ಡಾಕ್ಟರ್ ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಒಬ್ಬರು ಇವರು 1958 ಸಪ್ಟೆಂಬರ್ 18 ರಂದು ಎಚ್ ಎಲ್ ನಾರಾಯಣ ರಾವ್ ಹಾಗೂ ಕಾಮಾಕ್ಷಮ್ಮದಂಪತಿಗಳ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದರು ಇವರು ಮೈಸೂರಿನ ಚಾಮುಂಡಿ ಪರ್ವ ಚಾಮುಂಡಿ ಪುರದಲ್ಲಿ ವಾಸಿಸುತ್ತಿದ್ದರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರು ಮತ್ತು ಬೆಂಗಳೂರಿನಲ್ಲಿ ಪದವಿಯನ್ನು ಪಡೆದಿದ್ದಾರೆ
ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ವಿಷ್ಣುವರ್ಧನ್ ಕೂಡ ಒಬ್ಬರು ಇವರು ನಾಗರಹಾವು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ಚಿತ್ರದ ಯಶಸ್ಸಿನ ನಂತರ ಪುಟ್ಟಣ್ಣ ಕಣಗಾಲ್ ಅವರು ಇವರಿಗೆ ವಿಷ್ಣುವರ್ಧನ್ ಎಂದು ಹೆಸರಿಡುತ್ತಾರೆ ಕನ್ನಡವಲ್ಲದೆ ತೆಲುಗು ಹಿಂದಿ ಮಲಯಾಳಂ ಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ನಂತರ ಭಾರತಿಯವರನ್ನು ವರಿಸಿ ಅವರ ಜೊತೆ ತಮ್ಮ ದಾಂಪತ್ಯ ಜೀವನವನ್ನು ನಡೆಸಿದ್ದಾರೆ. ಕನ್ನಡ ಚಿತ್ರದಲ್ಲಿ ನಾಯಕನಟನಾಗಿ ಗಾಯಕರಾಗಿಯೂ ಇವರು ತಮ್ಮನ್ನು ತೊಡಗಿಸಿಕೊಂಡಿದ್ದರು ಅತಿ ಹೆಚ್ಚು ದ್ವಿಪಾತ್ರದಲ್ಲಿ ಅಭಿನಯ ಮಾಡಿರುವ ಹೆಗ್ಗಳಿಕೆ ಇವರದಾಗಿದೆ ಕೀರ್ತಿ ಮತ್ತು ಚಂದನ ಎಂಬ ಇಬ್ಬರು ಪುತ್ರಿಯರಿದ್ದು ಕನ್ನಡ ನಟ ಅನಿರುದ್ದ ಅವರ ಅಳಿಯನಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮ ಅಪಾರ ಕೊಡುಗೆಯನ್ನು ನೀಡಿರುವ ವಿಷ್ಣುವರ್ಧನ್ ಅವರು ಡಿಸೆಂಬರ್ 30 2009 ರಲ್ಲಿ ಅಸುನೀಗಿದ್ದಾರೆ.
ಇತ್ತೀಚೆಗೆ ನಡೆದ ವಿಷ್ಣುವರ್ಧನ್ ಅವರ ಕುರಿತಾದ ಕಾರ್ಯಕ್ರಮ ಒಂದರಲ್ಲಿ ನಟ ದೊಡ್ಡಣ್ಣ ಅವರು ವಿಷ್ಣುದಾದ ಅವರ ಬಗ್ಗೆ ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ. ವಿಷ್ಣು ಅವರು ಸಾತ್ವಿಕ ಹಾಗೂ ಅಂತ್ಯಂತ ನಿಷ್ಠೆ ಶ್ರದ್ಧೆ ಭಕ್ತಿ ಇರುವ ವ್ಯಕ್ತಿಯಾಗಿದ್ದು ದೇವರಲ್ಲಿ ಅಪಾರ ನಂಬಿಕೆ ಇಟ್ಟಿರುವ ದೈವಿಕ ಮನುಷ್ಯ ಎಂದರೆ ಸುಳ್ಳಲ್ಲ. ಯಾವುದೇ ಚಿತ್ರದಲ್ಲಿ ನಟನೆ ಮಾಡುವ ಮೊದಲು ದೇವರಿಗೆ ಸಂಕಲ್ಪ ಮಾಡಿ ನಂತರ ಹೋಗುತಿದ್ದರು ಅವರು ಆಧ್ಯಾತ್ಮಿಕ ಬಗ್ಗೆ ಆಳವಾಗಿ ಯೋಚಿಸುವ ವ್ಯಕ್ತಿ. ಇನ್ನು ಸಮಯ ಪರಿಪಾಲನೆ ಅಲ್ಲಿ ಎತ್ತಿದ ಕೈ ಮತ್ತು ಶಿಸ್ತಿನ ಸಿಪಾಯಿ ಎಂದರೆ ತಪ್ಪಿಲ್ಲ.
