ಒಮ್ಮೊಮ್ಮೆ ಈಡೀ ಸಮಾಜ ಮಾಡುವ ತಪ್ಪು ಇಡೀ ಕುಟುಂಬವನ್ನೇ ಸರ್ವನಾಶ ಮಾಡಿ ಬಿಡುತ್ತೆ. ಒಂದು ಕುಟುಂಬದ ಬದುಕನ್ನೇ ಕಿತ್ತುಕೊಂಡು ಬಿಡುತ್ತೆ. ಇವತ್ತು ಅಂತದ್ದೇ ಒಂದು ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನಿಮ್ಮೆಲ್ಲರಿಗೂ ಸಹ ನೆನಪಿರಬಹುದು ಎರಡು ಮೂರು ವರ್ಷಗಳ ಹಿಂದೆ ಯಾಕಣ್ಣ ಎಂದು ಹೇಳಿ ಒಂದು ಮಹಿಳೆಯನ್ನ ಹಿಗ್ಗಾ ಮುಗ್ಗಾ ಟ್ರೊಲ್ ಮಾಡಲಾಗಿತ್ತು. ಆ ಘಟನೆ ಎನೆಂದರೆ ಆ ಮಹಿಳೆ ಒಬ್ಬ ಪುರುಷನ ಜೊತೆ ಇರುತ್ತಾಳೆ.

ಈ ಸಂಧರ್ಭದಲ್ಲಿ ಇವರನ್ನ ನೋಡಿದ ಅಪರಿಚಿತ ವ್ಯಕ್ತಿ ಅವರ ವಿಡಿಯೋವನ್ನು ಮಾಡುತ್ತಾ ಮಹಿಳೆಯನ್ನು ಮಾತನಾಡಿಸಿ ಅವರ ಊರು ಎಲ್ಲವನ್ನೂ ಕೇಳುತ್ತಾರೆ ಅದಕ್ಕೆಲ್ಲಾ ಆಕೆ ಉತ್ತರಿಸುತ್ತಾಳೆ. ಹಾಗೆ ಇಲ್ಲೇನು ನೀವು ಮಾಡತಾ ಇರೋದು ಅಂತ ಕೇಳಿದ್ದಕ್ಕೆ ಆಕೆ “ಯಾಕಣ್ಣ” ಅಂತ ಕೇಳುತ್ತಾಳೆ. ಈ ವಿಡಿಯೋ ಮಾಡಿದಾತ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ. ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತೆ ಹಾಗೂ ಆ ಮಹಿಳೆಯನ್ನು ಕೂಡಾ ನಾನಾ ರೀತಿಯಲ್ಲಿ ಹಿಗ್ಗಾ ಮುಗ್ಗಾ ಟ್ರೊಲ್ ಮಾಡಲಾಗುತ್ತೆ.

ಬಹುತೇಕ ಎಲ್ಲಾ ವಿಚಾರಗಳಿಗೂ ಸಹ “ಯಾಕಣ್ಣ” ಎಂಬುದನ್ನು ಬಳಸಿ ಟ್ರೊಲ್ ಮಾಡಲಾಗುತ್ತಿತ್ತು. ಈ ಎರಡು ಮೂರು ವರ್ಷಗಳಲ್ಲಿ ಯಾಕಣ್ಣ ಎಂಬುದು ಪ್ರತಿ ವಿಚಾರಕ್ಕೂ ತುಂಬಾ ಟ್ರೊಲ್ ಆಗುತ್ತಿತ್ತು. ಇದಾದ ನಂತರ ಆ ಮಹಿಳೆ ಮತ್ತೊಂದು ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಾಳೆ. ಈ ವಿಡಿಯೋ ಮಾಡಿದವರಿಗೂ ಹಾಗೂ ಟ್ರೊಲ್ ಮಾಡಿದವರಿಗೂ ಹಿಡಿಶಾಪ ಹಾಕುತ್ತಾಳೆ. ನನ್ನ ಬದುಕು ಹಾಗೂ ಕುಟುಂಬವನ್ನೇ ನಾಶ ಮಾಡಿಬಿಟ್ಟರಿ ನೀವು ನನ್ನ ಬದುಕನ್ನ ಸಂಪೂರ್ಣವಾಗಿ ಕಿತ್ತುಕೊಂಡು ಬಿಟ್ಟಿರಿ ನೀವು ಎಂದು ಹೇಳುತ್ತಾಳೆ.

