ಹಣ್ಣುಗಳ ರಾಜ ಮಾವು ಇನ್ನೂ ಬೇಸಿಗೆ ಬಂತೆಂದರೆ ಮಾವಿನ ಋತು ಎಂದೇ ಹೇಳಬಹುದು ಮಾವಿನ ಹಣ್ಣನ್ನು ಇಷ್ಟ ಪಡದ ಜನರಿಲ್ಲ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರು ಎಲ್ಲಾ ವಯೋಮಿತಿಯವರು ತಿನ್ನಬಹುದಾದ ಹಣ್ಣು. ಮಾವಿನ ಹಣ್ಣಿನ ಸ್ವಾದ ನೆನೆಸಿಕೊಂಡರೆ ಬಾಯಲ್ಲಿ ನೀರೂರಿವುದು ದಿನಾಲು ಈ ಹಣ್ಣನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಹಲವಾರು ಉಪಯೋಗ ಆಗುವುದು. ಈ ಲೇಖನದಲ್ಲಿ ವ್ಯೆದ್ಯಶ್ರೀ ಚೆನ್ನಬಸವಣ್ಣ ಅವರು ಮಾವಿನ ಹಣ್ಣು ಸೇವನೆಯಿಂದ ದೇಹಕ್ಕೆ ಆಗುವ ಲಾಭವನ್ನು ವಿವರಿಸಿದ್ದಾರೆ.
ಮಾವಿನ ಹಣ್ಣಿನಲ್ಲಿ ಹೇರಳವಾಗಿ ಪೋಷಕಾಂಶ ಪೊಟ್ಯಾಸಿಯಮ್ ಮಗ್ನೆಸಿಯಾಂ ಕ್ಯಾಲ್ಸಿಯಂ ವಿಟಮಿನ್ ಎ ಹೇರಳವಾಗಿದೆ ಸೇವನೆಯಿಂದ ಶರೀರದಲ್ಲಿ ಬ್ರಮನ ಬಲ್ಯ ಲೇಖನ ಇಂದ ದೇಹ ವೃದ್ಧಿಯಾಗುವುದು ಇವು ಸಂಸ್ಕೃತ ಪದ ಮಾನವನ ಶರೀರ ವಿಕಾಸವಾಗಿ ಮಾಂಸ ಅಸ್ತಿ ಪಂಜರ ಹಾಗೂ ನರ ಮಂಡಲ ವಿಕಸನವಾಗಿ ದೇಹದಲ್ಲಿ ಶಕ್ತಿ ತುಂಬಿ ದೇಹವನ್ನು ಶುದ್ಧೀಕರಣ ಆಗುವುದು ಎಂದು ಅರ್ಥ ಹಸಿದಾಗ ಹಲಸು ಉಂಡಗ ಮಾವು ಎಂಬ ನಾಣ್ಣುಡಿ ಯಂತೆ ಊಟದ ನಂತರ ಮಾವಿನ ಹಣ್ಣಿನ ಸೇವನೆ ಉತ್ತಮ ಇನ್ನು ಹಾಲಿನ ಜೊತೆ ಕೆಲವು ಹಣ್ಣುಗಳನ್ನು ಸೇವನೆ ನಿಷೇದ ಆದರೆ ಮಾವಿನ ಹಣ್ಣನ್ನು ಸೇವನೆ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ.
ಈ ಹಣ್ಣಿನ ಸೇವನೆಯಿಂದ ರಕ್ತ ಸಂಚಾರ ಸರಾಗವಾಗಿ ಕರುಳು ಶುದ್ದಿಯಾಗಿ ಗ್ಯಾಸ್ಟ್ರಿಕ್ ಆಮ್ಲೀಯತೆ ಮಲಬದ್ದತೆ ಉಪಶಮನ ಆಗುವುದು. ರಸ ರಕ್ತ ಮಾಂಸ ಮೇಧಾ ಅಸ್ತಿ ಮಜ್ಜೆ ಶುಕ್ರ ಎಂಬ ಸಪ್ತ ಧಾತುಗಳು ಪುಷ್ಟಿ ಆಗುವುದು .ಹೆಣ್ಣು ಮಕ್ಕಳಲ್ಲಿ ಬಂಜೆತನಕ್ಕೆ ಹಾಗೂ ಪುರುಷರ ನಪುಂಸಕ ಸಮಸ್ಯೆ ಹಾಗೂ ಕಣ್ಣಿನ ದೋಷ ಮುಂತಾದ ಸಮಸ್ಯೆ ನಿವಾರಣೆ ಆಗುವುದು.
