ಸಂಪತ್ ಕುಮಾರ್ ಮೂಲ ಹೆಸರು ಹೊಂದಿರುವ ಸಾಹಸ ಸಿಂಹ ಎಂಬ ಬಿರುದು ಪಡೆದಿರುವ ನಟ ವಿಷ್ಣುವರ್ಧನ್ ಇವರು ಕನ್ನಡ ಹಿಂದಿ ತಮಿಳು ತೆಲುಗು ಮಲಯಳಂ ಮುಂತಾದ 220 ಸಿನಿಮಾ ಅಲ್ಲಿ ನಟಿಸಿದ್ದು ಇವರು ಭಾರತಿ ಅವರನ್ನು ವಿವಾಹ ಆಗಿದ್ದರು ಸಾಹಸ ಸಿಂಹ ಅಭಿನಯ ಭಾರ್ಗವ ಮೈಸೂರು ರತ್ನ ಎಂಬ ಬಿರುದು ಪಡೆದಿದ್ದಾರೆ ಇವರು ತನ್ನ ಬಾಲ್ಯದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದುಕೊಂಡರು.
1995 ರಲ್ಲಿ ಶಿವ ಶರಣೆಯ ನಂಬೆಯಕ್ಕ ಅಲ್ಲಿ ಮೊದಲ ಬಾರಿಗೆ ಬಾಲನಟನಾಗಿ ಅಭಿನಯ ಮಾಡಿದ್ದು ಕಾಲಕ್ರಮೇಣ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿ ಅಭಿನಯ ಮಾಡಿದ್ದು ಭರ್ಜರಿ ಜಯ ಭೇರಿ ಬಾರಿಸಿದ್ದಾರೆ ನಟನೆಯಲ್ಲದೇ, ಕಿಲಾಡಿ ಕಿಟ್ಟು, ನಾಗಕಾಳಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ ಮೋಜುಗಾರ ಸೊಗಸುಗಾರ ವಿಷ್ಣುಸೇನಾ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ
ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಇವರು ವಿಷ್ಣು ಅವರು ಡಿಸೆಂಬರ್ 30 2009 ಅಲ್ಲಿ ವಿಧಿವಶರಾದರು ಅವರ ಪಾರ್ಥಿವ ಶರೀರವನ್ನು ಅಭಿಮಾನ ಸ್ಟುಡಿಯೋದಲ್ಲಿ ಅಂತಿಮ ಸಂಸ್ಕಾರ ಅನ್ನು ಮಾಡಲಾಗಿದ್ದು ಇಂದಿಗೂ ಅವರ ಸಮಾಧಿಯ ಕಟ್ಟಲು ಅನೇಕ ತಕರಾರು ನಡೆದಿದ್ದು ಇದರಿಂದ ವಿಷ್ಣು ಅವರ ಕುಟುಂಬದವರು ತುಂಬಾನೇ ನೋವುಂಡಿದ್ದಾರೆ ಅವರ ಅಳಿಯ ಅನಿರುದ್ಧ ಅವರು ತುಂಬಾನೇ ಕಷ್ಟ ಪಟ್ಟಿದಾರೆ ಅದರ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿದೆ
ಚಿತ್ರರಂಗದ ಪಿನಿಕ್ಸ್ ಅಜಾತಶತ್ರು ಎಂದು ಕರೆಯುತ್ತಾರೆ ಆದರೆ ಇವರ ಅಕಾಲಿಕ ಮರಣ ಆದಾಗ ಇಡೀ ಚಿತ್ರರಂಗವೇ ಕಣ್ಣೀರು ಮಿಡಿಯಿತು ರಾಜಕುಮಾರ ಅವರು ವಿಧಿವಶ ಅದ ಮೂರು ವರ್ಷ ಬಳಿಕ ವಿಷ್ಣುವರ್ಧನ ಸಾವಿನ ಬಗ್ಗೆ ಒಂದು ಮಾಧ್ಯಮದಲ್ಲಿ ಅಣ್ಣ ಅವರು ಇಲ್ಲದ ನಾಡಿನಲ್ಲಿ ತಮ್ಮನ್ನು ಕೂಡ ಅವರ ದಾರಿಯ ನೀಡಿದ್ದಾನೆ ಎಂದು ವರದಿಯನ್ನು ನೀಡಿತ್ತು ವಿಷ್ಣುವರ್ಧನ್ ಅವರ ಕೊನೆಯ ಚಿತ್ರ ಆಪ್ತರಕ್ಷಕ ಬಿಡುಗಡೆಯ ಮುನ್ನವೇ ಅವರು ವಿಧಿವಶರಾಗಿದ್ದರು ಈ ಚಿತ್ರವನ್ನು ಅವರ ನೆನಪಿನ ಸ್ಮರಣೆಗಾಗಿ ಬಿಡುಗಡೆ ಮಾಡಲಾಯಿತು ವಿಷ್ಣುವರ್ಧನ್ ತಮ್ಮ ಬದುಕಿನುದ್ದಕ್ಕೂ ಅವಯವಗಳನ್ನು ದಾಟಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಬಾಳಿದರು ಅವರು ಸತ್ತನಂತರವೂ ಅನೇಕ ಸಂಕಷ್ಟಗಳು ಹಾಗೇ ಇವೆ ಅದಕ್ಕೆ ಒಂದು ಉದಾಹರಣೆಯೆಂದರೆ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಉಂಟಾಗಿರುವ ಅಡ್ಡಿ ತೊಡಕುಗಳು ಸುಮಾರು 10 ವರ್ಷಗಳಿಂದ ಎದುರಾಗುತ್ತವೆ
ಅವರ ವಿಧಿವಶರಾದ ಬಳಿಕ ಅವರ ಸ್ಮಾರಕ ನಿರ್ಮಾಣ ಬೆಂಗಳೂರಿನಲ್ಲಿ ರಚಿಸುವುದು ಇಲ್ಲವೇ ಅವರ ಹುಟ್ಟೂರಿನಲ್ಲಿ ನಿರ್ಮಾಣ ಮಾಡುವುದು ಎಂಬ ಗೊಂದಲವೂ ಅವರ ಕುಟುಂಬಸ್ಥರಿಗೆ ಎದ್ದಿದ್ದವು ಡಾಕ್ಟರ್ ರಾಜಕುಮಾರ್ ಅವರ ಸ್ಮಾರಕವು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಾಣವಾಗಿದ್ದುದಾದಾ ಅವರ ಸ್ಮಾರಕವನ್ನು ಉತ್ತರಹಳ್ಳಿಯ ಬಳಿಯಿರುವ ಅಭಿಮಾನ್ ಸ್ಟುಡಿಯೋದಲ್ಲಿ ಕಟ್ಟುವುದು ಎಂದು ತೀರ್ಮಾನ ಮಾಡುತ್ತಾರೆ ಈ ಸ್ಟುಡಿಯೋ ಕನ್ನಡ ಚಿತ್ರರಂಗದ ಪೋಷಕ ಹಾಗೂ ಹಾಸ್ಯನಟರಾದ ದಿವಂಗತ ಬಾಲಕೃಷ್ಣ ಅವರಿಗೆ ಸೇರಿದ್ದ ಜಾಗವಾಗಿತ್ತು ಇಲ್ಲಿ ಜಾಗ ಕೊಂಡುಕೊಳ್ಳುವುದು ಅವರ ಬಹುದಿನದ ಕನಸಾಗಿತ್ತು ಸರಕಾರವು 1960 ರಲ್ಲಿ ಅವರಿಗೆ ಐದು ಎಕರೆ ಜಮೀನನ್ನು ನೀಡುತ್ತದೆ ಕಷ್ಟಪಟ್ಟು ದುಡಿದ ಹಣದಲ್ಲಿ ಉಳಿದ 15 ಎಕರೆ ಜಮೀನನ್ನು ಕೊಂಡುಕೊಳ್ಳುತ್ತಾರೆ ಇದರಲ್ಲಿ ಅವರ ಕನಸನ್ನು ನನಸಾಗಿಸಿಕೊಳ್ಳುವ ಯೋಚಿಸುತ್ತಿರುತ್ತಾರೆ ಆದರೆ ದುರದೃಷ್ಟವೆಂದರೆ ಅವರ ಕನಸು ಕನಸಾಗಿಯೇ ಉಳಿಯುತ್ತದೆ ಏಕೆಂದರೆ ಅವರು ಹಲವರು ಸಿನಿಮಾಗಳ ನಿರ್ಮಾಣಮಾಡಿದ್ದು ಅದರಲ್ಲಿ ತಮ್ಮ ಕೈಸುಟ್ಟುಕೊಂಡು ಇರುತ್ತಾರೆ ಹಾಗಾಗಿ ತಮ್ಮ ಕನಸ್ಸನ ನನಸು ಮಾಡಿಕೊಳ್ಳಲು ಅಸಾಧ್ಯವಾಗುತ್ತದೆ