ಒಮ್ಮೆ ವಿಷ್ಣು ಅವರು ದೇವಸ್ಥಾನದಲ್ಲಿ ಪೂಜೆ ಇಟ್ಟುಕೊಂಡಿದ್ದರು ಪೂಜಾ ಸಮಯ ಬೆಳಿಗ್ಗೆ 6 ಗಂಟೆಗೆ ದೊಡ್ಡಣ್ಣ ಅವರು ಆ ಪೂಜೆಗೆ ಹಾಜರು ಇದ್ದು ಕೊನೆಗೆ ಪೂಜೆ ಸಂಪೂರ್ಣ ಆದ ಮೇಲೆ ಪೂಜೆಯ ಪ್ರಸಾದವನ್ನು ವಿಷ್ಣುಗೆ ಅರ್ಚಕರು ನೀಡಲಿಕ್ಕೆ ಬಂದಾಗ ಅದುನ್ನು ನಿರಾಕರಿಸಿ ದೊಡ್ಡು ನೀನೇ ಸ್ವೀಕರಿಸು ಈ ಪೂಜೆ ನಿನಗಾಗಿಯೇ ಮಾಡಿದ್ದು ಎನ್ನುತ್ತಾರೆ ಕೊನೆಗೆ ದೊಡ್ಡಣ್ಣ ಅವರು ಹೋಮದ ಬಗ್ಗೆ ತಮಗೆ ಅನಿಸಿದನ್ನು ಹೇಳುತ್ತಾರೆ ಕೊನೆಗೆ ನೀನು ಹೇಳಿದ್ದು ಸರಿನ ಎಂದು ದೊಡ್ಡಣ್ಣ ಅವರಲ್ಲಿ ಪ್ರಶ್ನಿಸುತ್ತಾರೆ. ಕೊನೆಗೆ ಯಾಕೆ ಹಾಗೆ ಎಂದು ಕೇಳ್ದಾಗ ಸಮವೆ ಉತ್ತರ ನೀಡುವುದು ಸ್ವಲ್ಪ ದಿನ ಕಾಯಬೇಕು ದೈವ ರಹಸ್ಯ ಹಾಗೆಲ ಹೇಳಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಸುಮಾರು 29 ಚಿತ್ರದಲ್ಲಿ ದೊಡ್ಡಣ್ಣ ವಿಷ್ಣು ಅವರ ಜೊತೆ ನಟನೆ ಮಾಡಿದರೆ ನಂತ್ರ 2 ವರ್ಷ ತಮ್ಮ ಜೀವನ ಬಿಝಿ ಜೀವನ ಒಟ್ಟಿಗೆ ಚಿತ್ರದಲ್ಲಿ ಅಭಿನಯ ಮಾಡಲು ಸಾಧ್ಯವಾಗಲಿಲ್ಲ.
