ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದರೆ ಯಾವ ಮಾರ್ಗವನ್ನು ಅನುಸರಿಸಬೇಕು ಜೀವನದಲ್ಲಿರುವ ಕಷ್ಟಗಳು ದೂರವಾಗಬೇಕು ಎಂದರೆ ಏನು ಮಾಡಬೇಕು ಎನ್ನುವುದರ ಕುರಿತಾಗಿ ಚಾಣಕ್ಯರು ಹೇಳಿರುವ ಕೆಲವು ಬುದ್ಧಿಮಾತುಗಳನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಪುಣ್ಯದ ಕೆಲಸವನ್ನು ಮಾಡದೇ ಎಲ್ಲರೂ ಪುಣ್ಯದ ಫಲವನ್ನು ಬೇಡುತ್ತಾರೆ ಆದರೆ ಪಾಪದ ಕೆಲಸವನ್ನು ಮಾಡುತ್ತಾರೆ ಆದರೆ ಪಾಪದ ಫಲ ಯಾರಿಗೂ ಬೇಡ. ನೀವು ಜೀವನದಲ್ಲಿ ಪಾಪದ ಕೆಲಸದಿಂದ ಗಳಿಕೆ ಮಾಡಬೇಡಿ ಸಾಲವಾಗುವ ರೀತಿಯಲ್ಲಿ ಖರ್ಚನ್ನ ಮಾಡಬೇಡಿ ಈ ರೀತಿ ತಿನ್ನಬೇಡಿ ಅದು ವಿಲೀನವಾಗುವಂತೆ. ಬೇರೆಯವರಿಗೆ ನೋವಾಗುವಂತೆ ಮಾತನಾಡಬೇಡಿ ತಡವಾಗುವಂತೆ ನಡೆಯಬೇಡಿ ಚಿಂತೆ ಉಂಟಾಗುವಂತಹ ಯೋಚನೆಗಳನ್ನು ಮಾಡಲೇಬೇಡಿ.
ಸುಳ್ಳು ಹೇಳಿ ಸಂಬಂಧವನ್ನು ಕೆಡಿಸುವ ಬದಲು ನಿಜ ಏನು ಎಂಬುದನ್ನು ತಿಳಿಸಬೇಕು ಏಕೆಂದರೆ ಸತ್ಯ ಒಂದಲ್ಲ ಒಂದು ದಿನ ಎಲ್ಲರ ಎದುರು ಬಂದು ನಿಲ್ಲುತ್ತದೆ. ನೀವು ಸಹಾಯ ಮಾಡುವುದಾದರೆ ಯಾವುದೇ ಲಾಭದ ಯೋಚನೆಯನ್ನು ಇಟ್ಟುಕೊಳ್ಳದೆ ಸಹಾಯವನ್ನು ಮಾಡಿ. ಎಲ್ಲರೊಂದಿಗೂ ಹೊಂದಿಕೊಂಡು ಬಾಳಬೇಕು ಯಾವ ಅಹಂಕಾರವಿಲ್ಲದೆ ಅನುಮಾನವಿಲ್ಲದೆ ಜೀವನವನ್ನು ನಡೆಸಬೇಕು. ಜೀವನದಲ್ಲಿ ತಾನು ಮುಂದೆ ಬರಬೇಕು ಎನ್ನುವ ವ್ಯಕ್ತಿ ಯಾರಿಗೂ ಹಾನಿಯನ್ನುಂಟು ಮಾಡುವುದಕ್ಕೆ ಬಯಸುವುದಿಲ್ಲ. ಮತ್ತು ಬೇರೆಯವರಿಗೆ ಕೆಟ್ಟದ್ದನ್ನು ಬಯಸುವ ವ್ಯಕ್ತಿ ಯಾವತ್ತೂ ಮುಂದೆ ಬರುವುದಿಲ್ಲ. ಯಾವುದೇ ಒಳ್ಳೆಯ ವ್ಯಕ್ತಿಯಿಂದ ತಪ್ಪು ನಡೆದರೆ ಸಹನೆಯಿಂದ ಇರಬೇಕು ಏಕೆಂದರೆ ಒಂದು ರತ್ನ ಕೊಳಚೆಯಲ್ಲಿ ಬಿದ್ದರೂ ಅದಕ್ಕೆ ಬೆಲೆ ಕಡಿಮೆಯಾಗುವುದಿಲ್ಲ.
