ಊಟ ಮಾಡುವಾಗ ಸಾಂಬಾರಿನಲ್ಲಿ ನುಗ್ಗೆಕಾಯಿಯ ತುಂಡು ಕಂಡ ತಕ್ಷಣ ಹೆಚ್ಚಿನವರು ಮುಖ ಗಂಟಿಕ್ಕಿಕೊಳ್ಳುತ್ತಾರೆ. ಅರಿವಿಲ್ಲದವನಿಗೆ ವಜ್ರವೂ ಕಲ್ಲು ಎಂಬಂತೆ ಅತ್ಯಂತ ನಿಕೃಷ್ಟತೆಯಿಂದ ಎತ್ತಿ ಕೆಳಕ್ಕೆ ಎಸೆಯುತ್ತಾರೆ, ನುಗ್ಗೆಕಾಯಿಯನ್ನು ಇಷ್ಟ ಪಡುವವರು ಇದಕ್ಕಿಟ್ಟ ಹೆಸರು ಟಿಂಬರ್ ಅಥವಾ ಮರದ ದಿಮ್ಮಿ, ವಾಸ್ತವದಲ್ಲಿ, ನುಗ್ಗೆಕಾಯಿಯ ಮರವೂ ಒಂದು ಬಗೆಯ ಕಲ್ಪ ವೃಕ್ಷ ಇದ್ದ ಹಾಗೆ.ಇದನ್ನು ಸೇವಿಸುವುದರಿಂದ ನೀವು ಅನೇಕ ಗಂಭೀರ ರೋಗಗಳಿಂದ ದೂರವಿರಬಹುದು. ಹಣ್ಣುಗಳು ಮತ್ತು ತರಕಾರಿಗಳ ವಿಷಯದಲ್ಲಿ ಭಾರತವನ್ನು ಶ್ರೀಮಂತ ದೇಶವೆಂದು ಪರಿಗಣಿಸಲಾಗಿದೆ. ಇಲ್ಲಿ ನೀವು ಅಸಂಖ್ಯಾತ ಸಸ್ಯಾಹಾರಿ ಆಹಾರವನ್ನು ನೋಡುತ್ತೀರಿ, ಆದರೆ ಮಾಹಿತಿಯ ಕೊರತೆಯಿಂದಾಗಿ ಜನರು ಎಲ್ಲಾ ರುಚಿಕರವಾದ ತರಕಾರಿಗಳನ್ನು ಆನಂದಿಸಲು ಸಾಧ್ಯವಾಗುವುದಿಲ್ಲ.
ನುಗ್ಗೆಕಾಯಿ ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣ ಮತ್ತು ಪೊಟ್ಯಾಸಿಯಂ, ಮುಂತಾದ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ.ನುಗ್ಗೆಕಾಯಿಯಲ್ಲಿ ಕಂಡುಬರುವ ಪೌಷ್ಟಿಕಂಶ ಮೌಲ್ಯಗಳು, ಇದು ಫೈಬರ್, ವಿಟಮಿನ್, ಎ ಬಿ ಸಿ ಡಿ ಕ್ಯಾಲ್ಸಿಯಂ ಪ್ರೊಟೀನ್, ಕಾರ್ಬೋಹೈಡ್ರೆಟ್, ರಂಜಕ, ಪೊಟ್ಯಾಶಿಯಂ, ಕಬ್ಬಿಣ, ತಾಮ್ರ, ಮೆಗ್ನಿಶಿಯಂ, ತಾಮ್ರ, ಮ್ಯಾಂಗನಿಸ್, ಸೋಡಿಯಂ, ಸತು, ಸೆಲೆನಿಯಂ ಇತ್ಯಾದಿ ಪೋಷಕಾಂಶಗಳಿಂದ ಸಮೃದ್ಧವಾಗಿದೆ,ಇದರ ಎಲೆಗಳು, ಕಾಯಿ, ಚಿಗುರು, ಬೇರು, ತೊಗಟೆ ಎಲ್ಲವೂ ಒಂದಲ್ಲ ಒಂದು ಬಗೆಯಿಂದ ನೆರವಿಗೆ ಬರುತ್ತದೆ ಹಾಗೂ ಆರೋಗ್ಯಕರಿಯೂ ಆಗಿವೆ, ವಿಶೇಷವಾಗಿ ಇದರ ಕಾಯಿ ಮತ್ತು ಎಲೆಗಳು. ವಿಶ್ವ ಈ ಎಲೆಗಳನ್ನು “ಮೋರಿಂಗಾ ಲಿವ್ಸ್ ಎಂದು ಗುರುತಿಸುತ್ತದೆ.ವಿವಿಧ ಅರೋಗ್ಯ ಸಂಸ್ಥೆಗಳು ಈ ಎಲೆಗಳನ್ನು ಈಗಾಗಲೇ ಸೂಪರ್ ಫುಡ್ ಅಥವಾ ಅತ್ಯುತ್ತಮ ಆಹಾರ ಎಂಬ ಪಟ್ಟಿಯಲ್ಲಿ ಸೇರಿಸಿದೆ.