ಕೊನೆಗೆ ಒಮ್ಮೆ ಎಸ್ ನಾರಾಯಣ್ ಅವರು ಒಂದು ಸಿನಿಮಾದ ಕಥೆಯ ಅನ್ನು ದೊಡ್ಡಣ್ಣ ಅವರ್ಗೆ ವಿವರಿಸಿದರು ಅದರಲ್ಲಿ ಮೀಸೆ ಮಾಮ ಪಾತ್ರವನ್ನು ದೊಡ್ಡಣ್ಣ ಅವರು ಮತ್ತು ಮಿಲ್ಟ್ರಿ ಪಾತ್ರವನ್ನು ಮುಖ್ಯ ಮಂತ್ರಿ ಚಂದ್ರು ಅವರು ಮಾಡುತ್ತಾರೆ ಇನ್ನು ನಾಯಕ ನಟನಾಗಿ ವಿಷ್ಣುವರ್ಧನ್ ಅವರು ನಟನೆ ಮಾಡಲಿದ್ದಾರೆ ಎಂದು ನಾರಾಯಣ ಅವರು ಹೇಳುತ್ತಾರೆ ಎಚ್ ಡಿ ಕುಮಾರಸ್ವಾಮಿ ನಿರ್ಮಪಕ ರಾಗಿ ಮೂಡಿ ಬಂದ ಸಿನಿಮಾ ಸೂರ್ಯವಂಶ ಅದರಲ್ಲಿ ವಿಷ್ಣು ಅವ್ರು ದ್ವಿಪಾತ್ರದಲ್ಲಿ ಅಭಿನಯ ಮಾಡಿದ್ದಾರೆ ಇನ್ನೂ 25 ವಾರಗಳ ಕಾಲ ಚಿತ್ರ ಮಂದಿರದಲ್ಲಿ ನೀರ್ಬೆಡೆ ಇಂದ ಜನ ಮನ್ನಣೆ ಗಳಿಸಿರುವ ಚಿತ್ರ.
ಚಿತ್ರೀಕರಣ ವೇಳೆಯಲ್ಲಿ ಸಣ್ಣ ತುಣುಕನ್ನು ಹೇಳಿದಾರೆ ವಿಷ್ಣು ಅವರು ಸಮಯ ಪರಿಪಾಲನೆ ಬದ್ಧರಾಗಿರುತ್ತಾರೆ
ಒಮ್ಮೆ ನಿಮಿಷಾಂಬ ದೇವಸ್ತಾನದ ಆವರಣದಲ್ಲಿ ಚಿತ್ರೀಕರಣ ಇದ್ದು ಬೆಳಿಗ್ಗೆ 7 ಒಳಗಡೆ ಎಲ್ಲರೂ ಶೂಟಿಂಗ್ ಅಲ್ಲಿ ಹಾಜರಿದ್ದರು ಎಸ್ ನಾರಾಯಣ್ ಅವರ ಒಂದು ಹವ್ಯಾಸ ಯಾವುದೇ ಸಿನಿಮಾ ಮಾರ್ನಿಂಗ್ 7 ಗಂಟೆಗೆ ಆರಂಭಿಸುವುದು ಹಾಗೆ ಅವತ್ತು 9 10 11 ಗಂಟೆಯಾದರೂ ಶೂಟಿಂಗ್ ಶುರು ಮಾಡಿಲ್ಲ ಯಾಕೆ ಅಂತ ಕೇಳಿದಾಗ ಇನ್ನೂ ನೂರು ರಿಂದ ನೂರೈವತ್ತು ಹೀರೋ ಬರ್ತಾ ಇದಾರೆ ಅವರಿಗೆ ಕಾಯ್ತಾ ಇದೀನಿ ಎಂದು ಉತ್ತರಿಸುತ್ತಾರೆ ಕೊನೆಗೆ ಯಾರೆಂದು ನೋಡಿದಾಗ ಒಂದು ಟೆಂಪೊ ಸುಮಾರು ಬಾತುಕೋಳಿ ಇಳಿಸುತ ಒಂದು ಮಹಿಳೆಯು ಬರುತ್ತಾರೆ ಆವಾಗ ಎಲ್ಲರಿಗೂ ಅರ್ಥ ಆಗಿದ್ದು ಹೀರೋ ಅಂದ್ರೆ ಬಾತುಕೋಳಿ ಎಂದು ಗೊತ್ತಾಯ್ತು. ಇನ್ನೂ ದೊಡ್ಡಣ್ಣ ಅವರು ತಮ್ಮ ಅಳಿಯನ ಪರವಾಗಿ ಚಿತ್ರದುರ್ಗದ 358 ಹಳ್ಳಿಗಳಿಗೆ ಪ್ರಚಾರ ಮಾಡಲು ಹೋದಾಗ ಅಲ್ಲಿ ಜನರು ದೊಡ್ಡಣ್ಣ ಅವರಿಗೆ ಸೂರ್ಯವಂಶದ ಯಾವುದಾದರೂ ಒಂದು ಡೈಲಾಗ್ ಹೇಳಿ ನಾವು ನಿಮ್ಮ ಅಳಿಯನಿಗೆ ಓಟು ಹಾಕ್ತೀವಿ ಎಂದು ಹೇಳ್ತಾ ಇದ್ದರು ಎಂದು ನೆನಪಿಸಿ ಕೊಳ್ತಾರೆ
ಸೂರ್ಯವಂಶದ ಚಿತ್ರೀಕರಣ ಸಲುವಾಗಿ ಸುಮಾರು 380 km ಅಷ್ಟು ಜರ್ನಿ ಮಾಡುವ ಸಂದರ್ಭದಲ್ಲಿ ದೊಡ್ಡಣ್ಣ ಅವರು ವಿಷ್ಣು ಅವರ ಜೊತೆ ಪ್ರಯಾಣ ಮಾಡಬೇಕಾಗುತ್ತದೆ ಆಗ ವಿಷ್ಣು ಅವರು ದೊಡ್ಡ ಬೆಳಿಗ್ಗೆ 6 ಗಂಟೆಗೆ ತಯಾರು ಆಗಿರಬೇಕು ಲೇಟ್ ಆದ್ರೆ ನಿಂಗೆ ಕ್ಷಮೆ ಇಲ್ಲ ಹಾಗೂ ಹೀಗೂ ಬೆಳಿಗ್ಗೆ 5 ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ ವಿಷ್ಣು ಅವರ ಜೊತೆ ಹೊರಡುತ್ತಾರೆ. ಅತಿಯಾದ ವೇಗವನ್ನು ವಿಷ್ಣು ಅವರು ಇಷ್ಟವಿಲ್ಲ ಅವರ ಚಾಲಕ ರಾಧ್ ಅವರು ಸಾರ್ ನೀವು ಕೂತ್ಕೊಳ್ಳಿ ಅಪ್ಪಾಜಿ ಜೊತೆ ನಿಮ್ಗೆ ಸಮಯ ಹೋಗಿದ್ದೆ ತಿಳಿಯುವುದಿಲ್ಲ ಎಂದು ಒಂದು ಸಿ ಡಿ ಯನ್ನು ಹಾಕಿ ಅದರಲ್ಲಿ ಬರುತಿದ್ದ ಮಾತುನ್ನು ಸ್ಪಷ್ಟವಾಗಿ ಕೇಳಿಕೊಂಡು ಪ್ರಯಾಣ ಮಾಡಿ ಎಂದು ಸಲಹೆ ನೀಡುತ್ತಾರೆ ಅದನ್ನ ಆಲಿಸುತ್ತ ತಮಿಳುನಾಡಿನಲ್ಲಿ ಇಳಿಯುತ್ತವೆ ಸಮಯ ಸರಿದದ್ದೇ ತಿಳಿಯಲಿಲ್ಲ ಇದರಿಂದಲೇ ಗೊತ್ತಾಗುತ್ತದೆ ವಿಷ್ಣು ಅವರು ಒಬ್ಬ ಸಾತ್ವಿಕ ವ್ಯಕ್ತಿ ಎಂದು ದೊಡ್ಡಣ್ಣ ಅವರು ಹೇಳಿಕೊಂಡಿದ್ದಾರೆ.