ಕೋಪವು ಬರುವಾಗ ಒಂಟಿಯಾಗಿಯೇ ಬರುತ್ತದೆ ಆದರೆ ಹೋಗುವಾಗ ನಿಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಕರೆದುಕೊಂಡು ಹೋಗುತ್ತದೆ. ತಾಳ್ಮೆ ಒಂಟಿಯಾಗಿ ಬರುತ್ತದೆ ಆದರೆ ಒಳ್ಳೆಯ ಅಂಶಗಳನ್ನು ನಮಗೆ ಕೊಟ್ಟು ಹೋಗುತ್ತದೆ. ಯಾವುದಾದರೂ ವ್ಯಕ್ತಿ ನಿಮ್ಮನ್ನು ನೋಡಿ ಉರಿದುಕೊಳ್ಳುತ್ತಾರೆ ಎಂದರೆ ಅದು ಅವರ ಕೆಟ್ಟ ಗುಣವಲ್ಲ ನಿಮ್ಮ ಸಾಮರ್ಥ್ಯವಾಗಿದೆ. ಕೆಲವೊಮ್ಮೆ ಸಮಾಜದಲ್ಲಿ ಏಕೆ ಬದಲಾವಣೆ ಆಗುವುದಿಲ್ಲ ಎಂದರೆ ಬಡವರಲ್ಲಿ ಧೈರ್ಯ ಇಲ್ಲ ಮಧ್ಯಮವರ್ಗದವರಲ್ಲಿ ಸಮಯವಿಲ್ಲ ಮತ್ತು ಶ್ರೀಮಂತರಿಗೆ ಅವಶ್ಯಕತೆ ಇರುವುದಿಲ್ಲ. ನೀವು ಯಾರದ್ದೊ ಅಂತಿಮ ಸಂಸ್ಕಾರಕ್ಕೆ ಹೋದಾಗ ನೀವು ಅವರನ್ನು ಅಂತಿಮ ಸ್ಥಳಕ್ಕೆ ಕಳಿಸುವುದಕ್ಕೆ ಹೋಗಿದ್ದೀರಿ ಎಂದು ತಿಳಿದುಕೊಳ್ಳಬೇಡಿ ಬದಲಿಗೆ ಸತ್ತ ವ್ಯಕ್ತಿಯು ನಿಮ್ಮ ಅಂತ್ಯದ ಸತ್ಯವನ್ನು ತೋರಿಸಲು ಕರೆದುಕೊಂಡು ಹೋಗಿದ್ದಾನೆ ಎಂದು ತಿಳಿದುಕೊಳ್ಳಿ.
ಯಾವ ವ್ಯಕ್ತಿ ನಿಮ್ಮನ್ನು ಕಂಡು ಉರಿದುಕೊಳ್ಳುತ್ತಾರೆ ಅಂತಹ ವ್ಯಕ್ತಿಯನ್ನು ದ್ವೇಷಿಸಬೇಡಿ ಏಕೆಂದರೆ ಅದೇ ವ್ಯಕ್ತಿಗಳು ನೀವು ಅವರಿಗಿಂತ ದೊಡ್ಡವರು ಎಂದು ತಿಳಿದಿರುತ್ತಾರೆ. ಯಾವ ವ್ಯಕ್ತಿ ನಿಮ್ಮ ಸಂತೋಷಕ್ಕಾಗಿ ಸೋಲನ್ನು ಒಪ್ಪಿಕೊಳ್ಳುತ್ತಾನೆ ಆತನಿಂದ ನೀವು ಯಾವತ್ತೂ ಗೆಲ್ಲಲು ಸಾಧ್ಯವಿಲ್ಲ. ನಿಮ್ಮ ಜೀವನವನ್ನು ಬೇರೆಯವರೊಂದಿಗೆ ಹೊಲಿಸಿಕೊಳ್ಳಬೇಡಿ. ಗುಡಿಯಲ್ಲಿರುವ ದೇವರನ್ನ ನಾವು ನಿರ್ಮಿಸಿದ್ದೇವೆ ಆದರೆ ಮನೆಯಲ್ಲಿರುವ ತಂದೆ-ತಾಯಿ ದೇವರ ಸ್ವರೂಪವಾಗಿದ್ದಾರೆ ಅವರು ನಮ್ಮನ್ನು ನಿರ್ಮಿಸಿದ್ದಾರೆ.
