ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ವಿಶ್ವದಾದ್ಯಂತ ನಟ ಯಶ್ ಅವರ ಅಭಿಮಾನಿ ಬಳಗ ದೊಡ್ಡದಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ನಟ ಯಶ್ ಈಗ ಬಹುಮುಖ್ಯ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಕನ್ನಡದ ನಟ ಯಶ್ ಈಗ ಕನ್ನಡ ಸಿನಿಮಾಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಅಡೆತಡೆಗಳನ್ನು ಮೀರಿ ವಿಶ್ವ ಮಟ್ಟದಲ್ಲಿ ಯಶ್ ಬೆಳೆದು ನಿಂತಿದ್ದಾರೆ. ಯಶ್‌ಗೆ ವಿಶ್ವಮಟ್ಟದಲ್ಲಿ ಬೇಡಿಕೆ ಇದೆ ಅನ್ನೋದು ಕೂಡ ಅಷ್ಟೇ ಸತ್ಯ. ಕೆಜಿಎಫ್ ಅನ್ನೋ ಒಂದು ಸಿನಿಮಾ ಯಶ್ ನಸೀಬನ್ನು ಬದಲಾಯಿಸಿದೆ. ಕೆಜಿಎಫ್ ಯಶ್‌ರನ್ನು ಸೂಪರ್ ಸ್ಟಾರ್ ಆಗಿ ಮಿಂಚುವಂತೆ ಮಾಡಿದೆ. ಸಿನಿಮಾ ಕ್ವಾಲಿಟಿ, ಮೇಕಿಂಗ್ ಮತ್ತು ಪ್ಯಾನ್ ಇಂಡಿಯಾ ವಿಚಾರಗಳಿಂದಾಗಿ ಇತ್ತೀಚೆಗೆ ಕನ್ನಡ ಸಿನಿಮಾಗಳ ಬಜೆಟ್ ಹೆಚ್ಚಾಗಿದೆ. ಅದು 100 ಕೋಟಿಯನ್ನು ಮುಟ್ಟಿದೆ.
ಪಾನ್ ಮಸಾಲ ಬ್ರ್ಯಾಂಡ್ ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಅಕ್ಷಯ್ ಕುಮಾರ್ ಕ್ಷಮೆ ಕೇಳಿದ ಒಂದು ವಾರದ ನಂತರ ಮತ್ತೋರ್ವ ನಟ ಪಾನ್ ಮಸಾಲ ಬ್ಯಾಂಡ್ ಜೊತೆಗಿನ ಒಪ್ಪಂದ ನಿರಾಕರಿಸಿದ್ದಾರೆ. ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿರುವಂತೆಯೇ, ಯಶ್ ಜನಪ್ರಿಯತೆ ಕೂಡಾ ಹೆಚ್ಚಾಗಿದ್ದು, ಪಾನ್ ಮಸಾಲ ಮತ್ತು ಕಾರ್ಡಮಮ್ ಬ್ರ್ಯಾಂಡ್ ಗಳ ಜೊತೆಗಿನ ಬಹುಕೋಟಿ ಒಪ್ಪಂದವನ್ನು ತಿರಸ್ಕರಿಸುವ ಮೂಲಕ ರಾಕಿಭಾಯ್ ಯಶ್ ತಾನು ರಿಯಲ್ ಲೈಫ್ ನಲ್ಲೂ ಹಿರೋ ಎಂಬುದನ್ನು ತೋರಿಸಿದ್ದಾರೆ.
ಈ ಸುದ್ದಿಯನ್ನು ಯಶ್ ಜೊತೆಗೆ ಒಪ್ಪಂದ ನಿರ್ವಹಿಸುತ್ತಿದ್ದ ಎಕ್ಸೀಡ್ ಎಂಟರ್ ಟೈನ್ ಮೆಂಟ್ ದೃಢಪಡಿಸಿದೆ. ಇತ್ತೀಚಿಗೆ ನಾವು ಪಾನ್ ಮಸಾಲಾ ಬ್ರಾಂಡ್ ನಿಂದ ಬಂದ ಎರಡಂಕಿಯ ಬಹುಕೋಟಿ ಆಫರ್ ನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸಿದ್ದೇವೆ. ಅಖಿಲ ಭಾರತ ಮಟ್ಟದ ಅಭಿಮಾನಿಗಳನ್ನು ಹೊಂದಿರುವ ದೃಷ್ಟಿಯಿಂದ ಅಭಿಮಾನಿಗಳಿಗೆ ಉತ್ತಮ ಸಂದೇಶ ನೀಡಲು ಈ ಅವಕಾಶವನ್ನು ಬಳಸಿಕೊಂಡಿದ್ದೇವೆ.
