ನಮ್ಮ ದೇಶ ಸೇರಿದಂತೆ ಹಲವು ದೇಶಗಳಲ್ಲಿ ಕ್ರಿಕೆಟ್ ಪ್ರೇಮಿಗಳು ಸಾಕಷ್ಟು ಜನರಿದ್ದಾರೆ. ಕ್ರಿಕೆಟ್ ನಡೆಯುತ್ತಿದೆ ಎಂದರೆ ಹಬ್ಬದಂತೆ ಆ ಸಂಭ್ರಮ ನೋಡಲು ಎರಡು ಕಣ್ಣು ಸಾಲದು. ಕ್ರಿಕೆಟ್ ತಂಡದ ನಾಯಕರ ಆಯ್ಕೆಯ ಬಗ್ಗೆಯೂ ಅಭಿಮಾನಿಗಳಿಗೆ ಆಸಕ್ತಿ ಇರುತ್ತದೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಯಾರು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಐಪಿಎಲ್ ಸೀಸನ್ 15 ರಲ್ಲಿ ಯುಜ್ವೇಂದ್ರ ಚಹಲ್ ರಾಜಸ್ಥಾನ್ ರಾಯಲ್ಸ್ ಪರ ಆಡುವುದು ಗೊತ್ತಿರುವ ವಿಷಯ. ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡವು ಚಹಲ್ ಅವರನ್ನು ಬರೋಬ್ಬರಿ 6.5 ಕೋಟಿ ನೀಡಿ ಖರೀದಿಸಿದೆ. ಇತ್ತ ಆರ್​ಸಿಬಿ ತಂಡದ ಖಾಯಂ ಸದಸ್ಯನಾಗಿ ಗುರುತಿಸಿಕೊಂಡಿದ್ದ ಚಹಲ್ ಈ ಸೀಸನ್​ ಮೂಲಕ ಕ್ಲಾಸಿಕ್ ಪಿಂಕ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಇದೀಗ ರಾಜಸ್ಥಾನ್ ರಾಯಲ್ಸ್ ಅಭ್ಯಾಸ ಕ್ಯಾಂಪ್​ನಲ್ಲಿ ಕಾಣಿಸಿಕೊಂಡಿರುವ ಚಹಲ್ ತಮ್ಮ ಈ ಹಿಂದಿನ ವರಸೆ ಶುರು ಮಾಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ ಸದಾ ಕಿಚಾಯಿಸುವ ಚಹಲ್ ಈ ಬಾರಿ ಆರ್​ಆರ್ ತಂಡದ ಟ್ವಿಟರ್ ಖಾತೆಯ ಅಡ್ಮಿನ್​ನ್ನು ಹಿಡಿದುಕೊಂಡಿದ್ದಾರೆ. ಬುಧವಾರ ಟ್ವೀಟ್ ಮೂಲಕ ರಾಜಸ್ಥಾನ ರಾಯಲ್ಸ್ ಖಾತೆಯನ್ನು ಹ್ಯಾಕ್ ಮಾಡುವುದಾಗಿ ಯುಜ್ವೇಂದ್ರ ಚಹಲ್ ತಿಳಿಸಿದ್ದಾರೆ. ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ ರಾಜಸ್ಥಾನ್ ರಾಯಲ್ಸ್ ಅದು ಮಾತಿನಲ್ಲಷ್ಟೆ ಹೇಳಬಹುದು, ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂಬರ್ಥದಲ್ಲಿ ಉತ್ತರ ನೀಡಿದ್ದರು ಆದರೆ ಇದರ ಬೆನ್ನಲ್ಲೆ ರಾಜಸ್ಥಾನ್ ರಾಯಲ್ಸ್ ತಂಡದ ಟ್ವಿಟರ್​ ಖಾತೆಯಲ್ಲಿ ಚಹಲ್ ಫೋಟೊ ಕಾಣಿಸಿಕೊಂಡಿದೆ.

