ಒಬ್ಬೊಬ್ಬರಿಗೆ ಒಂದೊಂದು ಫೇವರಿಟ್ ಬಣ್ಣಗಳು ಇರುತ್ತವೆ. ಬಣ್ಣ ಎಂದರೆ ಹಾಗೆ ತಟ್ಟನೆ ಆಕರ್ಷಿಸುವಂತಹ ವಸ್ತು. ಪ್ರತಿ ಬಣ್ಣಗಳಿಗೂ ಅದರದ್ದೇ ಆದ ಶಕ್ತಿಯೂ ಇರುತ್ತದೆ. ಒಬ್ಬರಿಗೆ ಇಷ್ಟವಾದ ಬಣ್ಣ ಮತ್ತೊಬ್ಬರಿಗೆ ಇಷ್ಟವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದರ ಜೊತೆಗೆ ಒಬ್ಬರಿಗೆ ಒಪ್ಪುವ ಬಣ್ಣ ಮತ್ತೊಬ್ಬರಿಗೆ ಒಪ್ಪುತ್ತದೆ ಎಂಬುದೂ ಅಷ್ಟೇ ಕಷ್ಟ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಣ್ಣದಲ್ಲೂ ಅದೃಷ್ಟ ಇರುತ್ತದೆ.

ಜ್ಯೋತಿಷ್ಯದ ಪ್ರಕಾರ ನಿಮಗೆ ಯಶಸ್ಸು ಬೇಕೆಂದರೆ ನಿಮ್ಮ ರಾಶಿಗೆ ಅನುಸಾರವಾಗಿ ಬಣ್ಣವನ್ನು ಆಯ್ಕೆ ಮಾಡಿಕೊಂಡು ಅದನ್ನು ಪಾಲಿಸಿದರೆ, ಆ ಬಣ್ಣವು ನಿಮಗೆ ಸಕಾರಾತ್ಮಕ ಅಂಶವನ್ನು ತಂದುಕೊಡುವುದಲ್ಲದೆ, ಸಮಸ್ಯೆಗಳನ್ನು ದೂರ ಮಾಡಲು ಸಹಾಯಕವಾಗುತ್ತದೆ ಎಂದು ಹೇಳಲಾಗಿದೆ.

ಮಕರ ರಾಶಿಚಕ್ರ ಚಿಹ್ನೆಯ ಪ್ರಕಾರ ಮಾಡಿದ ಬಣ್ಣ ಚಿಕಿತ್ಸೆಯ ಈ ಒಂದು ಪರಿಹಾರ ಜೀವನದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರಬಹುದು. ಇದು ಆರೋಗ್ಯದಿಂದ ಹಿಡಿದು ವೃತ್ತಿ, ಸಂಬಂಧಗಳು ಇತ್ಯಾದಿ ಎಲ್ಲ ಪ್ರಮುಖ ಅಂಶಗಳ ಮೇಲೆ ಪರಿಣಾಮಕಾರಿ ಮತ್ತು ಧನಾತ್ಮಕ ಪರಿಣಾಮ ಬೀರುತ್ತದೆ.

7 ಬಣ್ಣಗಳು ನಮ್ಮ ದೇಹದ 7 ಚಕ್ರಗಳನ್ನು ಪ್ರತಿನಿಧಿಸುತ್ತವೆ ಅವು ವ್ಯಕ್ತಿಯ ರಾಶಿಚಕ್ರಕ್ಕೆ ಸಂಬಂಧಿಸಿವೆ. ಚಕ್ರವು ದುರ್ಬಲ ಅಥವಾ ಹಾನಿಗೊಳಗಾದ ವ್ಯಕ್ತಿಯು ಆ ಚಕ್ರಕ್ಕೆ ಸಂಬಂಧಿಸಿದ ಬಣ್ಣವನ್ನು ಬಳಸುವುದರಿಂದ ವ್ಯಕ್ತಿಯ ದೈಹಿಕ-ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಜೊತೆಗೆ ರಾಶಿಗೆ ಸಂಬಂಧಿಸಿದ ಬಣ್ಣದ ಬಾಟಲಿಯ ಬಳಕೆಯು ಅವನನ್ನು ಎಷ್ಟು ಬಲಶಾಲಿಯನ್ನಾಗಿಸುತ್ತದೆಯೆಂದರೆ ಅವನು ಪ್ರತಿ ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತಾನೆ. ಒಂದು ತಿಂಗಳು ಈ ಪರಿಹಾರವನ್ನು ಮಾಡುವುದರಿಂದ ಒಬ್ಬ ವ್ಯಕ್ತಿಯು ಜೀವನದಲ್ಲಿ ವ್ಯತ್ಯಾಸವನ್ನು ಕಾಣಲಾರಂಭಿಸುತ್ತಾನೆ ಆದರೆ ಇದನ್ನು ಗರಿಷ್ಠ ಸಮಯಕ್ಕೆ ಮಾಡಬೇಕು.

ಮಕರ ರಾಶಿಯು 12 ರಾಶಿಗಳಲ್ಲಿ 10ನೇ ಮನೆಯಲ್ಲಿದೆ. 10ನೇ ಮನೆಯನ್ನು ಕರ್ಮಸ್ಥಾನ ಎನ್ನುತ್ತಾರೆ ಅಂದರೆ ಶನಿ ಅಧಿಪತ್ಯ ಇರುವ ಸ್ಥಳ ಎಂದು. ಇನ್ನು ಮಕರ ರಾಶಿಗೆ ಶನಿ ಅಧಿಪತಿ, ಶನಿಯನ್ನು ಕರ್ಮಫಲದಾತ ಎನ್ನುತ್ತಾರೆ. ಕರ್ಮ ಎಂದರೆ ಎರಡು ಅರ್ಥ ಬರುತ್ತದೆ ಒಂದು ನಾವು ಮಾಡುವ ವೃತ್ತಿಯಾಗಬಹುದು ಮತ್ತೊಂದು ನಾವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳು ಈ ಎರಡನ್ನೂ ನಮ್ಮ ಜಾತಕದಲ್ಲಿ ಶನಿಯು ನಿಭಾಯಿಸುತ್ತಾನೆ.

ಮಕರ ರಾಶಿಯ ಪ್ರಕಾರ ಈ ಬಣ್ಣಗಳನ್ನು ಬಳಸಿ. ರಾಶಿಯವರಿಗೆ ಕಪ್ಪು ಮತ್ತು ನೀಲಿ ಬಣ್ಣವು ಒಳ್ಳೆಯದಾಗುತ್ತದೆ. ಕಾರಣ ಇದು ಶನಿದೇವರಿಗೆ ಪ್ರಿಯವಾದ ಬಣ್ಣಗಳಾಗಿವೆ. ಹೀಗಾಗಿ ಇವರು ಕಪ್ಪು, ಕಂದು, ಬೂದು ಹಾಗೂ ಖಾಕಿ ಬಣ್ಣಗಳು ಸಹ ರಕ್ಷಿಸುವುದಲ್ಲದೆ ಯಶಸ್ಸಿನ ದಾರಿಯನ್ನು ತೆರೆಯುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!