ಮದುವೆ ಬಳಿಕ ಎಲ್ಲ ದಂಪತಿಗಳಿಗೂ ಮಕ್ಕಳನ್ನು ಹೆತ್ತು ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂಬ ಇಚ್ಛೆ ಇರುತ್ತದೆ. ಇದಕ್ಕೆ ಗಂಡ ಮತ್ತು ಹೆಂಡತಿ ಇಬ್ಬರೂ ದೈಹಿಕವಾಗಿ ಸದೃಢವಾಗಿರಬೇಕು. ಕೆಲವು ದಂಪತಿಗಳು ಎಷ್ಟೇ ಪ್ರಯತ್ನ ಪಟ್ಟರೂ ಮಕ್ಕಳಾಗುವ ಸಾಧ್ಯತೆಗಳು ಕಡಿಮೆ ಇರುತ್ತವೆ. ಇದರಿಂದ ಅವರು ತುಂಬಾ ನೊಂದು ಕೊಳ್ಳುತ್ತಾರೆ. ಮತ್ತು ಅವರ ದಾಂಪತ್ಯ ಜೀವನದಲ್ಲಿ ಬಿರುಕು ಕೂಡ ಬರುವ ಸಾಧ್ಯತೆ ಇರುತ್ತದೆ.
ಮಗುವನ್ನು ಒಂಬತ್ತು ತಿಂಗಳು ಹೆತ್ತುಹೊತ್ತು ಮಗುವಿಗಾಗಿ ಸಿದ್ಧತೆಯನ್ನು ಮಾಡಿಕೊಳ್ಳುವವರು ಹೆಂಗಸರೇ ಆಗಿರಬಹುದು. ಆದರೆ ತಂದೆ ಆಗಲು ಇಷ್ಟ ಪಡುವವರು ಕೂಡ ಮಗುವನ್ನು ಪಡೆಯಲು ಅಷ್ಟೇ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಅಂದರೆ ಅವರ ವೀ ರ್ಯಾಣುಗಳ ಗುಣ ಮಟ್ಟವನ್ನು ಅವರು ಕಾಪಾಡಿಕೊಳ್ಳಬೇಕು.
ಹೀಗೆ ಮಾತ್ರ ಮಾಡಿದರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ಹಾಗಾದರೆ ಪುರುಷರು ವೀರ್ಯಾಣುಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಏನೆಲ್ಲಾ ಬದಲಾವಣೆಯನ್ನು ಮಾಡಿಕೊಳ್ಳಬೇಕೆಂದರೆ ಕೇವಲ ಮೂವತ್ತೈದು ದಿನಗಳಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಈ ಕೆಳಗಿನ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಯಾವುದೇ ಹಣ ವ್ಯರ್ಥವಾಗದೆ ವೀರ್ಯಾ ಣುಗಳನ್ನು ಹೆಚ್ಚಿಸಿಕೊಳ್ಳಬಹುದು. ಪುರುಷರಲ್ಲಿ ಸ್ಪರ್ಮ್ ಕೌಂಟ್ ಅಂದರೆ ವೀ ರ್ಯಾಣು ಹೆಚ್ಚಿಸಲು ಕೆಲವು ಮನೆಮದ್ದು ಇವೆ. ಮನೆಮದ್ದಿನೊಂದಿಗೆ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬೇಕು. ಹಾಗಾದರೆ ಪುರುಷರ ಸಮಸ್ಯೆಯನ್ನು ನಿವಾರಿಸುವ ಮನೆಮದ್ದು ಯಾವುದು, ಹೇಗೆ ಸೇವಿಸಬೇಕು ಹಾಗೂ ಮನೆಮದ್ದಿನೊಂದಿಗೆ ಯಾವ ಆಹಾರ ಪದಾರ್ಥವನ್ನು ದಿನನಿತ್ಯ ಸೇವಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಪುರುಷರ ಫಲವತ್ತತೆಗೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಆಹಾರವನ್ನು ಪರಿಗಣಿಸಲಾಗಿದೆ. ವೀರ್ಯದ ಗುಣಮಟ್ಟವನ್ನು ಸುಧಾರಿಸಲು ಮತ್ತು ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸಲು ಕೆಲವು ಆಹಾರವನ್ನು ಸೇವಿಸಬಹುದಾಗಿದೆ. ಉದಾಹರಣೆಗೆ, ನಟ್ಸ್ ದೈನಂದಿನ ಬಳಕೆ – ಅವುಗಳೆಂದರೆ ಬಾದಾಮಿ, ಹ್ಯಾಸಲ್ನಟ್ ಮತ್ತು ವಾಲ್ ನಟ್. ವೀ ರ್ಯದ ಚೈತನ್ಯ, ಚಲನಶೀಲತೆ ಮತ್ತು ರೂಪ ವಿಜ್ಞಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಒಟ್ಟಾರೆ ವೀ ರ್ಯಾಣುಗಳ ಸಂಖ್ಯೆ ಕೂಡ ಹೆಚ್ಚಿಸಬಲ್ಲದು.
