ಶೇಂಗಾ ಬೀಜವನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ಬಾದಾಮಿ, ಏಕೆಂದರೆ ಇದರಲ್ಲಿರುವ ಪೌಷ್ಟಿಕ ಗುಣಗಳು ಬಾದಾಮಿಗೇನೂ ಕಡಿಮೆಯಿಲ್ಲ ಎಂದು. ಬಡವರು, ಏಕೆಂದರೆ ಇದರ ಬೆಲೆ ಅತ್ಯಂತ ಅಗ್ಗ. ಶೇಂಗಾ ಬೀಜಕ್ಕೆ ನಮ್ಮ ಕರ್ನಾಟಕದಲ್ಲಿಯೇ ಹಲವಾರು ಹೆಸರುಗಳಿವೆ. ಇದರ ಬಗ್ಗೆ ಹೆಚ್ಚು ಅರಿಯದವರಿಗೆ ಇದು ಬಸ್ ಸ್ಟ್ಯಾಂಡುಗಳಲ್ಲಿ ಕೂಗುತ್ತಾ ಹುರಿದ ಶೇಂಗಾವನ್ನು ಮಾರುವವರಿಂದ ನೀಡಲ್ಪಟ್ಟ ಹೆಸರು ‘ಟೈಂ ಪಾಸ್ ಕಡ್ಲೆ ಕಾಯಿ’ ಅಂಗಡಿಗಳಲ್ಲಿ ಕಡ್ಲೆಬೀಜ, ಕನ್ನಡ ಪುಸ್ತಕಗಳಲ್ಲಿ ಇದಕ್ಕೆ ಹೆಸರು ನೆಲಗಡಲೆ ಬರೆಯ ಕರ್ನಾಟದಲ್ಲಿಯೇ ಹೀಗಿದ್ದರೆ ವಿಶ್ವಮಟ್ಟದಲ್ಲಿ ಇದಕ್ಕೆ ಇನ್ನೆಷ್ಟು ಹೆಸರಿರಬಹುದೋ ಗೊತ್ತಿಲ್ಲ. ಆದರೆ ವಿಶ್ವಮಟ್ಟದಲ್ಲಿ ಪೀನಟ್ಸ್ ಎಂಬ ಹೆಸರಿನಿಂದ ಶೇಂಗಾ ಪ್ರಸಿದ್ಧವಾಗಿದೆ. ಭಾರತದಾದ್ಯಂತ ಈ ಬೀಜವನ್ನು ‘ಮೂಂಗ್ ಫಲಿ’ ಎಂದು ಗುರುತಿಸಲಾಗುತ್ತದೆ. ಈ ಶೇಂಗಾ ಬೀಜಗಳನ್ನು ಹಲವಾರು ವಿಧಗಳಲ್ಲಿ ಸೇವಿಸಲಾಗುತ್ತದೆ.

ಶೇಂಗಾ ಬೀಜಗಳು ಹಲವಾರು ರೀತಿಯಲ್ಲಿ ಆರೋಗ್ಯಕರವಾಗಿದೆ. ಇದರ ಪ್ರಯೋಜನಗಳನ್ನು ಪಡೆಯಲು ಪ್ರತಿ ಎರಡು ಮೂರು ದಿನಕ್ಕೊಮ್ಮೆ ಹತ್ತರಿಂದ ಹದಿನೈದು ನೆನೆಸಿದ ಬೀಜಗಳನ್ನು ಸೇವಿಸಿದರೂ ಸಾಕಾಗುತ್ತದೆ. ದೇಹಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾದ ಪ್ರೋಟೀನ್, ಕೊಬ್ಬು, ಜೀವಸತ್ವಗಳು, ಫೈಬರ್, ಆಂಟಿಆಕ್ಸಿಡೆಂಟ್‌ಗಳು ಮತ್ತು ಕ್ಯಾಲ್ಸಿಯಂನಂತಹ ಅಗತ್ಯವಾದ ಖನಿಜಗಳು ಕಡಲೆಕಾಯಿಯಲ್ಲಿ ಕಂಡುಬರುತ್ತವೆ.

