ಹಳ್ಳಿಯಲ್ಲಿರುವ ತನ್ನ ತಂದೆ ಹೆಸರಿನಲ್ಲಿರುವ ತನ್ನ ಮನೆ ಅಥವಾ ಸೈಟ್ ಆಗಲಿ ಮಕ್ಕಳ ಹೆಸರಿಗೆ ಹೇಗೆ ಮಾಡುವುದು ಎಂದು ಯಾರಿಗೂ ಸರಿಯಾಗಿ ತಿಳಿದಿರುವುದಿಲ್ಲ. ಮನೆ ವರ್ಗಾವಣೆ ಪ್ರಕ್ರಿಯೆ ಹೇಗಿರುತ್ತೆ ಯಾವ ಯಾವ ದಾಖಲೆಗಳು ಬೇಕು ನೊಂದಣಿ ಮಾಡಿಸುವುದು ಹೇಗೆ ಖರ್ಚು ಏಷ್ಟು ತಗಲುತ್ತದೆ ಎಂಬೆಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ಮನೆಗಳಿಗೆ ಹಕ್ಕು ಪತ್ರ, ಮನೆ ನಕ್ಷೆ, ತೆರಿಗೆ ರಶೀದಿ ಇದ್ದೆ ಇರುತ್ತೆ. ಒಂದು ವೇಳೆ ಈ ದಾಖಲೆಗಳು ಇಲ್ಲದಿದ್ದಾಗ ಗ್ರಾಮ ಪಂಚಾಯಿತಿಯಿಂದ ನಕಲು ಪ್ರತಿ ಪಡೆಯಬಹುದು. ತಂದೆಯಿಂದ ಮಗನಿಗೆ ಮನೆ ಹಕ್ಕು ವರ್ಗಾವಣೆಗೆ ಈ ಕೆಳಗಿನ ದಾಖಲೆಗಳು ಬೇಕು ಹಾಗೂ ನೋಂದಣಿ ಮಾಡಿಸುವುದರ ಜೊತೆಗೆ ಇ ಸ್ವತ್ತು ಕಡ್ಡಾಯ ಮಾಡಿಸಬೇಕು. ಮೊದಲನೆಯದಾಗಿ ತಂದೆಯು ಮಗನ ಹೆಸರಿಗೆ ಮನೆ ವರ್ಗಾವಣೆ ಮಾಡಲು ಬೇಕಾಗುವ ದಾಖಲೆಗಳು ಯಾವುವು ಎಂಬುದನ್ನು ನೋಡೋಣ.
ಮನೆ ನಿಮ್ಮದ್ದೆನ್ನುವ ಪ್ರಮುಖ ದಾಖಲೆ, ಪಂಚಾಯತಿ ಕಚೇರಿಯಿಂದ ಫಾರ್ಮ್ 11 ಮತ್ತು ಫಾರ್ಮ್ 9 ಪಡೆಯಬೇಕು, ತಂದೆ ಮತ್ತು ಮಕ್ಕಳ ಆಧಾರ್ ಕಾರ್ಡ್ ಮತ್ತು ಸಾಕ್ಷಿಗಳ ಹಾಜರಿ ಹಾಗೂ ಅವರ ಸಹಿ ಕಡ್ಡಾಯ. ತಂದೆಯಿಂದ ಮಗನಿಗೆ ಆಸ್ತಿ ಹಕ್ಕು ವರ್ಗಾವಣೆ ಮಾಡುವಾಗ 3 ರೀತಿಯಲ್ಲಿ ಮಾಡಬಹುದು. ವಿಭಾಗ, ದಾನ, ಕ್ರಯ ಈ ಮೂಲಕ ವರ್ಗಾವಣೆ ಮಾಡಬಹುದು. ತಂದೆಯಿಂದ ಮಗನಿಗೆ ಆಸ್ತಿ ದಾನ ಪತ್ರದ ಮೂಲಕ ವರ್ಗಾವಣೆ ಮಾಡುವುದು ಒಳ್ಳೆಯದು. ಹೀಗೆ ಮಾಡುವುದರಿಂದ ನೊಂದಣಿ ಖರ್ಚು ಕಡಿಮೆ ಹಾಗೂ ಸ್ಟ್ಯಾಂಪ್ ಡ್ಯೂಟಿ ಚಾರ್ಜ್ ಸಂಪೂರ್ಣವಾಗಿ ಉಳಿಯುತ್ತೆ.