ನುಗ್ಗೆಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ರಕ್ತದಲ್ಲಿ ಸಕ್ಕರೆಯ ಮಟ್ಟ ಸಮತೋಲನದಲ್ಲಿರುತ್ತದೆ. ನುಗ್ಗೆಯಲ್ಲಿರುವ ಕೆಲವು ಪೋಷಕಾಂಶಗಳು ಈ ಕಾರ್ಯಕ್ಕೆ ನೆರವು ನೀಡುತ್ತವೆ. ಅಲ್ಲದೆ ಅಧಿಕ ರಕ್ತದ ಒತ್ತಡವನ್ನೂ ನಿಯಂತ್ರಿಸಿ ಹೃದಯದ ಅರೋಗ್ಯವನ್ನು ವೃದ್ಧಿಸುತ್ತದೆ. ರಕ್ತದ ಸ್ನಿಗ್ದತೆ ಎಷ್ಟಿರಬೇಕೋ ಅಷ್ಟು ಮಟ್ಟಿಗೆ ಇರುವಂತೆ ಮಾಡುವ ಮೂಲಕ ರಕ್ತದ ಹರಿವನ್ನು ಆರೋಗ್ಯಕರವಾಗಿಸುತ್ತದೆ ಹಾಗೂ ಈ ಮೂಲಕ ದೇಹದ ಎಲ್ಲಾ ಕಾರ್ಯಗಳು ಆರೋಗ್ಯಕರವಾಗಿ ನೆಡೆಯಲು ಸಾಧ್ಯವಾಗುತ್ತದೆ. ಮಧುಮೇಹ ರೋಗಿಗಳಿಗೆ ಉಪಯುಕ್ತ ನುಗ್ಗೆಕಾಯಿ, ನುಗ್ಗೆಕಾಯಿಯಲ್ಲಿ ರಿಬೋಪ್ಲಾವಿನ್ ಸಮೃದ್ಧವಾಗಿದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ರಿಬೋಪ್ಲಾವಿನ್ ನಮಗೆ ಸಹಾಯ್ ಮಾಡುತ್ತದೆ,
ನುಗ್ಗೆಕಾಯಿ ಅನ್ನು ಯಾವುದೇ ರೂಪದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು.ಇದು ಮಧುಮೇಹ ರೋಗಿಗಳಿಗೆ ಯಾವುದೇ ಔಷಧಿಗಿಂತ ಕಡಿಮೆ ಇಲ್ಲಾ.ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪಿನಲ್ಲಿ ಸಕ್ಕರೆಯ ಅಂಶ ಕಡಿಮೆ ಇದ್ದು ವಿಟಮಿನ್ ಗಳು ಮತ್ತು ಖನಿಜಗಳು ಪ್ರಮಾಣ ಹೆಚ್ಚಾಗಿದೆ, ಹಾಗಾಗಿ ಈ ತರಕಾರಿ ಮತ್ತು ಸೊಪ್ಪು ಮಧುಮೇಹಿಗಳು ಸೇವಿಸಲು ಯೋಗ್ಯವಾಗಿದ್ದು ದೇಹದ ರಕ್ತದಲ್ಲಿ ಸಕ್ಕರೆಯ ಮಟ್ಟ ಸೂಕ್ತವಾಗಿರಲು ನೆರವಾಗುತ್ತವೆ ಹಾಗಾಗಿ ಮಧು ಮೇಹಿಗಳು ಈ ಸೊಪ್ಪು ಮತ್ತು ನುಗ್ಗೆಕಾಯಿಯನ್ನು ಹೆಚ್ಚು ಹೆಚ್ಚಾಗಿ ಸೇವಿಸುವಂತೆ ತಜ್ಞರು ಸಲಹೆ ಮಾಡುತ್ತಾರೆ.