ಸಾಮಾನ್ಯವಾಗಿ ಪ್ರತಿ ಮನೆಯಲ್ಲಿ ನಾಗ ದೇವರ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿರುತ್ತಾರೆ . ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಪ್ರತಿದಿನ ನಾಗ ದೇವರ ಆರಾಧನೆ ನಡೆಯುತ್ತದೆ. ಈ ದೇವಾಲಯದಲ್ಲಿ ಇನ್ನುಮುಂದೆ ಹಾವು ಕಡಿದರೆ ಔಷಧಿಯನ್ನು ಮಾಡಲಾಗುತ್ತದೆ ಅದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ನಾಗಾರಾಧನೆಯ ಪ್ರಮುಖ ಶ್ರದ್ಧಾಕೇಂದ್ರವಾಗಿದೆ. ಭಗವಂತ ಈಶ್ವರನ ಪುತ್ರ ಷಣ್ಮುಖ ಇಲ್ಲಿ ನಾಗರೂಪಿಯಾಗಿ ನೆಲೆನಿಂತಿದ್ದಾನೆಂಬ ನಂಬಿಕೆಯಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು ಎಂದು ನಂಬಲಾಗಿದೆ ಹೀಗಾಗಿ ಈ ಸ್ಥಳವು ಎಲ್ಲ ತರಹದ ನಾಗದೋಷಗಳ ಪರಿಹಾರ ಸ್ಥಳವೆಂದು ಹೇಳುತ್ತಾರೆ. ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ, ನಾಗತಂಬಿಲ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತಾದಿಗಳು ಬರುತ್ತಾರೆ. ಇದು ಸರ್ಪದೋಷ ನಿವಾರಣೆಗೆ ಪ್ರಧಾನ ತಾಣವಾಗಿದ್ದು ಬೇರೆ ಯಾವ ನಾಗ ಕ್ಷೇತ್ರಕ್ಕಾದರೂ ಹೇಳಿಕೊಂಡ ಹರಕೆಯನ್ನು ಇಲ್ಲಿ ಬಂದು ತೀರಿಸಿದರೂ ದೋಷಮುಕ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಇಂತಹ ಪ್ರಮುಖ ನಾಗಾರಾಧನೆಯ ಕ್ಷೇತ್ರದಲ್ಲಿ ಇನ್ನು ಮುಂದೆ ಹಾವು ಕಡಿತಕ್ಕೆ ಚಿಕಿತ್ಸೆ ನೀಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಜ್ಯದ ಅತ್ಯಂತ ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ನಮ್ಮ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಪ್ರಮುಖವಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಹರಿದು ಬರುತ್ತಲೆ ಇರುತ್ತಾರೆ. ಹೀಗಾಗಿಯೆ ರಾಜ್ಯ ಸರ್ಕಾರ ಮುಜರಾಯಿ ಇಲಾಖೆಯ ಸುಪರ್ದಿಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಅಭಿವೃದ್ಧಿ ಮಾಡಲು ಸುಮಾರು 300 ಕೋಟಿ ವೆಚ್ಚದ ಸಮಗ್ರ ಅಭಿವೃದ್ಧಿ ಯೋಜನೆಯನ್ನು ರೂಪಿಸಿದೆ.

ಯೋಜನೆಯ ಒಂದು ಭಾಗವಾಗಿ ಕುಕ್ಕೆ ಸುಬ್ರಹ್ಮಣ್ಯದ ಸುತ್ತಮುತ್ತಲಿರುವ ಇಂಜಾಡಿ ಎಂಬ ಪ್ರದೇಶದಲ್ಲಿ ಸರಿಸುಮಾರು 50 ಎಕರೆ ಜಾಗದಲ್ಲಿ ನೂರು ಕೋಟಿ ರೂಪಾಯಿ ವೆಚ್ಚ ಮಾಡಿ ಪರಿಸರಸ್ನೇಹಿ ಕುಟೀರವನ್ನು ಸ್ಥಾಪನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕುಟೀರದಲ್ಲಿ ಹಾವು ಕಡಿತಕ್ಕೆ ಆಯುರ್ವೇದ ಚಿಕಿತ್ಸೆ ಮಾಡಲು ಯೋಜನೆ ಆರಂಭ ಮಾಡಲಾಗಿದೆ. ಇನ್ನು ಈ ಪರಿಸರ ಸ್ನೇಹಿ ಕುಟೀರಗಳಲ್ಲಿ ಪರಿಸರದ ಮಧ್ಯದ ವಾತಾವರಣದಲ್ಲಿ ಯೋಗ ಥೆರಪಿ, ಧ್ಯಾನ, ಆಯುರ್ವೇದ ಚಿಕಿತ್ಸೆಯ ಸೌಲಭ್ಯಗಳಿವೆ.

