಟವಾಗುತ್ತಾರೆ ಹಾಗೂ ಅವರ ಜೀವನದಲ್ಲಿ ಸಂತೋಷವನ್ನು ತರುತ್ತಾರೆ ಎಂಬುದರ ಕುರಿತಂತೆ ವಿವರಣೆಯಿಂದ ತಿಳಿದುಕೊಳ್ಳಲು ಬಂದಿದ್ದೇವೆ. ಸಾಮಾನ್ಯವಾಗಿ ಸದಾಕಾಲ ಜಗಳ ಹಾಗೂ ಕಿರುಚಾಟ ಮಾಡುವಂತಹ ಮಹಿಳೆಯರಿಂದ ಪುರುಷರು ಅಂತರವನ್ನೇ ಕಾಯ್ದುಕೊಳ್ಳುತ್ತಾರೆ.
ಮಾತು ಮಾತಿಗೆ ಅಳುವಂತಹ ಹಾಗೂ ಪುರುಷರ ಎಲ್ಲಾ ಮಾತಿಗೂ ಕೂಡ ವಿರೋಧವನ್ನು ವ್ಯಕ್ತಪಡಿಸುವ ಮಹಿಳೆಯರು ಪುರುಷರಿಗೆ ಎಂದು ಕೂಡ ಇಷ್ಟ ಆಗುವುದಿಲ್ಲ. ಎಲ್ಲದಕ್ಕಿಂತ ಪ್ರಮುಖವಾಗಿ ಯಾವುದೇ ವಿಚಾರಗಳನ್ನಾದರೂ ಮನಸ್ಸಿನಲ್ಲಿ ಒಂದು ಇಟ್ಟುಕೊಂಡು ಹೊರಗಡೆ ಇನ್ನೊಂದು ಹೇಳುವ ಮಹಿಳೆಯರಿಗಿಂತ ಯಾವುದೇ ವಿಚಾರ ಇದ್ದರೂ ಕೂಡ ನೈಜ ಹಾಗೂ ಮುಕ್ತವಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮಹಿಳೆಯರು ಪುರುಷರಿಗೆ ಇಷ್ಟವಾಗುತ್ತಾರೆ ಹಾಗೂ ಇಬ್ಬರ ಯೋಚನೆಗಳು ಕೂಡ ಸಮಾನವಾಗಿ ಹೊಂದಿಕೊಳ್ಳುತ್ತವೆ.
ಹಾಗೆಂದ ಮಾತ್ರಕ್ಕೆ ಕಾರಣಗಳ ಜೊತೆಗೆ ಅಳುವಂತಹ ಮಹಿಳೆಯರನ್ನು ನೀವು ನಗಣ್ಯವಾಗಿ ತೆಗೆದುಕೊಳ್ಳಬಾರದು. ಯಾಕೆಂದರೆ ಆಕೆಯ ಹೃದಯದಲ್ಲಿ ತನ್ನ ಸಂಗಾತಿ ಹಾಗೂ ಕುಟುಂಬದ ಬಗ್ಗೆ ಅತ್ಯಂತ ಅತೀವವಾದ ಮಮತೆ ಹಾಗೂ ವಾತ್ಸಲೇ ಇರುವುದರಿಂದ ಅದರ ಕುರಿತಂತೆ ಕೊಂಚಮಟ್ಟಿಗೆ ಬೇಸರವಾದರೂ ಕೂಡ ಅವರು ತಮ್ಮ ಬೇಸರವನ್ನು ಅಳುವುದರ ಮುಖಾಂತರ ಹೊರ ಹಾಕುತ್ತಾರೆ. ಕೆಲವೊಮ್ಮೆ ತಮ್ಮ ದುಃಖವನ್ನು ಕಣ್ಣೀರಿನ ಮೂಲಕ ಹೊರ ಹಾಕುವುದರ ಕಾರಣದಿಂದಾಗಿ ಮಾನಸಿಕ ಸಮಸ್ಯೆಗಳನ್ನು ಕೂಡ ಮಹಿಳೆಯರು ಹೊರ ಹಾಕಬಹುದಾಗಿದೆ. ಇಂತಹ ನೈಜ ಮನಸ್ಥಿತಿಯ ಮಹಿಳೆಯರನ್ನು ಪುರುಷರು ಇಷ್ಟಪಡುತ್ತಾರೆ.