ಉಪೇಂದ್ರ ಸೂಪರ್ ಸ್ಟಾರ್, ರಿಯಲ್ ಸ್ಟಾರ್, ಬುದ್ದಿವಂತ, ಅಭಿಮಾನಿಗಳ ಚಕ್ರವರ್ತಿ, ದೇವರು ನಿರ್ದೇಶಕ ಹಾಗೂ ನಟ. ಇವರು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಕುಂದಾಪುರದ ಸಮೀಪದಲ್ಲಿರುವ ಕೋಟೇಶ್ವರದಲ್ಲಿ ಜನಿಸಿದರು. ಇವರು ತಮ್ಮ ಮತ್ತು ಇತರರ ಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ. ೧೯೯೨ರಲ್ಲಿ ಬಿಡುಗಡೆಯಾದ ತರ್ಲೆ ನನ್ಮಗ ಚಿತ್ರದ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ. ಇದಕ್ಕೂ ಮು೦ಚೆ ಕಾಶೀನಾಥ್ ಜತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ನಾಯಕನಟರಾಗಿ ಇವರ ಮೊದಲ ಚಿತ್ರ ೧೯೯೮ರಲ್ಲಿ ಬಿಡುಗಡೆಯಾದ ಏ. ಇವರ ಬಾಳಸಂಗಾತಿ ಪ್ರಿಯಾಂಕ ಉಪೇಂದ್ರ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಬಸವನಗುಡಿಯ ಎ.ಪಿ.ಎಸ್ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವಾಗ ನಿರ್ದೇಶನದ ಗೀಳನ್ನು ಅಂಟಿಸಿಕೊಂಡ ಉಪ್ಪಿ ಕನ್ನಡದ ಹೆಸರಾಂತ ನಿರ್ದೇಶಕ ‘ಕಾಶಿನಾಥ’ ಅವರ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದರು.
1992ರಲ್ಲಿ ತೆರೆಗೆ ಬಂದ ‘ತರ್ಲೆನನ್ಮಗ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಉಪೇಂದ್ರ ಮುಂದೆ 1993ರಲ್ಲಿ ‘ಶ್’ ಎಂಬ ಹಾರರ್ ಚಿತ್ರ ನಿರ್ದೇಶಿಸಿದರು. 1995ರಲ್ಲಿ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ ‘ಓಂ’ ಚಿತ್ರ ಇಡೀ ಭಾರತ ಚಿತ್ರರಂಗದಲ್ಲಿಯೇ ಹೊಸ ಸಂಚಲನ ಸೃಷ್ಟಿಸಿತು. ಈ ಚಿತ್ರದಲ್ಲಿ ನಿಜವಾದ ರೌಡಿಗಳು ತಮ್ಮ ಪಾತ್ರಗಳಲ್ಲಿ ಸ್ವತಃ ತಾವೇ ಅಭಿನಯಿಸಿರುವುದು ವಿಶೇಷ. ನಂತರ ‘ಆಪರೇಷನ್ ಅಂತ’, ‘ಸ್ವಸ್ತಿಕ್’ ಚಿತ್ರಗಳನ್ನು ನಿರ್ದೇಶಿಸಿದರು. 1998ರಲ್ಲಿ ತೆರೆಗೆ ಬಂದ ‘ಎ’ ಚಿತ್ರವನ್ನು ನಿರ್ದೇಶಿಸಿ ಸ್ವತಃ ತಾವೇ ನಟಿಸಿ, ನಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. ಮುಂದೆ ತೆರೆಗೆ ಬಂದ ‘ಉಪೇಂದ್ರ’ ಚಿತ್ರವು ಹಲವಾರು ದಾಖಲೆಗಳನ್ನು ಬರೆಯಿತು. ಇವೆರಡು ಚಿತ್ರಗಳು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲಿಯೂ ಶತದಿನ ಪೂರೈಸಿದವು.
ಇಲ್ಲಿಂದ ಮುಂದೆ 10 ವರ್ಷಗಳ ಕಾಲ ನಿರ್ದೇಶನವನ್ನು ಬದಿಗಿಟ್ಟ ಉಪ್ಪಿ, ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದರು. ಮುಂದೆ ಇವರು 2010ರಲ್ಲಿ ನಿರ್ದೇಶಿಸಿದ ‘ಸೂಪರ್’ ಮತ್ತು 2015ರಲ್ಲಿ ನಿರ್ದೇಶಿಸಿದ ‘ಉಪ್ಪಿ 2’ ಚಿತ್ರಗಳು ಶತದಿನ ಪೂರೈಸಿದವು.
2003ರಲ್ಲಿ ಉಪೇಂದ್ರ ಖ್ಯಾತ ನಟಿ ಪ್ರಿಯಾಂಕ ಅವರನ್ನು ಕೈಹಿಡಿದರು. 2018 ಮಾರ್ಚ್ ನಲ್ಲಿ ಪ್ರಜಾಕೀಯ ಪಕ್ಷ ಸ್ಥಾಪಿಸಿ ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ.
