ಜಮೀನಿನ ಹಳೆಯ ದಾಖಲೆಗಳಾದ ಸರ್ವೆ ಸ್ಕೆಚ್, ಪೋಡಿ, ಟಿಪ್ಪಣಿ, ಮೂಲ ಸರ್ವೆ, ಜಮೀನಿನ ಮೂಲ ಪುಸ್ತಕ, ಕಾಲೋಚಿತಗೊಳಿಸಿದ ಜಮೀನಿನ ಹಿಸ್ಸಾ ಸರ್ವೆ ಈ ಎಲ್ಲಾ ದಾಖಲಾತಿಗಳನ್ನು ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್ ನಲ್ಲಿ ನೋಡಬಹುದು ಮತ್ತು ಪ್ರಿಂಟ್ ತೆಗೆದುಕೊಳ್ಳಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿ ಒಂದು ಬ್ರೌಸಿಂಗ್ ಓಪನ್ ಮಾಡಿ ಅದರಲ್ಲಿ ಲ್ಯಾಂಡ್ ರೆಕಾರ್ಡ್ಸ್ ಡಾಟ್ ಕರ್ನಾಟಕ ಡಾಟ್ ಜಿಒವಿ ಡಾಟ್ ಇನ್ ವೆಬ್ಸೈಟ್ ಓಪನ್ ಮಾಡಿಕೊಳ್ಳಬೇಕು. ಈ ವೆಬ್ಸೈಟ್ ಕರ್ನಾಟಕ ಸರ್ಕಾರದ ವೆಬ್ಸೈಟ್ ಆಗಿದ್ದು ಸರ್ವೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಒಳಗೊಂಡಿದೆ. ವೆಬ್ಸೈಟ್ ನಲ್ಲಿ ಜಮೀನಿನ ಹಳೆಯ ಕಾಗದಪತ್ರಗಳನ್ನು ನೋಡಲು ವ್ಯೂ ಆರ್ ಟಿಸಿ ಎಂಡ್ ಎಮ್ ಆರ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ಹೊಸ ಟ್ಯಾಬ್ ಓಪನ್ ಆಗುತ್ತದೆ ಅದರಲ್ಲಿ ಸರ್ವೆ ಡಾಕ್ಯುಮೆಂಟ್ ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಿದಾಗ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಸೈನ್ ಇನ್ ಕೆಳಗಡೆ ಮೊಬೈಲ್ ನಂಬರ್ ಹಾಕಿ ಕ್ಯಾಪ್ಚರ್ ಕೋಡ್ ಹಾಕಿ ನಂತರ ಜನರೇಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಹಾಕಿ ಲಾಗಿನ್ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಜಿಲ್ಲೆಯನ್ನು, ತಾಲೂಕು, ಹೋಬಳಿ ಸೆಲೆಕ್ಟ್ ಮಾಡಿಕೊಂಡು ಸರ್ವೇ ನಂಬರ್ ಅನ್ನು ಎಂಟರ್ ಮಾಡಬೇಕು. ನಂತರ ಸರ್ಚ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಜಮೀನಿನ ಹಳೆಯ ದಾಖಲೆಗಳು, ಈಗಿನ ದಾಖಲೆಗಳು, ಅಪ್ಡೇಟ್ ಮಾಡಿದ ದಾಖಲೆಗಳನ್ನು ಕೊಟ್ಟಿರುತ್ತಾರೆ.
ದಾಖಲೆಗಳ ಹೆಸರು ಎಂಬ ಕಾಲಂನಲ್ಲಿ ದಾಖಲೆಗಳ ಹೆಸರನ್ನು ಹಾಕಿರುತ್ತಾರೆ. ನಂಬರ್ ಆಫ್ ಪೇಜಸ್ ಇರುವ ಕೆಳಗೆ ಒಂದು ದಾಖಲೆ ಎಷ್ಟು ಪೇಜ್ ಗಳನ್ನು ಹೊಂದಿದೆ ಎಂಬುದನ್ನು ಕೊಟ್ಟಿರುತ್ತಾರೆ. ಬೇಕಾದ ದಾಖಲೆಗಳ ಹೆಸರಿನ ಮುಂದೆ ಸಿಂಬಾಲ್ ಇರುತ್ತದೆ ಅದನ್ನು ಕ್ಲಿಕ್ ಮಾಡಿದಾಗ ಆ ಡಾಕ್ಯೂಮೆಂಟ್ ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಆಗಿ ಓಪನ್ ಆಗುತ್ತದೆ.
ಕೆಲವು ದಾಖಲೆಗಳನ್ನು ನೋಡಬಹುದು ಆದರೆ ಪ್ರಿಂಟ್ ಬೇಕಾಗಿದ್ದಲ್ಲಿ ಸರ್ವೆ ಇಲಾಖೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಯಾವ ದಾಖಲೆಗಳನ್ನು ಬೇಕಾದರೂ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು. ಬೇಕಾದ ದಾಖಲೆಗಳು ಕಂಪ್ಯೂಟರ್ ನಲ್ಲಿ ಸಿಗದೆ ಇದ್ದಲ್ಲಿ ತಾಲೂಕಿನ ಸರ್ವೆ ಇಲಾಖೆಯಲ್ಲಿ ಕೇಳಬೇಕು. ಜಮೀನಿಗೆ ಸಂಬಂಧಿಸಿದಂತೆ ಹಳೆಯ ದಾಖಲೆಗಳು ಅನೇಕ ಉಪಯೋಗಗಳನ್ನು ಹೊಂದಿದೆ. ಜಮೀನನ್ನು ಖರೀದಿಸುವಾಗ ಇಂತಹ ದಾಖಲೆಗಳು ಅವಶ್ಯವಾಗಿ ಬೇಕಾಗಿದೆ. ಈ ಮಾಹಿತಿ ಉಪಯುಕ್ತವಾಗಿದ್ದು ಎಲ್ಲರಿಗೂ ತಿಳಿದಿರಬೇಕು ಆದ್ದರಿಂದ ಎಲ್ಲರಿಗೂ ತಿಳಿಸಿ.