ಸಮತೋಲನ ಮನಸ್ಸಿಗಿಂತ ಬೇರೆ ಸರಳತೆ ಇನ್ನಿಲ್ಲ ಸಂತೋಷ ದಂತಹ ಸುಖವೂ ಯಾವುದು ಇಲ್ಲ ಲೋಭದಷ್ಟು ಕೆಟ್ಟದಾದ ರೋಗ ಯಾವುದು ಇಲ್ಲ ಮತ್ತು ದಯೆ ಯಂತಹ ಪುಣ್ಯ ಮತ್ತೊಂದಿಲ್ಲ. ಕೆಲವುಬಾರಿ ಸುಮ್ಮನೆ ಇರುವುದು ತಪ್ಪೇನಲ್ಲ ಅದು ತಿಳುವಳಿಕೆ ಅಥವಾ ಸಮಯದ ದೃಢೀಕರಣ ವಾಗಿರುತ್ತದೆ. ಜ್ಞಾನಿಗೆ ತಿಳಿ ಹೇಳಬಹುದು ಅಜ್ಞಾನಿಗೂ ತಿಳಿ ಹೇಳಬಹುದು ಆದರೆ ಇವೆರಡರ ಮಧ್ಯೆ ಇರುವವರಿಗೆ ಯಾರು ತಿಳಿಹೇಳಲು ಆಗುವುದಿಲ್ಲ ಆತನಿಗೆ ಕಾಲವೇ ತಿಳಿ ಹೇಳುತ್ತದೆ. ಸಂಸಾರ ಅವಶ್ಯಕತೆಗಳಿಂದ ನಡೆಯುತ್ತದೆ ಚಳಿಗಾಲದಲ್ಲಿ ಯಾವ ಸೂರ್ಯನನ್ನ ಕಾಯುತ್ತಾರೆ ಆ ಸೂರ್ಯನನ್ನು ಬೇಸಿಗೆಯಲ್ಲಿ ದೂರುತ್ತಾರೆ.
ನಿಮ್ಮ ಅವಶ್ಯಕತೆ ನಿಮ್ಮ ಬೆಲೆ ಇದ್ದಾಗ ಮಾತ್ರ ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ ಅದು ನಿಮ್ಮನ್ನೇ ನಾಶಮಾಡುತ್ತದೆ. ಶ್ರೀಮಂತರ ಮನೆಯಲ್ಲಿ ಕುಳಿತ ಕಾಗೆ ಎಲ್ಲರಿಗೂ ನವಿಲಿನಂತೆ ಕಾಣುತ್ತದೆ ಅದೇ ಬಡವ ಮನೆಯಲ್ಲಿರುವ ಹಸುಗೂಸು ಕಳ್ಳನ ರೀತಿಯಲ್ಲಿ ಕಾಣುತ್ತದೆ. ಮನುಷ್ಯನ ಒಳ್ಳೆತನವನ್ನು ನೋಡಿ ಎಲ್ಲರೂ ಮೌನವಾಗಿರುತ್ತಾರೆ ಅದೇ ವ್ಯಕ್ತಿ ಸ್ವಲ್ಪ ತಪ್ಪು ಮಾಡಿದರೆ ಮೂಕರು ಕೂಡ ಮಾತನಾಡುತ್ತಾರೆ. ಹಾವಿನ ಹಲ್ಲಿನಲ್ಲಿ ಚೇಳಿನ ಕೊಂಬಿನಲ್ಲಿ ದುಂಬಿಯ ಮುಳ್ಳಿನಲ್ಲಿ ಮತ್ತು ಮನುಷ್ಯನ ಮನಸ್ಸಿನಲ್ಲಿ ಎಷ್ಟು ವಿಷವಿದೆ ಇಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ
ನಮ್ಮನ್ನು ಎಷ್ಟು ಜನ ಗುರುತಿಸುತ್ತಾರೆ ಎನ್ನುವುದು ಮುಖ್ಯವಲ್ಲ ನಮ್ಮನ್ನು ಯಾವ ಕಾರಣಕ್ಕಾಗಿ ಗುರುತಿಸುತ್ತಾರೆ ಎನ್ನುವುದು ಮುಖ್ಯವಾಗಿರುತ್ತದೆ. ಇದಿಷ್ಟು ಚಾಣಕ್ಯ ಅವರು ಉತ್ತಮವಾದ ಜೀವನವನ್ನು ನಡೆಸಲು ತಿಳಿಸಿ ಕೊಟ್ಟಿರುವಂತಹ ಮಾತುಗಳಾಗಿವೆ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಉತ್ತಮವಾದ ಜೀವನವನ್ನು ಕಂಡುಕೊಳ್ಳಬಹುದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.