ತರಕಾರಿಗಳಲ್ಲಿ ಹೆಚ್ಚಾಗಿ ಬಳಕೆ ಮಾಡುವ ಬೀನ್ಸ್ ನಲ್ಲಿ ಹಲವಾರು ವಿಧಗಳಿವೆ ಅವುಗಳಲ್ಲಿ ಅವರೆಕಾಳು ಕೂಡ ಒಂದು ಅವರೆಕಾಳಿನ ತವರು ದಕ್ಷಿಣ ಅಮೇರಿಕ ನಂತರ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಇದು ಬೆಳೆಯಲ್ಪಟ್ಟಿತು ಅವರೆಕಾಳಿನಲ್ಲಿ ಹಲವಾರು ಬಗೆಯ ವಿಟಮಿನ್ಗಳು ಖನಿಜಾಂಶಗಳು ಪ್ರೋಟಿನ್ ಮತ್ತು ನಾರಿನ ಅಂಶವು ಇದೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ ಅವರೆಕಾಳಿನಿಂದ ಸಿಗುವ ಕೆಲವು ಆರೋಗ್ಯಕಾರಿ ಪ್ರಯೋಜನಗಳು ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಅವರೆಕಾಳು ವಿಟಮಿನ್ ಬಿ ಇಂದ ಸಮೃದ್ಧವಾಗಿದ್ದು ದೇಹದ ಅಂಗಾಂಶಗಳಿಗೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ಮೆದುಳು ಮತ್ತು ನರಕೋಶಗಳನ್ನು ಸರಿಯಾಗಿಡಲು ಇದು ಸಹಕಾರಿ ಇದನ್ನು ಆಹಾರದಲ್ಲಿ ಬಳಸುವುದರಿಂದ ಮೆದುಳಿನ ಕ್ರಿಯೆಯು ಉತ್ತಮವಾಗುವುದು. ಇದರಲ್ಲಿರುವ ತಾಮ್ರದ ಅಂಶ ಮಾನಸಿಕ ಶಕ್ತಿಯನ್ನು ಕಡಿಮೆ ಮಾಡುವುದು ಮತ್ತು ಏಕಾಗ್ರತೆಯನ್ನು ವೃದ್ಧಿಸುವುದು. ಇದರಲ್ಲಿರುವ ತಾಮ್ರದ ಅಂಶ ಮನಸ್ಥಿತಿಯನ್ನು ಸುಧಾರಣೆ ಮಾಡುತ್ತದೆ. ಅವರೆಕಾಳಿನಲ್ಲಿ ಇರುವ ಆಂಟಿಆಕ್ಸಿಡೆಂಟ್ ಅಂಶವು ಮೆದುಳಿನ ಅಂಗಾಂಗಗಳನ್ನು ಫ್ರೀ ರಾಡಿಕಲ್ ನಿಂದ ರಕ್ಷಣೆ ಮಾಡುವುದು ಅವರೆಕಾಳಿನಲ್ಲಿರುವ ಪೋಷಕಾಂಶಗಳು ಮೆದುಳಿಗೆ ತುಂಬಾ ಒಳ್ಳೆಯದು.

ಇದರಲ್ಲಿರುವ ಮ್ಯಾಗ್ನಿಷಿಯಂ ಅಂಶ ಮನಸ್ಥಿತಿಯನ್ನು ಸುಧಾರಣೆ ಮಾಡುವುದು. ಮ್ಯಾಗ್ನಿಷಿಯಂ ನಿದ್ರಾಹೀನತೆಯನ್ನು ತಪ್ಪಿಸುತ್ತದೆ ಇದನ್ನು ಸೇವನೆ ಮಾಡುವುದರಿಂದ ರಾತ್ರಿಯಿಡೀ ಒಳ್ಳೆಯ ನಿದ್ರೆ ಬರುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ಅಷ್ಟೇ ಅಲ್ಲದೆ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಅವರೆಕಾಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದರಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಅಂಶವಿದ್ದು ಆರೋಗ್ಯಕ್ಕೆ ಲಾಭಕಾರಿ. ಪೊಟ್ಯಾಶಿಯಂ ರಕ್ತನಾಳಗಳನ್ನು ಅಗಲ ವಾಗಿಸುವುದು ಮತ್ತು ಇದರಿಂದ ರಕ್ತವು ಸರಾಗವಾಗಿ ಹರಿದು ಹೋಗಲು ಸಹಕಾರಿಯಾಗಿದೆ ಇದರಿಂದ ರಕ್ತದೊತ್ತಡ ಕೂಡ ಕಡಿಮೆಯಾಗುವುದು. ಇನ್ನು ಅವರೆಕಾಳಿನಲ್ಲಿ ಕ್ಯಾಲ್ಸಿಯಂ ಉತ್ತಮ ಪ್ರಮಾಣದಲ್ಲಿದೆ ಮತ್ತು ಇದು ಅಸ್ಥಿರಂಜತೆ ಸಮಸ್ಯೆಯ ವಿರುದ್ಧ ಹೋರಾಡಲು ತುಂಬಾ ಪರಿಣಾಮಕಾರಿಯಾಗಿದೆ.

