ಸಾಮಾನ್ಯವಾಗಿ ಹೆಣ್ಣುಮಕ್ಕಳು ಮದುವೆಯ ಮೊದಲು ಸಣ್ಣದಾಗಿರುತ್ತಾರೆ, ಮದುವೆಯ ನಂತರ ದಪ್ಪ ಆಗುತ್ತಾರೆ. ಮದುವೆ ನಂತರ ದಪ್ಪ ಆಗಲು ಹಲವು ಕಾರಣಗಳಿವೆ. ಕೆಲವರು ಮದುವೆಯ ಮೊದಲು ಊಟದ ಬಗ್ಗೆ ಕಾಳಜಿವಹಿಸುತ್ತಾರೆ ನಂತರ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆಗುವುದಿಲ್ಲ. ಟೆನ್ಷನ್ ನಿಂದಾಗಿ ಕೆಲವರು ದಪ್ಪ ಆಗುತ್ತಾರೆ, ಕೆಲವರು ತೆಳ್ಳಗಾಗುತ್ತಾರೆ. ಹಾಗಾದರೆ ಮದುವೆ ನಂತರ ಹೆಣ್ಣುಮಕ್ಕಳು ದಪ್ಪಗಾಗಲು ಕಾರಣವೇನು ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಸಾಮಾನ್ಯವಾಗಿ ಹೆಣ್ಣುಮಕ್ಕಳು ತಮ್ಮ ದೇಹದ ತೂಕದ ಕಡೆಗೆ ಹೆಚ್ಚಿನ ಗಮನವನ್ನು ಹರಿಸುತ್ತಾರೆ. ಬೇರೆಯವರಿಗಿಂತ ದಪ್ಪ ಆಗಿಬಿಟ್ಟರೆ ಅಸಹ್ಯ ಕಾಣಿಸುತ್ತೇವೆ. ನಾವು ಮಾಡರ್ನ್ ಉಡುಗೆ-ತೊಡುಗೆಗಳನ್ನು ಹಾಕಿಕೊಳ್ಳಲು ಸಾಧ್ಯವಾಗುವುದಿಲ್ಲ, ನೋಡುವವರು ನಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೊ ಎಂದೆಲ್ಲಾ ಯೋಚಿಸಿ, ಹೆಣ್ಣುಮಕ್ಕಳು ಊಟ ತಿಂಡಿಯನ್ನು ಕಡಿಮೆ ತಿನ್ನುತ್ತಾ ಸಣ್ಣಗೆ ಒಣಕಲ ಕಡ್ಡಿಯಂತೆ ಇರುತ್ತಾರೆ. ಆದರೆ ಮದುವೆಯಾದ ತಕ್ಷಣ ಅವರ ತೂಕ ಹೆಚ್ಚಾಗುತ್ತದೆ ಹಾಗೂ ನೋಡಲು ಕೂಡ ಬಹಳ ದಪ್ಪ ಇರುವಂತೆ ಕಾಣುತ್ತಾರೆ. ಇದಕ್ಕೆ ವೈಜ್ಞಾನಿಕ ಕಾರಣ ಇದೆಯಾ ಎಂದು ನೋಡುವುದಾದರೆ ಮದುವೆಯಾದ ಎಲ್ಲ ಹೆಣ್ಣು ಮಕ್ಕಳು ದಪ್ಪಗಾಗಿ ಬಿಡುತ್ತಾರೆ.
ಸಾಮಾನ್ಯವಾಗಿ ಕಾಲೇಜಿನಲ್ಲಿ ಓದುವಾಗ ಹುಡುಗಿಯರು ತಮ್ಮ ದೇಹದ ಕಡೆಗೆ ಹೆಚ್ಚಿನ ಗಮನ ಹರಿಸಿ ಅದರ ಪಾಲನೆ, ಪೋಷಣೆಯನ್ನು ಚೆನ್ನಾಗಿ ಮಾಡುತ್ತಾರೆ. ಅಲ್ಲದೆ ಆಹಾರಕ್ರಮದಲ್ಲಿಯೂ ಅಮ್ಮ ಮಾಡಿದಂತಹ ಅಡುಗೆಯನ್ನೆ ಸೇವಿಸುತ್ತಾ ಬಹಳ ಆರೋಗ್ಯಕರವಾಗಿರುವಂತಹ ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಅಲ್ಲಿನ ಆಹಾರ ವ್ಯತ್ಯಯ, ನೀರು ಹಾಗೂ ಟೆನ್ಶನ್ ಗಳಿಂದಾಗಿ ಕೂಡ ದಪ್ಪಗಾಗಿಬಿಡುತ್ತಾರೆ.
ಸಾಮಾನ್ಯವಾಗಿ ಮದುವೆಯ ಸಂದರ್ಭದಲ್ಲಿ ಸಾಕಷ್ಟು ಅರಿಶಿಣದ ನೀರು ಗಂಡು ಮತ್ತು ಹೆಣ್ಣಿನ ಮೇಲೆ ಬೀಳುವ ಕಾರಣ ಅದು ನೈಸರ್ಗಿಕ ಪ್ರಭಾವವನ್ನು ಬೀರಿ ದೇಹವನ್ನು ದಪ್ಪಗಾಗಿಸುತ್ತದೆ ಎಂದು ಹಲವರು ಹೇಳುತ್ತಾರೆ ಆದರೆ ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ.
ಹೆಣ್ಣುಮಕ್ಕಳು ಗಂಡನ ಮನೆಗೆ ಹೋದಾಗ ಕೆಲಸ ಇನ್ನೂ ಹೆಚ್ಚಾಗಿರುತ್ತದೆ. ಇದರಿಂದ ಅವರು ತಮ್ಮ ಊಟ-ತಿಂಡಿ ಎಲ್ಲವನ್ನೂ ಸ್ಕಿಪ್ ಮಾಡಿಬಿಡುತ್ತಾರೆ. ಹೀಗೆ ಬೆಳಗಿನ ನಾಷ್ಟಾವನ್ನು ಮಧ್ಯಾಹ್ನದ ಊಟದಂತೆ ತಿನ್ನುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಅವರಲ್ಲಿ ಅಧಿಕವಾಗಿ ಕಾಡುವ ಕಾರಣ ತೂಕ ಹೆಚ್ಚಾಗುತ್ತದೆ. ಇನ್ನು ಮಕ್ಕಳಾದ ಮೇಲೆ ಮಕ್ಕಳು ಬಿಟ್ಟಂತಹ ಊಟವನ್ನು ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಹೊರತು ಗಂಡನೊಂದಿಗೆ ದೇಹ ಸಂಪರ್ಕ ಬೆಳೆಸುವುದರಿಂದಲ್ಲ.
ಮದುವೆಯಾದ ನಂತರ ಗಂಡ ಹೆಂಡತಿ ಇಬ್ಬರೂ ಹೊರಗಡೆ ಊಟ ಮಾಡುವುದು ಅಥವಾ ಹೊರಗಿನ ತಿಂಡಿ ತಿನ್ನುವುದರಿಂದ ದಪ್ಪಗಾಗುತ್ತಾರೆ ಹಾಗೂ ಮನೆಯಲ್ಲಿ ಮಾಡಿದ ಅಡುಗೆ ವೆಸ್ಟ್ ಆಗಬಾರದೆಂದು ತಿನ್ನುವುದರಿಂದಲೂ ದಪ್ಪ ಆಗುತ್ತಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ.