ಕನ್ನಡ ಚಿತ್ರರಂಗದ ಡಿ ಬಾಸ್ ದರ್ಶನ್ ಅವರು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಹಬ್ಬ. ಕಳೆದ ಎರಡು ವರ್ಷಗಳಿಂದ ಕೊರೋನ ವೈರಸ್ ಹಾವಳಿಯಿಂದ ಹುಟ್ಟುಹಬ್ಬದ ಆಚರಣೆ ಮಾಡಲು ಅವಕಾಶವಿರಲಿಲ್ಲ. ಈ ವರ್ಷ ಅಭಿಮಾನಿಗಳು ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅವರ ಹುಟ್ಟುಹಬ್ಬ ಆಚರಣೆ ಹೇಗಿತ್ತು ಹಾಗೂ ಅವರ ಮಗನ ಖುಷಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಫೆಬ್ರವರಿ 16 ಕ್ಕೆ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಕ್ರಾಂತಿ ಶೂಟಿಂಗ್ ಸೆಟ್ ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೇರಿ ಕೇಕ್ ತಂದು ದರ್ಶನ್ ಅವರ ಬರ್ತಡೆಯನ್ನು ಆಚರಿಸಿದ್ದಾರೆ. ರಚಿತಾ ರಾಮ್ ಸೇರಿದಂತೆ ಸಿನಿಮಾ ಕಲಾವಿದರು ದರ್ಶನ್ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಹಲವು ಚಿಕ್ಕ ಮಕ್ಕಳು ದರ್ಶನ್ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ದರ್ಶನ್ ಅವರಿಗೆ ಚಿಕ್ಕ ಮಕ್ಕಳು ವಿಶ್ ಮಾಡಿದರು. ದರ್ಶನ್ ಅವರ ಹುಟ್ಟುಹಬ್ಬಕ್ಕೆ ಸಿನಿಮಾ ರಂಗದ ಹಲವು ಕಲಾವಿದರು ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ದರ್ಶನ್ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿಲ್ಲ ಏಕೆಂದರೆ ಸಿನಿಮಾ ರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಧನರಾಗಿದ್ದಾರೆ ಆ ದುಃಖದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಅವರಿಗೆ ಇಷ್ಟವಿಲ್ಲವೆಂದು ಹೇಳಿಕೊಂಡಿದ್ದಾರೆ. ದರ್ಶನ್ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ದರ್ಶನ್ ತೂಗುದೀಪ ಅವರ ನಿಜವಾದ ಹೆಸರು ಹೇಮಂತ್ ಕುಮಾರ್. ದರ್ಶನ್ ಅವರು ನಟನಾಗಿ ನಿರ್ಮಾಪಕನಾಗಿ ವಿತರಕರಾಗಿ ಕೆಲಸ ಮಾಡುತ್ತಾರೆ. ದರ್ಶನ್ ಅವರು 1977 ಫೇಬ್ರುವರಿ 16 ರಂದು ಕೊಡಗಿನಲ್ಲಿ ತೂಗುದೀಪ ಶ್ರೀನಿವಾಸ್ ಹಾಗೂ ಮೀನ ಅವರ ಮಗನಾಗಿ ಜನಿಸಿದ್ದಾರೆ.
ದರ್ಶನ್ ಅವರು ಡಿಪ್ಲೊಮಾ ಇನ್ ಆಕ್ಟಿಂಗ್ ಓದಿದ್ದಾರೆ. ದರ್ಶನ್ ಅವರಿಗೆ ಒಬ್ಬಳು ಸಹೋದರಿ ಒಬ್ಬ ಸಹೋದರನಿದ್ದಾನೆ ಸಹೋದರನ ಹೆಸರು ದಿನಕರ್, ಸಹೋದರಿಯ ಹೆಸರು ದಿವ್ಯ. ದರ್ಶನ್ ಅವರು ವಿಜಯಲಕ್ಷ್ಮಿ ಎಂಬುವವರನ್ನು ವಿವಾಹವಾಗಿದ್ದಾರೆ ಅವರಿಗೆ ಒಬ್ಬ ಮಗನಿದ್ದಾನೆ ಅವನ್ ಹೆಸರು ವಿನೀಶ್. ಅವರು ಮೆಜೆಸ್ಟಿಕ್, ಕರಿಯ, ಕಲಾಸಿಪಾಳ್ಯ, ಸಾರಥಿ, ಸಂಗೊಳ್ಳಿ ರಾಯಣ್ಣ, ದತ್ತ, ಬುಲ್ ಬುಲ್, ಯಜಮಾನ, ಅಂಬರೀಶ್, ದಾಸ, ಭಗವಾನ್, ಅಯ್ಯಾ, ಶಾಸ್ತ್ರಿ, ಮಂಡ್ಯ, ಸ್ನೇಹನಾ ಪ್ರೀತಿನಾ, ನವಗ್ರಹ,
ಪೊರ್ಕಿ, ಬಾಸ್, ಬೃಂದಾವನ, ಚಕ್ರವರ್ತಿ, ಜಗ್ಗುದಾದ, ತಾರಕ್, ಕುರುಕ್ಷೇತ್ರ, ರಾಬರ್ಟ್, ನಿನಗೋಸ್ಕರ, ಕಿಟ್ಟಿ, ನನ್ನ ಪ್ರೀತಿಯ ರಾಮು, ಭೂಪತಿ, ಅನಾಥರು, ಅರ್ಜುನ್, ಅಭಯ್ ಇನ್ನು ಅನೇಕ ಸಿನಿಮಾಗಳಲ್ಲಿ ನಾಯಕನಟನಾಗಿ ನಟಿಸಿ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಮೊನ್ನೆ ಕಳೆದ ಫೆಬ್ರವರಿ 16ರಂದು ಅವರ ಹುಟ್ಟುಹಬ್ಬವನ್ನು ಮನೆಯಲ್ಲಿ ಅವರ ಹೆಂಡತಿ ಹಾಗೂ ಮಗನೊಂದಿಗೆ ಸರಳವಾಗಿ ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದಲ್ಲಿ ಅವರ ಮಗ ವಿನೀಶ್ ದರ್ಶನ್ ಸಂತಸದಿಂದ ಆಚರಿಸಿದ್ದಾರೆ. ದರ್ಶನ್ ಅವರ ಹೊಸ ಸಿನಿಮಾ ಕ್ರಾಂತಿ ಭರ್ಜರಿ ಬಿಡುಗಡೆಯಾಗಲಿ, ಯಶಸ್ಸನ್ನು ಪಡೆಯಲಿ ಎಂದು ಆಶಿಸೋಣ.