ಜೂಜು, ಮೋಜಿಗಾಗಿ ಬಹಳಷ್ಟು ಗಂಡಸರು ತಾವು ದುಡಿದ ಹಣವನ್ನು ಖರ್ಚು ಮಾಡುತ್ತಾರೆ. ಅದರೊಂದಿಗೆ ಹೆಣ್ಣಿನ ಬಗ್ಗೆ ಚಪಲ ಹೊಂದಿರುತ್ತಾರೆ. ಹೆಣ್ಣನ್ನು ಗೌರವದಿಂದ ಕಾಣಬೇಕು ಆದರೆ ಹೆಣ್ಣನ್ನು ಚಪಲಕ್ಕಾಗಿ ಬಳಸಿಕೊಳ್ಳುತ್ತಾರೆ‌. ಹೆಣ್ಣು ಸಹ ಗಂಡಿನ ಸಹವಾಸ ಮಾಡಬಾರದು. ಇಲ್ಲೊಬ್ಬ ಹೆಣ್ಣಿಗಾಗಿ ಕಳ್ಳತನ ಮಾಡುವ ತಾತನ ಕುರಿತು ಸುದ್ದಿಯಾಗಿದೆ.

ಜೂಜಿಗಾಗಿ ಇಲ್ಲವೆ ಮೋಜಿಗಾಗಿ ಕಳ್ಳತನಕ್ಕಿಳಿಯುವವರನ್ನು ನೋಡಿದ್ದೇವೆ ಆದರೆ ಇಲ್ಲೊಬ್ಬ 70 ವರ್ಷದ ಚಪಲ ಚೆನ್ನಿಗರಾಯ ಹೆಣ್ಣಿನ ಚಟ ತೀರಿಸಿಕೊಳ್ಳಲೆಂದು ಕಳ್ಳತನ ಮಾಡಿ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚಿಕ್ಕಮಗಳೂರು ಮೂಲದ ರಮೇಶ್‌ ಅಲಿಯಾಸ್‌ ತಾತ ಎಂಬುವವನು ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 8 ಲಕ್ಷ ರೂಪಾಯಿ ಮೌಲ್ಯದ 162 ಗ್ರಾಂ ಚಿನ್ನಾಭರಣ, ಐದು ಸಾವಿರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಮೇಶ್‌ ಈಗಾಗಲೆ ಎರಡು ಮದುವೆಯಾಗಿದ್ದು ಮೂವರು ಮಕ್ಕಳಿದ್ದಾರೆ. ಆದರೆ ಅದು ಸಾಲದೆಂಬಂತೆ ಮೂರನೆ ಮದುವೆಗೂ ಪ್ರಯತ್ನಿಸಿದ್ದಾನೆ. ಇದಕ್ಕೆ ಮನೆಯವರು ಒಪ್ಪದಿದ್ದಾಗ ಮನೆಯಲ್ಲಿದ್ದ ಹಣ, ಚಿನ್ನಾಭರಣವನ್ನು ಕದ್ದು ತನಗೆ ಸುಖ ನೀಡುವ ಮಹಿಳೆಯ ಮೈಮೇಲೆ ಹಾಕಿ ತನ್ನ ಚಟ ತೀರಿಸಿಕೊಳ್ಳುತ್ತಿದ್ದಾನೆ. ಹಣ, ಚಿನ್ನಾಭರಣ ಖಾಲಿಯಾದ ಬಳಿಕ 12 ವರ್ಷಗಳ ಹಿಂದೆ ಮನೆ ತೊರೆದಿದ್ದ ಈತನು ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದನು. ಇದರಿಂದ ಬಂದ ಹಣದಲ್ಲಿ ಚಟ ತೀರಿಸಿಕೊಳ್ಳುತ್ತಿದ್ದನು. ಇದೆ ರೀತಿ ಕಳ್ಳತನ ಪ್ರಕರಣವೊಂದರಲ್ಲಿ ತಮಿಳುನಾಡಿನ ಪೊಲೀಸರು ರಮೇಶ್‌ನನ್ನು ಬಂಧಿಸಿದ್ದರು. ಅಲ್ಲಿಂದ ಬಿಡುಗಡೆಯಾದ ಬಳಿಕ ಬೆಂಗಳೂರಿಗೆ ಬಂದು ತನ್ನ ಹಳೆ ಚಾಳಿ ಮುಂದುವರಿಸಿದ್ದಾನೆ.

ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದ ಈತ ಮನೆಗಳ್ಳತನ ಮಾಡಿ ಶೋಕಿ ಮಾಡುತ್ತಿದ್ದನು. ತಾನು ಮನೆಗಳ್ಳತನ ಮಾಡುವಾಗ ಕದ್ದ ಚಿನ್ನಾಭರಣಗಳನ್ನು ತನ್ನ ತೀಟೆ ತೀರಿಸುತ್ತಿದ್ದ ಮಹಿಳೆಯ ಮೇಲೆ ಹಾಕಿ ಖುಷಿಪಟ್ಟು ಬರುತ್ತಿದ್ದ. ಹೀಗಾಗಿ ಪ್ರತಿ ಬಾರಿಯೂ ಕಳ್ಳತನ ಮಾಡಿದಾಗಲೂ ಹೊಸ ಹೊಸ ಮಹಿಳೆಯನ್ನು ಹುಡುಕಿ ಹೋಗುತ್ತಿದ್ದ. ಹೀಗಾಗಿ ಎಷ್ಟು ಜನರಿಗೆ ಚಿನ್ನಾಭರಣ ನೀಡಿದ್ದಾನೆ ಎಂದು ತಿಳಿಯುವುದು ದೊಡ್ಡ ಸವಾಲಾಗಿದೆ. ಈತನ ಮೊಬೈಲ್‌ ಸಂಪರ್ಕದಲ್ಲಿದ್ದ ಕೆಲವು ಮಹಿಳೆಯರನ್ನು ಪತ್ತೆಹಚ್ಚಿ 162 ಗ್ರಾಂ ಚಿನ್ನಾಭರಣ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದರು.

ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯ ಬಿಟಿಎಂ 1ನೆ ಹಂತದ ನಿಮ್ಹಾನ್ಸ್‌ ಲೇಔಟ್‌ನ ಮನೆಯೊಂದರ ಬೀಗ ಮುರಿದು ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿದೆ ಮಾಲೀಕರು ಎಸ್‌.ಜಿ. ಪಾಳ್ಯ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಪೊಲೀಸರು ಅಕ್ಕಪಕ್ಕದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ತಾತನ ಕೈಚಳಕ ಪತ್ತೆಯಾಗಿದೆ. ಪ್ರಪಂಚದಲ್ಲಿ ಎಂತೆಂತಹ ವಿಚಿತ್ರ ಸ್ವಭಾವದವರು ಸಿಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಹೆಣ್ಣಿಗಾಗಿ ತಾತನ ವರ್ತನೆ ನಾಚಿಕೆ ತರುತ್ತದೆ. ಇಂತಹ ತಾತಂದಿರಿಂದ ಹುಷಾರಾಗಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!