ಕೆಲವೊಮ್ಮೆ ನೀವು ಇಂಥ ವಿಚಾರಗಳನ್ನು ತಿಳಿದಾಗ ಏನಿದು ವಿಚಿತ್ರ ಎಂಬುದಾಗಿ ಅಂದುಕೊಳ್ಳಬಹುದು, ಆದ್ರೆ ಇದರ ಹಿಂದೆ ತನ್ನದೆಯಾದ ವಿಶೇಷತೆ ಹಾಗು ಉದ್ದೇಶವಿರುತ್ತದೆ. ಅದೇ ನಿಟ್ಟಿನಲ್ಲಿ ಇಲ್ಲೊಬ್ಬ ನಿವೃತ್ತ ಪ್ರೊಫೆಸರ್ ಡಾ. ಹೇಮಾ ಸಾಣೆ ಬರೋಬ್ಬರಿ ೭೯ ರಿಂದ ೮೦ ವರ್ಷ ತಮ್ಮ ಮನೆಯಲ್ಲಿ ವಿದ್ಯಚ್ಛಕ್ತಿಯಿಲ್ಲದೇ ಜೀವನ ಪೂರೈಸಿದ್ದಾರೆ.
ಕೆಲವೊಮ್ಮೆ ಇವರ ಈ ರೀತಿಯ ಬದುಕನ್ನು ನೋಡಿ ಜನ ಇವರನ್ನು ಹುಚ್ಚಿ ದಡ್ಡಿ ಎಂಬುದಾಗಿ ಎಲ್ಲ ಕರೆದಿದ್ದಾರೆ, ಆದ್ರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದ ಇವರು ತಾನು ಹೇಗೆ ಬದುಕಬೇಕು ಅನ್ನೋದನ್ನ ನಿರ್ಧರಿಸಿ ಯಾವುದೇ ವಿದ್ಯುತ್ ಇಲ್ಲದೆ ಆಧುನಿಕತೆಯ ಅವಲಂಬಿತರಾಗದೆ ಜೀವನ ಸವೆದಿದ್ದರೆ. ಪುಣೆಯ ಸಾವಿತ್ರಿಬಾಯಿ ಪುಲೆ ವಿವಿಯಲ್ಲಿ ಸಸ್ಯಶಾಸ್ತ್ರ ವಿಭಾಗದಲ್ಲಿ ಪಿಎಚ್ ಡಿ ಮಾಡಿರುವ ಹೇಮಾ ಸಾಣೆ, ಪುಣೆಯ ಬುಧವಾರಪೇಟೆಯ ಸಣ್ಣ ಮನೆಯಲ್ಲಿ ವಾಸವಾಗಿದ್ದಾರೆ.
ಇವರ ಚಿಕ್ಕ ಮನೆಯಲ್ಲಿ ಸಾಕಿರುವ ನಾಯಿ, ಎರಡು ಬೆಕ್ಕು, ಮುಂಗುಸಿ ಹಾಗೂ ಪಕ್ಷಿಗಳನ್ನೂ ಕಾಣಬಹುದು, ಇನ್ನು ಇಂತಹ ಯುಗದಲ್ಲಿ ಈ ರೀತಿಯ ಬದುಕನ್ನು ಕಟ್ಟಿಕೊಂಡಂತಹ ಈ ಮಹಿಳೆ ನಿಜಕ್ಕೂ ವಿಶೇಷ ಅಲ್ವೇ? ನನ್ನ ಈ ಬದುಕಿನ ಬಗ್ಗೆ ಯಾರಿಗೂ ಕೂಡ ಸಂದೇಶ ನೀಡಲು ಇಷ್ಟ ಪಡುವುದಿಲ್ಲ ಎಂಬುದಾಗಿ ಈ ಮಹಿಳೆ ಹೇಳಿದ್ದಾರೆ.