ಇತ್ತೀಚಿನ ದಿನಗಳಲ್ಲಿ ಟ್ರೆಂಡಿಂಗ್ ನಲ್ಲಿ ಇರುವಂತಹ ಸಾಮಾಜಿಕ ಜಾಲತಾಣದಲ್ಲಿ ಯೂಟ್ಯೂಬ್ ಕೂಡ ಒಂದು ಅನೇಕ ಜನರು ಇದರಲ್ಲಿ ತಮ್ಮದೇ ಆದ ಚಾನೆಲ್ಗಳನ್ನು ಸೃಷ್ಟಿಸಿಕೊಂಡು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ ಜನರು ಅವುಗಳಿಗೆ ಲೈಕ್ ಮಾಡುವುದು ಕಮೆಂಟ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹದ್ದು. ಅನೇಕ ಜನರು ತಾವು ಕೂಡ ಯೂಟ್ಯೂಬ್ನಲ್ಲಿ ತಮ್ಮದೇ ಆದ ಒಂದು ಕೂಡ ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿ ನೀವು ಕೂಡ ಒಬ್ಬ ಒಳ್ಳೆಯ ಕ್ರಿಯೇಟರ್ ಆಗಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ. ನಾವಿಂದು ಯುಟ್ಯೂಬ್ ಚಾನೆಲ್ ಗಳನ್ನು ಕ್ರಿಯೇಟ್ ಮಾಡಿದಾಗ ಅವುಗಳಿಗೆ ಬರುವ ಲೈಕ್ ಗಳು ಹಾಗೂ ಕಮೆಂಟ್ ಗಳಿಗೆ ಯಾವ ರೀತಿಯಾಗಿ ಹಣ ಸಿಗುತ್ತದೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.
ನೀವು ಯೂಟ್ಯೂಬ್ ನಲ್ಲಿ ಒಂದು ವಿಡಿಯೋವನ್ನು ಹಾಕುವುದರಿಂದ ವಿಡಿಯೋದಿಂದ ಎಷ್ಟು ಜನ ಸಬ್ಸ್ ಕ್ರೈಬರ್ ಆಗುತ್ತಾರೆ ಎಷ್ಟು ಲೈಕ್ ಸಿಗುತ್ತದೆ ಎಷ್ಟು ಜನ ಕಮೆಂಟ್ ಮಾಡುತ್ತಾರೆ ಯೂಟ್ಯೂಬ್ ನಿಂದ ನಿಮಗೆ ಹಣ ಹೇಗೆ ಸಿಗುತ್ತದೆ ಎಂಬುದನ್ನು ಈಗ ತಿಳಿದುಕೊಳ್ಳೋಣ. ಮೊದಲಿಗೆ ನೀವು ಒಂದು ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿದಾಗ ಎಷ್ಟು ಜನ ಸಬ್ಸ್ ಕ್ರೈಬರ್ ಇದ್ದರೆ ಹಣ ಸಿಗುತ್ತದೆ ಎಂಬುದನ್ನು ನೋಡುವುದಾದರೆ ನಿಮ್ಮ ಹತ್ತಿರ ಸುಮಾರು ಒಂದು ಲಕ್ಷ ಸಬ್ಸ್ ಕ್ರೈಬರ್ಸ್ ಇದ್ದರೆ ಸಾವಿರ ಸಬ್ಸ್ ಕ್ರೈಬರ್ಸ್ ಇದ್ದರೆ ಐದು ನೂರು ಸಬ್ಸ್ ಕ್ರೈಬರ್ಸ್ ಆದರೆ ಅದರಿಂದ ಯಾವುದೇ ತೊಂದರೆ ಇಲ್ಲ ಯಾಕೆಂದರೆ ನಿಮಗೆ ಎಷ್ಟೇ ಸಬ್ಸ್ ಕ್ರೈಬರ್ಸ್ ಇದ್ದರೂ ಅದರಿಂದ ನಿಮಗೆ ಹಣ ಸಿಗುವುದಿಲ್ಲ. ಎಷ್ಟೇ ಜನ ಲೈಕ್ ಮಾಡಿದರೂ ಅದರಿಂದ ಹಣ ಸಿಗುವುದಿಲ್ಲ.
