ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆಯಲ್ಲಿ ಹೊಸ ನೇಮಕಾತಿ ನಡೆಯುತ್ತಿದೆ. ಈ ಒಂದು ನೇಮಕಾತಿಯಲ್ಲಿ ಹದಿನಾಲ್ಕು ಸಾವಿರಕ್ಕಿಂತ ಹೆಚ್ಚಿನ ಹುದ್ದೆಗಳ ಬೃಹತ್ ನೇಮಕಾತಿ ನಡೆಯುತ್ತಿದ್ದು ಈ ಹುದ್ದೆಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿದ್ಯಾರ್ಹತೆ ಅರ್ಜಿ ಶುಲ್ಕ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆಯಲ್ಲಿ ನಡೆಯುತ್ತಿರುವ ನೇಮಕಾತಿಗೆ ಮದಲನೆಯದಾಗಿ ಯಾವ ವಿದ್ಯಾರ್ಹತೆಯನ್ನು ಪಡೆದಿರುವವರು ಅರ್ಜಿಯನ್ನು ಸಲ್ಲಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಎಂಟನೇ ತರಗತಿ ಪಾಸ್ ಆಗಿರುವವರು ಹತ್ತನೇ ತರಗತಿ ಪಾಸ್ ಆಗಿರುವವರು ಪಿಯುಸಿ ಮುಗಿಸಿರುವವರು ಪದವಿಯನ್ನು ಪಡೆದುಕೊಂಡಿರುವವರು ಡಿಪ್ಲೋಮಾ ಇಂಜಿನಿಯರಿಂಗ್ ಪಾಸಾಗಿರುವವರು ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಯಾವ ಕೆಟಗರಿಗೆ ಎಷ್ಟು ವರ್ಷದವರು ಅರ್ಜಿಯನ್ನು ಸಲ್ಲಿಸಬಹುದು ಎಂಬುದನ್ನು ನೋಡುವುದಾದರೆ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಇಪ್ಪತ್ತೆಂಟು ವರ್ಷವಾಗಿರಬೇಕು ಮ್ಯಾನೇಜರ್ ( ಹಿಂದಿ ) ಇದಕ್ಕೆ ಅರ್ಜಿ ಸಲ್ಲಿಸುವವರಿಗೆ ಮೂವತ್ತೈದು ವರ್ಷ ವಾಗಿರಬೇಕು
ಜೂನಿಯರ್ ಇಂಜಿನಿಯರ್ ಇಪ್ಪತ್ತೆಂಟು ವರ್ಷ ಸ್ಟೆನೋಗ್ರಾಫರ್ ಗ್ರೇಡ್ ಟು ಇಪ್ಪತ್ತೈದು ವರ್ಷ ಟೈಪಿಸ್ಟ್( ಹಿಂದಿ ) ಇಪ್ಪತ್ತೈದು ವರ್ಷ ವಾಚ್ ಮ್ಯಾನ್ ಇಪ್ಪತ್ತೈದು ವರ್ಷ ವಯಸ್ಸಾಗಿರಬೇಕು. ಇದರ ಜೊತೆಗೆ ವಯಸ್ಸಿನ ಸಡಿಲಿಕೆ ಯನ್ನು ಕೂಡ ನೀಡಲಾಗಿದ್ದು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಡಿಪಾರ್ಟ್ಮೆಂಟ್ ಆಫ್ ಎಫ್ ಸಿ ಐ ಎಂಪ್ಲೋಯಗಳಿಗೆ ಐವತ್ತು ವರ್ಷದ ವರೆಗೆ ವಯಸ್ಸಿನ ಸಡಿಲಿಕೆ ಇರುತ್ತದೆ.
ಪಿಡಬ್ಲ್ಯೂಡಿ ಜನರಲ್ ಅಭ್ಯರ್ಥಿಗಳಿಗೆ ಹತ್ತು ವರ್ಷ ಪಿಡಬ್ಲ್ಯೂಡಿ ಆಫೀಸ್ ಅಭ್ಯರ್ಥಿಗಳಿಗೆ ಹದಿಮೂರು ವರ್ಷ ಪಿಡಬ್ಲ್ಯೂಡಿ ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಹದಿನೈದು ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ. ಇನ್ನು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವಾಗ ಎಷ್ಟು ಅರ್ಜಿ ಶುಲ್ಕವನ್ನು ಪಾವತಿಸಬೇಕು ಎಂಬುದರ ಕುರಿತು ನೋಡುವುದಾದರೆ ಎಸ್ಸಿಎಸ್ಟಿ ಪಿಡಬ್ಲ್ಯೂಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಉಳಿದ ಅಭ್ಯರ್ಥಿಗಳಿಗೆ ಎಂಟು ನೂರು ರೂಪಾಯಿ ಅರ್ಜಿ ಶುಲ್ಕ ಇರುತ್ತದೆ. ಇನ್ನು ಅಭ್ಯರ್ಥಿಗಳನ್ನು ಯಾವ ರೀತಿಯಾಗಿ ಆಯ್ಕೆಮಾಡಿಕೊಳ್ಳಲಾಗುತ್ತದೆ ಎಂಬುದನ್ನು ನೋಡುವುದಾದರೆ ಮೊದಲಿಗೆ ಆನ್ಲೈನ್ ಟೆಸ್ಟ್ ಇರುತ್ತದೆ ನಂತರ ಕೌಶಲ್ಯ ಪರೀಕ್ಷೆ ನಂತರ ದಾಖಲೆಗಳ ಪರಿಶೀಲನೆ ಮಾಡುವುದರ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಇನ್ನು ಈ ಹುದ್ದೆಗಳ ಅರ್ಜಿ ಸಲ್ಲಿಸುವ ದಿನಾಂಕವನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ದಿನಾಂಕ ಬಿಡುಗಡೆಯಾದ ನಂತರ ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮ್ಮ ಅರ್ಜಿ ಸಲ್ಲಿಸಬಹುದು. ಇದು ಕೇಂದ್ರ ಸರ್ಕಾರದ ಹುದ್ದೆಯಾಗಿದ್ದು ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಸಂಬಳದ ಜೊತೆಗೆ ಭಾರತದಾದ್ಯಂತ ಕೆಲಸ ಇರುತ್ತದೆ. ಮುಂದಿನ ದಿನಗಳಲ್ಲಿ ಆಹಾರ ಇಲಾಖೆಯಲ್ಲಿ ಮಾಡಿಕೊಳ್ಳುವ ಈ ಬೃಹತ್ ನೇಮಕಾತಿಗೆ ನೀವು ಕೂಡ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆಯಬಹುದಾಗಿದೆ. ಈಗಿನಿಂದಲೇ ನೇಮಕಾತಿಗೆ ಬೇಕಾದಂತಹ ಪೂರ್ವ ತಯಾರಿಯನ್ನು ಮಾಡಿಕೊಳ್ಳಿ ಜೊತೆಗೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.