ಎಪ್ರಿಲ್ 28 2022 ರಂದು ಮಕರ ರಾಶಿಯಿಂದ ಕುಂಭ ರಾಶಿಗೆ ಶನಿ ಪ್ರವೇಶ ಮಾಡುತ್ತಾನೆ. ಶನಿದೇವನ ಸ್ಥಾನ ಸಂಚಾರವು ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರಿ ಶನಿಕಾಟ ಪ್ರಾರಂಭವಾಗುತ್ತದೆ. ಇನ್ನು ಕೆಲವು ರಾಶಿಗಳ ಮೇಲೆ ಇರುವ ಶನಿಕಾಟ ಮುಕ್ತವಾಗುತ್ತದೆ. ಮೇಷ ರಾಶಿಯವರ ಮೇಲೆ ಶನಿಯ ಪ್ರಭಾವ ಯಾವ ರೀತಿ ಇದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಶನಿಯ ಸ್ಥಾನ ಬದಲಾವಣೆಯಿಂದ 12 ರಾಶಿಗಳಲ್ಲಿ ಮೊದಲ ರಾಶಿ ಮೇಷ ರಾಶಿಯವರಿಗೆ ಯಾವ ರೀತಿಯ ಫಲಗಳನ್ನು ನೀಡುತ್ತಾನೆ ಎಂದು ನೋಡುವುದಾದರೆ ಶನಿ ಲಾಭದಾಯಕ ಸ್ಥಾನದಲ್ಲಿದ್ದಾನೆ ಶನಿಯಿಂದ ಮೇಷ ರಾಶಿಗೆ ಲಾಭ ದೊರೆಯಲಿದೆ. ಮೇಷ ರಾಶಿಗೆ ಹನ್ನೊಂದನೆ ಮನೆಯಲ್ಲಿ ಶನಿದೇವನಿದ್ದು ಬಹಳ ಸ್ಟ್ರಾಂಗ್ ಆಗಿರುವ 11ನೆ ಮನೆಯಲ್ಲಿ ಇರುವುದರಿಂದ ಲಾಭದಾಯಕನಾಗಿದ್ದಾನೆ. ಮೇಷ ರಾಶಿಯವರು ಅಂದುಕೊಂಡಂತಹ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಪ್ರತಿಯೊಂದು ಕೆಲಸದಲ್ಲೂ ಮೇಷ ರಾಶಿಯವರಿಗೆ ಹೀಗೆ ಆಗಬೇಕು ಎಂಬುದಿರುತ್ತದೆ, ಕೆಲಸಕಾರ್ಯಗಳಲ್ಲಿ ಜಾಣ್ಮೆಯಿಂದ ನಡೆದುಕೊಳ್ಳುತ್ತಾರೆ.

ಮೇಷ ರಾಶಿಯವರು ಪ್ರತಿಯೊಂದು ವ್ಯವಹಾರ ಕ್ಷೇತ್ರದಲ್ಲಿ ಮನೊಬಲ, ಸ್ಥೈರ್ಯಬಲ, ಸ್ಥಾನಬಲ, ಗ್ರಹಬಲ ಹೊಂದಿರುತ್ತಾರೆ. ಸಣ್ಣಪುಟ್ಟ ಕೆಲಸಕಾರ್ಯಗಳಿಗೆ ಮೇಷರಾಶಿಯವರು ಕೈಹಾಕುವುದಿಲ್ಲ ದೊಡ್ಡದೊಡ್ಡ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಆನೆ ನಡೆದಿದ್ದೆ ದಾರಿ ಎನ್ನುವಂತೆ ದೊಡ್ಡ ದೊಡ್ಡ ವ್ಯಕ್ತಿಗಳೊಂದಿಗೆ ವ್ಯವಹಾರ ಮಾಡುತ್ತಾರೆ, ಗಣ್ಯ ವ್ಯಕ್ತಿಗಳೊಂದಿಗೆ ವ್ಯವಹಾರ ಒಪ್ಪಂದ ಮಾಡುತ್ತಾರೆ. ಇನ್ನು ಎರಡುವರೆ ವರ್ಷಗಳ ಕಾಲ ಮೇಷ ರಾಶಿಯವರಿಗೆ ಅದ್ಭುತವಾದ ಸಮಯವಾಗಿರುತ್ತದೆ.

ಮೇಷ ರಾಶಿಯವರು ಕೋಟಿ ವ್ಯವಹಾರವನ್ನು ಕೈಗೊಳ್ಳುತ್ತಾರೆ. ಹಿಡಿದುಕೊಂಡ ಕೆಲಸ ಮಧ್ಯದಲ್ಲಿ ನಿಲ್ಲದೆ ಸಮರ್ಪಕವಾಗಿ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಮೇಷ ರಾಶಿಯವರು ಆರು ತಿಂಗಳಲ್ಲಿ ಮುಗಿಸುವ ಕೆಲಸವನ್ನು ಮೂರು ತಿಂಗಳಲ್ಲಿ ಮುಗಿಸುವ ಚಾಣಾಕ್ಷತನವನ್ನು ಹೊಂದಿರುತ್ತಾರೆ. ಲಕ್ಷ್ಮಿ ಕೃಪೆ ನಿಮ್ಮದಾಗಲಿದೆ, ಬೃಹತ್ ಮೊತ್ತದ ಹಣ ನಿಮ್ಮ ಕೈಸೇರಲಿದೆ.

ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಮೇಷ ರಾಶಿಯವರದಾಗಲಿದೆ. ಮೇಷ ರಾಶಿಯ ಸ್ತ್ರೀಯರಲ್ಲಿ ಪುರುಷರಲ್ಲಿ ಹಣದ ಕೊರತೆ ಕಂಡುಬರುವುದಿಲ್ಲ. ಮೇಷ ರಾಶಿಯವರಿಗೆ ಕೋರ್ಟು-ಕಚೇರಿಯ ಸಮಸ್ಯೆ ಇದ್ದರೆ ಅವರ ಪರವಾಗಿಯೆ ತೀರ್ಪು ಬರುತ್ತದೆ. ಮೇಷ ರಾಶಿಯ ಶತ್ರುಗಳು ಮಿತ್ರರಾಗುತ್ತಾರೆ ಒಟ್ಟಿನಲ್ಲಿ ಮೇಷ ರಾಶಿಯವರಿಗೆ ಶನಿಮಹಾತ್ಮನಿಂದ ಸುಖಮಯ ಜೀವನ ಸಿಗುತ್ತದೆ. ಪ್ರಮುಖವಾದ ಧನುರಾಶಿಯವರಿಗೆ ಏಳುವರೆ ವರ್ಷಗಳಿಂದ ಅನುಭವಿಸುತ್ತಿರುವ ಶನಿಕಾಟ ಮುಕ್ತವಾಗಲಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!