ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅನೇಕ ಔಷಧೀಯ ಸಸ್ಯಗಳು ಇರುತ್ತವೆ ಆದರೆ ಅವುಗಳ ಬಗ್ಗೆ ಸರಿಯಾದ ಮಾಹಿತಿ ಇರದ ಕಾರಣ ನಾವು ಅವುಗಳನ್ನು ಉಪಯೋಗಿಸುತ್ತಿಲ್ಲ ಅಂತಹ ಸಸಿಗಳಲ್ಲಿ ನೆಲತಾಟಿ ಗಡ್ಡೆಯ ಸಸ್ಯವು ಕೂಡ ಒಂದು ಇದು ಕೂಡ ಪ್ರಕೃತಿಯಲ್ಲಿ ಕಳೆ ರೀತಿಯಲ್ಲಿ ಬೆಳೆದು ಕೊಂಡಿರುತ್ತದೆ. ನೆಲತಾಟಿ ಗಡ್ಡೆ ಒನಕೆ ಗಡ್ಡೆ ನೆಲತಾಳೆ ಹೀಗೆ ಅನೇಕ ಹೆಸರುಗಳಿಂದ ಇದನ್ನು ಕರೆಯುತ್ತಾರೆ

ಇದನ್ನು ಹೆಚ್ಚಾಗಿ ಮಲೆನಾಡಿನ ಪ್ರದೇಶಗಳಲ್ಲಿ ಕಾಣಬಹುದು ಬೆಟ್ಟಗುಡ್ಡಗಳಲ್ಲಿ ಪೊದೆಗಳಲ್ಲಿ ಹುಲ್ಲುಗಾವಲಿನ ಪ್ರದೇಶಗಳಲ್ಲಿ ಅತಿಹೆಚ್ಚು ಗಿಡಗಳು ಬೆಳೆಯುವಂತಹ ಪ್ರದೇಶದಲ್ಲಿ ಇದನ್ನು ಕಾಣಬಹುದು. ಗಿಡದಲ್ಲಿ ಹಳದಿ ಬಣ್ಣದ ಹೂವು ಬಿಡುತ್ತದೆ ಇದನ್ನು ತುಂಬಾ ಸರಳವಾಗಿ ಕಂಡುಹಿಡಿಯಬಹುದು. ಈ ಗಡ್ಡೆಯನ್ನು ಬಳಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯ ಪ್ರಯೋಜನೆಗಳು ಉಂಟಾಗುತ್ತವೆ.

ನಾವಿಂದು ನಿಮಗೆ ನೆಲತಾಟಿ ಗಡ್ಡೆ ಯಾವೆಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಈ ನೆಲ ತಾಟಿ ಗಡ್ಡೆಯನ್ನು ಒಣಗಿಸಿ ಅದರಿಂದ ಚೂರ್ಣವನ್ನು ತಯಾರಿಸಿ ಅದನ್ನು ಜೇನುತುಪ್ಪ ಅಥವಾ ಹಸುವಿನ ತುಪ್ಪದಲ್ಲಿ ಒಂದು ಚಮಚದಂತೆ ನಲವತ್ತೆಂಟು ದಿನ ಸೇವಿಸುವುದರಿಂದ ಯಾರಲ್ಲಿ ಲೈಂ ಗಿಕ ಸಮಸ್ಯೆ ಸಂತಾನ ಸಮಸ್ಯೆ ಇರುತ್ತದೆ ಅದು ನಿವಾರಣೆಯಾಗುತ್ತದೆ ಕೇವಲ ಒಂದೆರಡು ದಿನಗಳನ್ನು ತೆಗೆದುಕೊಳ್ಳುವುದರಿಂದ ಇದು ಪರಿಣಾಮವನ್ನು ಬೀರುವುದಿಲ್ಲ. ಆಯುರ್ವೇದಿಕ ಅಂಗಡಿಗಳಲ್ಲಿ ಇದರ ಚೂರ್ಣ ಸಿಗುತ್ತದೆ ನೆಲೆತಾಟಿ ಗಡ್ಡೆ ಚೂರ್ಣವನ್ನು ಜೊತೆಗೆ ಶತಾವರಿ ಬೇರಿನ ಚೂರ್ಣ ಜೊತೆಗೆ ನೆಗ್ಗಿನ ಮುಳ್ಳಿನ ಚೂರ್ಣ ಮತ್ತು ನಸಗುನ್ನಿ ಬೀಜದ ಚೂರ್ಣವನ್ನು ತೆಗೆದುಕೊಂಡು ಈ ನಾಲ್ಕು ಚೂರ್ಣವನ್ನು ಸಮಪ್ರಮಾಣದಲ್ಲಿ ಅಂದರೆ ಕಾಲು ಚಮಚದಂತೆ ತೆಗೆದುಕೊಳ್ಳಬೇಕು