ಮುಂದುವರೆದು ನನಗೆ ಒಬ್ಬಳು ಹೆಣ್ಣು ಮಗಳಿದ್ದಾಳೆ ನಾನು ಅವಳನ್ನ ಸಾಕಬೇಕು ಆದರೆ ನೀವು ಮಾಡಿದ ಕೆಲಸದಿಂದ ನನ್ನ ಇಡೀ ಬದುಕು ಈಗ ಸರ್ವನಾಶ ಆಗಿದೆ. ನನಗೆ ಏನು ಮಾಡಬೇಕು ಅನ್ನೋದು ತೋಚುತ್ತಿಲ್ಲ ಎಂದು ಕಣ್ಣೀರು ಹಾಕುತ್ತಾಳೆ. ಈ ವಿಡಿಯೋನು ಸಹ ವೈರಲ್ ಆಗುತ್ತೆ ಆಗ ಎಲ್ಲರೂ ಆಕೆಯ ಬಗ್ಗೆ ಪಶ್ಚಾತ್ತಾಪದ ಮಾತುಗಳನ್ನಾಡುತ್ತಾರೆ. ಇಲ್ಲಿ ಇಡೀ ಸಮಾಜ ಗೊತ್ತೋ ಗೊತ್ತಿಲ್ಲದೆ ಒಂದು ಹೆಣ್ಣಿನ ಜೀವನ ನಾಶಕ್ಕೆ ಕಾರಣವಾಗಿದೆ ಎಂದೇ ಹೇಳಬಹುದು.

ಅದಾದ ನಂತರ “ಪಬ್ಲಿಕ್ ಟಾಯ್ಲೆಟ್” ಎಂಬ ಕಿರುಚಿತ್ರ ಇದೆ ಕಥೆ ಆಧಾರಿತವಾಗಿ ಬರುತ್ತೆ ಈ ಕಿರುಚಿತ್ರ ನೋಡಿದವರೆಲ್ಲ ಎಚ್ಚೆತ್ತುಕೊಂಡು ಆ ಕುಟುಂಬದ ಪರಿಸ್ಥಿತಿ ಹೇಗಾಗಿರಬಹುದು ಏನು, ಎತ್ತ ಹೇಳಿ.
ಆ ಬಳಿಕ ಕನ್ನಡ ಪರ ಹೋರಾಟಗಾರರಾದ ರೂಪೇಶ್ ರಾಜಣ್ಣ ಅವರು ಆ ಮಹಿಳೆಯನ್ನು ಹುಡುಕಿಕೊಂಡು ಹೋಗಿ ಆ ಮಹಿಳೆ ಯಾರು? ಮಹಿಳೆಯ ಹಿನ್ನಲೆ ಏನು? ಆಕೆಯ ಮನೆ ಎಲ್ಲಿದೆ? ಎಂಬಿತ್ಯಾದಿ ವಿಚಾರಣೆಯನ್ನು ಇವರು ಮಾಡುತ್ತಾರೆ. ಆಗ ಆಕೆಯ ಬದುಕಿನ ಕೆಲವೊಂದು ಧಾರುಣ ಸತ್ಯ ಎದುರಾಗುತ್ತದೆ. ಆ ರೀತಿಯಾಗಿ ಟ್ರೊಲ್ ಆದ ಮಹಿಳೆ ತಾನು ಟ್ರೊಲ್ ಆದ ನಂತರ ತನ್ನ ಮನೆಗೆ ಬಂದಿಲ್ಲ ಎಂದು ಹಾಗೂ ಆಕೆಯ ಮಗಳು ತಾಯಿಯ ತಂಗಿಯ ಮನೆಯಲ್ಲಿ ಇದ್ದು ಅಲ್ಲೇ ಶಾಲೆಗೆ ಹೋಗುತ್ತಿದ್ದಳು.

