ನಾವಿಂದು ಫೆಬ್ರವರಿ ತಿಂಗಳಲ್ಲಿ ವೃಶ್ಚಿಕ ರಾಶಿಯವರ ರಾಶಿ ಫಲ ಯಾವ ರೀತಿಯಾಗಿದೆ ಎಂಬುದರ ಕುರಿತಾಗಿ ತಿಳಿದುಕೊಳ್ಳೋಣ. ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹ ಮತ್ತು ಕುಜ ಗ್ರಹ ಧೈರ್ಯಕ್ಕೆ ಇನ್ನೊಂದು ಹೆಸರು ಮಂಗಳಗ್ರಹ. ಅಂತಹ ಶಕ್ತಿಶಾಲಿ ಗ್ರಹದ ಸಂಖ್ಯೆ ಒಂಬತ್ತು ಹದಿನೆಂಟು ಇಪ್ಪತ್ತೇಳು. ವೃಶ್ಚಿಕ ರಾಶಿ ಮಂಗಳ ಗ್ರಹದ ಅಡಿಯಲ್ಲಿ ಬರುವುದರಿಂದ ಧೈರ್ಯ ಸಾಹಸ ವೀರತನ ಈ ರೀತಿಯ ಒಳ್ಳೆಯ ಗುಣಗಳನ್ನು ಹೊಂದಿದೆ. ಹಾಗಾದರೆ ಫೆಬ್ರವರಿ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಯಾವ ರೀತಿಯ ರಾಶಿ ಫಲವಿದೆ ಎಂಬುದನ್ನು ನೋಡುವುದಾದರೆ ವೃಶ್ಚಿಕರಾಶಿಯವರಿಗೆ ಫೆಬ್ರುವರಿ ತಿಂಗಳಲ್ಲಿ ಮಿಶ್ರಿತ ಫಲವಿದ್ದು ಶುಭಫಲಗಳು ಅಶುಭ ಫಲಗಳು ಎರಡು ಇರುವುದರಿಂದ ಹುಷಾರಾಗಿ ಇರುವುದು ಒಳ್ಳೆಯದು.

ಫೆಬ್ರುವರಿಯಲ್ಲಿ ವೃಶ್ಚಿಕ ರಾಶಿಗೆ ಉತ್ತಮವಾಗಿರುವುದು ಯಾವುದು ಎಂದರೆ ಒಂದನೇ ತಾರೀಕಿನಿಂದ ಫೆಬ್ರುವರಿ ಹತ್ತೊಂಬತ್ತರವರೆಗೆ ರಾಶಿ ಅಧಿಪತಿ ಎರಡನೇ ಮನೆಯಲ್ಲಿರುವುದು ಇವರಿಗೆ ಒಳ್ಳೆಯದನ್ನು ಉಂಟುಮಾಡುತ್ತದೆ. ಇಪ್ಪತ್ತೆಂಟನೇ ತಾರೀಖಿನಂದು ಮಂಗಳ ಗ್ರಹ ಉಚ್ಚವಾಗುತ್ತದೆ ಗುರು ಗ್ರಹ ನಾಲ್ಕನೇ ಮನೆಯಲ್ಲಿರುವುದು ಕೂಡ ಉತ್ತಮವಾಗಿದೆ ಇಪ್ಪತ್ತೆಂಟನೇ ತಾರೀಖಿನ ಸುಮಾರಿಗೆ ಗುರು ಮತ್ತು ಸೂರ್ಯ ಒಟ್ಟಿಗೆ ಸೇರಿ ಜೀವಾತ್ಮ ಸಂಯೋಗ ಕೊಡುತ್ತಾರೆ ಇದು ಕೂಡ ಒಳ್ಳೆಯದು. ಇನ್ನು ಚಂದ್ರ ಮತ್ತು ಶನಿ ಅಲ್ಲಿಯೇ ಇರುವುದು ನಷ್ಟವನ್ನು ಉಂಟುಮಾಡುತ್ತದೆ. ರಾಶಿಯಲ್ಲಿ ಕೇತು ಏಳನೇ ಮನೆಯಲ್ಲಿ ಜೊತೆಗೆ ರಾಹು ಇರುವುದರಿಂದ ಕೆಲವು ತೊಂದರೆಗಳು ಉಂಟಾಗುತ್ತದೆ.

