ಇಂದಿನ ದಿನಗಳಲ್ಲಿ ಜನಸಾಮಾನ್ಯರ ಬಳಿ ಆಧಾರ್ ಕಾರ್ಡ್ ಗಳು ಯಾವ ರೀತಿಯಾಗಿ ಕಡ್ಡಾಯವಾಗಿರುತ್ತದೆ ಅದೇ ರೀತಿಯಲ್ಲಿ ಪಾನ್ ಕಾರ್ಡ್ ಗಳು ಕೂಡ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕೆಲವರ ಬಳಿ ಒಂದೊಂದೇ ಪಾನ್ ಕಾರ್ಡ್ ಇರುತ್ತವೆ ಆದರೆ ಕೆಲವರು ಎರಡೆರಡು ಪಾನ್ ಕಾರ್ಡುಗಳನ್ನು ಹೊಂದಿರುತ್ತಾರೆ. ಎರಡೆರಡು ಪಾನ್ ಕಾರ್ಡುಗಳನ್ನು ಹೊಂದಿದ್ದರೆ ಅದು ಅಪರಾಧವಾಗುತ್ತದೆ. ಅಧಿಕಾರಿಗಳಿಗೆ ತಿಳಿದರೆ ನಿಮಗೆ ಅದಕ್ಕೆ ದಂಡ ವಿಧಿಸುತ್ತಾರೆ. ಹಾಗಾಗಿ ಎರಡೆರಡು ಪಾನ್ ಕಾರ್ಡ್ ಇರುವವರು ಒಂದು ಪಾನ್ ಕಾರ್ಡ್ ನ್ನು ಯಾವ ರೀತಿಯಾಗಿ ಕ್ಯಾನ್ಸಲ್ ಮಾಡಿಕೊಳ್ಳಬಹುದು ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ನಮ್ಮ ಭಾರತ ದೇಶದಲ್ಲಿ ಒಬ್ಬ ವ್ಯಕ್ತಿಗೆ ಒಂದು ಪಾನ್ ನಂಬರ್ ಮಾತ್ರ ಸಿಗುತ್ತದೆ. ಪಾನ್ ಕಾರ್ಡ್ ಎಂದರೆ ಅದು ಪರ್ಮನೆಂಟ್ ಅಕೌಂಟ್ ನಂಬರ್ ಎಂದು ಅರ್ಥ ಒಬ್ಬ ವ್ಯಕ್ತಿಗೆ ಒಂದು ಪರ್ಮನೆಂಟ್ ಅಕೌಂಟ್ ನಂಬರ್ ಸಿಗುತ್ತದೆ ಇದು ನಿಮ್ಮ ಹಣದವ್ಯವಹಾರದ ಮಾಹಿತಿಯನ್ನು ಆಸ್ತಿಯ ಮೌಲ್ಯವನ್ನು ಹಾಗೂ ನಿಮ್ಮ ಆಸ್ತಿಗೆ ಸಂಬಂಧಪಟ್ಟ ಮಾಹಿತಿಯನ್ನು ನೀಡುತ್ತದೆ. ಪಾನ್ ಕಾರ್ಡ್ ಅನ್ನು ಪಡೆಯುವುದಕ್ಕೆ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿರುತ್ತಿರಿ ಆ ಕುರಿತಾದ ಕಾರ್ಯಗಳು ನಡೆಯುತ್ತವೆ ಪಾನ್ ಕಾರ್ಡ್ ಕೂಡ ಪ್ರಿಂಟ್ ಆಗುತ್ತದೆ ಆದರೆ ನಿಮ್ಮ ಬಳಿ ಬಂದು ತಲುಪಿರುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ಮತ್ತೆ ಹೊಸ ಪಾನ್ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸುತ್ತಿರಿ. ಮೊದಲು ತುಂಬಾ ಜನ ಅರ್ಜಿಯನ್ನು ಕೊಟ್ಟು ಪಾನ್ ಕಾರ್ಡ್ ಮಾಡಿಸಿರುತ್ತಾರೆ.
