ಪ್ರಕೃತಿಮಾತೆ ನಮ್ಮ ಕರ್ನಾಟಕದಲ್ಲಿ ಸೃಷ್ಟಿಸಿರುವ ಅದ್ಭುತಗಳಿಗೆ ಕೊನೆಯಿಲ್ಲ ಹಚ್ಚಹಸುರಿನ ಬೆಟ್ಟ-ಗುಡ್ಡಗಳು ಧುಮ್ಮಿಕ್ಕುವ ಜಲಪಾತಗಳು ಜುಳುಜುಳನೆ ಹರಿಯುವ ನದಿಗಳು ಭೋರ್ಗರೆವ ಸಮುದ್ರ ಹೀಗೆ ಅದೆಷ್ಟೋ ವಿಸ್ಮಯಗಳು ನಮ್ಮ ಕರುನಾಡ ಮಣ್ಣಿನಲ್ಲಿ ಅಡಕವಾಗಿವೆ. ನಾವಿಂದು ನಿಮಗೆ ಕರ್ನಾಟಕದ ಅತ್ಯಂತ ಎತ್ತರದ ಶಿಖರ ಎಂದು ಖ್ಯಾತಿಯನ್ನು ಪಡೆದಿರುವ ಭೂಲೋಕದ ಸ್ವರ್ಗದಂತಿರುವ ಮುಳ್ಳಯ್ಯನಗಿರಿ ಬಗ್ಗೆ ಒಂದಿಷ್ಟು ಕುತೂಹಲಕಾರಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಬೆಟ್ಟ ಗುಡ್ಡಗಳಿಗೆ ಪ್ರವಾಸ ಹೋಗುವುದಕ್ಕೆ ಎಲ್ಲರಿಗೂ ಇಷ್ಟ ಇರುತ್ತದೆ. ಬದುಕಿನ ಜಂಜಾಟಗಳಿಗೆ ಒಂದು ಸ್ವಲ್ಪ ಹೊತ್ತು ವಿರಾಮವನ್ನು ಹಾಕಬೇಕು ಎಂದರೆ ಪ್ರಶಾಂತವಾದ ವಾತಾವರಣದಲ್ಲಿ ಒಂದಿಷ್ಟು ಸಮಯವನ್ನು ಕಳೆಯಬೇಕು ಎನಿಸುತ್ತದೆ ಅದರಲ್ಲೂ ಹಸಿರು ಸಿರಿಯನ್ನು ಹೊದ್ದು ಮಲಗಿರುವ ಬೆಟ್ಟ-ಗುಡ್ಡಗಳು ನಮ್ಮ ರಾಜ್ಯದಲ್ಲಿ ಬೇಕಾದಷ್ಟಿವೆ.

ಕರ್ನಾಟಕದಲ್ಲಿರುವ ಕೊಡಚಾದ್ರಿ ಕುಂದಾದ್ರಿ ಬೆಟ್ಟ ಸೀತಾಳಯ್ಯನಗಿರಿ ಕುದುರೆಮುಖ ದೇವಿರಮ್ಮನ ಬೆಟ್ಟ ಬ್ರಹ್ಮಗಿರಿ ಬೆಟ್ಟ ಪುಷ್ಪಗಿರಿ ಬಲ್ಲಾಳರಾಯನದುರ್ಗ ಬಿಳಿಗಿರಿರಂಗನ ಬೆಟ್ಟ ನಂದಿ ಬೆಟ್ಟ ಇನ್ನೂ ಮೊದಲಾದ ಪರ್ವತಶೀಖರಗಳ ಬೆಟ್ಟಗಳ ಪೈಕಿ ಅತಿ ಹೆಚ್ಚು ಎತ್ತರವಾದ ಶಿಖರ ಎಂಬ ಖ್ಯಾತಿಯನ್ನು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಘಟ್ಟಗಳ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಇರುವಂತಹ ಮುಳ್ಳಯ್ಯನಗಿರಿ ಪರ್ವತ ಶಿಖರವು ಪಡೆದುಕೊಂಡಿದೆ.

ಕುದುರೆಮುಖವು ಸಾವಿರದ ಎಂಟು ನೂರಾ ತೊಂಬತ್ನಾಲ್ಕು ಮೀಟರ್ ಎತ್ತರವಾಗಿದ್ದರೆ ಕುಮಾರ ಪರ್ವತವು ಸಾವಿರದ ಏಳು ನೂರಾ ಹನ್ನೆರಡು ಮೀಟರ್ ಬ್ರಹ್ಮಗಿರಿ ಸಾವಿರದ ಆರು ನೂರಾ ಎಂಟು ಮೀಟರ್ ನಂದಿಬೆಟ್ಟ ಸಾವಿರದ ನಾಲ್ಕು ನೂರಾ ಎಪ್ಪತ್ತೆಂಟು ಮೀಟರ್ ಹಿಮವತ್ ಗೋಪಾಲಸ್ವಾಮಿ ಬೆಟ್ಟ ಸಾವಿರದ ನಾಲ್ಕು ನೂರ ಐವತ್ತು ಮೀಟರ್ ಎತ್ತರವಾಗಿದ್ದು ಮುಳ್ಳಯ್ಯನಗಿರಿ ಬೆಟ್ಟವು ಸಾವಿರದ ಒಂಬೈನೂರ ಮೂವತ್ತು ಮೀಟರ್ ಎತ್ತರವಾಗಿದೆ.

