ಇಂದಿನ ಆಧುನಿಕ ದಿನದಲ್ಲಿ ನಾವು ಯಾವುದೇ ಕೆಲಸವನ್ನು ಮಾಡಬೇಕು ಎಂದರೂ ಕೂಡ ಹೊಸ ಹೊಸ ತಂತ್ರಜ್ಞಾನಗಳನ್ನು ಹೊಸ ಹೊಸ ವಸ್ತುಗಳನ್ನು ಬಳಸಬೇಕಾಗುತ್ತದೆ ಅದೇ ರೀತಿ ಮನೆ ನಿರ್ಮಾಣ ಕಾರ್ಯದಲ್ಲಿಯೂ ಕೂಡ ಇತ್ತೀಚಿನ ದಿನಗಳಲ್ಲಿ ಅನೇಕ ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರವಾಗಿದೆ ಹಿಂದಿನ ಕಾಲದಲ್ಲಿ ಮನೆಯನ್ನು ಮಣ್ಣಿನ ಇಟ್ಟಿಗೆಗಳಿಂದ ನಿರ್ಮಿಸುತ್ತಿದ್ದರು ಆದರೆ ಈಗ ಹೊಸ ಹೊಸ ರೂಪದಲ್ಲಿ ಇಟ್ಟಿಗೆ ಲಭ್ಯವಾಗುತ್ತಿದೆ. ನಾವಿಂದು ನಿಮಗೆ ಮನೆಯನ್ನು ಕಟ್ಟುವುದಕ್ಕೆ ಕೆಂಪು ಇಟ್ಟಿಗೆ ಅಥವಾ ಸಿಮೆಂಟಿನಿಂದ ತಯಾರಿಸಿದ ಇಟ್ಟಿಗೆಗಳನ್ನು ಬಳಸುವುದರಿಂದ ಯಾವ ರೀತಿಯ ಪ್ರಯೋಜನ ಉಂಟಾಗುತ್ತದೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.
ಮೊದಲಿಗೆ ಸಿಮೆಂಟ್ ಇಟ್ಟಿಗೆಗಳನ್ನು ಯಾವುದರಿಂದ ತಯಾರಿಸುತ್ತಾರೆ ಎಂದರೆ ಕಾಂಕ್ರೀಟ್ ಪೌಡರ್ ಪೋರ್ಟ್ ಲ್ಯಾಂಡ್ ಸಿಮೆಂಟ್ ಮರಳು ಜಲ್ಲಿ ನೀರನ್ನು ಮಿಶ್ರಣ ಮಾಡಿ ಸಿಮೆಂಟ್ ಇಟ್ಟಿಗೆಗಳನ್ನು ತಯಾರಿಸುತ್ತಾರೆ. ಅದೇ ರೀತಿ ಕೆಂಪು ಇಟ್ಟಿಗೆಗಳನ್ನು ನೈಸರ್ಗಿಕ ಮಣ್ಣನ ಬಳಸಿ ತಯಾರು ಮಾಡುತ್ತಾರೆ. ಕೆಂಪು ಇಟ್ಟಿಗೆ ಮತ್ತು ಸಿಮೆಂಟಿನಿಂದ ತಯಾರಿಸಿದ ಇಟ್ಟಿಗೆಗಳ ನಡುವೆ ಯಾವ ರೀತಿಯ ವ್ಯತ್ಯಾಸವಿದೆ ಎನ್ನುವುದನ್ನು ತಿಳಿಯುವುದಾದರೆ ಮೊದಲಿಗೆ ಸಂಕುಚಿತ ಶಕ್ತಿ. ಇದು ತುಂಬಾ ಮುಖ್ಯವಾದದ್ದು ನಾವು ಇಟ್ಟಿಗೆಯ ಮೇಲೆ ಭಾರ ಹಾಕಿದಾಗ ಅದು ಎಷ್ಟು ಭಾರವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಮೊದಲಿಗೆ ಗಮನಿಸಬೇಕು ಸಾಮಾನ್ಯವಾಗಿ ಕೆಂಪು ಇಟ್ಟಿಗೆಯಲ್ಲಿ ಸಂಕುಚಿತ ಶಕ್ತಿ ಕಡಿಮೆ ಇರುತ್ತದೆ ಹಾಗಾಗಿ ಎರಡರಿಂದ ಮೂರು ಫ್ಲೋರ್ ಕಟ್ಟಡವನ್ನು ಕಟ್ಟುವಲ್ಲಿ ಕೆಂಪು ಇಟ್ಟಿಗೆಯನ್ನು ಬಳಸುವುದು ಒಳ್ಳೆಯದು. ಕೆಂಪು ಇಟ್ಟಿಗೆಯಲ್ಲಿ ನಲವತ್ತೈದರಿಂದ ಅರವತ್ತೈದು ಕೆಜಿ ಶಕ್ತಿ ಪರ್ ಸ್ಕ್ವೇರ್ ಸೆಂಟಿ ಮೀಟರ್ ಗೆ ಇರುತ್ತದೆ
ಕೆಂಪು ಇಟ್ಟಿಗೆಗೆ ಹೋಲಿಸಿದರೆ ಸಂಕುಚಿತ ಶಕ್ತಿ ಸಿಮೆಂಟ್ ಇಟ್ಟಿಗೆಗಳಲ್ಲಿ ಹೆಚ್ಚಿಗೆ ಇರುತ್ತದೆ.ಐವತ್ತೈದರಿಂದ ನೂರಾ ಇಪ್ಪತ್ತೈದು ಕೆಜಿ ಶಕ್ತಿ ಪರ್ ಸ್ಕ್ವೇರ್ ಸೆಂಟಿ ಮೀಟರ್ ಗೆ ಇರುತ್ತದೆ. ಹೆಚ್ಚಾಗಿ ಬಹು ಮಹಡಿಯ ಕಟ್ಟಡಗಳನ್ನು ಕಟ್ಟುವಾಗ ಸಿಮೆಂಟ್ ಇಟ್ಟಿಗೆಗಳನ್ನು ಬಳಸುವುದು ಒಳ್ಳೆಯದು. ಕೆಂಪು ಇಟ್ಟಿಗೆಗಳನ್ನು ಬಳಸಿ ಕಟ್ಟಡವನ್ನು ಕಟ್ಟಿದಾಗ ಯಾವ ರೀತಿಯಾಗಿ ರಚನಾತ್ಮಕ ಹೊರೆ ಇರುತ್ತದೆ ಎನ್ನುವುದನ್ನು ನೋಡುವುದಾದರೆ ಕೆಂಪು ಇಟ್ಟಿಗೆಗಳನ್ನು ಬಳಸಿ ಕಟ್ಟಡವನ್ನೂ ನಿರ್ಮಿಸಿದಾಗ ಡೆಡ್ ಲೋಡ್ ಹೆಚ್ಚಾಗಿ ಬಿಳುತ್ತದೆ ಕಾರಣ ಕೆಂಪು ಇಟ್ಟಿಗೆಗಳು ಭಾರವಾಗಿರುತ್ತವೆ ಇದರಿಂದ ಕಟ್ಟಡದ ಮೇಲೆ ಸಾಕಷ್ಟು ಒತ್ತಡ ಬಿಳುತ್ತದೆ. ಸಿಮೆಂಟ್ ಇಟ್ಟಿಗೆಗಳನ್ನು ಬಳಸಿ ಕಟ್ಟಡವನ್ನು ನಿರ್ಮಾಣ ಮಾಡಿದಾಗ ಅಷ್ಟು ಭಾರ ಬೀಳುವುದಿಲ್ಲ. ಕೆಂಪು ಇಟ್ಟಿಗೆಗಳು ಹೆಚ್ಚು ಉಷ್ಣ ಸಾಂದ್ರತೆಯನ್ನು ಹೊಂದಿರುತ್ತದೆ ಇವು ಶಾಖವನ್ನು ಮತ್ತು ನೀರನ್ನು ಹೆಚ್ಚಾಗಿ ಹೀರಿಕೊಳ್ಳುತ್ತದೆ ಹಗಲಿನಲ್ಲಿ ಕೆಂಪು ಇಟ್ಟಿಗೆಗಳು ಶಾಖವನ್ನು ಹೀರಿಕೊಳ್ಳುತ್ತದೆ ಮತ್ತು ರಾತ್ರಿ ಅದನ್ನು ಬಿಡುಗಡೆ ಮಾಡುತ್ತವೆ.
