ಜ್ಯೋತಿಷ್ಯ ಶಾಸ್ತ್ರ ಸಮುದ್ರದಂತೆ ವಿಶಾಲವಾಗಿದೆ. ಅನೇಕ ನಮ್ಮ ದೈನಂದಿನ ಬದುಕಿನಲ್ಲಿ ನಡೆಯುವ ವಿಷಯದ ಬಗ್ಗೆ ಇಂಟರೆಸ್ಟಿಂಗ್ ವಿಷಯವನ್ನು ಎಲ್ಲರೂ ತಿಳಿಯಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಮುಂದಿನ ದಿನಗಳ ಬಗ್ಗೆ ಈಗಲೆ ತಿಳಿಯಬಹುದು. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಗ್ರಹದ ಬದಲಾವಣೆಯ ಬಗ್ಗೆ ಹಾಗೂ ಅದರಿಂದ ರಾಶಿಯ ಮೇಲಿನ ಪ್ರಭಾವವನ್ನು ಈ ಲೇಖನದ ಮೂಲಕ ತಿಳಿಯೋಣ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವೆಂದು ಹೇಳಲಾಗಿದೆ. ಶನಿದೇವ ಎರಡೂವರೆ ವರ್ಷಕ್ಕೊಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತಾನೆ. 2021ರಲ್ಲಿ ಶನಿ ಒಮ್ಮೆಯೂ ರಾಶಿಯನ್ನು ಬದಲಾಯಿಸಲಿಲ್ಲ ಆದರೆ 2022ರಲ್ಲಿ 2 ಬಾರಿ ರಾಶಿಯನ್ನು ಬದಲಾಯಿಸಲಿದೆ. ವಾಸ್ತವವಾಗಿ ಒಂದು ಸರಿ ಮಾತ್ರ ಶನಿಯು ಸಾಮಾನ್ಯವಾಗಿ ಸಾಗುತ್ತದೆ. ಅಂದರೆ ಏಪ್ರಿಲ್ 29ರಂದು ಶನಿ ರಾಶಿಚಕ್ರವನ್ನು ಬದಲಾಯಿಸುತ್ತದೆ.

ಈ ವೇಳೆ ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸಲಿದೆ ಆದರೆ ಶನಿ ಜೂನ್ 5ರಿಂದ ಹಿಂದೆ ಸರಿದು ಮತ್ತೆ ಮಕರ ರಾಶಿಯಲ್ಲಿ ಉಳಿಯುತ್ತದೆ. ತದನಂತರ 2023ರ ಜನವರಿ 17ರವರೆಗೆ ಮಕರ ರಾಶಿಯಲ್ಲಿ ಇರುತ್ತದೆ. ಬಳಿಕ ಮತ್ತೆ ಕುಂಭ ರಾಶಿಗೆ ಬರಲಿದೆ. ಶನಿಯನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ ಹಾಗೂ ಶನಿ ಗ್ರಹವನ್ನು ಜ್ಯೋತಿಷ್ಯದಲ್ಲಿ ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಶನಿಯು 2 ಬಾರಿ ರಾಶಿಚಕ್ರ ಬದಲಾಯಿಸುವುದರಿಂದ ಜನರ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತದೆ.2022ರಲ್ಲಿ ಶನಿಯ 2 ಬಾರಿ ರಾಶಿಚಕ್ರದ ಬದಲಾವಣೆಯು 4 ರಾಶಿಯ ಜನರಿಗೆ ಬಹಳ ಮಂಗಳಕರವೆಂದು ಹೇಳಲಾಗಿದೆ.

ಶನಿಯ ರಾಶಿ ಬದಲಾವಣೆಯು ಮೇಷ ರಾಶಿಯವರಿಗೆ ಬಹಳ ಶುಭಕರವಾಗಿರುತ್ತದೆ. ಈ ರಾಶಿಯವರು ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಬಡ್ತಿ-ಹೆಚ್ಚಳದೊಂದಿಗೆ ಗೌರವವೂ ಸಿಗಲಿದೆ, ನಿಮಗೆ ಹೊಸ ಉದ್ಯೋಗವೂ ಸಿಗಬಹುದು. ಕೆಲಸದ ಸ್ಥಳದಲ್ಲಿ ಸಂಬಂಧಗಳು ಉತ್ತಮವಾಗಿರುತ್ತವೆ. ವೃಷಭ ರಾಶಿಯವರಿಗೆ ಏಪ್ರಿಲ್ 29ರ ನಂತರ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಈಗ ನಿಮ್ಮ ಶ್ರಮಕ್ಕೆ ಪೂರ್ಣಫಲ ಸಿಗುತ್ತದೆ. ಬಯಸಿದ ಕೆಲಸವನ್ನು ಈ ರಾಶಿಯವರು ಪಡೆಯಬಹುದು. ಮೇಲಾಧಿಕಾರಿಯೊಂದಿಗೆ ಉತ್ತಮ ಸಂಬಂಧವಿರುತ್ತದೆ ಅಲ್ಲದೆ ಹೆಚ್ಚಿನ ಮೆಚ್ಚುಗೆ ಸಿಗಲಿದ್ದು ನಿಮಗೆ ಧನಲಾಭವೂ ಆಗಲಿದೆ.

ಈ ಸಮಯವು ಧನು ರಾಶಿಯವರಿಗೆ ಬಹಳಷ್ಟು ಹಣವನ್ನು ತರುತ್ತದೆ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ. ವಿದೇಶ ಪ್ರಯಾಣವೂ ಸಾಧ್ಯವಾಗಬಹುದು. ವಿಶೇಷವಾಗಿ ಉದ್ಯಮಿಗಳಿಗೆ ಈ ಸಮಯವು ಬಹಳ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಈ ಸಮಯವು ಮಕರ ರಾಶಿಯವರಿಗೆ ಮಂಗಳಕರವಾಗಿರುತ್ತದೆ, ಸಾಕಷ್ಟು ಧನಲಾಭವಿರುತ್ತದೆ. ಈ ಸಮಯವು ವೃತ್ತಿ-ವ್ಯವಹಾರಕ್ಕೆ ಬಹಳ ಒಳ್ಳೆಯದು. ಈ ರಾಶಿಯವರಿಗೆ ಹೊಸ ಉದ್ಯೋಗ ಸಿಗಬಹುದು. ಹಳೆಯ ಉದ್ಯೋಗದಲ್ಲಿ ಬಡ್ತಿ-ಹೆಚ್ಚಳ ಕಾಣಬಹುದು. ಅದೆ ರೀತಿ ಈ ಸಮಯವು ಉದ್ಯಮಿಗಳಿಗೆ ಸಾಕಷ್ಟು ಲಾಭವನ್ನು ತರುತ್ತದೆ. ಈ ಮಾಹಿತಿಯನ್ನು ತಪ್ಪದೆ ಮೇಲೆ ಹೇಳಿದ ಎಲ್ಲಾ ರಾಶಿಯವರಿಗೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!