ಕರ್ನಾಟಕದಲ್ಲಿ ಎಷ್ಟು ಬೆಟ್ಟಗಳಿವೆಯೋ ಅಷ್ಟು ಬೆಟ್ಟ ಗಳಿಗಿಂತ ಮುಳ್ಳಯ್ಯನಗಿರಿ ಅತಿ ಹೆಚ್ಚು ಎತ್ತರವಾಗಿದೆ. ಹೀಗಾಗಿ ಇದನ್ನು ಕರ್ನಾಟಕದ ಅತ್ಯಂತ ಎತ್ತರದ ಬೆಟ್ಟ ಎಂದು ಕರೆಯಲಾಗುತ್ತದೆ. ಸಮುದ್ರಮಟ್ಟದಿಂದ ಸುಮಾರು ಆರು ಸಾವಿರದ ಮುನ್ನೂರ ಮುವತ್ತು ಅಡಿ ಎತ್ತರದಲ್ಲಿ ಇರುವ ಮುಳ್ಳಯ್ಯನಗಿರಿ ಶಿಖರವು ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿದೆ. ಕೆಳಗೆ ನಿಂತು ಮೇಲೆ ನೋಡಿದರೆ ಮೋಡಗಳೇ ಈಗಿರಿ ಶಿಖರವನ್ನು ಹಿಡಿದುಕೊಂಡಿರುವಂತೆ ಭಾಸವಾಗುತ್ತದೆ.

ಮುಳ್ಳಯ್ಯ ಸ್ವಾಮಿಯಿಂದಾಗಿ ಈ ಬೆಟ್ಟಕ್ಕೆ ಮುಳ್ಳಯ್ಯನಗಿರಿ ಎಂಬ ಹೆಸರು ಬಂದಿದ್ದು ಅಂಕುಡೊಂಕಾದ ದಾರಿಯಲ್ಲಿ ಈ ಶಿಖರವನ್ನು ಎರುವುದು ಬದುಕಿನ ಸುಂದರ ಕ್ಷಣಗಳಲ್ಲಿ ಒಂದಾಗಿದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಮುಳ್ಳಯ್ಯನಗಿರಿ ಅಕ್ಷರಸಹ ಸ್ವರ್ಗ ಎಂದೇ ಭಾಸವಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಮಳೆಯ ಹನಿಗಳಿಂದ ಆವೃತವಾದ ಈ ಶಿಖರವನ್ನು ನೋಡುವುದು ಒಂದು ರೋಮಾಂಚನ.

ಚಳಿಗಾಲದಲ್ಲಿ ಬೀಳುವ ಇಬ್ಬನಿ ಮಂಜು ಮುಸುಕಿದ ಹಾದಿ ಅಸಾಧ್ಯವಾದ ಚಳಿ ತಣ್ಣಗೆ ಬೀಸುವ ಗಾಳಿ ಮುಗಿಯದ ಹಾದಿಯನ್ನು ಸವೆಸುವುದು ಮತ್ತೊಂದು ಬಗೆಯ ಹಿತವಾದ ಅನುಭವವನ್ನು ಉಂಟುಮಾಡುತ್ತದೆ. ಬೆಟ್ಟದ ಮೇಲೆ ನಿಂತು ಸುತ್ತಲಿನ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾ ನಿಂತರೆ ಚಾರಣ ಮಾಡಿದ ಆಯಾಸವೆಲ್ಲ ಬಹುಬೇಗ ದೂರವಾಗುತ್ತದೆ. ಬೆಟ್ಟದಲ್ಲಿರುವ ನೈಸರ್ಗಿಕ ಗುಹೆಗಳು ಮುಳ್ಳಯ್ಯನಗಿರಿ ಶಿಖರಕ್ಕೆ ಕಳಸಪ್ರಾಯ ವಾಗಿದ್ದರೆ ಇಲ್ಲಿರುವ ಮುಳ್ಳಯ್ಯ ಸ್ವಾಮಿಯು ಸಾವಿರಾರು ಜನರ ಮನೆಯ ದೇವನಾಗಿ ಮುಳ್ಳಯ್ಯ ಗಿರಿಯ ರಕ್ಷಕನಾಗಿ ಕಂಗೊಳಿಸುತ್ತಿದ್ದಾನೆ.

ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿಯು ಮೂವತ್ಮೂರು. ನಾಲ್ಕು ಕಿಲೋಮೀಟರ್ ದೂರದಲ್ಲಿದೆ ಅಲ್ಲಿಗೆ ತಲುಪುವ ಮಾರ್ಗವು ಕೂಡ ಅತ್ಯಂತ ಸುಂದರವಾಗಿದ್ದು ನೋಡಿದಷ್ಟು ದೂರ ಬರಿ ಹಸಿರು ಕಾಣಿಸುತ್ತದೆ. ಮಳೆಗಾಲದಲ್ಲಿ ಮುಳ್ಳಯ್ಯನಗಿರಿಗೆ ಹೋಗುವ ಮಾರ್ಗದಲ್ಲಿ ಸಣ್ಣ ಸಣ್ಣ ತೊರೆಗಳು ಕಾಣಿಸುತ್ತವೆ. ಸಾಧ್ಯವಾದರೆ ನೀವು ಒಮ್ಮೆ ಮುಳ್ಳಯ್ಯನಗಿರಿಗೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!