ಇದರಲ್ಲಿರುವ ಪಾಸ್ಪರಸ್ ಅಂಶವು ಕೂಡ ಮೂಳೆಗಳಿಗೆ ಒಳ್ಳೆಯದು ಪಾಸ್ಪರಸ್ ಅಂಶವು ಮೂಳೆಗಳನ್ನು ಬಲಿಷ್ಠವಾಗಿ ಇರಿಸುತ್ತದೆ. ಇನ್ನು ಬ್ರಾಂಕ್ ಟೆಸ್ ಮತ್ತು ಕೆಲವೊಂದು ಶ್ವಾಸಕೋಶ ಸಂಬಂಧಿ ಕಾಯಿಲೆ ಇರುವವರು ಅವರೆಕಾಳನ್ನು ಬಳಕೆ ಮಾಡುವುದರಿಂದ ತುಂಬಾ ಲಾಭ ಪಡೆಯುತ್ತಾರೆ. ಇದು ಉರಿಯೂತವನ್ನು ಕಡಿಮೆ ಮಾಡುವುದು ಮತ್ತು ವಾಯುನಾಳನ್ನು ತೆರೆಯುವುದು ಇದರಿಂದ ಸರಿಯಾಗಿ ಉಸಿರಾಡುವುದಕ್ಕೆ ಸಹಾಯಕವಾಗುತ್ತದೆ. ಅವರೆಕಾಳಿನಲ್ಲಿ ಸತುವಿನ ಅಂಶ ಕೂಡ ಉತ್ತಮ ಪ್ರಮಾಣದಲ್ಲಿ ಇದೆ ಹಲವಾರು ರೀತಿಯ ಅನಾರೋಗ್ಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಅವರೆಕಾಳಿನಲ್ಲಿ ಉತ್ತಮ ಪ್ರಮಾಣದ ನಾರಿನಂಶವು ಇದೆ ಇದನ್ನು ಆಹಾರಕ್ರಮದಲ್ಲಿ ಸೇರ್ಪಡೆ ಮಾಡಿಕೊಂಡರೆ ಖಂಡಿತವಾಗಿ ಜೀರ್ಣಕ್ರಿಯೆ ಸುಧಾರಣೆಯಾಗುವುದು.

ಅವರೆಕಾಳಿನಲ್ಲಿ ಇರುವ ನಾರಿನಂಶವು ಕರುಳಿನ ಕ್ರಿಯೆಯನ್ನು ಸುಧಾರಣೆ ಮಾಡುವುದು ನಾರಿನಂಶವು ಕರುಳಿನ ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡುವುದು. ಅಷ್ಟೇ ಅಲ್ಲದೆ ತೂಕ ಹೆಚ್ಚಳ ಮಾಡಿಕೊಂಡಿರುವವರು ಅವರೆಕಾಳನ್ನು ಸೇವನೆ ಮಾಡಿದರೆ ಒಳ್ಳೆಯದು ಇದು ತೂಕ ಇಳಿಸಲು ಸಹಕಾರಿ. ಅಷ್ಟೇ ಅಲ್ಲದೆ ಸ್ನಾಯುಗಳನ್ನು ಬಲಪಡಿಸುವುದರ ಜೊತೆಗೆ ಚಯಾಪಚಯವನ್ನು ವೃದ್ಧಿಸುತ್ತದೆ. ಇದಿಷ್ಟು ಅವರೆಕಾಳು ಗಳನ್ನು ಸೇವಿಸುವುದರಿಂದ ಉಂಟಾಗುವ ಲಾಭ ಅಂಶಗಳಾಗಿವೆ ನೀವು ಕೂಡ ಅವರೇಕಾಳನ್ನು ಸೇವಿಸುವ ಮೂಲಕ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಿ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!