ತನ್ನ ತಾಯಿಯ ಟ್ರೊಲ್ ನಿಂದಾಗಿ ಆಕೆಯ ಮಗಳು ಸಹ ಅವಮಾನವನ್ನ ತನ್ನ ಸುತ್ತಲಿನ ಪರಿಸರದ ಜನರಿಂದ ಅನುಭವಿಸಬೇಕಾಯಿತು. ಆಕೆಯ ಮಗಳು ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಳು ಎಂಬೆಲ್ಲಾ ಸತ್ಯಗಳು ಈ ಸಂದರ್ಭದಲ್ಲಿ ಹೊರಬರುತ್ತದೆ. ಆ ಮಗುವಿಗೆ ಚಿಕಿತ್ಸೆ ಕೊಡಿಸಲು ಇಡೀ ಕುಟುಂಬ ಕಷ್ಟ ಪಡುತ್ತಾ ಇರುತ್ತೆ ಜೊತೆಗೆ ಈ ಮಗು ತಾನು ಮಾಡದ ತಪ್ಪಿಗೆ ತಾಯಿ ಟ್ರೊಲ್ ಗೆ ಒಳಗಾದ ಕಾರಣಕ್ಕೆ ಅವಮಾನ ಸಂಕಟ ಅನುಭವಿಸಬೇಕಾಗುತ್ತದೆ.

ಯಾವುದೇ ತಪ್ಪನ್ನು ಮಾಡದೆ ತನ್ನ ಸುತ್ತಲಿನ ಜನರಿಂದ ಸಹಪಾಠಿಗಳಿಂದ ಮುಜುಗರಕ್ಕೆ ಒಳಗಾಗುತ್ತಾಳೆ. ಇದರಲ್ಲಿ ಮಗುವಿನ ಯಾವ ಪಾತ್ರವೂ ಇಲ್ಲ. ರೂಪೇಶ್ ರಾಜಣ್ಣ ಅವರು ಹೋದ ಸಂದರ್ಭದಲ್ಲಿ ಆ ಮಗು ತಾನು ಅನುಭವಿಸಿದ ನೋವು ಸಂಕಟವನ್ನು ಹೇಳಿಕೊಂಡು ಗಳಗಳನೆ ಅತ್ತಳು. ತಾನು ಏನು ಮಾಡದೆ ತನಗ್ಯಾಕೆ ಈ ಶಿಕ್ಷೆ ಎಂದು ಕಣ್ಣೀರು ಹಾಕುತ್ತಾಳೆ. ಮತ್ತೊಂದು ಕಡೆ ಆ ಕುಟುಂಬವನ್ನು ನೋಡಿದರೆ ಬಹಳ ಕಡು ಬಡತನದಲ್ಲಿ ಜೀವನ ನಡೆಸುತ್ತಿದ್ದರು.

ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಇನ್ನೂ ಮಹಿಳೆ ವಿಷಯಕ್ಕೆ ಬಂದರೆ ಆಕೆ ತುಮಕೂರಿನ ಒಂದು ಗ್ರಮದವಳು. ಎಸ್ ಎಸ್ ಎಲ್ ಸಿ ವರೆಗೆ ಓದಿ ಮದುವೆ ನಂತರ ಆಶಾ ಕಾರ್ಯಕರ್ತೆ ಆಗಿ ಕೆಲಸ ಮಾಡುತ್ತಿರುತ್ತಾಳೆ. ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದಳು. ಪತಿ, ಮಗಳೊಂದಿಗೆ ಸಾಧಾರಣ ಜೀವನ ನಡೆಸುತ್ತಿರುತ್ತಾರೆ. ಆದರೆ ಬರು ಬರುತ್ತಾ ಸಂಸಾರದಲ್ಲಿ ಭಿನ್ನಾಭಿಪ್ರಾಯ ಮೂಡಿ ಗಲಾಟೆ, ಜಗಳ ಎಲ್ಲಾ ಶುರು ಆಗುತ್ತೆ.

