ಸ್ಯಾಂಡಲ್ವುಡ್ ಸ್ಟೀನ್ ಸ್ಟಾರ್ ರಮ್ಯಾ ಮತ್ತು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇಬ್ಬರು ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಈ ಮಧ್ಯೆ ಇಬ್ಬರು ತುಂಬಾ ಕ್ಲೋಸ್ ಫ್ರೆಂಡ್ಸ್, ರಕ್ಷಿತ್ಗೆ ರಮ್ಯಾ ಮೇಲೆ ಕ್ರಶ್ ಇದೆ. ಹೀಗಾಗಿ ಇಬ್ಬರು ಮದುವೆ ಆಗಬಹುದು ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ರಕ್ಷಿತ್ ಶೆಟ್ಟಿ, ಇದು ಸುಳ್ಳು ಎಂದು ಸ್ಪಷ್ಟನೆಯೂ ನೀಡಿದ್ರು.
ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇರುವಾಗಲೇ ರಮ್ಯಾ ಅವರು ರಾಜಕೀಯದ ಕಡೆಗೆ ಕಾಲಿಟ್ಟರು. ಸಂಸದೆ ಆಗಿಯೂ ಕೆಲಸ ಮಾಡಿದರು. ನಂತರ ಅವರು ರಾಜಕೀಯಕ್ಕೆ ಗುಡ್ ಬೈ ಹೇಳಿದರು. ಇಷ್ಟೆಲ್ಲ ಆದರೂ ಅವರು ಚಿತ್ರರಂಗದ ನಂಟು ಕಡಿದುಕೊಂಡಿಲ್ಲ. ನಟನೆಯಿಂದ ದೂರ ಉಳಿದಿದ್ದರೂ ಕೂಡ ಅನೇಕ ಸಿನಿಮಾಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾ ಅವರು ಗಮನ ಸೆಳೆಯುತ್ತಿದ್ದಾರೆ. ರಮ್ಯಾ ಅವರು ಆದಷ್ಟು ಬೇಗ ನಟನೆಗೆ ಮರಳಬೇಕು ಎಂದು ಫ್ಯಾನ್ಸ್ ಆಸೆ ಪಡುತ್ತಿದ್ದಾರೆ.
ಶೀಘ್ರದಲ್ಲೇ ರಮ್ಯಾ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ನಿರೀಕ್ಷೆ ಇದೆ. ಅವರು ಕಮ್ಬ್ಯಾಕ್ ಮಾಡಲಿರುವ ಪ್ರಾಜೆಕ್ಟ್ ಯಾವ ರೀತಿ ಇರಲಿದೆ ಎಂದು ತಿಳಿದುಕೊಳ್ಳಲು ಅವರ ಅಭಿಮಾನಿ ಬಳಗ ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ. ಖಾಸಗಿ ಮಾಧ್ಯಮವೊಂದು ರಕ್ಷಿತ್ ಶೆಟ್ಟಿ ಜೊತೆ ನಡೆಸಿದ ಸಂದರ್ಶನದ ತುಣುಕನ್ನು ರಮ್ಯಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡಲು ತಮಗೂ ಆಸಕ್ತಿ ಇದೆ ಎಂಬುದನ್ನು ಅವರು ಈ ಮೂಲಕ ಸೂಚಿಸಿದ್ದರು.
ನಟ ರಕ್ಷಿತ್ ಶೆಟ್ಟಿ ಅವರು ನಿರ್ದೇಶಕನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಸಕ್ರಿಯರಾಗಿದ್ದಾರೆ. ಚಿತ್ರರಂಗದ ಹಲವು ವಿಭಾಗಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಅವರು ನಿರ್ಮಾಣ ಮಾಡಿರುವ ‘ಸಕುಟುಂಬ ಸಮೇತ’ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. ಮೇ 20ರಂದು ಈ ಚಿತ್ರ ರಿಲೀಸ್ ಆಗಲಿದೆ. ಸಕುಟುಂಬ ಸಮೇತ ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು.
ಈ ವೇಳೆ ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿದ ರಕ್ಷಿತ್ ಶೆಟ್ಟಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಅವರು ನಟಿ ರಮ್ಯಾ ಕುರಿತಾದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ರಮ್ಯಾ ಮತ್ತು ರಕ್ಷಿತ್ ಶೆಟ್ಟಿ ಅವರು ಒಟ್ಟಿಗೆ ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಬಯಕೆ. ಅಷ್ಟೇ ಅಲ್ಲ, ಈ ಜೋಡಿ ಮದುವೆ ಕೂಡ ಆಗಲಿ ಎಂದು ಕೆಲವರು ಆಸೆ ಪಡುತ್ತಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಕಮೆಂಟ್ಗಳು ಕಾಣಿಸಿದ್ದುಂಟು. ಆ ಬಗ್ಗೆ ಈಗ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ರಮ್ಯಾ ಅವರ ಬಗ್ಗೆ ಎಲ್ಲರಂತೆ ರಕ್ಷಿತ್ ಶೆಟ್ಟಿ ಅವರಿಗೂ ಅಭಿಮಾನ ಇದೆ. ‘ನಾನು ರಮ್ಯಾ ಅವರನ್ನು ಎಂದಿಗೂ ಭೇಟಿ ಮಾಡಿಲ್ಲ. ಮದುವೆ, ಲವ್ ಇತ್ಯಾದಿ ಎಲ್ಲ ಬರೀ ಗಾಸಿಪ್. ಚಿತ್ರರಂಗಕ್ಕೆ ಬಂದಾಗಿನಿಂದಲೂ ನಿನ್ನ ಕ್ರಶ್ ಯಾರು ಅಂತ ಕೇಳಿದರೆ ನಾನು ರಮ್ಯಾ ಅಂತಾನೇ ಹೇಳ್ತಾ ಇರೋದು.
ಪ್ರತಿ ಬಾರಿ ಅವರು ನನ್ನ ಕೆಲಸವನ್ನು ಪ್ರಶಂಸಿಸುತ್ತಾರೆ. ಅದು ಅವರ ಒಳ್ಳೆಯ ಗುಣ’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಈಗ ಡೈರೆಕ್ಟರ್ ರಿಷಭ್ ಶೆಟ್ಟಿ, ರಕ್ಷಿತ್ ಮತ್ತು ರಮ್ಯಾ ಮದುವೆ ಸುದ್ದಿ ಬಗ್ಗೆ ಮಾತಾಡಿದ್ದಾರೆ. ಚಾರ್ಲಿ 777 ಟ್ರೈಲರ್ ರಿಲೀಸ್ ಇವೆಂಟ್ನಲ್ಲಿ ಮಾತಾಡಿದ ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ ಸಿನಿಮಾ ಬರ್ತಿದೆ. ಅದೇ ಬ್ರೇಕಿಂಗ್ ಅಂಡ್ ಫ್ಲಾಶ್ ನ್ಯೂಸ್. ಚಾರ್ಲಿ 777 ಲಾಸ್ನಲ್ಲಿ ಇಲ್ಲ, ಫ್ರಾಫಿಟ್ನಲ್ಲೇ ಇದೆ. ರಕ್ಷಿತ್ ಮತ್ತು ರಮ್ಯಾ ಮದುವೆ ಆಗುತ್ತಿಲ್ಲ. ಈಗ ಚಾರ್ಲಿ 777 ಮಾತ್ರ ಬ್ರೇಕಿಂಗ್ ನ್ಯೂಸ್, ಇದರ ಬಗ್ಗೆ ಬರ್ಕೊಳಿ ಎಂದು ಹಾಸ್ಯಮಯವಾಗಿ ಹೇಳಿದರು.