ತಮ್ಮ ವಿಶಿಷ್ಟ ಆಲೋಚನಾ ಲಹರಿಗಳು, ವಿಭಿನ್ನ ನಟನಾ ಶೈಲಿಗಳಿಂದ ಭಿನ್ನವಾಗಿ ನಿಲ್ಲುವ ಇವರು ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ. ಉಪೇಂದ್ರ ಕನ್ನಡದ ಡಿಫರೆಂಟ್ ನಟ ಹಾಗು ನಿರ್ದೇಶಕ. ಸುಮಾರು ೨೦ ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡ ಚಿತ್ರ ರಂಗದಲ್ಲಿ ನಿರ್ದೇಶಕರಾಗಿ, ನಟರಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸಾಕಷ್ಟು ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಅದ್ಭುತ ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ.
ನಮ್ಮ ಕರ್ನಾಟಕದ ರಿಯಲ್ ಸ್ಟಾರ್ ಉಪೇಂದ್ರ ಅವರು ರಾಜಕೀಯಕ್ಕೆ ಎಂಟ್ರಿ ಆಗಿದ್ದು, ತಮ್ಮದೇಯಾದ ಹೊಸ ಪಕ್ಷವನ್ನು ಕಟ್ಟಿ ಆ ಪಕ್ಷಕ್ಕೆ, ಪ್ರಜಕೀಯ ಎಂದು ಹೆಸರಿಟ್ಟು, ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಉಪೇಂದ್ರ ಅವರು ಕಳೆದ ವರ್ಷ ಲಾಕ್ ಡೌನ್ ನಲ್ಲಿ ತಮ್ಮ ಜಮೀನಿನಲ್ಲಿ ಕೃಷಿ ಮಾಡಿ, ಬಂದ ಬೆಳೆಯನ್ನು ಊರಿನ ಜನರಿಗೆ ಹಂಚಿದ್ದರು. ಉಪೇಂದ್ರ ಅವರ ತೋಟ, ತೋಟದ ಮನೆ ಬಹಳ ಅಚ್ಚುಕಟ್ಟಾಗಿ ಇದೆ. ಇವರ ಜಮೀನು, ಇವರ ಮನೆ, ತೋಟ ಇಲ್ಲವನ್ನು ಈ ವಿಡಿಯೋದಲ್ಲಿ ನೋಡಿ. ಇಲ್ಲಿ ಉಪೇಂದ್ರ ಅವರು ಕೃಷಿ ಮಾಡುತ್ತಿರುವುದನ್ನು ಸಹ ನೋಡಬಹುದು. ಉಪೇಂದ್ರ ಅವರ ತೋಟ ಬೆಂಗಳೂರಿನ ದೊಡ್ಡ ಆಲದಮರ ಹತ್ತಿರ ಇದೆ. ಅಲ್ಲಿ ಉಪೇಂದ್ರ ಅವರ ರೆಸಾರ್ಟ್ ಹಾಗು ತೋಟ ಇದೆ.
ನಟ ಉಪೇಂದ್ರ ಅವರ ತೋಟದ ಮನೆಯಲ್ಲಿ ಸಾವಯವ ಕೃಷಿ ಮಾಡಿ ತರಕಾರಿ ಬೆಳೆದಿದ್ದಾರೆ. ಇದರ ಬಗ್ಗೆ ವಿಡಿಯೋ ಮಾಡಿ ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು. ಉಪೇಂದ್ರ ಅವರು ಜಮೀನಿನಲ್ಲಿ ಕೆಲ ತರಕಾರಿ ಗಿಡಗಳನ್ನು ಬೆಳೆಸಿದ್ದಾರೆ. ಬದನೆಕಾಯಿ, ಸೌತೇಕಾಯಿ, ಚೆಂಡು ಹೂ ಬೆಳೆದಿದ್ದರು. ಉಪೇಂದ್ರ ಅವರು ಈ ತರಕಾರಿ ಬೆಳೆಗೆ ಯಾವುದೇ ಕ್ರಿಮಿನಾಶಕವನ್ನು ಬಳಸಿಲ್ಲ, ಕೇವಲ ದನದ ಗೊಬ್ಬರ ಮತ್ತು ನೀರು ಹಾಕಿದ್ದರು. ಇದು ಆರೋಗ್ಯಕ್ಕೂ ಒಳ್ಳೆಯದು. ಇದೇ ರೀತಿಯ ಕೃಷಿ ತಂತ್ರಗಳನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದು ಸಹ ಉಪೇಂದ್ರ ಸಲಹೆ ನೀಡಿದ್ದರು. ಉಪೇಂದ್ರ ಅವರ ರುಪ್ಪೀಸ್ ರೆಸಾರ್ಟ್ ಇರುವ ಭೂಮಿಯಲ್ಲಿ ಎಲ್ಲ ರೀತಿಯ ಮರಗಳು, ಕೃಷಿಗೆ ಬೇಕಾದಷ್ಟು ಜಾಗ ಇವೆ. ಅಲ್ಲಿಯೇ ಉಪೇಂದ್ರ ಅವರ ಮನೆಗೆ ಆಗುವಷ್ಟು ತರಕಾರಿಯನ್ನು ಸಹ ಬೆಳೆದುಕೊಳ್ಳುತ್ತಾರಂತೆ.