ಸಾಮಾನ್ಯವಾಗಿ ನಿಮಗೆಲ್ಲಾ ಕರ್ಪೂರದ ಹೆಸರು ಕೇಳಿದಾಗ ದೇವರ ಪೂಜೆಗೆ ಉಪಯೋಗಿಸುವ ವಸ್ತು ಎಂಬುದಾಗಿ ಮೊದಲಿಗೆ ನೆನಪಿಗೆ ಬರುತ್ತದೆ. ಆದರೆ ಕರ್ಪೂರ ಒಂದಕ್ಕಿಂತ ಹೆಚ್ಚು ಉಪಯೋಗಗಳಿಗೆ ಬಳಸಲಾಗುವಂತಹ ವಸ್ತು ಎಂಬುದನ್ನು ಇಂದಿನ ಲೇಖನಿಯಲ್ಲಿ ಖಂಡಿತವಾಗಿ ನೀವು ಸಂಪೂರ್ಣ ವಿವರವಾಗಿ ತಿಳಿಯಲಿದ್ದೀರಿ. ಅಷ್ಟಕ್ಕೂ ಕರ್ಪೂರವನ್ನು ಇನ್ನೂ ಯಾವೆಲ್ಲ ಕೆಲಸಗಳಿಗಾಗಿ ಉಪಯೋಗಿಸಲಾಗುತ್ತದೆ ಅದರ ಉಪಯೋಗಗಳೇನು ಎಂಬುದನ್ನು ತಿಳಿಯೋಣ ಬನ್ನಿ.
ಕರ್ಪೂರವನ್ನು ಪೂಜೆ ಮಾಡುವ ಸಂದರ್ಭದಲ್ಲಿ ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ಅಥವಾ ವಾಸ್ತುವಿನ ದೋಷದಿಂದ ಹೊರ ಓಡಿಸಲು ಉಪಯೋಗಿಸಲಾಗುತ್ತದೆ ಎಂಬುದಾಗಿ ನಾವೆಲ್ಲರೂ ಭಾವಿಸಿದ್ದೇವೆ. ಕರ್ಪೂರವನ್ನು ಕೇವಲ ದೈವಿಕ ಪೂಜೆಗಳಲ್ಲಿ ಮಾತ್ರವಲ್ಲದೆ ಸ್ನಾನಕ್ಕಾಗಿ ಉಪಯೋಗಿಸುವುದರಿಂದಲೂ ಕೂಡ ಸಾಕಷ್ಟು ಪ್ರಯೋಜನಗಳಿವೆ ಎಂಬುದನ್ನು ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.
ಕರ್ಪೂರವನ್ನು ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಹರಡುತ್ತಿರುವ ಆರೋಗ್ಯ ಸಮಸ್ಯೆಗಳಿಂದ ರಕ್ಷಣೆಯನ್ನು ಪಡೆದುಕೊಳ್ಳಬಹುದಾಗಿದೆ. ಕರ್ಪೂರದಿಂದ ಬರುವಂತಹ ಸುವಾಸನೆ ನಿಮಗೆ ಇನ್ನಷ್ಟು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ನಿಮ್ಮ ಮಾನಸಿಕ ಒತ್ತಡವನ್ನು ಕೂಡ ಇದು ತೆರವುಗೊಳಿಸುತ್ತದೆ. ಹೀಗಾಗಿ ಒಂದು ಲೆಕ್ಕದಲ್ಲಿ ಹೇಳುವುದಾದರೆ ನೀರಿನಲ್ಲಿ ಹಾಕಿ ಕರ್ಪೂರದಿಂದ ಸ್ನಾನ ಮಾಡುವುದು ನಿಮ್ಮ ಮಾನಸಿಕ ತುಮುಲಗಳನ್ನು ಸಂಪೂರ್ಣವಾಗಿ ನೀರಿನಂತೆ ಕರಗಿ ಹೋಗುವಂತೆ ಮಾಡುತ್ತದೆ ಎನ್ನಬಹುದಾಗಿದೆ.
ಕೇವಲ ಇಷ್ಟು ಮಾತ್ರವಲ್ಲದೆ ಕರ್ಪೂರವನ್ನು ನೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಒಂದು ವೇಳೆ ನಿಮ್ಮ ಮೈಯಲ್ಲಿ ತುರಿಕೆ ಇದ್ದರೆ ಅದು ಕೂಡ ಸಂಪೂರ್ಣವಾಗಿ ನಿಲ್ಲುತ್ತದೆ. ಬಟ್ಟಲು ಬಿಸಿ ಎಣ್ಣೆಯನ್ನು ಎರಡು ಕರ್ಪೂರವನ್ನು ಪುಡಿ ಮಾಡಿ ಸೇರಿಸಿ ಅದಕ್ಕೆ ಅರ್ಧ ನಿಂಬೆಹಣ್ಣನ್ನು ಹಿಂಡಿದರೆ ಅದನ್ನು ತಲೆಗೆ ಹಚ್ಚಿಕೊಂಡರೆ ನಿಮ್ಮ ತಲೆ ಕೂದಲಿನ ಹೊಟ್ಟಿನ ಸಮಸ್ಯೆಯಿಂದ ಹಿಡಿದು ಬಹುತೇಕ ಎಲ್ಲಾ ಕೂದಲಿನ ಸಮಸ್ಯೆಗಳು ಕೂಡ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ. ಹೀಗಾಗಿ ಕರ್ಪೂರ ವಸ್ತು ಚಿಕ್ಕದಾಗಿರಬಹುದು ಆದರೆ ಅದರಿಂದ ಸಿಗುವಂತಹ ಪ್ರಯೋಜನಗಳು ತುಂಬಾನೇ ದೊಡ್ಡದು.