ದ್ವಾದಶ ರಾಶಿಗಳಲ್ಲಿ ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಗುಣ, ಸ್ವಭಾವ ಜೊತೆಗೆ ಭವಿಷ್ಯವನ್ನು ಹೊಂದಿರುತ್ತಾರೆ. ಗುರು ಬಲ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯವಾಗಿದೆ. ಗುರುವಿನ ಸ್ಥಾನ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಒಳ್ಳೆಯದಾಗುತ್ತದೆ, ಇನ್ನೂ ಕೆಲವು ರಾಶಿಗಳಿಗೆ ಕೆಟ್ಟಫಲ ಸಿಗಬಹುದು. ಈ ವರ್ಷದ ಗುರುವಿನ ಸ್ಥಾನದ ಬದಲಾವಣೆಯಿಂದ ಮೇಷ ರಾಶಿಯವರ ಭವಿಷ್ಯವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಎಪ್ರಿಲ್ 13, 2022ರಲ್ಲಿ ಗುರು ತನ್ನ ಸ್ಥಾನವನ್ನು ಬದಲಿಸುತ್ತಿದ್ದಾನೆ. ಗುರು ಕುಂಭ ರಾಶಿಯಿಂದ ಮೀನರಾಶಿಗೆ ಪ್ರವೇಶಿಸಲಿದ್ದಾನೆ. ಗುರು ಒಂದು ವರ್ಷಕ್ಕೆ ಒಂದು ಬಾರಿ ಮಾತ್ರ ತನ್ನ ಸ್ಥಾನವನ್ನು ಬದಲಿಸುತ್ತಾನೆ. ಈ ಬಾರಿ ಐದರಿಂದ ಆರು ತಿಂಗಳುಗಳಲ್ಲಿ ತನ್ನ ಸ್ಥಾನ ಬದಲಿಸುತ್ತಿದ್ದಾನೆ. ಈ ಸಮಯದಲ್ಲಿ ಮೇಷ ರಾಶಿಯವರ ರಾಶಿ ಭವಿಷ್ಯವನ್ನು ನೋಡುವುದಾದರೆ ಗುರುಸ್ಥಾನ ಬದಲಾವಣೆಯಿಂದ ಮೇಷ ರಾಶಿಗೆ ಗುರು ಬಲ ಸಿಗಲಿದೆ. ಒಂದು ವರ್ಷಗಳ ಕಾಲ ಗುರುವಿನ ದೃಷ್ಟಿ ಮೇಷ ರಾಶಿಯ ಮೇಲಿರುತ್ತದೆ. ಏಪ್ರಿಲ್ ನಂತರ ಮೇಷ ರಾಶಿಯವರಿಗೆ ಶುಭವಾಗಲಿದೆ ಶುಭಕಾರ್ಯಗಳು ನಡೆಯುತ್ತದೆ.
ಮೇಷ ರಾಶಿಯವರ ಪ್ರಯತ್ನ ಪರಿಪೂರ್ಣವಾಗಿರಲಿ ಏಪ್ರಿಲ್ ನಂತರದ ದಿನಗಳಲ್ಲಿ ಮೇಷ ರಾಶಿಯವರು ಸುಖವನ್ನು ಅನುಭವಿಸುತ್ತಾರೆ. ಗುರು ಧನಕಾರಕನಾಗಿರುತ್ತಾನೆ ಸಂಪಾದಿಸಿದ ಹಣ ಉಳಿತಾಯವಾಗಲು ಗುರುವಿನ ಆಶೀರ್ವಾದ ಮುಖ್ಯವಾಗಿ ಬೇಕಾಗುತ್ತದೆ. ಮೇಷ ರಾಶಿಯವರಿಗೆ ಸಂತಾನ ಇಲ್ಲದಿದ್ದರೆ ಸಂತಾನ ಆಗುವ ಸಾಧ್ಯತೆಗಳಿವೆ. ಗುರುಬಲ ಪ್ರಾಪ್ತಿಯಾಗುವ ರಾಶಿಯವರಿಗೆ ಗುರು ಸೇನಾಪತಿಯಂತಹ ಧೈರ್ಯವನ್ನು ಕೊಡುತ್ತಾನೆ.
