ಆಷಾಡ ಮಾಸ ಬಂದರೇ ಸಾಕು ಮನೆಯಲ್ಲಿ ಯಾವುದೇ ರೀತಿಯ ಶುಭಕಾರ್ಯಗಳನ್ನು ಮಾಡುವುದಿಲ್ಲ. ಆದರೆ ಒಬ್ಬರಿಗೆ ಮಾತ್ರ ಬಹಳ ಸಂತಸವಾಗುತ್ತದೆ. ಅವರು ಯಾರೆಂದರೆ ಈಗ ತಾನೆ ವಿವಾಹವಾದು ವಧು. ಹೊಸದಾಗಿ ವಿವಾಹವಾದ ಹೆಣ್ಣು ಮಕ್ಕಳಿಗೆ ತವರಿಗೆ ಹೋಗುವ ಸಂಭ್ರಮ ಗರಿಗೆದರುವುದು. ಇನ್ನು ಹೊಸದಾಗಿ ವಿವಾಹವಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದು ಎಂದು ಹೇಳುತ್ತಾರೆ. ಕೆಲವು ಕಡೆಯಲಂತು ಅತ್ತೆ-ಸೊಸೆ ಆಷಾಢ ಮಾಸದಲ್ಲಿ ಒಟ್ಟಿಗೆ ಜೊತೆಗಿರಬಾರದು ಹಾಗು ಒಂದೇ ಒಸ್ತಿಲು ತುಳಿಯಬಾರದು ಎಂದು ಹೇಳುತ್ತಾರೆ. ನಮ್ಮ ಹಿರಿಯರು ಮಾಡಿರುವ ಈ ಸಂಪ್ರದಾಯಕ್ಕೆ ಒಂದು ರೀತಿಯ ಅರ್ಥವಿರುತ್ತದೆ.
ಏಕೆ ಈ ರೀತಿ ಹೇಳುತ್ತಾರೆ ಎಂಬುವುದನ್ನು ವೈಜ್ಞಾನಿಕವಾಗಿ ಹೇಳಿದರೆ ಇನ್ನು ಕೆಲವರು ಇದರ ಸಾಮಾಜಿಕ ಆರ್ಥಿಕ ಕಾರಣವಿದೆ ಎನ್ನುತ್ತಾರೆ. ಇನ್ನು ಜ್ಯೋತಿಷ್ಯ ಕೂಡ ಏಕೆ ಈ ರೀತಿಯ ಸಂಪ್ರದಾಯವಿದೆ ಎಂಬುವುದಕ್ಕೆ ತನ್ನದೇ ಆದ ವ್ಯಾಖ್ಯಾನ ನೀಡುತ್ತದೆ. ಆಷಾಡದಲ್ಲಿ ಗಂಡ ಹೆಂಡತಿ ಒಟ್ಟಿಗೆ ಇದ್ದು, ಹೆಂಡತಿಗೆ ಗರ್ಭಧಾರಣೆಯಾದರೆ ಮಗು ಏಪ್ರಿಲ್ ತಿಂಗಳಿನಲ್ಲಿ ಜನಿಸುತ್ತದೆ. ಇನ್ನು ಏಪ್ರಿಲ್ ತಿಂಗಳಲ್ಲಿ ಉರಿಯುವ ಬಿಸಿಲು, ಉಷ್ಣಾಂಶವಂತು ಬಹಳ ಅಧಿಕವಿರುತ್ತದೆ. ಇದರಿಂದಾಗಿ ನವಜಾತ ಶಿಶುಗೆ ತೊಂದರೆಗಳು ಉಂಟಾಗುತ್ತದೆ. ಇನ್ನು ನೀರಿನಿಂದ ಬರುವ ಸಮಸ್ಯೆಗಳು ಕೂಡ ಈ ಸಂದರ್ಭದಲ್ಲಿ ಅಧಿಕ. ಈ ಎಲ್ಲಾ ದೃಷ್ಟಿಯಿಂದ ನೋಡುವುದಾದರೆ ಆಷಾಢ ಮಾಸದಲ್ಲಿ ಗರ್ಭಧಾರಣೆಯಾಗದಿರಲು ಗಂಡ-ಹೆಂಡತಿ ಪ್ರತ್ಯೇಕವಾಗಿರುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.
ಇನ್ನು ಕೆಲವರು ಹೇಳುವ ಪ್ರಕಾರ ಆಷಾಢ ಮಾಸದಲ್ಲಿ ವರುಣನ ಆರ್ಭಟ ಬಹಳ ಹೆಚ್ಚಾಗಿರುತ್ತದೆ. ಹಳ್ಳಿಯಲ್ಲಿ ವಾಸಿವಿರುವವರಿಗೆ ಕೃಷಿ ಚಟುವಟಿಕೆಗಳಿಗೆ ಚುರುಕಾಗುವುದು. ಇನ್ನು ಈ ಸಮಯದಲ್ಲಿ ಹೊಸದಾಗಿ ವಿವಾಹವಾದ ದಂಪತಿ ಜೊತೆಯಲ್ಲಿಯೇ ಇದ್ದರೆ ಸದಾ ರೊಮ್ಯಾಂಟಿಕ್ ಮೂಡ್‌ನಲ್ಲಿರುತ್ತಾರೆ. ಇತರ ಕೆಲಸ ಕಾರ್ಯಗಳ ಕಡೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಈ ಸಮಯದಲ್ಲಿ ಹೆಂಡತಿ ತವರು ಮನೆಗೆ ಹೋದರೆ ಗಂಡ ತನ್ನ ಹೊಲ-ಗದ್ದೆಗಳ ಕೆಲಸದಲ್ಲಿ ಗಮನ ಹರಿಸಬಹುದು. ಹೀಗಾಗಿ ಆಷಾಢ ಸಮಯದಲ್ಲಿ ನವ ದಂಪತಿ ದೂರವಿರಬೇಕೆಂದು ಹೇಳುತ್ತಾರೆ. ಇನ್ನು ಜೋತಿಷ್ಯ ಶಾಸ್ತ್ರದ ಪ್ರಕಾರ ಸಂತಾನ ಪಡೆಯಲು ಆಷಾಢ ಮಾಸ ಒಳ್ಳೆಯದಲ್ಲ.
ಮಗು ಜನಿಸಿದಾಗ ಜಾತಕದಲ್ಲಿ ಸೂರ್ಯ ಮತ್ತು ಶುಕ್ರ ಇದ್ದರೆ ಒಳ್ಳೆಯದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದರೆ ಯಾರೂ ತಮ್ಮ ಮಕ್ಕಳ ಜಾತಕದಲ್ಲಿ ಬುಧ ದುರ್ಬಲನಾಗಿರುವುದು ಬಯಸುವುದಿಲ್ಲ. ಆಷಾಢದಲ್ಲಿ ಗರ್ಭಧಾರಣೆಯಾದರೆ ಬುಧ ದುರ್ಬಲನಾಗಿರುತ್ತಾನೆ. ಯೋಗ್ಯ ಸಂತಾನಕ್ಕೆ ಸಂಸ್ಕಾರ ಆಷಾಢ ಕಳೆದು ಶ್ರಾವಣಮಾಸ ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಈ ಎಲ್ಲಾ ಕಾರಣಗಳಿಂದ ಬಹುಶಃ ಆಷಾಢ ಮಾಸದಲ್ಲಿ ನವ ಜೋಡಿಗಳು ಒಟ್ಟಿಗೆ ಇರಬಾರದು ಎನ್ನುತ್ತಾರೆ. ಇನ್ನೂ ತಮಗೆಲ್ಲ ಒಂದು ಪ್ರಶ್ನೆ ಮೂಡಬಹುದು. ಅದೇನೆಂದರೆ ನವ ದಂಪತಿಗಳನ್ನು ಮಾತ್ರ ಆಷಾಢದಲ್ಲಿ ಪ್ರತ್ಯೇಕವಾಗಿರಲು ಹೇಳುತ್ತಾರೆ? ಆದರೆ ಪ್ರತಿವರ್ಷವೂ ಆಷಾಢ ಬರುತ್ತದೆ, ಎರಡನೇ ಬಾರಿ ಗರ್ಭಧಾರಣೆಗೆ ಆಷಾಢ ಮಾಸ ಲೆಕ್ಕಕ್ಕೆ ಇಲ್ಲವೇ, ಏಕೆ ಮದುವೆಯಾದ ಮೊದಲ ವರ್ಷ ಮಾತ್ರ ರೀತಿಯ ಸಂಪ್ರದಾಯಗಳು? ನಿಮ್ಮ ಈ ರೀತಿಯ ಪ್ರಶ್ನೆಗೆ ನಿಖರ ಉತ್ತರವಿಲ್ಲ.