ದಾದಾ ಅವರ ಸ್ಮಾರಕ ಇಲ್ಲಿಯೇ ಇದ್ದುಅವರ ಸ್ಮಾರಕ ನಿರ್ಮಾಣಕ್ಕೆ ಸುಮಾರು ಎರಡು ಎಕರೆ ಜಮೀನನ್ನು ಸರ್ಕಾರ ನೀಡಿದರು ಆದರೆ ಅದರ ವಿವಾದ ಕೊನೆಗೊಳ್ಳಲಿಲ್ಲ ಯಾಕೆಂದರೆ ಬಾಲಕೃಷ್ಣ ಅವರ ಮಕ್ಕಳಾದ ಶ್ರೀನಿವಾಸ್ ಗಣೇಶ್ ಮತ್ತು ಗೀತಾ ಅವರಿಗೆ ಅಭಿಮಾನ್ ಸ್ಟುಡಿಯೋ ಮೇಲೆ ಅಧಿಕೃತ ಹಕ್ಕು ಇರುವುದು ಹಾಗೆ ಇವರು ನಮ್ಮ ಜಾಗದಲ್ಲಿ ಸ್ವಲ್ಪ ಬಿಟ್ಟುಕೊಡುವುದಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗುತ್ತಾರೆ ದಾದಾ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಮತ್ತು ಅವರ ಅಳಿಯ ಅನಿರುದ್ಧ್ ಅವರಿಗೆ ಅಲ್ಲೊಂದು ಧ್ಯಾನಕೇಂದ್ರ ಇತ್ಯಾದಿಗಳನ್ನು ನಿರ್ಮಿಸುವ ಆದರೆ ಸರ್ಕಾರದ ಮೊರೆ ಹೋಗಿದ್ದರಿಂದ ತುಂಬಾನೇ ಪುಣ್ಯಸ್ಮರಣೆ ಮುಂತಾದ ದಿನಗಳಲ್ಲಿ ಅನೇಕ ಸಾಮಾಜಿಕ ಕಾರ್ಯಗಳು ನಡೆಯುತ್ತಿದ್ದು ಅನೇಕ ಸಂಖ್ಯೆಯಲ್ಲಿ ಜನರು ಅಭಿಮಾನಿಗಳು ಭಾಗಿಯಾಗುತ್ತಾರೆ
ಆದರೆ ಬಾಲಕೃಷ್ಣ ಅವರ ಮಕ್ಕಳ ನಡುವೆ ಮೂಡಿದ ಭಿನ್ನಾಭಿಪ್ರಾಯ ಹಾಗೂ ಅವರು ಕೋರ್ಟಿನ ಮೆಟ್ಟಿಲೇರಿ ಈ ವಿವಾದಗಳಿಂದ ಹೈರಾಣಾಗಿದ್ದಾರೆ ಇತ್ತೀಚೆಗೆ ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯನ್ನು ಮಾಡುವುದು ನಿಲ್ಲಿಸಲಾಗಿದೆ ಇದರಿಂದ ದಾದಾ ಕುಟುಂಬದವರು ತುಂಬಾನೇ ನೋವನ್ನು ಅನುಭವಿಸಿರುತ್ತಾರೆ
ಇಷ್ಟೆಲ್ಲ ವಿವಾದಗಳು ನಡೆದಿದ್ದು ದಾದಾ ಅವರ ಕುಟುಂಬದವರಿಗೆ ಹೊಸದೊಂದು ವಿಚಾರವು ಹೊಳೆಯುತ್ತದೆ ಅದೇನಂದರೆ ದಾದಾ ಅವರ ಹುಟ್ಟೂರಾದ ಮೈಸೂರಿನಲ್ಲಿ ಯಾಕೆ ಅವರ ಸ್ಮಾರಕವನ್ನು ನಿರ್ಮಿಸಬಾರದು ಎಂದು ಯೋಚಿಸಿ ತಕ್ಷಣವೇ ಅವರ ಹುಟ್ಟೂರಾದ ಮೈಸೂರಿನ ಎಚ್ಡಿ ಕೋಟೆಯಲ್ಲಿ ಅವರ ಸ್ಮಾರಕ ನಿರ್ಮಾಣಕ್ಕೆ ನಿರ್ಧಾರ ಮಾಡುತ್ತಾರೆ ಆದರೆ ಅಲ್ಲಿಯೂ ಕೂಡ ಅನೇಕ ಗೊಂದಲಗಳು ಸೃಷ್ಟಿಯಾಗುತ್ತವೆ ಅದೇನೆಂದರೆ ವಿಷ್ಣು ಸ್ಮಾರಕಕ್ಕೆ ನೀಡಿರುವ ಜಾಗವು ಅಲ್ಲಿನ ನಿವಾಸಿಯಾದ ಜಯಮ್ಮ ಅವರಿಗೆ ಸೇರಬೇಕು ಅಂದರೆ ಅವರ ತಲೆಮಾರಿನಿಂದ ಆ ಜಾಗವು ಅವರದೇ ಎಂದು ಅವರು ಕೂಡ ಕೋರ್ಟಿನ ಮೆಟ್ಟಿಲೇರುತ್ತಾರೆ