ನಂತರ ಅದನ್ನು ಬಿಸಿ ನೀರು ಅಥವಾ ಬಿಸಿ ಹಾಲಿಗೆ ಬೆರೆಸಿ ಅದಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಬೆರೆಸಿ ತೆಗೆದುಕೊಳ್ಳುವುದರಿಂದ ವೀರ್ಯಾಣು ಸಮಸ್ಯೆ ಇರುವವರಿಗೆ ಇದರಿಂದ ಉಪಯೋಗವಾಗುತ್ತದೆ. ನೆಲತಾಟಿ ಗಡ್ಡೆ ಚರ್ಮ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ ಈ ಗಡ್ಡೆಯನ್ನು ಗಂಧದ ರೀತಿಯಲ್ಲಿ ತೆದಿ ಚರ್ಮದ ಮೇಲೆ ಇಸುಬು ಉಂಟಾಗಿರುವ ಜಾಗದಲ್ಲಿ ಹಚ್ಚಿದರೆ ಅದು ಕಡಿಮೆಯಾಗುತ್ತದೆ.

ಯಾರಿಗೆ ಶೀತ ನೆಗಡಿ ಕೆಮ್ಮು ಇರುತ್ತದೆ ಅವರು ಕೆಂಡದ ಮೇಲೆ ಈ ನೆಲತಾಟಿ ಗೆಡ್ಡೆಯ ಚೂರ್ಣವನ್ನು ಹಾಕಿ ಅದರ ಹೊಗೆಯನ್ನ ತೆಗೆದುಕೊಳ್ಳಬೇಕು ಅದನ್ನು ಎರಡು ಮೂರು ದಿನಗಳ ಕಾಲ ಮಾಡಬೇಕು ಇದರಿಂದ ಶೀತ ನೆಗಡಿ ಕೆಮ್ಮು ಕಡಿಮೆಯಾಗುತ್ತದೆ. ಇದರ ಚೂರ್ಣವನ್ನು ಸೇವಿಸುವುದರಿಂದ ಸಕ್ಕರೆ ಅಥವಾ ಮಧುಮೇಹ ಕಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದು.

ಆದರೆ ಸೂಕ್ತ ಆಯುರ್ವೇದಿಕ್ ವೈದ್ಯರ ಸಲಹೆಯನ್ನು ಪಡೆದುಕೊಂಡು ಇದನ್ನು ಬಳಸಬೇಕು. ಪಿತ್ತಕೋಶದ ಸಮಸ್ಯೆ ಇರುವವರು ಉರಿಯೂತದ ಸಮಸ್ಯೆ ಇರುವವರು ಇದನ್ನು ಬಳಸಬಹುದು. ಈ ರೀತಿಯಾಗಿ ಕಳೆಯ ರೀತಿಯಲ್ಲಿ ಕಾಣುವ ನೆಲತಾಟಿ ಗಡ್ಡೆಯು ಅನೇಕ ಔಷಧೀಯ ಗುಣಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸುಲಭವಾಗಿ ದೊರೆಯುವ ಗಡ್ಡೆಯನ್ನು ನೀವು ಕೂಡ ಬಳಸಿ ಅದರಲ್ಲಿನ ಔಷಧೀಯ ಪ್ರಯೋಜನಗಳನ್ನು ಪಡೆದುಕೊಳ್ಳಿ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರೊಂದಿಗೆ ಹಂಚಿಕೊಳ್ಳಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!