ದಾನ ಪತ್ರದ ಮೂಲಕ ನೊಂದಣಿ ಖರ್ಚು ಅಂದಾಜು 4-5 ಸಾವಿರ ಆಗಬಹುದು. ಈ ಮೇಲಿನ ಎಲ್ಲಾ ದಾಖಲೆಗಳನ್ನ ತೆಗೆದುಕೊಂಡು ಸಂಬಂಧ ಪಟ್ಟ ಉಪ ನೋಂದಣಿ ಕಚೇರಿಗೆ ಹೋಗಿ ನೋಂದಣಿ ಮಾಡಿಸಬೇಕು. ನೋಂದಣಿ ಪ್ರಕ್ರಿಯೆ ಹೇಗಿರುತ್ತೆ ಅಂತಾ ನೋಡುವುದಾದರೆ ಈ ಮೇಲಿನ ಎಲ್ಲಾ ದಾಖಲೆಗಳೊಂದಿಗೆ ತಂದೆ, ಮಕ್ಕಳು ಹಾಗೂ ಸಾಕ್ಷಿದಾರರು ಮುದ್ರಾಂಕದ ಹಾಳೆ ಮೇಲೆ ನೀವು ಸರಿಯಾಗಿ ಮಗನಿಗೆ ಹಕ್ಕು ವರ್ಗಾವಣೆ ಕುರಿತು ದಾನಪತ್ರ ಬರೆಸಬೇಕು. ದಾನಪತ್ರದಲ್ಲಿ ಮನೆಯ ಸಂಪೂರ್ಣ ವಿವರಣೆಯನ್ನು ನಮೂದಿಸಬೇಕು. ಅದರಂತೆ ಸದರಿ ಮನೆಯ ಚೆಕ್ಕುಬಂದಿ ವಿವರ ಸಹ ಬರೆಸಬೇಕು.
ನೋಂದಣಿ ಸಮಯದಲ್ಲಿ ಸಾಕ್ಷಿಗಳ ಹಾಜರಿ ಮತ್ತು ಸಹಿ ಕಡ್ಡಾಯವಾಗಿರುತ್ತದೆ. ರಿಜಿಸ್ಟ್ರರ್ ಸಮಯದಲ್ಲಿ ಸರ್ಕಾರ ನಿರ್ಧರಿಸುವ ಫೀಸ್ ಸಹ ಕಟ್ಟಬೇಕಾಗುತ್ತದೆ. ನಂತರ ನಿಮ್ಮ ತಾಲೂಕು ಉಪನೊಂದಣಿ ಕಚೇರಿಯಲ್ಲಿ ನೊಂದಣಿ ಮಾಡಿಸಬೇಕು. ಆಸ್ತಿಯ ರಿಜಿಸ್ಟರ್ ಆದ ಮಾತ್ರಕ್ಕೆ ಆಸ್ತಿ ವರ್ಗಾವಣೆಯ ಸಂಪೂರ್ಣ ಕೆಲಸ ಮುಗಿದಿದೆ ಎಂದು ಕೊಳ್ಳಬೇಡಿ. ರಿಜಿಸ್ಟರ್ ಪತ್ರದ ನಕಲು ಪ್ರತಿ ತೆಗೆದುಕೊಂಡು ಬಂದು ಖಾತೆ ಬದಲಾವಣೆಗಾಗಿ ಅರ್ಜಿ ಬರೆದು ಗ್ರಾಮ ಪಂಚಾಯಿತಿಯಲ್ಲಿ ಕೊಡಬೇಕು.
ಏಕೆಂದರೆ ತಂದೆಯಿಂದ ಮಗನಿಗೆ ಆಸ್ತಿ ರಿಜಿಸ್ಟರ್ ಆಗಿದೆ ಆದರೆ ಈ ಸ್ವತ್ತು ಮಾಡಿಸಬೇಕಾಗುತ್ತದೆ. ಹಾಗೂ ಪಂಚಾಯತಿ ಅವರು ಅರ್ಜಿ ಪರಿಶೀಲಿಸಿ ಆಕ್ಷೇಪಣೆಗಾಗಿ ಪ್ರಚಾರ ಮಾಡಲಾಗುತ್ತದೆ. ಅವರು ನಿಗದಿಪಡಿಸಿದ ದಿನದೊಳಗೆ ಯಾವುದೇ ತಕರಾರು ಆದೇಶ ಬರದಿದ್ದರೆ ಖಾತೆ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗುವುದು. ಹಾಗೆ ಈ ಸ್ವತ್ತು ಮೂಲಕ ತಂದೆಯಿಂದ ಮಗನಿಗೆ ಖಾತೆ ಬದಲಾವಣೆ ಮಾಡಲಾಗುತ್ತದೆ. ರಿಜಿಸ್ಟರ್ ಮಾಡಿಸಿದ ನಂತರ ಈ ಸ್ವತ್ತು ಮಾಡುವುದನ್ನ ಮರೆಯದಿರಿ.