ಮಾವಿನ ಋತುವಿನಲ್ಲಿ ದಿನಾಲು ಹಣ್ಣನ್ನು ಸೇವನೆ ಮಾಡುವುದರಿಂದ ತೆಳ್ಳಗೆ ಇರುವರ ದೇಹದಲ್ಲಿ ಮಾಂಸ ಧಾತು ವೃದ್ಧಿಯಾಗಿ ತೂಕ ಕ್ರಮೇಣ ಜಾಸ್ತಿ ಆಗುವುದು. ಇನ್ನೂ ಹಾರ್ಮೋನ್ ಅಲ್ಲಿ ಏರು ಪೇರು ಇರುವವರು ಕೂಡ ತಿನ್ನುವುದರಿಂದ ಸಮತೋಲನ ಉಂಟು ಆಗುವುದು ಮಧುಮೇಹಿಗಳಿಗೆ ಈ ಹಣ್ಣನ್ನು ತಿನ್ನಬಾರದು ಎಂದು ಹೇಳುತ್ತಾರೆ ಆದರೆ ಕೆಲವೊಂದು ಪತ್ಯದ ಜೊತೆಗೆ ಸೇವನೆ ಮಾಡುವುದರಿಂದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ
ಹೃದಯ ಸಂಬಂಧಿ ರೋಗ ಇರುವರು ಈ ಹಣ್ಣನ್ನು ಸೇವಿಸುವುದರಿಂದ ರಕ್ತದ ತಡೆ ತೊಡೆದುಹಾಕಿ ರಕ್ತ ಸಂಚಾರ ಸರಗವಾಗುವುದು ಇನ್ನು ವೀರ್ಯದ ಕೊರತೆ ಹೋಗಲಾಡಿಸಿ ಶ್ವಾಸ ಕೋಶ ಸಮಸ್ಯೆ ಮತ್ತು ಚರ್ಮ ವಿಕಾರಕ ದೂರ ಆಗಿ ಚರ್ಮ ಕಾಂತಿಯುತವಾಗಿ ಹೊಳೆಯುವುದು ಇನ್ನು ಕೂದಲು ಸೊಂಪಾಗಿ ಬೆಳೆದು ಜ್ಞಾಪಕ ಶಕ್ತಿ ಹೆಚ್ಚುತ್ತದೆ ಮಾನಸಿಕ ಸಮಸ್ಯೆ ಪರಿಹಾರ ಆಗುತ್ತದೆ. ಗರ್ಭಿಣಿ ಸ್ತ್ರೀಯರು 7 ತಿಂಗಳ ನಂತರ ಸೇವನೆ ಮಾಡಲು ಉತ್ತಮ ಇನ್ನೂ ಉಷ್ಣಾಂಶ ಹೊಂದಿರುವ ಸ್ತ್ರೀಯರು ವೈದ್ಯರ ಸಲಹೆ ಮೇರೆಗೆ ಸೇವಿಸಬೇಕು.
ಇತ್ತೀಚಿಗೆ ಮಾವಿನ ಋತು ಮುಗಿದ ನಂತರವೂ ಮಾರ್ಕೆಟ್ ಅಲ್ಲಿ ಮಾವಿನ ಹಣ್ಣು ಸಿಗುತ್ತದೆ ಆದರೆ ಅದರ ಸೇವನೆ ಅಷ್ಟೊಂದು ಉತ್ತಮ ಅಲ್ಲ ಏಕೆಂದರೆ ಕೃತಕವಾಗಿ ಬೆಳೆಯುತ್ತಾರೆ ಇನ್ನು ಅನೇಕ ಕೃತಕ ಹಣ್ಣಿನ ರಸ ಸೇವನೆ ಕೂಡ ಜೀವಕ್ಕೆ ಹಾನಿಕಾರಕ .ಆದಷ್ಟು ಎಲ್ಲ ಹಣ್ಣಿನ ಋತುಮಾನದಲ್ಲಿ ಸೇವಿಸಿದರೆ ಉತ್ತಮ.