ಚಳಿಗಾಲದಲ್ಲಿ ನಿಮ್ಮ ಮನೆಯನ್ನು ಬೆಚ್ಚಗಿಡಲು ಮತ್ತು ಬೇಸಿಗೆಯಲ್ಲಿ ನಿಮ್ಮ ಮನೆಯನ್ನು ತಂಪಾಗಿಡಲು ಕೆಂಪು ಇಟ್ಟಿಗೆಗಳು ಅತ್ಯುತ್ತಮವಾಗಿವೆ. ಸಿಮೆಂಟ್ ಇಟ್ಟಿಗೆಗಳು ಹೆಚ್ಚಿನ ಶಾಖವಾಹಕತೆಯನ್ನು ಹೊಂದಿದೆ ಬಿಸಿಲಿನಲ್ಲಿ ನಿಮ್ಮ ಮನೆ ಬಿಸಿಯಾಗಿರುತ್ತದೆ ಮತ್ತು ದಿನ ತಣ್ಣಗಾಗುತ್ತಿದ್ದಂತೆ ನೀವು ಇನ್ನೂ ಸ್ವಲ್ಪ ಶಾಖವನ್ನು ಅನುಭವಿಸುತ್ತೀರಿ. ನಿಮ್ಮ ಏರ್ ಕಂಡೀಷನರ್ ಸ್ವಿಚ್ ಹಾಕಿದಾಗ ವಿದ್ಯುತ್ ವೆಚ್ಚ ಹೆಚ್ಚಾಗುತ್ತದೆ. ಕೆಂಪು ಇಟ್ಟಿಗೆಗಳಲ್ಲಿ ನೈಸರ್ಗಿಕವಾಗಿ ಸಿಗುವ ಮಣ್ಣನ್ನು ಬಳಸಲಾಗುತ್ತದೆ ಕೆಂಪು ಇಟ್ಟಿಗೆಗಳ ತಯಾರಿಕೆಯ ಸಮಯದಲ್ಲಿ ಅವು ಹೆಚ್ಚು ಕಾರ್ಬನ್ ಡೈಆಕ್ಸೈಡ್ ಅನ್ನು ಹೊರಸೂಸುತ್ತವೆ. ಸಿಮೆಂಟ್ ಇಟ್ಟಿಗೆಗಳನ್ನು ತಯಾರಿಸುವ ಸಮಯದಲ್ಲಿ ಇಂಗಾಲದ ಡೈಯಾಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಹೊರಗೆ ಹೋಗುವುದಿಲ್ಲ. ಸಾಮಾನ್ಯವಾಗಿ ಕೆಂಪು ಇಟ್ಟಿಗೆಗಳು ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುತ್ತವೆ.
