ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಚಿಕ್ಕ ವಯಸ್ಸಿನಲ್ಲಿ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡು ಕಷ್ಟದಿಂದ ಜೀವನ ನಡೆಸಿದರು. ನಿರೂಪಣೆಯಿಂದ ಜೀವನವನ್ನು ಕಟ್ಟಿಕೊಂಡ ಅನುಶ್ರೀ ಅವರು ಸಿನಿಮಾದಲ್ಲಿಯೂ ನಟಿಸುತ್ತಾರೆ. ಅವರ ಸಿನಿಮಾ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಕನ್ನಡದ ಬಹುತೇಕ ಕಾರ್ಯಕ್ರಮಗಳ ನಿರೂಪಕಿಯಾಗಿ ಅನುಶ್ರಿ ಅವರು ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಇವರು ಪಡೆಯುವ ಸಂಭಾವನೆಯೂ ಹೆಚ್ಚಾಗಿಯೆ ಇರುತ್ತದೆ. ಒಂದು ಕಾರ್ಯಕ್ರಮವು ಚೆನ್ನಾಗಿ ಮೂಡಿ ಬರಬೇಕಾದರೆ ಅದಕ್ಕೆ ನಿರೂಪಣೆಯೂ ಅಷ್ಟೆ ಮುಖ್ಯವಾಗಿರುತ್ತದೆ. ಅಂದಹಾಗೆ ಚಿಕ್ಕಬಳ್ಳಾಪುರದ ಅಗಲಗುರ್ಕಿ ಗ್ರಾಮದಲ್ಲಿ ಆರ್ ಆರ್ ಆರ್ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆಯಿತು. ಶನಿವಾರ ಮಾರ್ಚ್ 19ರಂದು ನಡೆದಿದ್ದು ಈ ಕಾರ್ಯಕ್ರಮವು ಅನುಶ್ರಿ ಅವರ ನಿರೂಪಣೆಯಲ್ಲಿ ಚೆನ್ನಾಗಿ ಮೂಡಿ ಬಂದಿತು.
ಈ ಅದ್ದೂರಿ ಕಾರ್ಯಕ್ರಮದಲ್ಲಿ ಟಾಲಿವುಡ್ ನಟ ಜ್ಯೂನಿಯರ್ ಎನ್ ಟಿಆರ್ ಅವರು ಕನ್ನಡದಲ್ಲಿಯೆ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದರು. ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮದ ವೇದಿಕೆಯಲ್ಲಿ ಲಕ್ಷಾಂತರ ಜನರ ಎದುರಿನಲ್ಲಿ ಮೈಕ್ ಹಿಡಿದ ಅವರು ಕನ್ನಡದಲ್ಲಿಯೆ ಮಾತು ಶುರು ಮಾಡಿದ ಜ್ಯೂನಿಯರ್ ಎನ್ ಟಿ ಆರ್ ಎಲ್ಲರಿಗೂ ನಮಸ್ಕಾರ, ಕರ್ನಾಟಕಕ್ಕೆ ನಮಸ್ಕಾರ, ಚಿಕ್ಕಬಳ್ಳಾಪುರದವರಿಗೆ ನಮಸ್ಕಾರ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ. ಚಿಕ್ಕಬಳ್ಳಾಪುರದ ಮಗನಾದ, ಆರೋಗ್ಯ ಸಚಿವ, ನನ್ನ ಸ್ನೇಹಿತ ಅಲ್ಲದೆ ನನ್ನ ಅಣ್ಣನ ರೀತಿ ಇರುವ ಸುಧಾಕರ್ ಅವರಿಗೆ ಧನ್ಯವಾದಗಳು. ನಮ್ಮಣ್ಣ ಶಿವರಾಜ್ಕುಮಾರ್ ಅವರಿಗೆ ಧನ್ಯವಾದಗಳು ಎಂದು ಹೇಳಿ ಅಲ್ಲಿ ನೆರೆದಿದ್ದ ಎಲ್ಲರ ಮನಸ್ಸನ್ನು ಗೆದ್ದು ಕೊಂಡರು.
