ಈ ಬಾರಿಯ ಮೈಲಾರ ಕಾರ್ಣಿಕ ಕೇಳಿ ರೈತನ ಮುಖದಲ್ಲಿ ಮಂದಹಾಸ, ಕಾರ್ಣಿಕದ ನಿಜವಾದ ಅರ್ಥ ಏನು

0 6

ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಮೈಲಾರಲಿಂಗ ದೇವಾಲಯದಲ್ಲಿ ಪ್ರತಿವರ್ಷ ನಡೆಯುವ ಕಾರಣಿಕ ವಿಧಿವಿಧಾನ ಈ ವರ್ಷವು ಕೂಡ ನಡೆದಿದೆ. ಹಲವು ವರ್ಷಗಳಿಂದ ಭರತ ಹುಣ್ಣಿಮೆಯಂದು ಕಾರಣಿಕ ನುಡಿಯುವ ಸಂಪ್ರದಾಯ ಇಲ್ಲಿದೆ. ಕೋವಿಡ್ ಮಾರ್ಗಸೂಚಿಯನ್ವಯ ವಿಜಯನಗರ ಜಿಲ್ಲಾಡಳಿತ ಜಾತ್ರೆ ಹಾಗೂ ಭಕ್ತರ ಪ್ರವೇಶಕ್ಕೆ ಈ ಬಾರಿ ನಿರ್ಬಂಧವನ್ನು ಹೇರಿದ್ದರಿಂದ ಸರಳವಾಗಿ ಕಾರಣಿಕೋತ್ಸವವನ್ನು ಆಚರಿಸಲಾಯಿತು.

ಉತ್ಸವಕ್ಕೆ ಲಕ್ಷಾಂತರ ಜನರು ಹರಿದು ಬರುತ್ತಿದ್ದರು ಈ ಜಾತ್ರೆಯಲ್ಲಿ ನುಡಿಯಲಾಗುವ ಕಾರಣಿಕ ಒಟ್ಟಾರೆಯಾಗಿ ದೇಶದ ಮುಂದಿನ ಭವಿಷ್ಯ ಎನ್ನುವ ಅವಿರತ ನಂಬಿಕೆಯನ್ನು ಭಕ್ತರು ಹೊಂದಿದ್ದಾರೆ. ಹಾಗಾಗಿ ಮೈಲಾರದ ಉತ್ಸವದಲ್ಲಿ ನುಡಿಯ ಲಾಗುವ ಭವಿಷ್ಯದ ಬಗ್ಗೆ ಜನರಿಗೆ ಉತ್ಸಾಹ ಇರುತ್ತದೆ.

ಭಕ್ತರ ಜಯಘೋಷದ ನಡುವೆ ಬಿಲ್ಲನ್ನೇರಿದ ಗೊರವಯ್ಯ ಶೂನ್ಯವನ್ನು ದಿಟ್ಟಿಸಿ ನೋಡುತ್ತಾ ಈ ವರ್ಷದ ಕಾರಣಿಕವನ್ನು ನುಡಿದರು. ಈ ವರ್ಷ ಗೊರವಯ್ಯ ಅಂಬ್ಲಿರಾಶಿಗೆ ಮುತ್ತಿನ ಗಿಣಿ ಸಂಪಾದೀತಲೆ ಪರಾಕ್ ಎಂಬ ಕಾರಣಿಕವನ್ನು ಹೇಳಿದ್ದಾರೆ. ಈ ಕಾರಣಿಕವನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ ಈ ಬಾರಿ ಉತ್ತಮವಾದ ರೀತಿಯಲ್ಲಿ ಮಳೆಯಾಗಿ ರಾಜ್ಯದ ಜನರು ಸುಖದಿಂದ ಇರುತ್ತಾರೆ ಎಂದು ಹಲವು ಜನರು ಕಾರಣಿಕವನ್ನು ವಿವರಿಸಿದ್ದಾರೆ.

ಇಲ್ಲಿನ ಕಾರಣಿಕ ಸತ್ಯವಾಗುತ್ತದೆ ಎಂದು ಜನರು ನಂಬುತ್ತಾರೆ. ಮೈಲಾರಲಿಂಗೇಶ್ವರ ಕಾರಣಿಕ ವನ್ನು ಹಲವೆಡೆ ನುಡಿಯಲಾಗುತ್ತದೆ ಇದನ್ನು ನುಡಿಯುವವರನ್ನು ಗೊರವಯ್ಯ ಅಥವಾ ಗ್ವಾರಪ್ಪ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಈ ಕಾರಣಿಕಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಾರೆ. ವಿವಿಧ ಜಾತಿ ಮತ್ತು ಧರ್ಮಗಳಿಗೆ ಸೇರಿದ ಭಕ್ತರು ಮೈಲಾರಲಿಂಗೇಶ್ವರ ನನ್ನ ಆರಾಧನೆ ಮಾಡುತ್ತಾರೆ.