ಕೆಂಪು ಇಟ್ಟಿಗೆಗಳಿಗೆ ಹೋಲಿಸಿದರೆ ಸಿಮೆಂಟ್ ಇಟ್ಟಿಗೆಗಳು ಕಡಿಮೆ ಪ್ರಮಾಣದ ನೀರನ್ನು ಹೀರಿಕೊಳ್ಳುತ್ತವೆ. ಮನೆಯನ್ನು ನಿರ್ಮಿಸುವಾಗ ನಾವು ಮಾಡುವಂತಹ ವೆಚ್ಚ ಬಹಳ ಮುಖ್ಯವಾಗಿರುತ್ತದೆ ಕೆಂಪು ಇಟ್ಟಿಗೆಗಳನ್ನು ಖರೀದಿಸುವಾಗ ಅವು ಕಡಿಮೆ ಬೆಲೆಗೆ ಸಿಗುತ್ತವೆ ಆದರೆ ಗಾರೆ ಕೆಲಸ ನಿರ್ಮಾಣದ ಕೆಲಸ ಮಾಡುವಾಗ ಅದು ಹೆಚ್ಚಿನ ಪ್ರಮಾಣದ ಸಿಮೆಂಟ್ ಮತ್ತು ಮರಳನ್ನು ತೆಗೆದುಕೊಳ್ಳುತ್ತದೆ. ಆಗ ನಿಮ್ಮ ಒಟ್ಟಾರೆ ವೆಚ್ಚ ಹೆಚ್ಚಾಗುತ್ತದೆ. ಸಿಮೆಂಟ್ ಇಟ್ಟಿಗೆಗಳ ದರ ಹೆಚ್ಚಿಗೆ ಇರುತ್ತದೆ ಆದರೆ ನಿರ್ಮಾಣಕಾರ್ಯದಲ್ಲಿ ಕಡಿಮೆ ಸಿಮೆಂಟ್ ಸಾಕಾಗುತ್ತದೆ. ನೀವು ಒಂದರಿಂದ ಎರಡು ಮಹಡಿ ಕಟ್ಟಡವನ್ನು ಕಟ್ಟುವುದಿದ್ದರೆ ಕೆಂಪು ಇಟ್ಟಿಗೆಗಳನ್ನು ಬಳಸಬಹುದು. ವಾತಾವರಣದಲ್ಲಿ ತಂಪು ಇದ್ದರೆ ಮನೆಯೊಳಗೂ ಕೂಡ ತಂಪಾಗಿರುತ್ತದೆ ಹೊರಗಡೆ ಬಿಸಿಲಿದ್ದರೆ ಮನೆಯ ಒಳಗೆ ಬೆಚ್ಚಗಿರುತ್ತದೆ.
ಸಿಮೆಂಟ್ ಇಟ್ಟಿಗೆಗಳನ್ನು ಬಳಸಿ ತಯಾರಿಸಿದ ಮನೆಯಲ್ಲಿ ಹೊರಗಡೆ ಬಿಸಿಲಿದ್ದಾಗ ಒಳಗಡೆ ಬಿಸಿ ವಾತಾವರಣ ಇರುತ್ತದೆ ಹೊರಗಡೆ ತಂಪು ವಾತಾವರಣ ಇದ್ದಾಗಲೂ ಮನೆಯೊಳಗಡೆ ಸ್ವಲ್ಪ ಬೆಚ್ಚಗಿನ ವಾತಾವರಣ ಇರುತ್ತದೆ. ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಾಣ ಮಾಡುವಾಗ ಸಿಮೆಂಟ್ ಇಟ್ಟಿಗೆಗಳನ್ನು ಬಳಸುವುದು ಒಳ್ಳೆಯದು. ಹೀಗಾಗಿ ನೀವು ಯಾವ ರೀತಿಯ ಕಟ್ಟಡವನ್ನು ಕಟ್ಟುತ್ತಿರಿ ಎನ್ನುವುದರ ಮೇಲೆ ಮತ್ತು ನಿಮ್ಮ ಬಂಡವಾಳದ ಆಧಾರದ ಮೇಲೆ ನಿಮಗೆ ಯಾವ ರೀತಿಯ ಇಟ್ಟಿಗೆಗಳು ಬೇಕು ಎಂಬುದನ್ನು ಆಯ್ಕೆಮಾಡಿಕೊಳ್ಳಬೇಕು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.