ಆದರೆ ಏಕೆ ಮದುವೆಯಾದ ಮೊದಲನೇ ವರ್ಷಕ್ಕೆ ಇಷ್ಟೊಂದು ಪ್ರಾಮುಖ್ಯತೆ ಕೊಡುತ್ತಾರೆ ಎಂಬುವುದು ಬಹುಶಃ ಈ ಕಾರಣಗಳಿಂದ ಇರಬಹುದು. ವೈದ್ಯಕೀಯವಾಗಿ ಚೊಚ್ಚಲ ಹೆರಿಗೆಯನ್ನು ಹೆಣ್ಣಿಗೆ ಮರು ಹುಟ್ಟು ಎಂದು ಪರಿಗಣಿಸಲಾಗಿದೆ.ಅಲ್ಲದೆ ಹುಟ್ಟಿದ ಮೊದಲನೇ ಮಗುವನ್ನು ಮನೆಯ ವಾರಾಸುದಾರ ಎಂದು ಹೇಳುತ್ತಾರೆ. ಜ್ಯೋತಿಷ್ಯ ಪ್ರಕಾರ ಕೂಡ ಹುಟ್ಟುವ ಮೊದಲ ಮಗು ಒಳ್ಳೆಯ ನಕ್ಷತ್ರದಲ್ಲಿ ಹುಟ್ಟುವಂತಾಗಬೇಕು ಎಂದು ಹೇಳುತ್ತಾರೆ. ಹೆಣ್ಣಿಗೆ ಸಂತಾನ ಪಡೆಯಲು ಈ ಆಷಾಢ ಮಾಸದ ಸಮಯ ಒಳ್ಳೆಯದಲ್ಲ ಎಂಬ ಮಾತನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಕೂಡ ಹೇಳುತ್ತಾರೆ.
ಮಗು ಹುಟ್ಟಿದ ಜಾತಕದಲ್ಲಿ ಸೂರ್ಯ ಹಾಗೂ ಶುಕ್ರ ಇದ್ದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ, ಆದ್ರೆ ಯಾರೂ ಕೂಡ ಹುಟ್ಟುವ ತಮ್ಮ ಮಕ್ಕಳ ಜಾತಕದಲ್ಲಿ ಬುಧ ದುರ್ಬಲನಾಗಿರುವುದನ್ನ ಬಯಸುವುದಿಲ್ಲ. ಮತ್ತು ಗಂಡ ಹೆಂಡತಿ ಸೇರಿ ದೈಹಿಕ ಸುಖಕ್ಕೆ, ಇಬ್ಬರೂ ದೇಹ ಸಂಬಂಧ ಹೊಂದಿ, ಹೆಂಡತಿ ಆಷಾಢದಲ್ಲಿ ಏನಾದರು ಗರ್ಭಧಾರಣೆಯಾದರೆ ಬುಧ ದುರ್ಬಲನಾಗಿರುತ್ತಾನಂತೆ, ಮತ್ತು ಯೋಗ್ಯ ಸಂತಾನಕ್ಕೆ ಸಂಸ್ಕಾರ ಆಷಾಢ ಕಳೆದು ಶ್ರಾವಣಮಾಸ ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಎನ್ನಲಾಗಿದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.