ದ್ವಾದಶ ರಾಶಿಗಳಲ್ಲಿ ಜನಿಸಿದವರು ತಮ್ಮ ರಾಶಿಗನುಗುಣವಾಗಿ ಪ್ರತಿತಿಂಗಳು ಗ್ರಹಗಳ ಸಂಚಾರದ ಫಲವಾಗಿ ಸುಖದುಃಖಗಳನ್ನು ಅನುಭವಿಸುತ್ತಾರೆ. ಪ್ರತಿಯೊಬ್ಬರಿಗೂ ತಮ್ಮ ರಾಶಿಯ ತಿಂಗಳಿನ ಭವಿಷ್ಯ ನೋಡಬೇಕಾಗುತ್ತದೆ. ಮಿಥುನ ರಾಶಿಯವರ ಎಪ್ರಿಲ್ ತಿಂಗಳಿನ ಭವಿಷ್ಯವನ್ನು ತಿಳಿದುಕೊಳ್ಳಬೇಕಾದರೆ ತಪ್ಪದೆ ಈ ಲೇಖನವನ್ನು ಓದಿ.

ಮಿಥುನ ರಾಶಿಯವರಿಗೆ ಎಪ್ರಿಲ್ ತಿಂಗಳಿನಲ್ಲಿ ಮಿಥುನ ರಾಶಿಯ ಅಧಿಪತಿ ಹತ್ತನೆ ಮನೆಗೆ ಬಂದು ಸ್ವಲ್ಪ ದಿನದಲ್ಲೆ ಹನ್ನೊಂದನೆ ಮನೆಗೆ ಬರುತ್ತಾನೆ ಇದರಿಂದ 80-85% ಈ ತಿಂಗಳಿನಲ್ಲಿ ಒಳ್ಳೆಯದಾಗುತ್ತದೆ, ಅಂದುಕೊಂಡ ಕೆಲಸ ಕಾರ್ಯ ನಡೆಯುತ್ತದೆ. ಕೇತುವಿನಿಂದ ಸ್ವಲ್ಪ ತೊಂದರೆಯಾಗುತ್ತದೆ ಅದು ಬಿಟ್ಟರೆ ಈ ತಿಂಗಳಿನಲ್ಲಿ ಮಿಥುನ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಮಿಥುನ ರಾಶಿಯ ವಿದ್ಯಾರ್ಥಿಗಳು ಬೇರೆ ಕಡೆ ಹೋಗುವ ಸಂಭವವಿರುತ್ತದೆ, ಹೊರ ರಾಜ್ಯ, ಹೊರ ದೇಶಗಳಿಗೆ ಹೋಗಿ ಓದುವ ಯೋಗವಿದೆ.

ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟ್ ಸಿಗುವ ಸಾಧ್ಯತೆಗಳಿವೆ. ಸರ್ಕಾರದಿಂದ ಸಿಗುವ ವಿದ್ಯಾರ್ಥಿ ವೇತನ, ಅವಾರ್ಡ್ ಸಿಗಬಹುದು. ವಿದ್ಯಾರ್ಥಿಗಳಿಗೆ ಈ ತಿಂಗಳು ಉತ್ತಮವಾಗಿದೆ. ಉದ್ಯೋಗಿಗಳಿಗೆ ಈ ತಿಂಗಳಿನಲ್ಲಿ ಖಾಸಗಿ ರಂಗದಲ್ಲಿ, ಸರ್ಕಾರಿ ರಂಗದಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಸಮಯವಾಗಿದೆ. ವ್ಯಾಪಾರ, ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಈ ತಿಂಗಳಿನಲ್ಲಿ ಒಳ್ಳೆಯದಾಗುತ್ತದೆ. ಎಪ್ರಿಲ್ ತಿಂಗಳಿನಲ್ಲಿ ಮಿಥುನ ರಾಶಿಯವರ ಜಮೀನು ಮಾರಾಟ ನಡೆಯಬಹುದು. ರೈತರಿಗೆ ಒಳ್ಳೆಯ ಬೆಲೆ ಸಿಗುತ್ತದೆ, ಭೂಮಿಗೆ ಸಂಬಂಧಿಸಿದ ವಿಷಯದಲ್ಲಿ ಫಲ ಸಿಗುತ್ತದೆ. ಮಿಥುನ ರಾಶಿಯ ಅಕ್ಕ ತಂಗಿಯರ, ಅಣ್ಣ ತಮ್ಮಂದಿರ ಮಧ್ಯೆ ಭಿನ್ನಾಭಿಪ್ರಾಯ ಇದ್ದರೆ ಈ ತಿಂಗಳಿನಲ್ಲಿ ದೂರಾಗುತ್ತದೆ.

ಗಂಡ ಹೆಂಡತಿಯ ಭಾಂದವ್ಯ ಉತ್ತಮವಾಗಿರುತ್ತದೆ. ಅವಿವಾಹಿತರಿಗೆ ಒಳ್ಳೆಯ ಸಂಬಂಧ ಬರುತ್ತದೆ. ಸಂತಾನ ಬಯಸುವ ದಂಪತಿಗಳಿಗೆ ಈ ತಿಂಗಳು ಸಿಹಿ ಸುದ್ದಿ ಸಿಗಲಿದೆ. ಈ ತಿಂಗಳಿನಲ್ಲಿ ಮಿಥುನ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಮಿಥುನ ರಾಶಿಯವರ ಹಿರಿಯರಿಗೆ ನರ ಸಂಬಂಧಿ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಹೆಚ್ಚಿನ ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಬೇಕು, ಉಳಿದಂತೆ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಸಮಸ್ಯೆ ಬರುವುದಿಲ್ಲ. ಮಿಥುನ ರಾಶಿಯವರು ಮಹಾವಿಷ್ಣುವಿನ ದೇವಸ್ಥಾನಗಳಿಗೆ ಭೇಟಿ ನೀಡಬೇಕು, ಮಹಾವಿಷ್ಣುವನ್ನು ತುಳಸಿ ಮತ್ತು ಹೂಗಳಿಂದ ಅಲಂಕಾರ ಮಾಡಬೇಕು.

ಈ ರಾಶಿಯವರು ಅಕ್ಕಂದಿರು ಮತ್ತು ತಂಗಿಯರಿಗೆ ಅವರಿಗೆ ಬೇಕಾದ ವಸ್ತುಗಳನ್ನು ಕೊಡುವುದು, ವಿದ್ಯಾರ್ಥಿಗಳಿಗೆ ಸ್ಟಡಿ ಮಟೀರಿಯಲ್ ಕೊಡುವುದರಿಂದ ಒಳ್ಳೆಯದಾಗುತ್ತದೆ. ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಹಸಿರು ಬಣ್ಣದ ತರಕಾರಿಗಳನ್ನು ಕೊಡುವುದರಿಂದಲೂ ಒಳ್ಳೆಯದಾಗುತ್ತದೆ. ವಿಷ್ಣುವಿನ ಶ್ಲೋಕ ಪಠಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹಾಗೂ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ಮಿಥುನ ರಾಶಿಯವರಿಗೆ ತಪ್ಪದೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!