ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಸಿ ವಿಜೇತನಾದ ಚಂದನ್ ಶೆಟ್ಟಿ ಅವರು ಅನೇಕ ರ್ಯಾಪ್ ಸಾಂಗ್ ಹಾಡುವ ಮೂಲಕ ಜನರಿಗೆ ಚಿರಪರಿಚಿತರು. ಕ್ಯೂಟ್ ಡಾಲ್ ನಂತಿರುವ ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆಯಾದರು. ಇದೀಗ ಚಂದನ್ ಅವರು ಹೊಸ ಸಿನಿಮಾ ಒಂದರಲ್ಲಿ ಹೀರೊ ಆಗಿ ಬರಲಿದ್ದಾರೆ. ಆ ಸಿನಿಮಾ ಹಾಗೂ ಚಂದನ್ ಅವರ ಬಗ್ಗೆ ನಿವಿ ಏನು ಹೇಳುತ್ತಾರೆ ಎಂದು ಈ ಲೇಖನದ ಮೂಲಕ ತಿಳಿಯೋಣ.

ಚಂದನ್ ಶೆಟ್ಟಿ ಹೀರೊ ಆಗಿ ಮೊದಲ ಬಾರಿಗೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪತ್ನಿ ನಿವೇದಿತಾ ಗೌಡ ಅವರು ಇದುವರೆಗೂ ಆಫರ್ ಬರುತ್ತಿತ್ತು ಆದರೆ ಚಂದನ್ ಶೆಟ್ಟಿ ಅವರಿಗೆ ಅಷ್ಟು ಇಷ್ಟವಾಗುತ್ತಿರಲಿಲ್ಲ ಈಗ ಬಂದಿರುವ ಆಫರ್ ಚಂದನ್ ಅವರಿಗೆ ಇಷ್ಟವಾಯಿತು ಅದಕ್ಕಾಗಿ ಅವರು ಒಪ್ಪಿಕೊಂಡರು ನನಗೆ ಬಹಳ ಸಂತೋಷವಾಯಿತು ಎಂದು ನಿವೇದಿತಾ ಅವರು ಖುಷಿಯಿಂದ ಹೇಳಿಕೊಂಡರು. ಚಂದನ್ ಅವರು ಅನೇಕ ಹಾಡುಗಳನ್ನು ಹೇಳಿ ಜನರಿಗೆ ಪರಚಿತರಾಗಿದ್ದಾರೆ. ಬಿಗ್ ಬಾಸ್ ಸೀಸನ್ ನಲ್ಲಿ ಭಾಗವಹಿಸಿ ವಿನ್ ಆಗಿದ್ದರು.

ನಂತರ ರಾಜ ರಾಣಿ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಇಬ್ಬರು ಭಾಗವಹಿಸಿದ್ದರು ಇದೀಗ ಚಂದನ್ ಹೀರೊ ಆಗಿ ತೆರೆ ಮೇಲೆ ಬರುತ್ತಿರುವುದು ನನಗೆ ಹೆಮ್ಮೆ ಎನಿಸುತ್ತದೆ ಎಂದು ನಿವೇದಿತಾ ಹೇಳಿದ್ದಾರೆ. ಚಂದನ್ ಹೊಸ ಗೆಟಪ್ ನಲ್ಲಿ ನೋಡಿ ನಿವೇದಿತಾ ಅವರು ಮೊದಲಿಗೆ ಶಾಕ್ ಆದರು ಯಾರೊ ಬೇರೆಯವರು ಎಂಬ ಮನೋಭಾವನೆ ಬಂದಿತ್ತು ಆದರೆ ನಂತರ ಡಿಫರೆಂಟ್ ಎನಿಸಿತು ಇಷ್ಟವಾಯಿತು, ಚಂದನ್ ಅವರು ತಮ್ಮ ಕ್ಯಾರೆಕ್ಟರ್ ನಲ್ಲಿ ಎಷ್ಟು ಇನ್ವೊಲ್ವ ಆಗಿದ್ದರು ಎಂದು ತಿಳಿಯುತ್ತದೆ ಎಂದು ನಿವೇದಿತಾ ಅವರು ತಮ್ಮ ಗಂಡ ಚಂದನ್ ಅವರ ಬಗ್ಗೆ ಖುಷಿಯಿಂದ ಹೇಳಿಕೊಂಡರು. ಚಂದನ್ ಅವರ ಹೊಸ ಗೆಟಪ್ ಕ್ಯಾರಿ ಮಾಡುವುದು ಸುಲಭವಲ್ಲ ಆದರೆ ಅವರು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ ಇದರಿಂದ ಅವರ ಹಾರ್ಡ್ ವರ್ಕ ಗೊತ್ತಾಗುತ್ತದೆ ಎಂದು ಹೇಳಿದರು.

ನಿವೇದಿತಾ ಅವರಿಗೂ ಕೆಲವು ಸಿನಿಮಾ ಆಫರ್ ಬಂದಿದೆ. ಇಬ್ಬರಿಗೂ ಇಷ್ಟವಾಗುವಂತ ಆಫರ್ ಬಂದರೆ ಒಂದೆ ಸಿನಿಮಾದಲ್ಲಿ ನಟಿಸುತ್ತೇವೆ ಎಂದು ನಿವೇದಿತಾ ಹೇಳಿಕೊಂಡಿದ್ದಾರೆ. ಇನ್ನು ನಿವೇದಿತಾ ಅವರಿಗೆ ಸಿನಿಮಾ ಕಥೆ ಇಷ್ಟವಾದರೆ ನಟಿಸಲು ಒಪ್ಪಿಕೊಳ್ಳುತ್ತಾರೆ. ಚಂದನ್ ಶೆಟ್ಟಿ ಅವರ ಹೊಸ ಸಿನಿಮಾದ ಕಥೆ ಬಹಳ ಚೆನ್ನಾಗಿದೆ, ಇದುವರೆಗೂ ನಾನು ಕೇಳಿಲ್ಲ, ನಾನು ಸಿನಿಮಾ ಟೀಮ್ ನೊಂದಿಗೆ ಮಾತನಾಡಿದೆ ಪ್ರತಿಯೊಬ್ಬರು ಹಾರ್ಡ್ ವರ್ಕ್ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಅಲ್ಲದೆ ಇಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಇಡಿ ಸಿನಿಮಾ ತಂಡವನ್ನು ನಾನು ಹಾರೈಸುತ್ತೇನೆ. ಸಿನಿಮಾ ಹೆಚ್ಚಿನ ಮಟ್ಟದಲ್ಲಿ ಯಶಸ್ಸನ್ನು ಪಡೆಯಲಿ ಎಂದು ಹೇಳುತ್ತಾ ನಿವೇದಿತಾ ಅವರು ಚಂದನ್ ಅವರ ಹೊಸ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!