ಸಿಬ್ಬಂದಿ ಆಯ್ಕೆ ಆಯೋಗ ಸಂಸ್ಥೆಯಿಂದ ಈ ನೇಮಕಾತಿಯ ಪ್ರಕ್ರಿಯೆ ಆರಂಭವಾಗಿದೆ. ಒಟ್ಟಾರೆಯಾಗಿ 20,000 ಪೋಸ್ಟ್ಗಳು ಈ ಸಂಸ್ಥೆಯಲ್ಲಿ ನೇಮಕಾತಿಗೆ ತೆರೆದಿದೆ. ಇನ್ನು ನೇಮಕಾತಿಗೆ ತೆರೆದುಕೊಂಡಿರುವ ಹುದ್ದೆಗಳು ಎಂದರೆ ತೆರಿಗೆ ಸಹಾಯಕ, ಅಬಕಾರಿ ಸಬ್ ಇನ್ಸ್ಪೆಕ್ಟರ್ ಹಾಗೂ ಅಬಕಾರಿ ಸಹಾಯಕ ಹುದ್ದೆಗಳು. ಕೇಂದ್ರ ಸರ್ಕಾರದ ಹುದ್ದೆಗಳು ಇವುಗಳಾಗಿರುತ್ತವೆ. ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಮೊದಲಿಗೆ ವಯಸ್ಸಿನ ಅರ್ಹತೆಯನ್ನು ನೋಡುವುದಾದರೆ 18ರಿಂದ 30 ವರ್ಷ ವಯಸ್ಸಿನ ಒಳಗಿನ ಮಹಿಳೆಯರು ಹಾಗೂ ಪುರುಷರು ಈ ಕೆಲಸಕ್ಕೆ ಅರ್ಜಿ ಹಾಕಬಹುದಾಗಿದೆ.
ಇನ್ನು ವಯೋಮಿತಿ ಸಡಿಲಿಕೆಗಳನ್ನು ನೋಡುವುದಾದರೆ ಒಬಿಸಿ ಅವರಿಗೆ ಮೂರು ವರ್ಷಗಳು ಹಾಗೂ ಎಸ್ಸಿ ಎಸ್ಟಿ ಅವರಿಗೆ ಐದು ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ. ಅರ್ಜಿ ಶುಲ್ಕವನ್ನು ನೋಡುವುದಾದರೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ನೂರು ರೂಪಾಯಿ ಶುಲ್ಕ ಇರುತ್ತದೆ. ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಸಹ ಇರುವುದಿಲ್ಲ. ಉದ್ಯೋಗದ ಸ್ಥಳವನ್ನು ಗಮನಿಸುವುದಾದರೆ ಕರ್ನಾಟಕ ಸೇರಿದಂತೆ ಭಾರತದ ಯಾವುದೇ ಭಾಗದಲ್ಲಿ ಕೂಡ ಕೆಲಸ ಸಿಗಬಹುದು.
ಭಾರತ ದೇಶದ ನಾಗರಿಕತೆಯನ್ನು ಹೊಂದಿರುವ ಯಾವುದೇ ಪುರುಷ ಹಾಗೂ ಮಹಿಳೆಯರು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಸಂಬಳದ ವಿಚಾರದ ಬಗ್ಗೆ ಮಾತನಾಡುವುದಾದರೆ ತಿಂಗಳಿಗೆ 25,000 ಇಂದ 81,000 ವರೆಗೆ ಸಂಬಳವನ್ನು ಪಡೆಯಬಹುದಾಗಿದೆ. ಕೆಲಸದಲ್ಲಿ ಅನುಭವ ಹೆಚ್ಚಾಗುತ್ತಾ ಹೋದಂತೆ ಸಂಬಳ ಹೆಚ್ಚಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ವಿದ್ಯಾರ್ಹತೆ ಯಾವುದೇ ಪದವಿ ಮಾಡಿದ ಅಭ್ಯರ್ಥಿಗಳು ಈ ಅರ್ಜಿ ಸಲ್ಲಿಕೆಗೆ ಅರ್ಹರಾಗಿದ್ದಾರೆ. ಸೆಪ್ಟೆಂಬರ್ 17 ರಿಂದ ಅರ್ಜಿ ಸಲ್ಲಿಕೆ ದಿನಾಂಕ ಪ್ರಾರಂಭವಾಗುತ್ತದೆ. ಅಕ್ಟೋಬರ್ 8 ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ.
ಇರುವ ಹುದ್ದೆಗಳ ಹೆಸರು ಸಹಾಯಕ ಖಾತೆಗಳ ಅಧಿಕಾರಿ, ವಿಭಾಗ ಅಧಿಕಾರಿ, ಸಹಾಯ ವಿಭಾಗ ಅಧಿಕಾರಿ, ಇನ್ಕಮ್ ಟ್ಯಾಕ್ಸ್ ಇನ್ಸ್ಪೆಕ್ಟರ್, ಅಬಕಾರಿ ಇನ್ಸ್ಪೆಕ್ಟರ್, ಲೆಕ್ಕಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ತೆರಿಗೆ ಸಹಾಯಕ ಹಾಗೂ ಸಹಾಯಕ ಸೇರಿದಂತೆ ಇತ್ಯಾದಿ ಹುದ್ದೆಗಳು ಇರುತ್ತವೆ. ಒಂದು ವೇಳೆ ನೀವು ಈ ಕೆಲಸದ ಮಾನ್ಯತೆಗೆ ಮಾನ್ಯ ರಾಗಿದ್ದರೆ ತಪ್ಪದೆ ಇಂದೇ ಅರ್ಜಿ ಸಲ್ಲಿಸಿ.
ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