ನಂತರ ಆಧಾರ್ ಕಾರ್ಡ್ ಬಂದ ನಂತರ ದಲ್ಲಿ ಮತ್ತೆ ಪಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಾರೆ. ಆಗ ನಿಮಗೆ ಹಳೆ ಕಾರ್ಡ್ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಆ ಸಂದರ್ಭದಲ್ಲಿ ನಿಮ್ಮ ಬಳಿ ಒಟ್ಟು ಎರಡು ಪಾನ್ ಕಾರ್ಡ್ ಗಳಾಗುತ್ತವೆ. ಒಂದಲ್ಲ ಒಂದು ದಿನ ನಿಮ್ಮ ಬಳಿ ಎರಡು ಪಾನ್ ಕಾರ್ಡ್ ಗಳು ಇರುವುದು ತಿಳಿದುಬರುತ್ತದೆ. ಹಾಗಾಗಿ ನಿಮ್ಮ ಬಳಿ ಎರಡು ಪ್ಯಾನ್ ಕಾರ್ಡ್ ಗಳಿದ್ದರೆ ಅದರಲ್ಲಿ ಒಂದನ್ನು ಕ್ಯಾನ್ಸಲ್ ಮಾಡಿಕೊಳ್ಳಬೇಕು ಒಂದು ವೇಳೆ ನೀವು ಎರಡು ಪಾನ್ ಕಾರ್ಡ್ ಗಳನ್ನು ಬಳಕೆ ಮಾಡುತ್ತಿದ್ದಾರೆ ಕಾನೂನು ಪ್ರಕಾರವಾಗಿ ನಿಮಗೆ ಹತ್ತು ಸಾವಿರ ರೂಪಾಯಿ ದಂಡ ಹಾಕುತ್ತಾರೆ. ಹಾಗೂ ಕಾನೂನಿನ ಪ್ರಕಾರ ಕೆಲವೊಂದು ಶಿಕ್ಷೆಗಳನ್ನು ಪಡೆಯಬೇಕಾಗುತ್ತದೆ. ಹಾಗಾಗಿ ಅದು ದೊಡ್ಡ ಸಮಸ್ಯೆಯಾಗಿ ಪರಿಣಾಮ ಆಗುವುದಕ್ಕಿಂತ ಮೊದಲು ಎಚ್ಚೆತ್ತುಕೊಳ್ಳುವುದು ಒಳ್ಳೆಯದು.
ನಿಮ್ಮ ಬಳಿ ಅಕಸ್ಮಾತಾಗಿ ಎರಡು ಪಾನ್ ಕಾರ್ಡ್ ಗಳು ಇದ್ದರೆ ನಿಮ್ಮ ಹತ್ತಿರದ ಇನ್ಕಮ್ ಟ್ಯಾಕ್ಸ್ ಕಚೇರಿಗೆ ಹೋಗಿ ಆ ಪಾನ್ ಕಾರ್ಡನ್ನು ನೀವು ಸರೆಂಡರ್ ಮಾಡಬಹುದು. ಅಲ್ಲಿ ಕ್ಯಾನ್ಸಲ್ ಮಾಡಿಸಬಹುದು ನಿಮ್ಮ ಬಳಿ ಎರಡು ಪಾನ್ ಕಾರ್ಡ್ ಗಳು ಇವೆ ಎಂದು ಅವೆರಡನ್ನು ಬಳಕೆ ಮಾಡುವುದಕ್ಕೆ ಹೋಗಬೇಡಿ. ನಿಮ್ಮ ಬಳಿ ಎರಡು ಪಾನ್ ಕಾರ್ಡ್ ಗಳು ಇದ್ದರೆ ಹತ್ತು ಸಾವಿರ ರೂಪಾಯಿ ದಂಡ ಕಟ್ಟುವ ಬದಲು ಅದರಲ್ಲಿ ಒಂದನ್ನು ಕ್ಯಾನ್ಸಲ್ ಮಾಡಿಕೊಳ್ಳುವುದು ಒಳ್ಳೆಯದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ಈ ಮಾಹಿತಿಯನ್ನು ತಿಳಿಸಿರಿ.