ಐಎಎಸ್, ಐಎಫ್ಎಸ್, ಪೊಲೀಸ್ ಸೇವೆ ಸಲ್ಲಿಸುತ್ತಿರುವ ಮೇಷ ರಾಶಿಯವರಿಗೆ ಹೆಚ್ಚಿನ ಬಲ ಸಿಗುತ್ತದೆ. ಅಲ್ಲದೆ ಈ ರಾಶಿಯವರು ಸೇನೆ ಇನ್ನಿತರ ರಕ್ಷಣಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಉತ್ತಮ ಸ್ತ್ರೀ ಯೋಗ ಅಂದರೆ ಈ ರಾಶಿಯ ಹೆಣ್ಣುಮಕ್ಕಳು ಒಳ್ಳೆಯ ಗಂಡನನ್ನು ಹಾಗೂ ಗಂಡುಮಕ್ಕಳು ಒಳ್ಳೆಯ ಹೆಂಡತಿಯನ್ನು ಪಡೆಯುತ್ತಾರೆ.
ಮೇಷ ರಾಶಿಯವರು ಒಳ್ಳೆಯ ಸಂತಾನ ಯೋಗವನ್ನು ಪಡೆಯುತ್ತಾರೆ. ಈ ರಾಶಿಯವರಿಗೆ ಕೋಪ ಕಡಿಮೆಯಾಗುತ್ತದೆ. ಕೆಲಸದಲ್ಲಿ ಈ ರಾಶಿಯವರ ಮನಸ್ಸು ಮಗ್ನವಾಗಿರುತ್ತದೆ, ಕ್ಷಮಾಗುಣವನ್ನು ಹೊಂದಿರುತ್ತಾರೆ. ಉದಾರ ಗುಣವನ್ನು ಹೊಂದಿರುತ್ತಾರೆ, ಈ ರಾಶಿಯವರ ಹೆಸರು ಪ್ರಸಿದ್ಧವಾಗುವ ಸಂಭವವಿದೆ. ಏಪ್ರಿಲ್ ನಿಂದ ಮೇಷ ರಾಶಿಯವರು ಮಾಡಿದ ಕೆಲಸ ಯಶಸ್ಸು ಪಡೆಯುತ್ತದೆ. ವೈಯಕ್ತಿಕ ಜಾತಕದಲ್ಲಿ ಗುರು ಯಾವ ರಾಶಿಯಲ್ಲಿ ಪ್ರವೇಶಿಸುತ್ತಾನೆ ಅದರ ಆಧಾರದ ಮೇಲೆ ಶುಭಫಲಗಳು ನಿರ್ಧಾರವಾಗುತ್ತದೆ.
ವೈಯಕ್ತಿಕ ಜಾತಕದಲ್ಲಿ ಗುರು ಬಲವಾಗಿಲ್ಲದೆ ಇದ್ದರೆ ಈ ಶುಭಫಲಗಳು ದೊರೆಯುವುದಿಲ್ಲ. ಈ ಸಮಸ್ಯೆಗೆ ಸುಲಭ ಪರಿಹಾರವಿರುತ್ತದೆ. ಗುರು ಶ್ಲೋಕವನ್ನು ಪ್ರತಿದಿನ ಪಠಿಸುವುದರಿಂದ ಗುರುಬಲ ದೊರೆಯುತ್ತದೆ. ಒಟ್ಟಿನಲ್ಲಿ ಕಷ್ಟಗಳನ್ನು ಅನುಭವಿಸುತ್ತಾ ಬಂದಿರುವಂತಹ ಮೇಷ ರಾಶಿಯವರಿಗೆ ಕಷ್ಟದ ಜೀವನ ದೂರವಾಗಿ ಸುಖ ಸಿಗಲಿದೆ. ನಿಮ್ಮಂತಹ ತಪ್ಪದೆ ಎಲ್ಲರಿಗೂ ತಿಳಿಸಿ, ಅದರಲ್ಲೂ ಮೇಷ ರಾಶಿಯವರಿಗೆ ತಿಳಿಸಿ. ಮೇಷ ರಾಶಿಯವರು ಗುರುವಿನ ಆರಾಧನೆ ಮಾಡುವ ಮೂಲಕ ಉತ್ತಮ ಫಲವನ್ನು ಪಡೆಯಿರಿ.