ಆದರೆ ಅಲ್ಲಿನ ಸರಕಾರಿ ಅಧಿಕಾರಿಗಳು ಆಕೆಗೆ ಹಲವರು ಆಮಿಷಗಳನ್ನು ಒಡ್ಡಿ ಅಲ್ಲಿನ ಜಮೀನನ್ನು ಪಡೆಯುತ್ತಾರೆ ನಿಮ್ಮ ಮಗನಿಗೆ ಸರ್ಕಾರಿ ಉದ್ಯೋಗ ಕೊಡುತ್ತೇವೆ ಇನ್ನು ಸರಕಾರದ ಪರಿಹಾರ ನಿಧಿಯನ್ನು ಕೂಡ ಕೊಡುತ್ತೇವೆ ಎಂದು ಭರವಸೆಯನ್ನು ಕೊಟ್ಟು ಆ ಜಾಗವನ್ನು ಪಡೆದ ನಂತರ ಅವರು ಕೊಟ್ಟ ಮಾತನ್ನು ಮರೆಯುತ್ತಾರೆ ಇದರ ಕುರಿತು ಆಕೆ ಮತ್ತು ಆಕೆಯ ಗಂಡ ಕೋಟಿನ ಮೆಟ್ಟಿಲೇರುತ್ತಾರೆ ಕೊನೆಗೆ ಗಂಡ ಸ್ವರ್ಗಸ್ಥರಾಗುತ್ತಾರೆ ಕೊನೆಗೆ 2018 19 ರಲ್ಲಿ ವಿವಾದಕ್ಕೆ ತೆರೆ ಬೀಳುತ್ತದೆ ಇವಾಗ ಸ್ಮಾರಕಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ನಡೆಯುತ್ತಿದ್ದು ಸದ್ಯದಲ್ಲೇ ಅವರ ಸ್ಮಾರಕ ನಿರ್ಮಾಣವಾಗುವುದು ಅವರು ಸಾಕಷ್ಟು ಹೋರಾಟ ಮಾಡಿದ್ದಾರೆ
ಆದರೆ ನಮಗೆಲ್ಲ ಪ್ರಶ್ನೆಯೆಂದರೆ ಸರ್ಕಾರವು ದಾದ ಅವರ ಸ್ಮಾರಕ ಕಟ್ಟಲು ಇಷ್ಟು ಹಿಂದೇಟು ಹಾಕುತ್ತಿರುವುದು ಯಾಕೆ ಅಭಿಮಾನಿ ಸ್ಟುಡಿಯೋ ಅಲ್ಲಿ ಅವರ ಸ್ಮಾರಕ ನಿರ್ಮಾಣಕ್ಕೆ ದಾದ ಅವರ ಹಲವಾರು ಅಭಿಮಾನಿಗಳು ಸಂಘ-ಸಂಸ್ಥೆಗಳು ಚಿತ್ರರಂಗದ ಕಲಾವಿದರು ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಅಂಬರೀಶ್ ಅವರು ಕೂಡ ಅನೇಕ ಬಾರಿ ಇದರ ಬಗ್ಗೆ ಚರ್ಚೆ ಮಾಡಿದ್ದಾರೆ ಆದರೂ ಕೂಡ ಅವರ ಸ್ಮಾರಕಕ್ಕೆ ಸರ್ಕಾರ ಹಿಂದೇಟು ಹಾಕಿದೆ ಸರ್ಕಾರ ಯಾವುದಾದರೂ ಇರುತ್ತದೆ ಎಂದು ಸರಕಾರವು ಸ್ಮಾರಕಕ್ಕೆ ಒಂದಿಷ್ಟು ಜಾಗವನ್ನು ನೀಡಿದರೆ ಅವರ ಫ್ಯಾಮಿಲಿ ನೋವುಣ್ಣುವ ಅವಶ್ಯಕತೆ ಇರಲಿಲ್ಲ ದಾದ ಅವರ ಭಾರಿ ಇಟ್ಟಿಗೆ ಕಟ್ಟಿ ನಿರ್ಮಾಣ ಮಾಡಿರುವ ಸ್ಮಾರಕಕ್ಕೆ ಇರುವ ಬೆಲೆಗಿಂತ ಅವರ ಇಂದು ಸಾವಿರಾರು ಅಭಿಮಾನಿಗಳ ಮನದಲ್ಲಿ ಇಟ್ಟುಕೊಂಡು ಪೂಜಿಸುತ್ತಿರುವ ಸ್ಮಾರಕ ದೊಡ್ಡದಿದೆ