ಬಾಳೆಹಣ್ಣು ಪಾಲಕ್ ಸೊಪ್ಪು ಟೊಮೆಟೊ ಹಣ್ಣು ಬೆಣ್ಣೆ ಹಣ್ಣು ಮತ್ತು ಬೆಣ್ಣೆ ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು ಆರೋಗ್ಯಕರ ಕೊಬ್ಬು ಹಾಗೂ ವಿಟಮಿನ್ ಬಿ6 ಸಹಿತ ಹಲವಾರು ಪೋಷಕಾಂಶಗಳಿದ್ದು ದೇಹದ ಚೈತನ್ಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಪುರುಷರಲ್ಲಿ ಬೆಣ್ಣೆ ಹಣ್ಣಿನ ಪೌಷ್ಟಿಕಾಂಶಗಳು ವೀರ್ಯಾಣುಗಳ ಸಂಖ್ಯೆಯನ್ನು ವೃದ್ಧಿ ಮಾಡುತ್ತದೆ. ಹಾಗೂ ಲೈಂ, ಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಈರುಳ್ಳಿಯನ್ನು ಕೂಡ ನಿಯಮಿತವಾಗಿ ಸೇವನೆ ಮಾಡಬೇಕು. ಈರುಳ್ಳಿ ಪುರುಷರಲ್ಲಿ ವೀರ್ಯಾಣುಗಳ ಉತ್ಪತ್ತಿಗೆ ಸುಲಭವಾದ ಮನೆಮದ್ದುಗಳಲ್ಲಿ ಒಂದಾಗಿದೆ. ಮತ್ತು ಸಪೋಟಾ ಹಣ್ಣುಗಳನ್ನು ಸೇವಿಸುವುದರಿಂದ ವೀರ್ಯಾಣುಗಳು ಉತ್ಪತ್ತಿಯಾಗುತ್ತವೆ. ಮೊಸರಿಗೆ ಹಾಗೂ ಮಜ್ಜಿಗೆಗೆ ಉಪ್ಪು ಸೇರಿಸಿ ಕುಡಿದರೆ ಅಜೀರ್ಣ ಮಾತ್ರ ನಿವಾರಣೆಯಾಗುವುದಲ್ಲದೆ, ಇದರಿಂದ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
ಏಲಕ್ಕಿ ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಇದರಲ್ಲಿ ಸಿಲಿಯೋಲ್ ಎಂಬ ಪೌಷ್ಟಿಕಾಂಶವಿದ್ದು ಇದು ವಿಶೇಷವಾಗಿ ಪುರುಷರ ಜನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸಲು ನೆರವಾಗುತ್ತದೆ.
ಬಾದಾಮಿ ಲೈಂಗಿಕ ಆರೋಗ್ಯಕ್ಕೆ ಮತ್ತು ಸಂತಾನೋತ್ಪತ್ತಿಗೆ ಹೆಚ್ಚು ಸಹಾಯಕವಾಗಿದೆ. ಆಹಾರದ ಜೊತೆಗೆ ಧೂಮಪಾನ ಮತ್ತು ಮದ್ಯಪಾನ ತ್ಯಜಿಸಬೇಕು. ಒತ್ತಡದಿಂದ ಮುಕ್ತಿ ಪಡೆದಿರಬೇಕು. ದೈಹಿಕ ಹಾಗೂ ಮಾನಸಿಕ ಒತ್ತಡದಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆದ್ದರಿಂದ ಚೆನ್ನಾಗಿ ತಿನ್ನುವುದು ಉಣ್ಣುವುದು ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ಕುಂಬಳಕಾಯಿ ಬೀಜಗಳಲ್ಲಿ ಸತುಅಧಿಕವಾಗಿದೆ, ಇದು ವೀರ್ಯಾಣು ರಚನೆಗೆ ಅಗತ್ಯವಾದ ಖನಿಜ. ಸತುವಿನ ಕೊರತೆ ಟೆಸ್ಟೋಸ್ಟೆರಾನ್ ಮಟ್ಟಗಳು, ಕಳಪೆ ವೀರ್ಯದ ಗುಣಮಟ್ಟ ಮತ್ತು ಪುರುಷ ಬಂಜೆತನದ ಅಪಾಯವನ್ನುಂಟು ಮಾಡುತ್ತದೆ. ಆದುದರಿಂದ ಕುಂಬಳಕಾಯಿ ಬೀಜಗಳನ್ನು ಹೆಚ್ಚಾಗಿ ಸೇವಿಸಿ.