ನೆನೆಸಿಟ್ಟ ಶೇಂಗಾ ಸೇವನೆಯಿಂದ ರಕ್ತ ಸಂಚಲನೆ ಸರಾಗವಾಗಲಿದ್ದು, ಹೃದಯ ಸಂಬಂಧಿ ಖಾಯಿಲೆಯಿಂದ ದೂರವಿರಿಸುತ್ತದೆ. ಮಧುಮೇಹದಿಂದ ದೂರವಿರಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ಸೇವಿಸಿ. ಇದರಿಂದ ಬ್ಲಡ್ ಶುಗರ್ ಲೆವಲ್ ಕಂಟ್ರೋಲಿನಲ್ಲಿರುತ್ತದೆ. ನೆನೆಸಿಟ್ಟ ಶೇಂಗಾ ಸೇವನೆಯಿಂದ ಸಂಧಿವಾತದ ಸಮಸ್ಯೆ ದೂರವಾಗುತ್ತದೆ. ಅಲ್ಲದೇ, ಮೂಳೆ ಗಟ್ಟಿಯಾಗಿರುತ್ತದೆ. ವಿದ್ಯಾರ್ಥಿಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.

ಬಡವರ ಬಾದಾಮಿ ಅಂತಾನೇ ಪ್ರಚಲಿತವಾಗಿರೋ ಶೇಂಗಾ ಬೀಜದ ಸೇವನೆ ಆರೋಗ್ಯಕ್ಕೆ ತುಂಬಾನೇ ಲಾಭಕಾರಿ, ಅದರಲ್ಲೂ ಚಳಿಗಾಲದಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ತಿನ್ನುವುದು ಉತ್ತಮ. ಪಚನಕ್ರಿಯೆ ಸರಿಯಾಗಿರಬೇಕು, ಹೊಟ್ಟೆಗೆ ಸಂಬಂಧಿಸಿದ ರೋಗಗಳು ಬಾಧಿಸಬಾರದು ಎಂದಾದರೆ ನೆನೆಸಿಟ್ಟ ಶೇಂಗಾ ಕಾಳು ಸೇವಿಸಿ. ಚಳಿಗಾಲದಲ್ಲಿ ನೆನೆಸಿಟ್ಟ ಶೇಂಗಾ ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಉಷ್ಣತೆ ದೊರಕುವುದಲ್ಲದೇ, ಶಕ್ತಿಯುತವಾಗಿರಲು ಸಹಾಯವಾಗುತ್ತದೆ.

ಜಿಮ್‌ಗೆ ಹೋಗುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ಬೀಜದ ಸೇವನೆ ಮಾಡಬೇಕು. ಇದರಲ್ಲಿ ಪ್ರೋಟಿನ್ ಮತ್ತು ಕ್ಯಾಲ್ಸಿಯಂ ಇರುವುದರಿಂದ ಬಾಡಿ ಬಿಲ್ಡ್ ಮಾಡುವಲ್ಲಿ ಸಹಾಯವಾಗುತ್ತದೆ. ಶೇಂಗಾ ಕಾಳಿನಲ್ಲಿ ಒಮೇಗಾ-3 ಇರುವುದರಿಂದ ಇದರ ಸೇವನೆ ತ್ವಚೆಯ ಆರೋಗ್ಯ ಕಾಪಾಡುವುದಕ್ಕೆ ಸಹಕಾರಿಯಾಗಿದೆ. ಪುರುಷರು ಮತ್ತು ಮಹಿಳೆಯರಲ್ಲಿ ಲೈಂ ಗಿಕ ಹಾರ್ಮೋನುಗಳು ಪ್ರತಿದಿನ ಕಡಲೆಕಾಯಿಯನ್ನು ತಿನ್ನುವುದರಿಂದ ಸಮತೋಲನಗೊಳ್ಳುತ್ತದೆ. ಇದು ನಿಮ್ಮ ಲೈಂ ಗಿಕ ಜೀವನವನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತದೆ. ನೆನಪಿರಲಿ, ಪ್ರತಿನಿತ್ಯ 15ರಿಂದ 20 ನೆನೆಸಿಟ್ಟ ಶೇಂಗಾ ಬೀಜಗಳನ್ನ ಸೇವಿಸಿ. ಅದಕ್ಕೂ ಹೆಚ್ಚು ಸೇವಿಸದಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!