ನಾವು ಸಾಮಾನ್ಯವಾಗಿ ಶನಿ ದೇವರಿಗೆ ಹೆದರುತ್ತೇವೆ. ನಮ್ಮ ರಾಶಿಗೆ ಕೆಡುಕು ಮಾಡುತ್ತಾನಾ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೇವೆ. ಶನಿ ದೇವರು ಎರಡುವರೆ ವರ್ಷಕ್ಕೆ ಒಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತಾರೆ. ಶನಿಯ ಸ್ಥಾನ ಬದಲಾವಣೆಯಿಂದ ರಾಶಿಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಹಾಗಾದರೆ ಶನಿ ಸಂಚಾರದಿಂದ ಮೇಷ ರಾಶಿಯ ಮೇಲೆ ಕಂಡುಬರುವ ಪ್ರಭಾವವನ್ನು ಈ ಲೇಖನದಲ್ಲಿ ನೋಡೋಣ.

ಶನಿ ಬಹಳ ನಿಧಾನವಾಗಿ ಸಂಚಾರ ಮಾಡುವ ಗ್ರಹ, ಎರಡು ವರೆ ವರ್ಷಗಳಿಗೆ ಒಮ್ಮೆ ಶನಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತಾನೆ. ಎರಡು ವರೆ ವರ್ಷ ಒಂದು ರಾಶಿಯಲ್ಲಿ ಕಳೆದು ಮತ್ತೆ ಸಂಚಾರ ಮಾಡಲು ಶನಿ ಸಿದ್ಧನಾಗಿದ್ದಾನೆ. ಎಪ್ರಿಲ್ 29, 2022 ರಂದು ಮಧ್ಯಾಹ್ನ 12 ಗಂಟೆ 17 ನಿಮಿಷಕ್ಕೆ ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಸ್ಥಾನ ಪಲ್ಲಟ ಮಾಡುತ್ತಾನೆ. ಶನಿಯ ಸ್ಥಾನ ಪಲ್ಲಟದಿಂದ ಹನ್ನೆರಡು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಶನಿಯ ಸಂಚಾರದಿಂದ ಮೇಷ ರಾಶಿಗೆ ಒಳ್ಳೆಯದೆ ಆದರೂ ಕೆಲವು ಕೆಟ್ಟ ಫಲಗಳ ಸೂಚನೆ ಕೊಡುತ್ತಾನೆ ಶನಿ. ಮೇಷ ರಾಶಿಯವರು ಮಾಡುವ ಕೆಲಸದಲ್ಲಿ ತೊಡಕು ಬರುತ್ತದೆ.

ಮೇಷ ರಾಶಿಯವರಿಗೆ ಲಾಭ ಸಿಗುತ್ತದೆ, ಹಣದ ಹರಿವು ಹೆಚ್ಚಾಗುತ್ತದೆ. ಮೇಷ ರಾಶಿಯ ವಿದ್ಯಾರ್ಥಿಗಳಿಗೆ ಅಷ್ಟೇನೂ ಶುಭವಲ್ಲ. ಈ ರಾಶಿಯವರಿಗೆ ಧೈರ್ಯ ಕಡಿಮೆಯಾಗಿ ಅಪವಾದಗಳು ಹೆಚ್ಚಾಗುತ್ತದೆ. ವೃತ್ತಿರಂಗದಲ್ಲಿ ಏರಿಳಿತ ಹೆಚ್ಚು ಕಂಡುಬರುತ್ತದೆ, ಈ ಸಮಯದಲ್ಲಿ ಮಾನಕ್ಕೆ ತೊಂದರೆಯಾಗುವ ಸಾಧ್ಯತೆಗಳಿವೆ ಅವಮಾನವಾಗುತ್ತದೆ. ಮೇಷ ರಾಶಿಯವರ ಮೇಲೆ ಗಂಭೀರವಾದ ಆಪಾದನೆ ಬರುತ್ತದೆ. ಮೇಷ ರಾಶಿಯವರು ಸುಮ್ಮನೆ ತಮ್ಮ ಮೇಲೆ ಆಪಾದನೆ ಮಾಡುವವರಿಂದ ದೂರ ಇರಬೇಕು. ಸ್ನೇಹಿತರ ಸಹಕಾರ ಚೆನ್ನಾಗಿರುತ್ತದೆ. 80% ಶನಿಯ ಸಂಚಾರದಿಂದ ಶುಭ ಫಲವಿದೆ, 20% ಅಶುಭ ಫಲವಿದೆ. ಅಶುಭ ಫಲದಿಂದ ಜೀವನವನ್ನೆ ಬದಲಾಯಿಸುತ್ತದೆ.

ಮೇಷ ರಾಶಿಯಲ್ಲಿ ಜನಿಸಿದವರು ಪ್ರತಿ ಶನಿವಾರ ಹನುಮ ದೇವರಿಗೆ, ಪ್ರತಿ ಸೋಮವಾರ ಈಶ್ವರ ದೇವರಿಗೆ ಎಳ್ಳೆಣ್ಣೆಯನ್ನು ಅರ್ಪಿಸಬೇಕು. ಹಸಿದವರಿಗೆ ಊಟ ಹಾಕಬೇಕು, ಹಸಿದವರ ಹೊಟ್ಟೆಯಲ್ಲಿ ಶನಿ ಇರುತ್ತಾನೆ ಎಂಬುದು ನಂಬಿಕೆಯಾಗಿದೆ, ಹೊಟ್ಟೆ ತುಂಬಿಸುವುದರಿಂದ ಶನಿ ದೇವರನ್ನು ತೃಪ್ತಿ ಪಡಿಸಿದಂತೆ. ಹೀಗೆ ಮಾಡುವುದರಿಂದ ಶನಿ ದೇವರ ಕೆಟ್ಟ ಫಲ ಕಡಿಮೆಯಾಗಿ ಶುಭ ಫಲ ಹೆಚ್ಚಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ರಾಶಿ ಮೇಷ ಆಗಿದ್ದಲ್ಲಿ ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!