ಇದರಿಂದ ಆಕೆ ತೀರಾ ತೀರಾ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾಳೆ ಮತ್ತು ಮನೆಯಿಂದ ಹೊರ ನಡೆಯುತ್ತಾಳೆ. ಹೀಗೆ ಹೋದ ಸಂದರ್ಭದಲ್ಲಿ ಹೊಟ್ಟೆಪಾಡಿಗಾಗಿ ಬೇರೆಯದೇ ದಾರಿ ಹಿಡಿಯುತ್ತಾರೆ ಈ ಸಮಯದಲ್ಲಿ ಅವರು ಹಿಗ್ಗಾ ಮುಗ್ಗಾ ಟ್ರೊಲ್ ಗೆ ಗುರಿಯಾಗುತ್ತಾರೆ. ಇದೆಲ್ಲಾ ಆದ ನಂತರ ಆಕೆ ಇನ್ನಷ್ಟು ಮಾನಸಿಕವಾಗಿ ಕುಗ್ಗಿ ಬೇರೆ ಬೇರೆ ಸಮಸ್ಯೆಗಳನ್ನು ಎದುರಿಸುತ್ತಾಳೆ. ನಂತರ ಆಕೆ ಮಾನಸಿಕ ಅಸ್ವಸ್ಥರಾಗಿ ರಸ್ತೆ ರಸ್ತೇಲಿ ಅಲೆದಾಡುತ್ತಿದ್ದಾಳೆ. ಜೊತೆಗೆ ವಿಚಿತ್ರ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದಾರೆ.

ಇದಕ್ಕೆಲ್ಲ ಕಾರಣವಾಗಿದ್ದು, ಆಕೆಯ ಇಂದಿನ ಸ್ಥಿತಿಗೆ ಕಾರಣವಾಗಿದ್ದು ಆ ಒಂದು ಟ್ರೊಲ್. ಮೊದಲೇ ಮಾನಸಿಕವಾಗಿ ನೊಂದಿದ್ದ ಆಕೆ ಈ ಟ್ರೊಲ್ ನಿಂದಾಗಿ ಇನ್ನಷ್ಟು ಮತ್ತಷ್ಟು ಕುಗ್ಗಿ ಇಂದು ಬೀದಿ ಬೀದಿ ಅಲೆಯುವ ಸ್ಥಿತಿ. ಈಗಲೂ ಕೂಡ ಆ ಮಹಿಳೆಗೆ ಆದ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಮನೇಲಿ ಇರುವ ಹೆಣ್ಣು ಮಗುವಿಗೆ ತಾಯಿ ಬೇಕು ಎಂದು ಏನಿಸದೇ ಇರಲಾರದು. ರೂಪೇಶ್ ರಾಜಣ್ಣ ಆಕೆಯ ಬಗ್ಗೆ ವಿಡಿಯೋ ಮಾಡಿದ್ದ ಸಂದರ್ಭದಲ್ಲಿ ಅನೇಕರು ಹಣದ ಸಹಾಯ ಕೂಡ ಇವರಿಗೆ ಮಾಡಿದ್ದಾರೆ. ಇದರಿಂದ ಆ ಮಗುವಿನ ಚಿಕಿತ್ಸೆಗೆ ಸಹಾಯವಾಗಿದೆ. ನೋಡಿ ಯಾರೋ ಒಬ್ಬ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಅದು ಅನೇಕ ಜನರಿಂದ ಶೇರ್ ಟ್ರೊಲ್ ಆಗಿ ಆ ಒಂದು ತಪ್ಪಿನಿಂದ ಆ ಇಡೀ ಕುಟುಂಬ ಎಂತಹ ಪರಿಸ್ಥಿತಿಯನ್ನು ಎದುರಿಸಬೇಕಾಯಿತು ಎಂದು.

Leave a Reply

Your email address will not be published. Required fields are marked *