ವೃಶ್ಚಿಕ ರಾಶಿಯ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಾದಂತಹ ತೊಂದರೆಗಳು ಇಲ್ಲ ಕ್ರೀಡಾ ವಿಭಾಗದಲ್ಲಿ ತೊಡಗಿಸಿಕೊಂಡಿರುವವರಿಗೆ ಕೂಡ ಇದು ಉತ್ತಮ ಸಮಯವಾಗಿದೆ. ಹಾಗಾಗಿ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಇದು ಒಳ್ಳೆಯ ಸಮಯವಾಗಿದೆ. ಆರೋಗ್ಯದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಕಾಣಿಸಿಕೊಳ್ಳುತ್ತವೆ ಕೆಳಗೆ ಬಿದ್ದು ಸಣ್ಣಪುಟ್ಟ ಗಾಯಗಳಾಗಬಹುದು ಹಾಗಾಗಿ ವಿದ್ಯಾರ್ಥಿಗಳು ಸ್ವಲ್ಪ ಗಮನವನ್ನು ಹರಿಸಬೇಕು. ಖಾಸಗಿ ವಲಯಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಕೆಲಸದಲ್ಲಿ ಬಡ್ತಿ ಪಡೆಯುವುದಕ್ಕೆ ಪ್ರಯತ್ನಿಸಬಹುದು. ನೀವು ಈ ಮೊದಲು ಯಾರಿಗಾದರೂ ಹಣವನ್ನು ನೀಡಿದ್ದರೆ ಆ ಹಣ ನಿಮಗೆ ಹಿಂತಿರುಗಿ ಬರುತ್ತದೆ. ತಮ್ಮದೇ ಆದ ಉದ್ಯಮದಲ್ಲಿ ತೊಡಗಿಕೊಂಡಿರುವವರು ಕೂಡ ಉತ್ತಮವಾದಂತಹ ಲಾಭಗಳು ಕಂಡುಬರುತ್ತವೆ.

ಖಾಸಗಿ ವಲಯದಲ್ಲಿ ಸೆಕ್ಯೂರಿಟಿ ಕೆಲಸ ಮಾಡುವಂತವರಿಗೆ ಅದನ್ನು ನಡೆಸಿಕೊಂಡು ಹೋಗುವವರಿಗೆ ಉತ್ತಮವಾದ ಲಾಭ ಕಂಡುಬರುತ್ತದೆ. ಆದರೆ ಸರ್ಕಾರಿ ವಲಯದಲ್ಲಿ ಕೆಲಸ ಮಾಡುವ ರಾಜಕೀಯ ವ್ಯಕ್ತಿಗಳಿಗೆ ವಯಸ್ಸಾಗಿರುವ ವ್ಯಕ್ತಿಗಳಿಗೆ ಅಷ್ಟು ಒಳ್ಳೆಯ ಸಮಯ ಇದಾಗಿರುವುದಿಲ್ಲ ಕೆಲವೊಂದು ಮಾನಸಿಕ ಹಿಂಸೆಗಳು ಉಂಟಾಗಬಹುದು. ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವವರಿಗೆ ಒಳ್ಳೆಯದಾಗುತ್ತದೆ ಆದರೆ ಒಂದು ಕಡೆ ಕೆಲಸ ಮಾಡುತ್ತಿರುವವರಿಗೆ ಮಾನಸಿಕ ಹಿಂಸೆಗಳು ತೊಂದರೆಗಳು ಉಂಟಾಗಬಹುದು. ವಿದೇಶಕ್ಕೆ ಹೋಗಿ ಕೆಲಸ ಮಾಡುವಂತವರಿಗೆ ಒತ್ತಡ ಹೆಚ್ಚಾಗುತ್ತದೆ. ಗಂಡ ಹೆಂಡತಿಯರ ನಡುವೆ ಸ್ವಲ್ಪ ಸಂಬಂಧದಲ್ಲಿ ಮನಸ್ತಾಪಗಳು ಉಂಟಾಗಬಹುದು. ಆ ಕುರಿತು ಎಚ್ಚರವನ್ನು ವಹಿಸಬೇಕು. ವೃತ್ತಿಯಿಂದ ನಿವೃತ್ತಿಯಾದಂತಹ ವ್ಯಕ್ತಿಗಳಿಗೆ ಎಲುಬಿಗೆ ಸಂಬಂಧಿಸಿದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಚಿಕ್ಕವರಿಂದ ದೊಡ್ಡವರವರೆಗೆ ಬೆಂಕಿಯಿಂದ ಮತ್ತು ವಿದ್ಯುತ್ ನಿಂದ ಸಣ್ಣಪುಟ್ಟ ಅನಾಹುತಗಳು ಉಂಟಾಗಬಹುದು ಆ ಕುರಿತು ಎಚ್ಚರಿಕೆ ವಹಿಸಬೇಕು. ವೃಶ್ಚಿಕ ರಾಶಿಯವರು ಫೆಬ್ರವರಿ ತಿಂಗಳಿನಲ್ಲಿ ಒಳ್ಳೆಯ ಫಲಗಳನ್ನು ಪಡೆಯುವುದಕ್ಕೆ ಷಣ್ಮುಖನನ್ನ ಮೊರೆ ಹೋಗಬೇಕು. ಪ್ರತಿ ಮಂಗಳವಾರ ನಿಮ್ಮ ಕೈಯಲ್ಲಾದಷ್ಟು ಅರ್ಚನೆ ಪೂಜೆ ಕೆಂಪು ಹೂಗಳನ್ನು ಷಣ್ಮುಖನಿಗೆ ಅರ್ಪಿಸಬೇಕು. ಜೊತೆಗೆ ಕೆಂಪುಬಣ್ಣದ ಸಿಹಿತಿಂಡಿಯನ್ನು ಷಣ್ಮುಖನ ದೇವಸ್ಥಾನದಲ್ಲಿ ಅರ್ಚನೆಗೆ ಇಟ್ಟು ಅದನ್ನು ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಅಥವಾ ಅನಾಥಾಶ್ರಮಕ್ಕೆ ಅಥವಾ ಕೈಕಾಲುಗಳು ಊನ ಇರುವವರಿಗೆ ನೀಡಬೇಕು.

ಸಾಧ್ಯವಾದರೆನಿಮ್ಮ ಕೈಯಲ್ಲಾದಷ್ಟು ರಕ್ತದಾನವನ್ನು ಮಾಡುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ನಿಮಗೆ ನಕಾರಾತ್ಮಕ ಪರಿಣಾಮ ಕಡಿಮೆಯಾಗಿ ಒಳ್ಳೆಯ ಫಲಗಳು ದೊರೆಯುತ್ತವೆ. ಈ ರೀತಿಯಾಗಿ ವೃಶ್ಚಿಕರಾಶಿಯವರಿಗೆ ಫೆಬ್ರವರಿ ತಿಂಗಳಿನಲ್ಲಿ ಶುಭ ಮತ್ತು ಅಶುಭ ಫಲಗಳು ಮಿಶ್ರಿತವಾಗಿದ್ದು ನಾವು ಮೇಲೆ ತಿಳಿಸಿರುವ ಪರಿಹಾರವನ್ನು ಮಾಡಿಕೊಳ್ಳುವ ಮೂಲಕ ಉತ್ತಮ ಫಲವನ್ನು ಪಡೆಯಬಹುದಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!