ಮನಸ್ಸೊಂದಿದ್ದರೆ ಮಾರ್ಗ ಎನ್ನುವ ಮಾತಿನಂತೆ ಸಾಧನೆ ಮಾಡಲು ಮನಸ್ಸಿರಬೇಕು ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸುತ್ತೇವೆ. ಈ ಎಲ್ಲ ಮಾತಿನಂತೆ ಕಾಲೇಜೊಂದರಲ್ಲಿ ವಾಚ್ ಮನ್ ಆಗಿರುವ ವ್ಯಕ್ತಿಯೊಬ್ಬರು ಅದೆ ಕಾಲೇಜಿನ ಪ್ರಾಂಶುಪಾಲರಾದ ಕಥೆಯನ್ನು ಈ ಲೇಖನದಲ್ಲಿ ನೋಡೋಣ.
ಸಾಧಿಸುವ ಹಠ, ಛಲ ಇದ್ದರೆ ಸಾಕು ಬೆಟ್ಟವನ್ನು ಕರಗಿಸಿ ನೀರನ್ನು ಹರಿಸಬಹುದು ಎಂಬ ಮಾತಿದೆ. ಪಟ್ಟು ಬಿಡದೆ ಸಾಧಿಸಿದ ಹಠಕ್ಕೆ ಇಂದು ಒಬ್ಬ ವ್ಯಕ್ತಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ. ಛಲದಂಕ ಮಲ್ಲ ಈಶ್ವರ ಸಿಂಗ್ ಭಾರ್ಗವ ಇವರು ಛತ್ತೀಸಗಢದ ಬೈತಲ್ ಪುರದ ಒಂದು ಗ್ರಾಮದವರು. ಇವರು ಕಾಲೇಜ್ ಒಂದರಲ್ಲಿ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದರು. ಇವರು ತಮ್ಮ ಪರಿಶ್ರಮದಿಂದ ಕಷ್ಟಪಟ್ಟು ಹಿಡಿದಿದ್ದನ್ನು ಸಾಧಿಸುವ ಹಠದಿಂದ ಇಂದು ಅದೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ.
ಈಶ್ವರ ಸಿಂಗ್ ಅವರು ಬಾಲ್ಯದಿಂದಲೂ ಉನ್ನತ ಶಿಕ್ಷಣ ಓದಬೇಕೆಂದು ಕನಸು ಕಂಡಿದ್ದರು. ಅವರ ಮನೆಯಲ್ಲಿ ಬಡತನವಿರುವುದರಿಂದ ತಮ್ಮ 19ನೇ ವಯಸ್ಸಿಗೆ ಓದುವುದನ್ನು ಬಿಟ್ಟು ತೋಟದ ಮಾಲಿ ಕೆಲಸವನ್ನು ಮಾಡತೊಡಗಿದರು ಆದರೂ ಅವರು ತಮ್ಮ ಹಠ ಬಿಡಲಿಲ್ಲ ಛತ್ತೀಸಗಢದ ಕಲ್ಯಾಣ ಕಾಲೇಜ್ ನಲ್ಲಿ ಗಾರ್ಡನ್ ನೋಡಿಕೊಳ್ಳುವ ಮಾಲಿ ಆಗಿ ವಾಚ್ ಮನ್ ಆಗಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಾ ಡಿಗ್ರಿಯನ್ನು ಪಡೆಯುತ್ತಾರೆ. ನಂತರ ಮುಂದಿನ ಪರೀಕ್ಷೆ ಕಟ್ಟಲು ಹಣವಿಲ್ಲದ ಕಾರಣ ಕಾವಲುಗಾರನಾಗಿ ಕೆಲಸ ಮಾಡಿದರು. ಅವರು ಕಷ್ಟಪಡುತ್ತಿರುವುದನ್ನು ನೋಡಿದ ಕಲ್ಯಾಣ್ ಕಾಲೇಜಿನಲ್ಲಿ ಅತಿಥಿ ಶಿಕ್ಷಕರಾಗಿ ನೇಮಿಸಿಕೊಂಡರು. ವೃತ್ತಿಯಲ್ಲಿ ಅವರ ನೈಪುಣ್ಯತೆ ನೋಡಿ ಅಸಿಸ್ಟಂಟ್ ಪ್ರೊಫೆಸರ್ ಆಗಿ ಬಡ್ತಿ ನೀಡಿದರು.
ಜೊತೆಗೆ ಅವರು ಬಿಎಡ್, ಎಂಪಿಲ್, ಎಮೆಡ್ ಪದವಿಯನ್ನು ಪಡೆದುಕೊಂಡರು. ಅವರ ಸಾಧನೆಯನ್ನು ನೋಡಿದ ಕಲ್ಯಾಣ್ ಕಾಲೇಜ್ ನ ಆಡಳಿತ ಮಂಡಳಿ ಖುಷಿಯಿಂದ ಅಹೇರಿಯಲ್ಲಿ ಹೊಸದಾಗಿ ನಿರ್ಮಾಣವಾದ ಹೊಸ ಕಾಲೇಜಿಗೆ ಈಶ್ವರ್ ಸಿಂಗ್ ಅವರನ್ನು ಪ್ರಾಂಶುಪಾಲರಾಗಿ ನೇಮಕ ಮಾಡಿದೆ. ಛಲಬಿಡದೆ ಸಾಧನೆ ಮಾಡಬೇಕು ಎಂದು ಮುನ್ನುಗ್ಗಿದರೆ ಯಾವುದೆ ಸಮಸ್ಯೆ, ಹಣದ ಸಮಸ್ಯೆಯು ಆಗುವುದಿಲ್ಲ ಎನ್ನುವುದಕ್ಕೆ ಈಶ್ವರ್ ಸಿಂಗ್ ಅವರೆ ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ. ನಾವು ಮಾಡುವ ಪ್ರಯತ್ನ ಸರಿಯಾಗಿದ್ದಲ್ಲಿ ಫಲ ಸಿಕ್ಕೆ ಸಿಗುತ್ತದೆ. ವಾಚ್ ಮನ್ ಆಗಿದ್ದವರು ಪ್ರಾಂಶುಪಾಲರಾದ ಈಶ್ವರ್ ಸಿಂಗ್ ಅವರ ಜೀವನ ಇಂದಿನ ಯುವ ಜನತೆಗೆ ಸ್ಫೂರ್ತಿಯಾಗಿದೆ.