ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸಿ ಪೂಜಿಸುತ್ತಾರೆ. ತುಳಸಿ ಗಿಡವನ್ನು ಬೆಳಗ್ಗೆ ಸ್ನಾನ ಮಾಡಿ ಭಕ್ತಿಯಿಂದ ಪೂಜಿಸುವುದರಿಂದ ಒಳ್ಳೆಯದಾಗುತ್ತದೆ. ತುಳಸಿ ಗಿಡವನ್ನು ದೇವರಿಗೆ ಹೋಲಿಸಲಾಗುತ್ತದೆ. ತುಳಸಿ ಗಿಡವನ್ನು ಕೆಲವು ಔಷಧಿಗಳಲ್ಲಿ ಸಹ ಬಳಸಲಾಗುತ್ತದೆ. ತುಳಸಿ ಗಿಡದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಪ್ರತಿಯೊಂದು ಮನೆಯಲ್ಲೂ ತುಳಸಿ ಗಿಡ ಇರುತ್ತದೆ. ಕೆಲವರು ಮನೆಯ ಅಂಗಳದಲ್ಲಿ ತುಳಸಿ ಗಿಡಗಳನ್ನು ನೆಟ್ಟರೆ, ಇನ್ನು ಕೆಲವರು ತಾರಸಿಯ ಮೇಲೆ ತುಳಸಿ ಗಿಡ ಇಡುವುದು ಶ್ರೇಷ್ಠ ಎಂದು ನಂಬುತ್ತಾರೆ. ಆದರೆ ತುಳಸಿ ಭವಿಷ್ಯದ ಘಟನೆಗಳನ್ನು ಸೂಚಿಸುತ್ತದೆ ಎಂಬುದನ್ನು ಕೆಲವರು ನಂಬುತ್ತಾರೆ. ಮನೆಯಲ್ಲಿ ತುಳಸಿ ಗಿಡ ಪದೆ ಪದೆ ಒಣಗುತ್ತಿದ್ದರೆ ಅದು ನಿಮ್ಮ ಮನೆಯಲ್ಲಿ ಮುಂದೆ ನಡೆಯಲಿರುವ ಘಟನೆಯ ಮುನ್ಸೂಚನೆ ಆಗಿರಬಹುದು. ತುಳಸಿ ಗಿಡ ಮತ್ತೆ ಮತ್ತೆ ಒಣಗುತ್ತಿದ್ದರೆ ಅದರ ಹಿಂದಿನ ಕಾರಣಗಳೇನು ಎಂಬುದನ್ನು ಎಲ್ಲರೂ ತಿಳಿದಿರಲೆಬೇಕು.

ಮುಂಬರುವ ಘಟನೆಗಳ ಬಗ್ಗೆ ತುಳಸಿ ಗಿಡ ಹೇಗೆ ಸುಳಿವನ್ನು ನೀಡಬಹುದು ಎಂಬ ಬಗ್ಗೆಯೂ ತಿಳಿಯಬೇಕು. ತಾರಸಿಯ ಮೇಲೆ ತುಳಸಿ ಗಿಡ ನೆಟ್ಟರೆ ಬುಧ ಬಲಹೀನನಾಗಬಹುದು ಎಂಬ ನಂಬಿಕೆಯೂ ಇದೆ. ಮತ್ತೊಂದೆಡೆ ಬುಧ ಗ್ರಹವು ಹಣ ಮತ್ತು ವ್ಯವಹಾರ ಎರಡಕ್ಕೂ ಅಧಿಪತಿ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವ್ಯಕ್ತಿ ಬುಧನ ಪ್ರಭಾವಿತವಾಗಿದ್ದರೆ ಅವನ ಆರ್ಥಿಕ ಸ್ಥಿತಿಯು ಹದಗೆಡಬಹುದು. ಕೆಲವರ ಮನೆಯಲ್ಲಿ ತುಳಸಿ ಗಿಡ ಇದ್ದಕ್ಕಿದ್ದಂತೆ ಒಣಗುತ್ತದೆ. ಇದು ಬುಧ ಗ್ರಹಕ್ಕೂ ಸಂಬಂಧಿಸಿದೆ. ಇದರರ್ಥ ಭವಿಷ್ಯದಲ್ಲಿ ಬುಧಕ್ಕೆ ಸಂಬಂಧಿಸಿರುವ ಕೆಲವು ಸಮಸ್ಯೆಗಳು ಬರಲಿವೆ ಎಂದೂ ಇರಬಹುದು.

ಯಾರದ್ದಾದರೂ ಮನೆಯಲ್ಲಿ ತುಳಸಿ ಗಿಡ ಪದೇ ಪದೇ ಒಣಗುತ್ತಿದ್ದರೆ ಅಂತಹ ಮನೆಯಲ್ಲಿ ಪಿತೃ ದೋಷವಿದೆ ಎಂದರ್ಥ. ಪಿತೃ ದೋಷ ಶುರುವಾಗಿದೆ ಎಂದರೆ ಮನೆಯ ಹಿರಿಯರಿಗೆ ನೆಮ್ಮದಿ ಇಲ್ಲ ಅಥವಾ ಯಾವುದೊ ವಿಷಯಕ್ಕೆ ಮನಸ್ತಾಪವಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ನಿಮ್ಮ ಮನೆಯಲ್ಲಿ ಇರುವ ತುಳಸಿ ಗಿಡದ ಬಳಿ ಹಕ್ಕಿ ಅಥವಾ ಪಾರಿವಾಳ ಗೂಡು ಕಟ್ಟಿದ್ದರೆ ನಿಮ್ಮ ಜಾತಕದಲ್ಲಿ ಕೇತುವಿನ ಸ್ಥಾನ ಕೆಟ್ಟಿರಬಹುದು ಎಂದು ಹೇಳಲಾಗುತ್ತದೆ. ಈ ರೀತಿ ತುಳಸಿ ಗಿಡದ ಸ್ಥಿತಿಯ ಆಧಾರದ ಮೇಲೆ ನಮ್ಮ ಮುಂದಿನ ದಿನಗಳ ಭವಿಷ್ಯವನ್ನು ತಿಳಿದುಕೊಳ್ಳಬಹುದು. ತುಳಸಿ ಗಿಡವನ್ನು ಪ್ರತಿದಿನ ಬೆಳಗ್ಗೆ ಭಕ್ತಿಯಿಂದ ಪೂಜೆ ಸಲ್ಲಿಸಬೇಕು. ತುಳಸಿ ಗಿಡದಲ್ಲಿ ಲಕ್ಷ್ಮೀದೇವಿ ವಾಸಮಾಡುತ್ತಾಳೆ ಎಂಬ ನಂಬಿಕೆಯಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಪ್ರತಿದಿನ ತಪ್ಪದೆ ತುಳಸಿ ಗಿಡವನ್ನು ಪೂಜಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!