ಡಾರ್ಕ್ ಚಾಕೊಲೇಟ್ ಅಮೈನೊ ಆಸಿಡ್ ಎಲ್-ಅರ್ಜಿನೈನ್ ನ ಸಮೃದ್ಧ ಮೂಲವಾಗಿದೆ, ಇದು ವೀರ್ಯ ಮತ್ತು ವೀರ್ಯದ ಪ್ರಮಾಣವನ್ನು ದ್ವಿಗುಣಗೊಳಿಸುತ್ತದೆ ಎಂದು ಸಾಬೀತಾಗಿದೆ. ಚಾಕೊಲೇಟ್, ಗಾಢವಾದಷ್ಟು ಉತ್ತಮ.ದಾಳಿಂಬೆ ರಸ ಆ್ಯಂಟಿ ಆ್ಯಕ್ಟಿಡೆಂಟ್ಸ್‌ನಿಂದ ತುಂಬಿವೆ. ಇದು ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ. ದಾಳಿಂಬೆ ರಸವನ್ನು ಕುಡಿಯುವುದರಿಂದ ಲೈಂ, ಗಿಕ ಕಾರ್ಯಕ್ಷಮತೆ ಸುಧಾರಿಸಬಹುದು ಮತ್ತು ಪುರುಷರಲ್ಲಿ ನಿಮಿರುವಿಕೆ ಸಮಸ್ಯೆಯನ್ನು ದೂರ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ಅಕ್ರೋಟಿನ ಸೇವನೆಯಿಂದಲೂ ವೀರ್ಯಾಣುಗಳ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಜನನಾಂಗಕ್ಕೆ ಹರಿಯುವ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಇದರಲ್ಲಿರುವ ಒಮೆಗಾ ೩ ಕೊಬ್ಬಿನ ಆಮ್ಲಗಳು ಹಾಗೂ ಎಲ್-ಆರ್ಜಿನೈನ್ ಎಂಬ ಪೋಷಕಾಂಶಗಳು ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಹೆಚ್ಚಿಸುತ್ತವೆ.
ಇತರ ಒಣಫಲಗಳಿಗೆ ಹೋಲಿಸಿದರೆ ಅಕ್ರೋಟಿನಲ್ಲಿ ದುಪ್ಪಟ್ಟು ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಇವು ರಕ್ತದಲ್ಲಿರುವ ಕಲ್ಮಶಗಳನ್ನು ನಿವಾರಿಸಲು ಹೋರಾಡುತ್ತವೆ. ಅಲ್ಲದೇ ಒಮೆಗಾ ೩ ಕೊಬ್ಬಿನ ಆಮ್ಲಗಳು ಜನನಾಂಗಕ್ಕೆ ಹರಿಯುವ ರಕ್ತದ ಪ್ರಮಾಣ ಹೆಚ್ಚುತ್ತದೆ ಹಾಗೂ ವೀರ್ಯಾಣುಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತದೆ. ಅಕ್ರೋಟಿನ ಪುಡಿಯನ್ನು ನಿಮ್ಮ ನೆಚ್ಚಿನ ಲಘು ಆಹಾರದ ಮೇಲೆ ಚಿಮುಕಿಸಿ ಅಥವಾ ಇತರ ಆಹಾಗಳಲ್ಲಿ ತುಂಡುಗಳ ರೂಪದಲ್ಲಿ ಬೆರೆಸಿ ಸೇವಿಸಬಹುದು. ಒಮೆಗಾ ೩ ಕೊಬ್ಬಿನ ಆಮ್ಲಗಳು ಹೆಚ್ಚಿರುವ ಇತರ ಅಹಾರಗಳೆಂದರೆ ಏಡಿ, ಸಾಲ್ಮನ್ ಮೀನು, ಕೋಳಿ ಮಾಂಸ ಹಾಗೂ ಕುಂಬಳದ ಬೀಜಗಳಾಗಿವೆ.