ಆತ್ಮ ಸಾಕ್ಷಿಯ, ಸಮಾನ ಮನಸ್ಕ ಬ್ರಾಂಡ್ ಗಳ ಜೊತೆಗೆ ಸಹಭಾಗಿತ್ವ ಹೊಂದಲು ನಮ್ಮ ಸಮಯ ಹಾಗೂ ಶ್ರಮ ಹೂಡಿಕೆ ಮಾಡುತ್ತೇವೆ ಎಂದು ಟ್ಯಾಲೆಂಟ್ ಮ್ಯಾನೇಜ್ ಮೆಂಟ್ ಏಜೆನ್ಸಿ ಮುಖ್ಯಸ್ಥ ಅರ್ಜುನ್ ಬ್ಯಾನರ್ಜಿ ಹೇಳಿದ್ದಾರೆ. ಪಾನ್ ಮಸಾಲಗಳು ಮತ್ತು ಅಂತಹ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಭಾರಿ ಹಾನಿಕಾರಕ ಪರಿಣಾಮವನ್ನು ಬೀರುತ್ತವೆ. ಇದು ಯಶ್ ಅವರ ಆತ್ಮಸಾಕ್ಷಿಯ ಕರೆಯಾಗಿದ್ದು, ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳ ಹಿತಾಸಕ್ತಿಯಿಂದ ವೈಯಕ್ತಿಕವಾಗಿ ಲಾಭದಾಯಕವಾದ ಒಪ್ಪಂದವನ್ನು ನಿರಾಕರಿಸಿದ್ದಾರೆ.
ವೈಯಕ್ತಿಕವಾಗಿ ನಾನು ತಂಬಾಕು ಸಹಿತ ಉತ್ಪನ್ನ ಸೇವಿಸುವುದಿಲ್ಲ. ಅಭಿಮಾನಿಗಳು ಕೂಡ ಅದನ್ನು ಸೇವಿಸಬಾರದು. ಅದು ವ್ಯಸನವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದ ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಪಾನ್ ಮಸಾಲಾ ಮತ್ತು ತಂಬಾಕು ಜಾಹೀರಾತಿಗೆ ನೋ ಎಂದಿದ್ದರು.
ಕೋಟಿ ಕೋಟಿ ಹಣ ಪಡೆದು ಬಾಲಿವುಡ್ನ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ನಟ ಅಕ್ಷಯ್ ಕುಮಾರ್ ನಟಿಸಿ ಟ್ರೋಲ್ ಆಗಿದ್ದರು. ಇದರ ಜೊತೆಗೆ ಇದೀಗ ರಾಕಿ ಭಾಯ್ ಅಭಿಮಾನಿಗಳು ಸಂತಸ ಪಡುವ ವಿಚಾರವೊಂದು ಹೊರಬಿದ್ದಿದೆ.
ರಾಕಿಂಗ್ ಸ್ಟಾರ್ ಯಶ್ ಬಹು ಕೋಟಿ ಮೊತ್ತದ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ರಾಕಿ ಬಾಯ್ ತೆಗೆದುಕೊಂಡು ಈ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಸ್ಟಾರ್ ನಟರೇ ದುಡ್ಡಿಗೆ ಬೆಲೆ ಕೊಟ್ಟು ಪಾನ್ ಮಸಲಾ ಆ್ಯಡ್ನಲ್ಲಿ ನಟಿಸುತ್ತಿದ್ದು ಇದೀಗ ಯಶ್ ನಿರ್ಧಾರದಿಂದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 10 ರಿಂದ 99 ಕೋಟಿವರೆಗೂ ಆಫರ್ ನೀಡುತ್ತಿದ್ದ ಜಾಹೀರಾತನ್ನು ಯಶ್ ತಿರಸ್ಕರಿದ್ದಾರೆ. ನನಗೆ ದುಡ್ಡಿಗಿಂದ ಅಭಿಮಾನಿಗಳ ಆರೋಗ್ಯ ಮುಖ್ಯ ಎಂದಿರುವ ರಾಕಿ ಬಾಯ್ ಗುಣಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಆದರೆ ಯಶ್ ಕೋಟಿ ಕೋಟಿಯನ್ನೇ ಮುಂದಿಟ್ಟರೂ, ಗುಟ್ಕಾ ಜಾಹೀರಾತು ಬೇಡ ಎಂದು ಹಿಂದೆ ಸರಿದಿದ್ದಾರೆ. ಇದನ್ನು ಮುಂಬೈ ಮೂಲದ ಜಾಹೀರಾತು ಸಂಸ್ಥೆಯ ಮುಖ್ಯಸ್ಥರಾದ ಅರ್ಜುನ್ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ. ನಟನಾದವನು ಕೇವಲ ತೆರೆಯ ಮೇಲೆ ಅಷ್ಟೇ ಅಲ್ಲ, ತೆರೆಯ ಹಿಂದೆಯೂ ಹೀರೋ ಆಗಿರಬೇಕು. ಹೀಗಾಗಿ ಇಂತಹ ಜಾಹೀರಾತುಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರಂತೆ ಯಶ್. ಕರ್ನಾಟಕದಲ್ಲಿ ಡಾ.ರಾಜ್, ಪುನೀತ್ ಇಂತಹ ಮಾದರಿ ಅನುಸರಿಸುತ್ತಿದ್ದರು. ಈಗ ಯಶ್ ಕೂಡಾ ಅದೇ ಹಾದಿ ಹಿಡಿದಿದ್ದಾರೆ.