ಅಷ್ಟೆ ಅಲ್ಲದೆ ಈ ಫೋಟೊಗೆ ರಾಜಸ್ಥಾನ್ ರಾಯಲ್ಸ್​ ತಂಡದ ಹೊಸ ನಾಯಕ ಎಂಬ ಕ್ಯಾಪ್ಷನ್ ನೀಡಲಾಗಿತ್ತು ಎಂಬುದು ವಿಶೇಷ. ಇದನ್ನು ನೋಡಿ ಅಭಿಮಾನಿಗಳು ಒಂದು ಕ್ಷಣ ದಂಗಾದರು. ಏಕೆಂದರೆ ಮೊನ್ನೆಯವರೆಗೂ ಸಂಜು ಸ್ಯಾಮ್ಸನ್ ನಾಯಕ ಎಂದಿದ್ದ ರಾಜಸ್ಥಾನ್ ರಾಯಲ್ಸ್ ದಿಢೀರನೆ ಚಹಲ್ ಅವರ ಫೋಟೊ ಹಾಕಿ ನಾಯಕ ಎಂದರೆ ಯಾರಿಗೆ ತಾನೆ ಆಶ್ಚರ್ಯವಾಗುವುದಿಲ್ಲ.ಅಂದರೆ ಆರ್​ಆರ್ ಟ್ವಿಟರ್ ಖಾತೆ ಹ್ಯಾಕ್ ಮಾಡಿ ನಾನೆ ನಾಯಕ ಎಂದು ಚಹಲ್ ಅವರು ಕೂಡ ಈ ಟ್ವೀಟ್ ಮಾಡಿದ್ದಾರೆ.

ಇದರ ಬೆನ್ನಲ್ಲೆ ಆರ್​ಆರ್ ಅಡ್ಮಿನ್ ಮತ್ತೊಮ್ಮೆ ಚಹಲ್ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಟೀಮ್ ಇಂಡಿಯಾ ಜೆರ್ಸಿಯಲ್ಲಿ ಬ್ಯಾಟ್ ಬೀಸುತ್ತಿರುವ ಚಹಲ್ ಫೋಟೊ ಹಂಚಿಕೊಂಡಿರುವ ರಾಜಸ್ಥಾನ್ ರಾಯಲ್ಸ್ 10 ಸಾವಿರ ರಿಟ್ವೀಟ್ ಮಾಡಿದ್ದಾರೆ ಆದರೆ ಜೋಸ್ ಬಟ್ಲರ್ ಜೊತೆ ಯುಜ್ವೇಂದ್ರ ಚಹಲ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಕಿಚಾಯಿಸಿದ್ದಾರೆ. ಒಟ್ಟಿನಲ್ಲಿ ಆರ್​ಸಿಬಿ ಇರಲಿ ಅಥವಾ ರಾಜಸ್ಥಾನ್ ರಾಯಲ್ಸ್ ಇರಲಿ ಅಭಿಮಾನಿಗಳಿಗೆ ಚಹಲ್ ಅವರ ಆಫ್​ ಫೀಲ್ಡ್ ಮನರಂಜನೆಯಂತು ಸಿಗಲಾರಂಭಿಸಿದೆ. ರಾಜಸ್ಥಾನ್ ರಾಯಲ್ಸ್ ತಂಡ ಹೇಗಿದೆ ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗಿದೆ.

ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಲ್, ಪ್ರಸಿದ್ಧ್ ಕೃಷ್ಣ, ಕೆಸಿ ಕಾರ್ಯಪ್ಪ, ನವದೀಪ್ ಸೈನಿ, ತೇಜಸ್ ಬರೋಕಾ, ಅನುನಯ್ ಸಿಂಗ್, ಕುಲದೀಪ್ ಸೇನ್, ಧ್ರುವ್ ಜುರೆಲ್, ಕುಲ್ದ್ರುವ್ ಜುರೆಲ್ , ಶುಭಂ ಗರ್ವಾಲ್, ನಾಥನ್ ಕೌಲ್ಟರ್-ನೈಲ್, ರಾಸ್ಸಿ ವಾನ್ ಡೆರ್ ಡುಸ್ಸೆನ್, ಜೇಮ್ಸ್ ನೀಶಮ್, ಡೇರಿಲ್ ಮಿಚೆಲ್, ಕರುಣ್ ನಾಯರ್, ಒಬೆಡ್ ಮೆಕಾಯ್ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಇದ್ದಾರೆ. ಈ ತಂಡದಿಂದ ಜನರಿಗೆ ಮನೋರಂಜನೆಯಂತು ಸಿಗಲಿದೆ. ಕ್ರಿಕೆಟ್ ಅಭಿಮಾನಿಗಳಿಗೆ ತಪ್ಪದೆ ಈ ಮಾಹಿತಿಯನ್ನು ತಿಳಿಸಿ, ಕ್ರಿಕೆಟ್ ಜಗತ್ತಿನ ಹೊಸ ಮಾಹಿತಿಯನ್ನು ಹಂಚಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!