ನಟಿ ಐಂದ್ರಿತಾ ರೇ ಬಗ್ಗೆ ತಿಳಿದವರಿಲ್ಲ ಒಂದು ಕಾಲದ ಟಾಪ್ ನಟಿಯರಲ್ಲಿ ಇವರು ಒಬ್ಬರಾಗಿದ್ದರು ಮೂಲತಃ ರಾಜಸ್ಥಾನದ ಉದಯ್ಪುರದವರು. ಬೆಂಗಾಲಿ ಕುಟುಂಬದಲ್ಲಿ ಜನಿಸಿದ ಐಂದ್ರಿತಾ, ಕನ್ನಡ ಸಿನಿಮಾ ಇಂಡಸ್ಟ್ರೀಗೆ ಕಾಲಿಟ್ಟ ಮೇಲೆ ಅಪ್ಪಟ ಕನ್ನಡತಿಯೇ ಆಗಿಬಿಟ್ಟಿದ್ದಾರೆ. ಕನ್ನಡ ಹುಡುಗನನ್ನೇ ಮದುವೆ ಆಗಿ ಇಲ್ಲಿಯೇ ಸೆಟ್ಲ್ ಆಗಿದ್ದಾರೆ. ಮೆರವಣಿಗೆ ಸಿನಿಮಾದಲ್ಲಿ ನಟ ಪ್ರಜ್ವಲ್ ಜೊತೆ ನಾಯಕಿಯಾಗಿ ಅಭಿನಯಿಸಿದ ನಟಿ ಐಂದ್ರಿತಾ ರೇ ಇವರು ಬಂಗಾಳಿ ಮೂಲದವರು ಆದರೂ ಕನ್ನಡ ಚಿತ್ರರಂಗದಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ
ಬ್ಯೂಟಿ ಕ್ವೀನ್ ಎಂದೇ ಹೆಸರುವಾಸಿಯಾಗಿದ್ದಾರೆ ಮಾಡಲಿಂಗ್ ಕ್ಷೇತ್ರದಲ್ಲೂ ಕೂಡ ತಮ್ಮ ಛಾಪನ್ನು ವಿಸ್ತರಿಸಿದ್ದಾರೆ ಇನ್ನು ಮನಸಾರೆ ವೀರ ಪರಂಪರೆ ಪುನೀತ್ ರಾಜಕುಮಾರ್ ಜೊತೆ ಪರಮಾತ್ಮ ಚಿತ್ರದಲ್ಲು ನಟಿಸಿ ಹೊಸತೊಂದು ಛಾಪು ಮೂಡಿಸಿದ್ದಾರೆ ಇನ್ನು ಕೆಲವು ಹಿಂದಿ ಸಿನಿಮಾದಲ್ಲೂ ನಟನೆ ಮಾಡಿದ್ದಾರೆ ಇವರು ಕನ್ನಡ ಚಿತ್ರರಂಗದಲ್ಲಿ ದೂದ್ ಪೇಡಾ ಎಂದು ಕರೆಯಲ್ಪಡುವ ನಟ ದಿಗಂತ್ ಮಂಚಾಲೆ ಅವರ ಜೊತೆ 2018 ರಲ್ಲಿ ಸಪ್ತಪದಿ ತುಳಿದಿದ್ದಾರೆ . ಇವರಿಬ್ಬರೂ ಮನಸಾರೆ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದು ಪರಿಚಯ ಸ್ನೇಹವಾಗಿ ಕೊನೆಗೆ ಪ್ರೀತಿಯಾಗಿ ಮಾರ್ಪಟ್ಟು ನಂತರ ಎಲ್ಲರ ಹಾರೈಕೆಯ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು
ಇವರಿಬ್ಬರ ಜೋಡಿ ಕ್ಯೂಟ್ ಆಗಿದ್ದು ತಮ್ಮ ಜೀವನದ ಕೆಲವು ಖುಷಿಯ ಕ್ಷಣಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ ಪ್ರತಿಯೊಬ್ಬ ಮನುಷ್ಯನಿಗೂ ತಮ್ಮ ದುಡಿಮೆಯ ಉಳಿತಾಯದಿಂದ ತಮ್ಮದೇ ಆದ ಸ್ವಂತ ಮನೆ ಹೊಂದಿರಬೇಕು ಎಂಬ ಕನಸು ಸಾಮಾನ್ಯ ಅದಕ್ಕೆ ಬಡವ ಇಲ್ಲ ಶ್ರೀಮಂತ ಎನ್ನುವ ಬೇಧಭಾವ ಇಲ್ಲ ಇನ್ನು ನಮ್ಮ ದಿಂಗಂತ್ ಮತ್ತು ಇಂದ್ರಿತ ಜೋಡಿ ಕೂಡ ತಮ್ಮದೇ ಆದ ಸುಂದರವಾದ ಮನೆಯನ್ನು ನಿರ್ಮಿಸಿಕೊಂಡು ತಮ್ಮ ಸುಖಕರ ಜೀವನ ಸಾಗಿಸುತ್ತಾ ಇದಾರೆ ಇವರ ಮನೆ ನೋಡಲು ತುಂಬಾ ಆಕರ್ಷಣೀಯವಾಗಿದೆ
ಇನ್ನು ಒಳವಿನ್ಯಾಸ ಅದ್ಬುತ ಹಾಗೂ ಸುಸಜ್ಜಿತ ಆಧುನಿಕ ವಿನ್ಯಾಸದಿಂದ ಕೂಡಿದ ಲಿವಿಂಗ್ ಹಾಲ್ ಮತ್ತು ಆಧುನಿಕ ಶೈಲಿಯ ಊಟದ ಕೊಠಡಿ ಅಡುಗೆ ಮನೆ ಹೊಂದಿದ್ದು ಎಲ್ಲ ಕಡೆ ಐಂದ್ರಿತಾ ಅವರು ತಮ್ಮ ಸವಿರುಚಿಯ ಹಾಗೆ ಇಂದೋರ್ ಪ್ಲಾಂಟ್ ಅನ್ನು ಬೆಳೆಸಿದ್ದು ನೋಡಲು ರಮಣೀಯವಾಗಿದೆ ಇನ್ನು ದೈನಂದಿನ ವ್ಯಾಯಾಮ ಹಾಗೂ ಯೋಗ ಮಾಡಲು ಪ್ರತ್ಯೇಕ ಕೊಠಡಿ ನಿರ್ಮಿಸಿದ್ದು ಮನೆಯಲ್ಲಿ ಎಲ್ಲ ಸದಸ್ಯರ ಜೊತೆ ಕೂತು ಸಿನಿಮಾ ನೋಡಲು ಹೋಂ ಸಿನಿಮಾ ಹಾಲ್ ಕೂಡ ಇದೆ.
ಇನ್ನು ಮನೆಯ ಹೊರಾಂಗಣ ಕೂಡಾ ಅತ್ಯಂತ ಸುಂದರವಾಗಿದ್ದು ತಮ್ಮ ಅಭಿರುಚಿಗೆ ತಕ್ಕಂತೆ ವಿನ್ಯಾಸ ಮಾಡಿಸಿದ್ದಾರೆ ಮನೆಯ ಒಳಗಡೆ ಮನಿ ಪ್ಲಾಂಟ್, ಸ್ನೇಕ್ ಪ್ಲಾಂಟ್ ಮುಂತಾದ ಗಿಡಗಳು ಬೆಳೆಸಿದರೆ ಹೊರಗಡೆ ಅನೇಕ ಹೂವಿನ ಗಿಡ ಹಾಗೂ ಶೋ ಗಿಡಗಳು ಹಾಕಿದ್ದಾರೆ ಒಟ್ಟಾರೆ ಒಳಗು ಹೊರಗು ಸಸ್ಯಗಳಿಂದ ಕೂಡಿದ್ದು ನೋಡಲು ಸುಂದರ ಹಾಗೂ ಎಲ್ಲ ಕಡೆ ಸಸ್ಯಗಳನ್ನು ಬೆಳಸಿರುವುದರಿಂದ ಉಸಿರಾಟಕ್ಕೆ ತಾಜಾ ಗಾಳಿ ಸಿಕ್ಕಂತೆ ಈ ಜೋಡಿ ಯಾವಾಗಲೂ ಹೀಗೆ ಖುಶಿ ಖುಶಿಯಾಗಿ ತಮ್ಮ ಜೀವನವನ್ನು ನಡೆಸಲಿ ಎಂದು ಹಾರೈಸೋಣ