ಸ್ಟಾರ್ ನಟರ ಸಿನಿಮಾ ಎಂದರೆ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿ ಸಿನಿಮಾ ಮಾಡುತ್ತಾರೆ. ಸಿನಿಮಾ ಪ್ರಚಾರಕ್ಕಾಗಿ ಪ್ರೀ ರಿಲೀಸ್ ಇವೆಂಟ್ ಕೂಡ ಮಾಡುತ್ತಾರೆ. ಅದರಂತೆ ಆರ್ ಆರ್ ಆರ್ ಚಿತ್ರದ ಪ್ರಿ ರಿಲೀಸ್ ಇವೆಂಟ್ ನಲ್ಲಿ ಅನುಶ್ರಿ ತೆಗೆದುಕೊಂಡ ಸಂಭಾವನೆ ಕೇಳಿದರೆ ಅಚ್ಚರಿ ಪಡುತ್ತಾರೆ. ಅಂದಹಾಗೆ ಅನುಶ್ರಿ ಅವರು ಆರ್ ಆರ್ ಆರ್ ಚಿತ್ರದ ಕಾರ್ಯಕ್ರಮದ ನಿರೂಪಣೆಗೆ ಬರೊಬ್ಬರಿ ಒಂದೂವರೆ ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅನುಶ್ರೀ ಅವರು ರಿಯಾಲಿಟಿ ಶೋಗಳಿಗೆ ಮಾತ್ರವಲ್ಲದೆ ಸಿನಿಮಾ ಸಂಬಂಧಿ ಕಾರ್ಯಕ್ರಮಗಳ ನಿರೂಪಣೆ ಮಾಡಿ ಸೈ ಎನಿಸಿಕೊಂಡರು. ಅನುಶ್ರೀ ಅವರು ಸಿನಿಮಾರಂಗದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಅನುಶ್ರೀ ಅವರು ಪ್ರಾರಂಭದ ದಿನಗಳಲ್ಲಿ ಮಂಗಳೂರು ಮೂಲದ ಟಿವಿ ಚಾನೆಲ್ ಅಂತ್ಯಾಕ್ಷರಿ ಮ್ಯೂಸಿಕ್ ಶೊ ಮೂಲಕ ಟಿವಿ ಜರ್ನಿ ಶುರು ಮಾಡಿದರು. ಅದಾದ ನಂತರ ಬೆಂಗಳೂರಿಗೆ ಬಂದ ಅನುಶ್ರೀ ಈಟಿವಿಯಲ್ಲಿ ಡಿಮ್ಯಾಂಡಪ್ಪೊ ಡಿಮ್ಯಾಂಡ್ ಎಂಬ ಕಾರ್ಯಕ್ರಮವು ಇವರಿಗೆ ಹೆಚ್ಚಿನ ಹೆಸರನ್ನು ತಂದು ಕೊಟ್ಟಿತು. ಹೀಗೆ ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕುಣಿಯೋಣು ಬಾರಾ, ಕಾಮಿಡಿ ಕಿಲಾಡಿಗಳು ಹೀಗೆ ಅನೇಕ ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡಿದ್ದಾರೆ. ನಿರೂಪಣೆ ಮಾತ್ರವಲ್ಲದೆ ಸಿನಿ ಪರದೆಯಲ್ಲೂ ಅನುಶ್ರಿ ಕಾಣಿಸಿಕೊಂಡಿದ್ದರು. ನಿರೂಪಕಿಯಾಗಿ ಮಾತ್ರ ಕಾಣಿಸಿಕೊಳ್ಳದೆ ಸಿನಿ ಪರದೆಯ ಮೇಲು ನಟನೆಯ ಮೂಲಕ ಮೋಡಿ ಮಾಡಿದ್ದಾರೆ. ಬೆಂಕಿ ಪೊಟ್ಟಣ, ಮುರಳಿ ಮೀಟ್ಸ್ ಮೀರಾ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ನಟನೆಗೆ ಪ್ರಶಸ್ತಿ ಕೂಡ ಲಭಿಸಿದೆ ಆದರೆ ಸಿನಿ ಬದುಕು ಹೇಳಿ ಕೊಳ್ಳುವಷ್ಟೇನು ಹೆಸರು ತಂದುಕೊಡಲಿಲ್ಲ.