ವೀ ರ್ಯಾಣುಗಳ ಉತ್ಪಾದನೆಗಾಗಿ ಸೇವಿಸಿ
ಸತುವಿನ ಕೊರತೆಯನ್ನು ನೀಗಿಸಲು ಲಭ್ಯವಿರುವ ಅತ್ಯುತ್ತಮ ಆಹಾರವೆಂದರೆ ಸಿಂಪಿಯಾಗಿದೆ. ಈ ಸಾಗರ ಉತ್ಪನ್ನದ ಸೇವನೆಯಿಂದ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ವೃದ್ದಿಸುತ್ತದೆ ಹಾಗೂ ಇದೊಂದು ಉತ್ತಮ ಕಾಮೋತ್ತೇಜಕವೂ ಆಗಿದೆ. ದಿನವೊಂದರಲ್ಲಿ ಸುಮಾರು ಐವತ್ತು ಗ್ರಾಂ ನಷ್ಟು ಸಿಂಪಿಯ ಮೃದುಭಾಗವನ್ನು ಸೇವಿಸುವ ಮೂಲಕ ಸುಮಾರು ಹದಿನೈದು ಮಿಲಿಗ್ರಾಂ ಸತುವನ್ನು ಪಡೆಯಬಹುದು. ಪರಿಣಾಮವಾಗಿ ತಂದೆಯಾಗುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಸಿಂಪಿ ಆಗ್ಗವೂ ಹೌದು ಜೀರ್ಣಿಸಿಕೊಳ್ಳಲು ಸುಲಭವೂ ಹೌದು ಎಂಬ ಆಹಾರವಾಗಿರುವ ಕಾರಣ ಈ ಆಹಾರವನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಉತ್ತಮ ಲೈಂಗಿಕ ಆರೋಗ್ಯವನ್ನು ಪಡೆಯಬಹುದು. ಸತುವಿನ ಅಂಶ ಹೆಚ್ಚಿರುವ ಇತರ ಆಹಾರಗಳೆಂದರೆ ಟರ್ಕಿ ಕೋಳಿ ಮಾಂಸ, ಕುಂಬಳದ ಬೀಜಗಳು, ಕಡಲ ಏಡಿ ಮತ್ತು ಮೃದ್ವಂಗಿಗಳಾಗಿವೆ.
ಕೇವಲ ಇದರ ಪರಿಮಳ ಕೊಂಚ ಘಾಟು ಎಂಬ ಅಂಶವನ್ನು ಕಡೆಗಣಿಸಿದರೆ ಇದೊಂದು ಅದ್ಭುತ ಕಾಮೋತ್ತೇಜಕವಾಗಿದೆ. ಇದರಲ್ಲಿರುವ ಸೆಲೆನಿಯಂ ಹಾಗೂ ವಿಟಮಿನ್ ಬಿ೬ ಎರಡೂ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತವೆ. ಅಲ್ಲದೇ ಬೆಳ್ಳುಳ್ಳಿಯಲ್ಲಿವು ಆಲಿಸಿನ್ ಎಂಬ ಇನ್ನೊಂದು ಪೋಷಕಾಂಶ ಪುರುಷರ ಜನನಾಂಗಕ್ಕೆ ಹೆಚ್ಚಿನ ರಕ್ತಸಂಚಾರವನ್ನು ಪೂರೈಸಿ ವೀರ್ಯಾಣುಗಳ ಪ್ರಮಾಣವನ್ನೂ ಹೆಚ್ಚಿಸಲು ನೆರವಾಗುತ್ತದೆ. ಬೆಳ್ಳುಳ್ಳಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಹಾಗೂ ರಕ್ತವನ್ನು ಶುದ್ದೀಕರಿಸುವ ಗುಣವನ್ನೂ ಹೊಂದಿದೆ. ತನ್ಮೂಲಕ ರಕ್ತನಾಳಗಳಲ್ಲಿ ಉಂಟಾಗಿದ್ದ ತಡೆಗಳನ್ನು ನಿವಾರಿಸಿ ರಕ್ತಪರಿಚಲನೆ ಸರಾಗಗೊಳಿಸುತ್ತದೆ. ಉತ್ತಮ ಪರಿಣಾಮಕ್ಕಾಗಿ ನಿತ್ಯವೂ ಎರಡರಿಂದ ಮೂರು ಎಸಳು ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸದರೆ ಸಾಕು.