ಈ ಪರಿಸರ ಸ್ನೇಹಿ ಕುಟೀರದ ಮತ್ತೊಂದು ವಿಭಾಗದಲ್ಲಿ ಹಾವು ಕಡಿತಕ್ಕೊಳಗಾದವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸಂಪೂರ್ಣ ಆಯುರ್ವೇದ ವೈದ್ಯರು ಈ ಚಿಕಿತ್ಸೆಯನ್ನು ನೀಡಲಿದ್ದು, ಗಿಡಮೂಲಿಕೆಗಳನ್ನು ಉಪಯೋಗಿಸಿ ಆಯುರ್ವೇದ ವೈದ್ಯರು ಹಾಗೂ ದಾದಿಯರು ಈ ಚಿಕಿತ್ಸೆ ನೀಡಲಿದ್ದಾರೆ. ಇನ್ನು ಆಧುನಿಕ ವೈದ್ಯ ವಿಜ್ಞಾನ ಎಷ್ಟೆ ಮುಂದುವರೆದಿದ್ದರೂ ಹಾವು ಕಡಿತಕ್ಕೆ ಆಯುರ್ವೇದ ಚಿಕಿತ್ಸೆಯಷ್ಟು ಪರಿಣಾಮಕಾರಿ ಮತ್ತೊಂದಿಲ್ಲ.

ತೀವ್ರ ವಿಷ ಇರುವ ಹಾವುಗಳು ಕಡಿದ ಸಂದರ್ಭದಲ್ಲಿ ಯಾವ ಭಾಗಕ್ಕೆ ಕಚ್ಚಿದೆಯೊ ಅಂತಹ ದೇಹದ ಭಾಗ ಕೊಳೆತು ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕುಕ್ಕೆಸುಬ್ರಹ್ಮಣ್ಯದಲ್ಲಿ ಸ್ಥಾಪನೆಯಾಗುತ್ತಿರುವ ಹಾವು ಕಡಿತದ ಚಿಕಿತ್ಸಾ ಕೇಂದ್ರದ ಬಗ್ಗೆ ಮಾತನಾಡಿರುವ ಕುಕ್ಕೆ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಇಂಜಾಡಿಯ ಬಳಿ ನೂತನ ವಿಷ ಚಿಕಿತ್ಸಾಲಯ ಮಾಡಲು ಯೋಜನೆ ರೂಪಿಸಲಾಗಿದೆ. ನೈಸರ್ಗಿಕ ಪರಿಸರವನ್ನು ಹಾಗೆಯೆ ಉಳಿಸಿ ಪರಿಸರ ಸ್ನೇಹಿಯಾಗಿ ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೆ ಈ ಬಗ್ಗೆ ಡಿಪಿಆರ್ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಇನ್ನು ದಕ್ಷಿಣ ಭಾರತದಲ್ಲಿ ವಿಷ ಹಾವು ಕಡಿದಾಗ ಚಿಕಿತ್ಸೆ ನೀಡಲು ಕೇರಳದಲ್ಲಿ ಮಾತ್ರ ಆಯುರ್ವೇದ ಚಿಕಿತ್ಸಾ ಕೇಂದ್ರ ಇದೆ. ಕೇರಳದ ಕಣ್ಣೂರು ಜಿಲ್ಲೆಯ ಪರಶಿನಕಡುವು ಸಮೀಪದ ಪಾಪಿನಶ್ಯೇರಿಯಲ್ಲಿ ಮಾತ್ರ ವಿಷದ ಹಾವು ಕಡಿತದ ಚಿಕಿತ್ಸಾ ಕೇಂದ್ರ ಇದೆ. ಹೀಗಾಗಿ ವಿಷದ ಹಾವು ಕಚ್ಚಿದಾಗ ಚಿಕಿತ್ಸೆ ಪಡೆದುಕೊಳ್ಳಲು ಕರ್ನಾಟಕದಿಂದ ಕೇರಳಕ್ಕೆ ಹೋಗಲು ಬಹುತೇಕರಿಗೆ ಸಾಧ್ಯವಾಗುವುದಿಲ್ಲ.

ಇಲ್ಲಿ ಮೊದಲು ಆಂಟಿಬಯೋಟಿಕ್ ಚುಚ್ಚುಮದ್ದು ನೀಡಿದ ಬಳಿಕ ಆಯುರ್ವೇದ ಪದ್ಧತಿಯ ಪ್ರಕಾರ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದೆ ರೀತಿಯ ಆಯುರ್ವೇದ ಪದ್ಧತಿಯ ಚಿಕಿತ್ಸೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆಸುಬ್ರಹ್ಮಣ್ಯದಲ್ಲಿ ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಇನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆರಂಭವಾಗುವ ಚಿಕಿತ್ಸಾ ಕೇಂದ್ರದಲ್ಲಿ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ಸಕಲ ಸಂಕಷ್ಟ ನಿವಾರಿಸುವ ಸುಬ್ರಹ್ಮಣ್ಯನ ಆಲಯದಲ್ಲಿ‌ ಹಾವು ಕಡಿತಕ್ಕೂ ಚಿಕಿತ್ಸೆ ನೀಡುವ ಮೂಲಕ ವಿಷವೂ ಶಮನವಾಗುವ ಖುಷಿ ಭಕ್ತರದ್ದಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಹಾವು ಕಡಿದವರು ದೂರದ ಊರಿಗೆ ಹೋಗಬೇಕಾಗಿಲ್ಲ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ನೀಡಿ ಗುಣಪಡಿಸಿಕೊಂಡು, ದೇವರ ದರ್ಶನ ಪಡೆಯಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!