ಕೆಲವು ದಿನಗಳ ಹಿಂದೆ, ಮತ್ತೊಂದು ಗುಡ್ ನ್ಯೂಸ್ ನೀಡಿದ್ದರು ಅದೇನೆಂದರೆ. ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು ಸಿನಿಮಾದ ಶೂಟಿಂಗ್ ನಲ್ಲಿಯೂ ಭಾಗಿಯಾಗಿದ್ದರು. ಪ್ರಭಾಕರ್ ಆಕ್ಷನ್ ಕಟ್ ಹೇಳುತ್ತಿರುವ ಫಸ್ಟ್ ಸಿನಿಮಾದಲ್ಲಿ ಅನುಶ್ರೀ ನಟಿಸುತ್ತಿದ್ದಾರೆ. ದೇವಕಿ, ಮಮ್ಮಿ ಸಿನಿಮಾಗಳನ್ನು ನಿರ್ದೇಶನ ಮಾಡಿದ ಲೋಹಿತ್ ಎಚ್ ಅವರು ಈ ಸಿನಿಮಾಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಈ ಸಿನಿಮಾಕ್ಕೆ ಈಗಾಗಲೇ ಸೈತಾನ್ ಎಂದು ಟೈಟಲ್ ಇದ್ದು ಸಿನಿಮಾದ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಸೈತಾನ್ ಸಿನಿಮಾದ ಮೊದಲ ಹಂತದ ಚಿತ್ರೀಕರಣವು ಈಗಾಗಲೇ ಮುಗಿದಿದೆ. ಚಿತ್ರತಂಡವು ಸಿನಿಮಾದ ಹೆಸರು ರಿವೀಲ್ ಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಿನಿಮಾ ತಂಡದವರು ಸಿನಿಮಾದ ಕುರಿತು ಮಾತನಾಡಿದರು.
ಸಿನಿಮಾದ ಅವಕಾಶ ಸಿಕ್ಕ ಬಗ್ಗೆ ಅನುಶ್ರೀ ಮಾತನಾಡುತ್ತಾ ನಾನು ಈ ಸಿನಿಮಾದಲ್ಲಿ ನಟಿಸಲು ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಕಾರಣ, ಅವರೆ ನನಗೆ ಲೋಹಿತ್ ಅವರ ಪರಿಚಯ ಮಾಡಿಸಿದ್ದು. ಸಿನಿಮಾದಲ್ಲಿ ನಟಿಸುವ ಬಗ್ಗೆ ಇಮ್ರಾನ್ ಕೇಳಿದಾಗ ನಾನು ಬೇಡ ಎಂದಿದ್ದೆ. ಕಿರುತೆರೆಯಲ್ಲಿ ಆರಾಮಾಗಿ ಇದ್ದೇನೆ ಸಿನಿಮಾ ಬೇಡ ಎಂದಿದ್ದೆ. ನಂತರ ಅವರು ಕಥೆ ಕೇಳಿ ಎಂದರು. ಲೋಹಿತ್ ಹೇಳಿದ ಕಥೆ ಕೇಳಿದ ಬಳಿಕ ಅಭಿನಯಿಸಲು ಒಪ್ಪಿಕೊಂಡೆ. ಉಪ್ಪು ಹುಳಿ ಖಾರ ಚಿತ್ರದ ನಂತರ ಸೈತಾನ್ ಮೂಲಕ ರಿ ಎಂಟ್ರಿ ಕೊಡುತ್ತಿದ್ದೇನೆ. ಇದರಲ್ಲಿ ನಾಯಕ, ನಾಯಕಿ ಎಂದೇನೂ ಯಾರೂ ಇಲ್ಲ. ಕಥೆಯೇ ನಿಜವಾದ ಹೀರೊ ಎಂದು ಅನುಶ್ರಿ ಅವರು ಸಿನಿಮಾ ಬಗ್ಗೆ ಹೇಳಿದರು. ಅನುಶ್ರೀ ಅವರ ಸಿನಿಮಾ ಯಶಸ್ಸು ಪಡೆಯಲಿ.