ಯೂಟ್ಯೂಬ್ನಲ್ಲಿ ನೀವು ಹಾಕಿರುವ ವಿಡಿಯೋಗಳಿಗೆ ಹಣ ಬರುವಂತದ್ದು ಕೇವಲ ನಿಮ್ಮ ವಿಡಿಯೋ ಮೇಲೆ ಬರುವಂತಹ ಜಾಹೀರಾತುಗಳಿಂದ ಜಾಹಿರಾತುಗಳು ಎಷ್ಟು ಜನರಿಗೆ ಕಾಣಿಸುತ್ತದೆ ಅದರಿಂದ ನಿಮಗೆ ಹಣ ಬರುತ್ತದೆ ಹಾಗಾದರೆ ಸಾವಿರ ಜನರಿಗೆ ಜಾಹೀರಾತು ಕಾಣಿಸಿಕೊಂಡರೆ ನಿಮಗೆ ಎಷ್ಟು ಹಣ ಸಿಗುತ್ತದೆ ಎಂದರೆ ಮೊದಲಿಗೆ ನಿಮ್ಮ ವಿಡಿಯೋ ಒಳ್ಳೆಯ ಗುಣಮಟ್ಟದಲ್ಲಿದ್ದರೆ ಇಂಗ್ಲಿಷ್ ಭಾಷೆಯಲ್ಲಿ ಇದ್ದರೆ ಹಣಕಾಸಿಗೆ ಶೇರು ಮಾರುಕಟ್ಟೆಗೆ ಸಂಬಂಧಿಸಿದ್ದರೆ ಅಥವಾ ಆಟೋ ಮೊಬೈಲ್ ಗೆ ಸಂಬಂಧಿಸಿದ್ದರೆ ಈ ರೀತಿಯ ವಿಡಿಯೋಗಳಿಗೆ ಹೆಚ್ಚು ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ನಿಮಗೆ ಹೆಚ್ಚಿಗೆ ಸಂಪಾದನೆ ಸಿಗುತ್ತದೆ ಸಾಮಾನ್ಯವಾಗಿ ಸಾವಿರ ವಿವ್ ಗೆ ಎರಡರಿಂದ ಮೂರು ಡಾಲರ್ ಅಂದರೆ ಬೇರೆ ಬೇರೆ ದೇಶಗಳಲ್ಲಿನ ಜನರು ನಿಮ್ಮ ವಿಡಿಯೋವನ್ನು ನೋಡುತ್ತಿದ್ದರೆ ಹೆಚ್ಚಿಗೆ ಸಂಪಾದನೆ ಸಿಗುತ್ತದೆ.
ಇನ್ನು ನೀವು ಸಾಮಾನ್ಯವಾಗಿ ಕನ್ನಡ ಭಾಷೆಯಲ್ಲಿ ಮನೋರಂಜನೆಗೆ ಸಂಬಂಧಿಸಿದ ಅಡುಗೆಗೆ ಸಂಬಂಧಿಸಿದ ಕ್ರೀಡೆಗೆ ಸಂಬಂಧಿಸಿದ ಈ ರೀತಿಯ ವಿಡಿಯೋಗಳನ್ನು ನೀವು ಮಾಡಿದಾಗ ಅದನ್ನು ಕರ್ನಾಟಕದಲ್ಲಿ ಮಾತ್ರ ವೀಕ್ಷಣೆ ಮಾಡುತ್ತಾರೆ ಆಗ ನಿಮಗೆ ಸಾವಿರ ವೀಕ್ಷಣೆಗೆ 0.60 ಅಥವಾ 0.50 ಡಾಲರ್ ವರೆಗೆ ಹಣ ಸಿಗಬಹುದು. ಇದು ಹೆಚ್ಚು ಕಮ್ಮಿ ಆಗುತ್ತಾ ಇರುತ್ತದೆ.ಅನೇಕ ಜನರಿಗೆ ಇರುವ ತಪ್ಪು ಕಲ್ಪನೆ ಎಂದರೆ ನಾವು ಸಬ್ಸ್ ಕ್ರೈಬ ಮಾಡಿದರೆ ನಾವು ಲೈಕ್ ಮಾಡಿದರೆ ಯೂಟ್ಯೂಬರ್ಸ್ ಗಳಿಗೆ ಹಣ ಸಿಗುತ್ತದೆ ಎಂದು ತಿಳಿದುಕೊಂಡಿರುತ್ತಾರೆ.
ಆದರೆ ವಿಡಿಯೋಗಳ ಮೇಲೆ ಎಷ್ಟು ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ ಅದರ ಆಧಾರದ ಮೇಲೆ ನಿಮಗೆ ಯುಟ್ಯೂಬ್ ನಿಂದ ಹಣ ದೊರೆಯುತ್ತದೆ. ಇದಿಷ್ಟು ಯೂಟ್ಯೂಬ್ ನಲ್ಲಿ ನಿಮ್ಮ ವಿಡಿಯೋಗಳಿಗೆ ಹೇಗೆ ಹಣ ದೊರೆಯುತ್ತದೆ ಎಂಬುದರ ಕುರಿತಾದ ಮಾಹಿತಿಯಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.