12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯು ತನ್ನದೆ ಆದ ವ್ಯಕ್ತಿತ್ವ, ಗುಣ ಸ್ವಭಾವ, ಅನುಕೂಲ, ಅನಾನುಕೂಲವನ್ನು ಹೊಂದಿರುತ್ತದೆ. ಆಯಾ ರಾಶಿಗಳಲ್ಲಿ ಜನಿಸಿದವರು ತಮ್ಮ ರಾಶಿಗೆ ತಕ್ಕಂತೆ ಭವಿಷ್ಯವನ್ನು ಅನುಭವಿಸುತ್ತಾರೆ. ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಇರುತ್ತದೆ ನಮ್ಮ ರಾಶಿಗೆ ಯಾವ ರೀತಿ ಹಣಕಾಸಿನ ಬಲವಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಸಿಂಹ ರಾಶಿಯ ಹಣಕಾಸಿನ ಬಲದ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಸಿಂಹ ರಾಶಿಯ ರಾಶ್ಯಾಧಿಪತಿ ರವಿ ಗ್ರಹಕ್ಕೆ ತನ್ನದೆ ಆದ ಗುಣಲಕ್ಷಣ ಇರುತ್ತದೆ. ಸಿಂಹ ರಾಶಿಯವರ ಹಣಕಾಸಿನ ಬಲ ನೋಡಬೇಕಾದರೆ ಗುರು ಬಲವನ್ನು ನೋಡಬೇಕಾಗುತ್ತದೆ. ರವಿ ಗ್ರಹಕ್ಕೆ ಗುರು ಮಿತ್ರ ಗ್ರಹನು ಆಗಿರುತ್ತಾನೆ, ಮಾರಕಾಧಿಪತಿಯೂ ಆಗಿರುತ್ತಾನೆ. ಮಿತ್ರನಾಗಿರುವುದರಿಂದ ಹಣಕಾಸಿನ ಅನುಕೂಲ ಮಾಡಿಕೊಡುತ್ತಾನೆ. ಮಾರಕನಾಗಿರುವುದರಿಂದ ಆರೋಗ್ಯದಲ್ಲಿ ಸಮಸ್ಯೆ ಕಂಡುಬರುತ್ತದೆ ಅಂದರೆ ಹಣಕಾಸಿನ ವಿಷಯದಲ್ಲಿ ಸ್ವಲ್ಪಮಟ್ಟಿಗೆ ಏರುಪೇರು ಕಂಡುಬರುತ್ತದೆ.

ಸಿಂಹ ರಾಶಿಯವರಿಗೆ ಹಣ ಬೇಗ ಖರ್ಚಾಗುತ್ತದೆ. ಸಿಂಹ ರಾಶಿಯವರು ದುಡಿಯುತ್ತಾರೆ ಆದರೆ ಆತುರದ ನಿರ್ಧಾರದಿಂದ ಹಣ ಖರ್ಚಾಗುವ ಸಾಧ್ಯತೆಗಳಿವೆ ಇದನ್ನು ಹೊರತುಪಡಿಸಿ ಸಿಂಹ ರಾಶಿಯವರಿಗೆ ಅನುಕೂಲವಿದೆ. ಆಸ್ತಿ, ಜಮೀನಿನ ವಿಷಯದಲ್ಲಿ ಸ್ವಲ್ಪ ಹಣ ವ್ಯಯ ಆಗುವ ಸಾಧ್ಯತೆ ಇರುತ್ತದೆ. ಸಿಂಹ ರಾಶಿಯವರು ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು, ಅನುಭವಸ್ಥರ ಮಾರ್ಗದರ್ಶನ ಪಡೆದು ಜೀವನ ಮಾಡಬೇಕು. ಸಿಂಹ ರಾಶಿಯವರಿಗೆ ಶುಕ್ರ ದೆಶೆ ಶುಕ್ರ ಭುಕ್ತಿ, ಶನಿ ದೆಶೆ ಶನಿ ಭುಕ್ತಿ, ರಾಹು ದೆಶೆ ರಾಹು ಭುಕ್ತಿ, ಕೇತು ದೆಶೆ ಕೇತು ಭುಕ್ತಿ ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕು. ಸಿಂಹ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಕಂಡುಬಂದರೆ ಶನಿಗ್ರಹದ ಆರಾಧನೆ ಮಾಡಬೇಕು, ಆಂಜನೇಯ ದೇವಸ್ಥಾನಕ್ಕೆ ಹೋಗಬೇಕು.

ಸಿಂಹ ರಾಶಿಯವರು ಪ್ರತಿ ಗುರುವಾರ ರಾಘವೇಂದ್ರ ಸ್ವಾಮಿ, ದತ್ತಾತ್ರೇಯ ಸ್ವಾಮಿ ದೇವಾಲಯಕ್ಕೆ ಹೋಗಬೇಕು. ಮಂಗಳವಾರ ಸುಬ್ರಮಣ್ಯ ಸ್ವಾಮಿಯ ಆರಾಧನೆ ಮಾಡಬೇಕು. ಸಿಂಹ ರಾಶಿಯವರು ಸೋಮವಾರ ಮಾಂಸಹಾರವನ್ನು ಸೇವಿಸಬಾರದು. ಶತ್ರು ಬಾಧೆ, ಮಾಟ ಮಂತ್ರದ ಸಮಸ್ಯೆ ಕಂಡುಬಂದರೆ ಅಂಜನವನ್ನು ಹಾಕಿ ನೋಡುವುದರಿಂದ ಪರಿಹಾರ ಪಡೆಯಬಹುದು. ಎಲ್ಲಾ ಸಮಸ್ಯೆಗಳಿಗೂ ಒಂದಲ್ಲ ಒಂದು ಪರಿಹಾರವಿರುತ್ತದೆ ಅದರಂತೆ ಸಿಂಹ ರಾಶಿಯವರು ದೇವಾಲಯಗಳಿಗೆ ಭೇಟಿ ನೀಡುವುದರ ಮೂಲಕ ತಮ್ಮ ಹಣಕಾಸಿನ ಸಮಸ್ಯೆಯನ್ನು ಸರಿ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಸಿಂಹರಾಶಿಯವರಿಗೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!