ಗೊರವಯ್ಯ ದೀಕ್ಷೆಯನ್ನು ಪಡೆಯುವುದಕ್ಕೆ ಎಲ್ಲರಿಗೂ ಮುಕ್ತ ಅವಕಾಶ ಇದೆಯಾದರೂ ಕುರುಬ ಹಾಲುಮತದ ಗೊರವಯ್ಯ ಮಾತ್ರ ಕಾರಣಿಕ ನುಡಿಯುವ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಎತ್ತರವಾದ ಕೋಲು ಅಥವಾ ಬಿಲ್ಲನ್ನು ಇರುವ ಗೊರವಯ್ಯ ಮೊದಲು ಸದ್ದಲೇ ಪರಾಕ್ ಎಂದು ಕೂಗುತ್ತಾರೆ ಆಗ ಜಾತ್ರೆ ಸೇರಿರುವ ಲಕ್ಷಾಂತರಜನರು ಒಮ್ಮೆ ಮೌನಕ್ಕೆ ಶರಣಾಗುತ್ತಾರೆ. ಆಗ ಗೊರವಯ್ಯ ಕಾರಣಿಕ ನುಡಿಯುವುದು ವಾಡಿಕೆ. ಕಾರಣಿಕವನ್ನು ನುಡಿದ ನಂತರ ಗೊರವಯ್ಯ ಅಲ್ಲಿಂದಲೇ ಕೈಬಿಟ್ಟು ಕೆಳಗೆ ಬೀಳುತ್ತಾರೆ ಮೇಲಿನಿಂದ ಕೆಳಗೆ ಬೀಳುವ ಗೊರವಯ್ಯ ನನ್ನ ಭಕ್ತರು ತಮ್ಮ ಕೈಗಳಿಂದ ಹಿಡಿದುಕೊಳ್ಳುತ್ತಾರೆ. ಇದನ್ನು ದೈವವಾಣಿ ಎಂದು ಗೌರವಿಸುವ ರೈತರು ಮಳೆ-ಬೆಳೆ ಆರೋಗ್ಯ ಜಾನುವಾರುಗಳ ಆರೋಗ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ಭವಿಷ್ಯವನ್ನು ಅರ್ಥೈಸುತ್ತಾರೆ.

ರಾಜಕೀಯ ಕ್ಷೇತ್ರದ ಬಗೆಗಿನ ಇಣುಕು ನೋಟವನ್ನು ಹಲವರು ಇಣುಕು ನೋಟವನ್ನು ಆದರಿಸಿ ವಿವರಿಸಿ ಕೊಳ್ಳುತ್ತಾರೆ. ಪಶುಪಾಲನೆಯ ಕುರುಬನಾಗಿ ಜನಿಸಿ ಪಶುಗಳ್ಳರಾದ ಮಣಿ ಹಾಗೂ ಮಲ್ಲರನ್ನು ಸಂಹಾರ ಮಾಡಿದವನು ಇಂದು ಭಕ್ತರು ಮೈಲಾರಲಿಂಗೇಶ್ವರನನ್ನ ಆರಾಧನೆ ಮಾಡುತ್ತಾರೆ. ಈ ರೀತಿಯಾಗಿ ಕಾರಣಿಕ ನುಡಿಯುವ ಗೊರವಯ್ಯನ ಮಾತನ್ನು ಈಶ್ವರನ ಮಾತು ಎಂದು ಭಕ್ತರು ನಂಬುತ್ತಾರೆ. ದೇವರೇ ಗೊರವನ ಬಾಯಿಂದ ಮಾತುಗಳನ್ನು ನುಡಿಸುತ್ತಾನೆ ಎಂಬ ಮಾತು ಪ್ರಚಲಿತದಲ್ಲಿದೆ.

ಈ ಕಾರಣಿಕದ ನಿಜವಾದ ಅರ್ಥ ಏನೇ ಇದ್ದರೂ ಭಕ್ತರು ತಮಗೆ ಬೇಕಾದ ಹಾಗೆ ಅರ್ಥೈಸಿಕೊಳ್ಳುತ್ತ ಬರುತ್ತಿರುವುದಕ್ಕೆ ದಶಕಗಳ ಇತಿಹಾಸವಿದೆ. ಈ ಬಾರಿ ಗೊರವಯ್ಯ ನುಡಿದ ಕಾರಣಿಕವನ್ನು ಕೇಳಿ ಜನರಿಗೆ ಮಳೆ ಬೆಳೆ ಉತ್ತಮವಾಗಿ ಆಗುತ್ತದೆ ಎಂಬ ಸುದ್ದಿ ಸಂತಸವನ್ನುಂಟುಮಾಡಿದೆ ಎಂದು ಹೇಳಬಹುದು.

Leave A Reply

Your email address will not be published.